ಭಾರತದಲ್ಲಿನ ಮತಾಂತರದ ಷಡ್ಯಂತ್ರ ಹಾಗೂ ಅದರ ಹಿಂದಿರುವ ‘ಡೀಪ್‌ ಸ್ಟೇಟ್‌’ನ ಕೈವಾಡ !

ವಿಝಿಂಜಮದಲ್ಲಿ ಬಂದರಿನ ಕಾರ್ಯ ವಿರೋಧಿಸುತ್ತಿರುವ ಕ್ರೈಸ್ತರು

ಜಗತ್ತಿನ ವಿವಿಧ ಧರ್ಮ/ಪಂಥಗಳನ್ನು ಅಧ್ಯಯನ ಮಾಡಿದ ಸ್ವಾಮಿ ವಿವೇಕಾನಂದರು ಭಾರತದಲ್ಲಿ ನಡೆಯುತ್ತಿರುವ ಮತಾಂತರದ ಸಮಸ್ಯೆಯನ್ನು ಗುರುತಿಸಿ ಹೇಳಿದ್ದಾರೆ, ‘ಹಿಂದೂಗಳ ಮತಾಂತರವೆಂದರೆ, ಹಿಂದೂ ಧರ್ಮದ ಕೇವಲ ಒಬ್ಬ ಹಿಂದೂ ಕಡಿಮೆಯಾಗುವುದಲ್ಲ, ಹಿಂದೂ ಧರ್ಮದ ಒಬ್ಬ ಶತ್ರು ಹೆಚ್ಚಾದಂತಾಗುತ್ತದೆ. ಮತಾಂತರದಿಂದ ಹಿಂದೂಗಳು ಅಲ್ಪಸಂಖ್ಯಾತರಾದ ಕಾಶ್ಮೀರ, ಮಣಿಪುರ, ನಾಗಾಲ್ಯಾಂಡ್‌ ಇತ್ಯಾದಿ ಭಾರತದ ರಾಜ್ಯಗಳು ಮತ್ತು ಪಾಕಿಸ್ತಾನ, ಬಾಂಗ್ಲಾದೇಶದಂತಹ ದೇಶಗಳಲ್ಲಿ ಇಂದು ಕೂಡ ನಾವು ಇದನ್ನು ಪ್ರತ್ಯಕ್ಷ ಅನುಭವಿಸುತ್ತಿದ್ದೇವೆ. ಇಂದು ದೇಶದಾದ್ಯಂತ ಭಾರತವಿರೋಧಿ ಪ್ರತ್ಯೇಕತಾವಾದಿಗಳ ಚಳುವಳಿ ಆರಂಭವಾಗಿದೆ ಹಾಗೂ ತಮ್ಮನ್ನು ‘ಸೆಕ್ಯುಲರ್‌’ವಾದಿ (ಜಾತ್ಯತೀತ)ಗಳೆಂದು ಹೇಳಿಸಿಕೊಳ್ಳುವ ರಾಜಕಾರಣಿಗಳಿಂದ ಅವರಿಗೆ ಬೆಂಬಲ ಸಿಗುತ್ತದೆ. ಅದರಿಂದಲೆ ಮೇಲ್ನೋಟಕ್ಕೆ ಕಾಣಿಸುವ ಮತಾಂತರದ ಹಿಂದೆ ‘ಡೀಪ್‌ಸ್ಟೇಟ್’ ಇದೆ, ಎಂಬುದನ್ನು ನಾವು ಖಚಿತಪಡಿಸಬಹುದು.

ಶ್ರೀ. ರಮೇಶ ಶಿಂದೆ

ಇಷ್ಟರ ವರೆಗೆ ಮುದ್ರಣವಾದ ಲೇಖನಗಳಲ್ಲಿ ನಾವು ‘ಚರ್ಚ್‌ನ ಪ್ರಭಾವದಲ್ಲಿ ಕ್ರೈಸ್ತ ದೇಶಗಳ ಪಂಥವಿಸ್ತಾರಕ್ಕಾಗಿ ಜಗತ್ತಿನಾದ್ಯಂತದ ದೇಶಗಳ ಮೇಲೆ ಆಕ್ರಮಣ ಮತ್ತು ಅಲ್ಲಿನ ಮೂಲ ಸಂಸ್ಕೃತಿಯನ್ನು ನಾಶಗೊಳಿಸುವುದು ಹಾಗೂ ವ್ಯಾಪಾರದ ಜೊತೆಗೆ ಕ್ರೈಸ್ತೀಕರಣಕ್ಕಾಗಿ ಪ್ರಯತ್ನ’, ಈಶಾನ್ಯ ಭಾರತದಲ್ಲಿನ ರಾಜ್ಯಗಳು ಪ್ರತ್ಯೇಕತಾವಾದದ ಅಪಾಯದ ಕಡೆಗೆ ಹೋಗಿವೆ’, ಈ ವಿಷಯವನ್ನು ಓದಿದೆವು. ಇಂದು ಅದರ ಮುಂದಿನ ಹಾಗೂ ಅಂತಿಮ ಭಾಗವನ್ನು ನಿಮ್ಮ ಮುಂದಿಡುತ್ತಿದ್ದೇವೆ.

(‘ಡೀಪ್‌ಸ್ಟೇಟ್’ ಎಂದರೆ ಸರಕಾರಿ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳ ರಹಸ್ಯ ಜಾಲ. ಇದರ ಮೂಲಕ ಸರಕಾರಿ ಧೋರಣೆಗಳನ್ನು ಖಾಸಗಿ ಸಂಸ್ಥೆಗಳಿಗೆ ಅನುಕೂಲ ಮಾಡಲಾಗುತ್ತದೆ.)

೧೫. ಸಾಮಾಜಿಕ ಉದ್ದೇಶವನ್ನು ತೋರಿಸಿ ಭಾರತದಲ್ಲಿನ ವಿಕಾಸ ಕಾರ್ಯಗಳಿಗೆ ಚರ್ಚ್‌ನಿಂದ ವಿರೋಧ !

ಭಾರತದಲ್ಲಾಗುತ್ತಿರುವ ವಿಕಾಸ ಯೋಜನೆಗಳಿಗಾಗುವ ವಿರೋಧದ ಹಿಂದೆ ಚರ್ಚ್ ಮತ್ತು ಅಲ್ಲಿನ ಪಾದ್ರಿಗಳ ಕೈವಾಡವಿರುವುದು ಅನೇಕ ಪ್ರಕರಣಗಳಲ್ಲಿ ಗಮನಕ್ಕೆ ಬರುತ್ತದೆ. ಕೇರಳ ರಾಜ್ಯದ ವಿಝಿಂಜಮದಲ್ಲಿ ಅದಾನಿ ಬಂದರಿನ ಕಾರ್ಯ ನಡೆಯುತ್ತಿದೆ. ಈ ನಿರ್ಮಾಣ ಕಾರ್ಯಕ್ಕೆ ಸ್ಥಳೀಯರು ಕಳೆದ ಕೆಲವು ತಿಂಗಳಿಂದ ವಿರೋಧ ಮಾಡುತ್ತಿದ್ದಾರೆ. ಆ ಆಂದೋಲನಕ್ಕೆ ಹಿಂಸಾತ್ಮಕ ತಿರುವು ಬಂದು ಆಂದೋಲನಕರ್ತರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ೩೬ ಜನ ಪೊಲೀಸರನ್ನು ಗಾಯಗೊಳಿಸಿದರು. ಅದರಲ್ಲಿ ಗಮನಕ್ಕೆ ಬಂದ ಅಂಶವೆಂದರೆ, ಈ ಆಂದೋಲನ ಹಿಂದೆ ‘ಲ್ಯಾಟಿನ್‌ ಕೆಥೋಲಿಕ್‌ ಡಾಯೋಸಿಸ್’ ಈ ಸಂಸ್ಥೆ ಮತ್ತು ಆರ್ಚ್‌ಬಿಷಪ್‌ ಥಾಮಸ್‌ ಜೆ ನೆಟ್ಟೋ ಇವರ ಕೈವಾಡವಿರುವುದು ಅರಿವಾಯಿತು. ಗೋವಾದಲ್ಲಿನ ಕೊಂಕಣ ರೈಲ್ವೆಯ ಹಳಿಗಳ ವಿಸ್ತರಣೆಯ ಕಾರ್ಯಕ್ಕೂ ಚರ್ಚ್‌ನ ಮೂಲಕ ವಿರೋಧವಾಗುತ್ತಿದೆ. ಯಾವಾಗ ಈ ಕಾರ್ಯ ಆರಂಭವಾಗುತ್ತದೋ, ಆಗ ‘ಗೋವಾದಲ್ಲಿ ರೈಲ್ವೇ ಮಾರ್ಗದ ವಿಸ್ತರಣೆಯಾದರೆ ಅದರಿಂದ ಕಲ್ಲಿದ್ದಲು ಸಾಗಾಟ ಆರಂಭವಾಗಿ ಗೋವಾದ ಪರಿಸರ ನಾಶವಾಗುವುದು’, ಎಂಬ ತಲೆಬುಡ ಇಲ್ಲದ ಆರೋಪ ಮಾಡಿ ಪದೇ ಪದೇ ಈ ಕಾರ್ಯವನ್ನು ತಡೆಯಲಾಗುತ್ತದೆ. ಇದರಿಂದ ರೈಲ್ವೆಗೆ ಕೋಟ್ಯಾಂತರ ರೂಪಾಯಿಗಳ ಹಾನಿಯಾಗುತ್ತಿದೆ.

‘ವೇದಾಂತ’ ಕಂಪನಿಯ ‘ಸ್ಟಾರ್‌ಲೈಟ್’ ಎಂಬ ತಾಮ್ರ ಶುದ್ಧೀಕರಣ ಮಾಡುವ ಯೋಜನೆಗೂ ಚರ್ಚ್ ವಿರೋಧಿಸಿರುವುದರಿಂದ ಈ ಯೋಜನೆಯನ್ನು ನಿಲ್ಲಿಸಲಾಗಿದೆ. ಅದರಿಂದ ಜಗತ್ತಿಗೆ ತಾಮ್ರ ರಪ್ತು ಮಾಡುವ ಭಾರತ ಈಗ ತಾಮ್ರವನ್ನು ಆಮದು ಮಾಡಿಕೊಳ್ಳಬೇಕಾಗುತ್ತಿದೆ. ಈ ಯೋಜನೆ ನಿಲ್ಲಿಸಿದ ಕಾರಣ ೫ ಸಾವಿರ ಜನರು ನಿರುದ್ಯೋಗಿಗಳಾದರು. ಪ್ರತಿ ವರ್ಷ ಭಾರತಕ್ಕೆ ೮ ಸಾವಿರ ಕೋಟಿ ರೂಪಾಯಿಗಳಷ್ಟು ಹಾನಿಯಾಗುತ್ತಿದೆ. ಅಷ್ಟು ಮಾತ್ರವಲ್ಲ, ತಾಮ್ರ ಆಮದು ಮಾಡಲು ೯ ಸಾವಿರದ ೯೦೦ ಕೋಟಿ ರೂಪಾಯಿಗಳಷ್ಟು ಹಣ ವಿದೇಶಿ ಕಂಪನಿಗಳಿಗೆ ಹೋಗುತ್ತಿದೆ. ಇದೇ ರೀತಿ ತಮಿಳುನಾಡಿನÀ ಕುಡಾನಕುಲಮ್‌ ಅಣುಇಂಧನ ಯೋಜನೆಗಾಗುವ ವಿರೋಧದ ಹಿಂದೆಯೂ ಚರ್ಚ್‌ನ ಕೈವಾಡವಿತ್ತು. ಅದರಿಂದಲೂ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ‘ಈ ಎಲ್ಲ ಚಟುವಟಿಕೆ ಗಳಿಂದ ವಿದೇಶದಲ್ಲಿನ ಸ್ವಯಂಸೇವಿ ಸಂಸ್ಥೆಗಳಿಗೆ ಮತ್ತು ಭಾರತಕ್ಕೆ ರಪ್ತು ಮಾಡುವ ಪಾಶ್ಚಾತ್ಯ ದೇಶಗಳಿಗೆ ಲಾಭ ವಾಗಬೇಕೆಂದು, ಭಾರತದ ವಿಕಾಸಕ್ಕಾಗಿ ಪಾಶ್ಚಾತ್ಯ ದೇಶಗಳನ್ನು ಅವಲಂಬಿಸಿರಬೇಕೆಂದು, ಈ ಆಂದೋಲನಗಳನ್ನು ಮಾಡಲಾಗು ತ್ತದೆಯೆ ?’, ಎಂಬುದರ ವಿಚಾರಣೆಯಾಗಬೇಕು.

೧೬. ಭಾರತದಲ್ಲಿ ಅಧಿಕಾರಲೋಲುಪ ರಾಜಕೀಯ ಪಕ್ಷಗಳನ್ನು ಆಟ ಆಡಿಸುವ ಹಾಗೂ ಅವರ ಮೇಲೆ ವರ್ಚಸ್ಸು ಬೀರುವ ಚರ್ಚ್‌ಸಂಸ್ಥೆ !

ಇದಕ್ಕೆ ಸಂಬಂಧಿಸಿದ ಈ ಮುಂದಿನ ಕೆಲವು ಮಹತ್ವದ ಘಟನೆಗಳನ್ನು ಓದುವಾಗ ಅದರ ಸತ್ಯಸಂಗತಿ ಅರಿವಾಗಬಹುದು.

ಅ. ಭಾರತದಲ್ಲಿ ಮತಾಂತರಕ್ಕಾಗಿ ಚಮತ್ಕಾರಗಳ, ಉದಾಹರಣೆಗೆ ಕುಂಟನು ನಡೆಯುವುದು, ಕುರುಡನಿಗೆ ತಕ್ಷಣ ಕಣ್ಣು ಕಾಣಿಸುವುದು, ಯೇಸುವಿನ ತೈಲ ಹಚ್ಚಿದಾಗ ಕಾಯಿಲೆ ಗುಣವಾಗುವುದು, ಇಂತಹ ಚಮತ್ಕಾರಗಳನ್ನು ಮುಚ್ಚುಮರೆಯಿಲ್ಲದೆ ಪ್ರದರ್ಶಿಸಲಾಗುತ್ತದೆ. ಆದರೂ ಅದನ್ನು ಯಾರು ಕೂಡ ಅವೈಜ್ಞಾನಿಕ, ಮೂಢನಂಬಿಕೆ ಎನ್ನುವುದಿಲ್ಲ. ತದ್ವಿರುದ್ಧ ‘ಸೆಕ್ಯುಲರ್’ (ಜಾತ್ಯತೀತ) ರಾಜಕೀಯ ಮುಖಂಡರು ಬಹಿರಂಗವಾಗಿ ಆ ಚಮತ್ಕಾರಿ ಪಾದ್ರಿಯ ಆಶೀರ್ವಾದ ಪಡೆಯಲು ಹೋಗುತ್ತಾರೆ. ಮಹಾರಾಷ್ಟ್ರದಲ್ಲಿ ಅಂಧಶ್ರದ್ಧಾ ನಿರ್ಮೂಲನದ ಕಾರ್ಯ ಮಾಡುವುದಾಗಿ ಹೇಳಿಕೊಳ್ಳುವ ಡಾ. ದಾಭೋಳ್ಕರರ ‘ಅಂಧಶ್ರದ್ಧಾ ನಿರ್ಮೂಲನ ಸಮಿತಿ’ಯೂ ಈ ವಿಷಯದಲ್ಲಿ ಮಾತನಾಡುವುದಿಲ್ಲ. ಅವರು ಮಾಡಿರುವ ಅಂಧಶ್ರದ್ಧಾ ನಿರ್ಮೂಲನ ಕಾನೂನಿನಲ್ಲಿ ಈ ಪಾದ್ರಿಗಳ ಮೋಸಗಾರಿಕೆಯ ಚಮತ್ಕಾರಗಳಿಗೆ ಸಂಬಂಧಿಸಿದ ಕಲಮ್‌ಗಳನ್ನು ಹಾಕಬೇಕೆಂದು ನಾವು ಆಗ್ರಹಿಸಿದೆವು; ಆದರೆ ಅವರು ಉದ್ದೇಶಪೂರ್ವಕ ಆ ಕಲಮ್‌ಗಳನ್ನು ಕಾನೂನಿನಲ್ಲಿ ಸಮಾವೇಶಗೊಳಿಸಿಲ್ಲ.

ಆ. ಭಾರತದ ಪಂಜಾಬ್‌ನಲ್ಲಿ ನಡೆಯುತ್ತಿರುವ ಮತಾಂತರದ ಚಟುವಟಿಕೆಗಳು ಮತ್ತು ಅಲ್ಲಿ ಹೆಚ್ಚುತ್ತಿರುವ ಖಲಿಸ್ತಾನವಾದದ ವಿಷಯದಲ್ಲಿಯೂ ವಿಚಾರಣೆಯಾದರೆ ಅವರ ನಡುವಿನ ಪರಸ್ಪರ ಸಂಬಂಧ ಬೆಳಕಿಗೆ ಬರಬಹುದು. ಭಾರತದಲ್ಲಿ ಹಿಂಸಾತ್ಮಕ ಖಲಿಸ್ತಾನವಾದಿ ಕಾರ್ಯಾಚರಣೆ ಮಾಡುವವರಿಗೆ ಕೆನಡಾ ದೇಶದ ‘ವೀಸಾ’ ಸಹಜವಾಗಿ ಸಿಗುತ್ತದೆ ಹಾಗೂ ಅಲ್ಲಿ ಆಶ್ರಯ ಪಡೆದುಕೊಳ್ಳುತ್ತಿದ್ದಾರೆ, ಎಂಬುದು ಈ ಷಡ್ಯಂತ್ರದ ಭಾಗವಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಇ. ‘ನಮ್ಮೊಂದಿಗೆ ಚರ್ಚಿಸದೇ ಮಾಡದೆ ಕ್ರೈಸ್ತ ಬಾಹುಳ್ಯ ಮತದಾರ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಗಳನ್ನು ಆರಿಸಬಾರದು !’ ಎಂದು ಕೇರಳದ ಸಾಯರೋ-ಮಲಬಾರ ಚರ್ಚ್ ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿತು. ಒಂದು ಕಡೆಯಲ್ಲಿ ಭಾರತದಲ್ಲಿ ‘ಸೆಕ್ಯುಲರ್‌’ವಾದವಿದೆ, ಎನ್ನುವುದು ಹಾಗೂ ರಾಷ್ಟ್ರೀಯ ಪಕ್ಷಗಳಿಗೆ ಅಭ್ಯರ್ಥಿಗಳನ್ನು ಆರಿಸುವ ಸ್ವಾತಂತ್ರ್ಯವೂ ಇಲ್ಲ, ಅದಕ್ಕಾಗಿ ಚರ್ಚ್‌ನ ಆದೇಶವನ್ನು ಕಾಯಬೇಕು, ಇದು ಆಶ್ಚರ್ಯಕರವಾಗಿದೆ.

ಈ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಇತ್ಯಾದಿ ‘ಸೆಕ್ಯುಲರ್’ ಪಕ್ಷಗಳಿಂದ ‘ಭಾಜಪ ಪುನಃ ಅಧಿಕಾರಕ್ಕೆ ಬಂದರೆ ಭಾರತದ ಸಂವಿಧಾನವನ್ನು ಬದಲಾಯಿಸಲಾಗುವುದು’, ಎಂದು ಅಪಪ್ರಚಾರ ನಡೆಯುತ್ತಿತ್ತು. ಅದನ್ನು ಕ್ರೈಸ್ತರೂ ದುರುಪಯೋಗಿಸಿಕೊಂಡರು. ‘ಆರ್ಚ್ ಡಾಯೋಸಿಸ್‌ ಆಫ್‌ ಗೋವಾ ಎಂಡ್‌ ದಮನ್’ ಈ ಚರ್ಚ್ ಸಂಸ್ಥೆಯ ‘ರೆನೋವಾಸಾಂವ’ ಎಂಬ ಅಧಿಕೃತ ಮುಖಪತ್ರದ ಸಂಪಾದಕೀಯದಲ್ಲಿ ಮುಂದಿನಂತೆ ಬರೆಯಲಾಗಿತ್ತು, ‘ಸಂವಿಧಾನವನ್ನು ಬದಲಾಯಿಸಿ ಕ್ರೈಸ್ತ ಅಲ್ಪಸಂಖ್ಯಾತರನ್ನು ತಮ್ಮದೇ ದೇಶದಲ್ಲಿ ‘ವಿದೇಶಿ’ಯರನ್ನಾಗಿಸ ಲಾಗುವುದು. ಆದ್ದರಿಂದ ಕ್ರೈಸ್ತ ನಾಗರಿಕರು ಜಾಗರೂಕರಾಗಿದ್ದು ಸಂವಿಧಾನವನ್ನು ಸುರಕ್ಷಿತವಾಗಿಡಲು ಮತದಾನ ಮಾಡಬೇಕು.’ ಈ ರೀತಿ ಕ್ರೈಸ್ತರಿಗೆ ಭಾಜಪದ ವಿರುದ್ಧ ಮತದಾನ ಮಾಡಲು ಪರೋಕ್ಷ ಆದೇಶ ನೀಡಲಾಯಿತು.

ಉ. ಗೋವಾದ ಭಾಜಪದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಇವರು ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ಸಮಾರಂಭದ ಭಾಷಣದಲ್ಲಿ ಹೇಳಿದ್ದರು, ‘ಗೋವಾದಲ್ಲಿನ ಪೊರ್ಚುಗೀಸ್‌ ವಸಾಹತುವಾದದ ಸಂಕೇತಗಳನ್ನು ನಾಶಗೊಳಿಸಿ ಹೊಸ ಗೋಮಾಂತಕವನ್ನು ನಿರ್ಮಿಸುವ ಕಾಲ ಬಂದಿದೆ.’
ಅವರ ಈ ಹೇಳಿಕೆಯನ್ನು ರೂಪಾಂತರಗೊಳಿಸಿ ಅದನ್ನು ಚುನಾವಣೆಯ ದೃಷ್ಟಿಯಲ್ಲಿ ಉಪಯೋಗಿಸುವ ನಿಯೋಜನೆಯನ್ನು ಕ್ರೈಸ್ತರು ಮಾಡಿದರು. ಗೋವಾದಲ್ಲಿನ ಚರ್ಚ್ ಸಂಸ್ಥೆಯ ‘ರೇನೋವಾಸಾಂವ’ ಈ ಅಧಿಕೃತ ಮುಖಪತ್ರದಲ್ಲಿ ಡಾ. ಎಫ್‌.ಇ. ನೊರೋನ್ಹಾ ಇವರು ‘ಗೋವನ್ಸ್ ನೀಡ್‌ ಟು ಯುನಾಯಿಟ್‌..ಓರ್‌ ದೆ ವಿಲ್‌ ಪೆರಿಶ್’ (ಗೋವಾದವರು ಒಗ್ಗಟ್ಟಾಗಬೇಕಾಗಿದೆ, ಇಲ್ಲದಿದ್ದರೆ ಅವರು ನಾಶವಾಗುವರು), ಎಂಬ ಲೇಖನದಲ್ಲಿ ಮುಂದಿನಂತೆ ಹೇಳಿದ್ದರು, ‘ಗೋವಾದಲ್ಲಿ ಪೋರ್ಚುಗೀಸ್‌ ಸಂಸ್ಕೃತಿಯನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ. ಚರ್ಚ್‌ಗಳನ್ನು ನಷ್ಟಗೊಳಿಸಬಹುದು, ಹಾಗೂ ಪಾದ್ರಿಗಳನ್ನು ಮತ್ತು ನಿಮ್ಮನ್ನು (ಕ್ರೈಸ್ತರನ್ನು) ಥಳಿಸಬಹುದು. ಆದ್ದರಿಂದ ನೀವು ಸಂಘಟಿತರಾಗುವ ಅವಶ್ಯಕತೆಯಿದೆ. ಗೋವಾದಲ್ಲಿ ಭವಿಷ್ಯದಲ್ಲಿ ಸಂಭವಿಸಬಹುದಾದ ‘ಮಣಿಪುರ ಹೊಲೋಕ್ರಾಸ್ಟ್‌’ನ ಸಿದ್ಧತೆ (ಮಣಿಪುರದಲ್ಲಿ ಕ್ರೈಸ್ತರನ್ನು ಹತ್ಯೆ ಮಾಡಲಾಗುತ್ತಿದೆ, ಅದೇ ರೀತಿಯ ಸಿದ್ಧತೆ) ನಡೆಯುತ್ತಿದೆ. ಆದ್ದರಿಂದ ಪ್ರಾಯಶ್ಚಿತ್ತವೆಂದು ನಾವು ಗೋವಾದಿಂದ ಕನಿಷ್ಟ ೨ ‘ಸೆಕ್ಯುಲರ್’ ಪ್ರತಿನಿಧಿಗಳನ್ನಾದರೂ ಆರಿಸಿ ದೆಹಲಿಗೆ ಕಳುಹಿಸಬೇಕು !’

ಊ. ೨೦೧೯ ರ ಚುನಾವಣೆಯ ಮೊದಲು ಗೋವಾದ ಒಂದು ಪ್ರತಿಷ್ಟಿತ ಚರ್ಚ್‌ನ ಪಾದ್ರಿ ಕಾನ್ಸೆಸಾಂವ ಡಿಸಿಲ್ವಾ ಇವರು ತಮ್ಮ ಧಾರ್ಮಿಕ ಉಪದೇಶದಲ್ಲಿ ಮುಂದಿನಂತೆ ಹೇಳಿದ್ದರು, ‘ಅಮಿತ ಶಾಹ ಇವರು ಸೈತಾನ (ಪಿಶಾಚಿ) ಆಗಿದ್ದಾರೆ. ಪ್ರಧಾನಮಂತ್ರಿ ಮೋದಿಯವರು ಒಬ್ಬ ಸಂಸದನ ಸಹಿತ ಸಾವಿರಾರು ಮುಸಲ್ಮಾನರನ್ನು ಸುಟ್ಟು ಹಾಕಿದ್ದಾರೆ. ಮನೋಹರ ಪರ್ರೀಕರ್‌ ಇವರು ಸೈಂಟ್‌ ಝೇವಿಯರ್‌ ಇವರ ರಜೆಯ ನಿಯಮವನ್ನು ಬದಲಾಯಿಸಿರುವುದರಿಂದ ಶಾಪ ತಗಲಿ ಅವರಿಗೆ ಅರ್ಬುದರೋಗ ಬಂದು ನೋವಿನಿಂದ ನರಳುತ್ತಾ ಸಾಯಬೇಕಾಯಿತು.’ ಹಾಗಾದರೆ ಇದನ್ನು ಚರ್ಚ್‌ನಲ್ಲಿನ ಧಾರ್ಮಿಕ ಪ್ರವಚನವೆಂದು ಹೇಳಬೇಕೇ ಅಥವಾ ದ್ವೇಷಯುಕ್ತ ಹೇಳಿಕೆ ಎನ್ನಬೇಕು ?

೧೭. ಮತಾಂತರವನ್ನು ನಿಲ್ಲಿಸಲು ಕಠೋರ ಕಾನೂನು ಮಾಡುವ ಅವಶ್ಯಕತೆಯಿದೆ !

ಭಾರತದಲ್ಲಿ ಚರ್ಚ್ ಕೇವಲ ಧಾರ್ಮಿಕ ಸಂಸ್ಥೆಯಾಗಿ ಉಳಿದಿಲ್ಲ, ಅದು ಪ್ರಭಾವದ ಆಧಾರದಲ್ಲಿ ರಾಜಕೀಯ ಕ್ಷಮತೆಯನ್ನು ಉಪಯೋಗಿಸುತ್ತದೆ ಹಾಗೂ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಹಾಕುತ್ತಿದೆ. ಆದ್ದರಿಂದ ಕೇವಲ ಮತಾಂತರದ ದೃಷ್ಟಿಯಲ್ಲಿ ವಿಚಾರ ಮಾಡದೆ ಭಾರತದ ವ್ಯವಸ್ಥೆಯಲ್ಲಿ ಆಳವಾಗಿ ನುಸುಳಿಕೊಂಡಿರುವ ಈ ‘ಆಕ್ಟೋಪಸ್‌’ಗೆ ಅದರ ಸ್ಥಾನವನ್ನು ತೋರಿಸುವ ಅವಶ್ಯಕತೆಯಿದೆ. ಇಂದು ಜಗತ್ತಿನಾದ್ಯಂತದ ಕ್ರೈಸ್ತರು ತಮ್ಮನ್ನು ‘ನಾಸ್ತಿಕ’ರೆಂದು ಘೋಷಣೆ ಮಾಡುತ್ತಿರುವಾಗ ಹಾಗೂ ವಿದೇಶದಲ್ಲಿನ ಚರ್ಚ್‌ಗಳು ಮುಚ್ಚುತ್ತಿರುವುದರಿಂದ ಅವುಗಳನ್ನು ಹಿಂದೂ ಸಂಸ್ಥೆಗಳು ಖರೀದಿಸಿ ಅಲ್ಲಿ ಮಂದಿರಗಳನ್ನು ನಿರ್ಮಿಸುತ್ತಿರುವಾಗ ಭಾರತದಲ್ಲಿ ಮಾತ್ರ ಮತಾಂತರದ ಪ್ರಮಾಣ ಹೆಚ್ಚಾಗುತ್ತಿರುವುದು ಅಪಾಯಕಾರಿಯಾಗಿದೆ. ಮುಂಬಯಿಯ ಸಮೀಪದ ಪಾಲಘರ್‌ನಲ್ಲಿ ಪೊಲೀಸರ ಎದುರಿಗೇ ಸಾಧುಗಳ ಹತ್ಯೆಯಾಗಿರುವುದನ್ನು ಎಲ್ಲರೂ ನೋಡಿರಬಹುದು. ಇವೆಲ್ಲವನ್ನೂ ತಡೆಗಟ್ಟಲು ಮತಾಂತರಕ್ಕೆ ಕಡಿವಾಣ ಹಾಕುವುದರೊಂದಿಗೆ ಕಠೋರ ಕಾನೂನು ಮಾಡಿ ಮತಾಂತರವನ್ನು ನಿರ್ಬಂಧಿಸುವ ಅವಶ್ಯಕತೆಯಿದೆ. (ಮುಗಿಯಿತು)

(ಆಧಾರ : ಸಾಪ್ತಾಹಿಕ ‘ಹಿಂದೂಸ್ಥಾನ ಪೋಸ್ಟ್‌’, ದೀಪಾವಳಿ ವಿಶೇಷಾಂಕ ೨೦೨೪)

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ (೨೩.೧೦.೨೦೨೪)