೧. ಕಾಂಗ್ರೆಸ್ ಅಧ್ಯಕ್ಷರಿಂದ ಭಗವಾನ ಶಿವನಿಗೆ ಅವಮಾನ !
ನಾನೊಬ್ಬ ಹಿಂದೂ, ನನ್ನ ಹೆಸರು ಮಲ್ಲಿಕಾರ್ಜುನ ಖರ್ಗೆ. ೧೨ ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ನಾನು ಒಬ್ಬ ಲಿಂಗ ಎಂದು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳುವ ಮೂಲಕ ತಮ್ಮನ್ನು ಜ್ಯೋತಿರ್ಲಿಂಗಕ್ಕೆ ಹೋಲಿಸಿದ್ದಾರೆ.
೨. ಭಾರತ ಸರಕಾರವು ಇಂತಹ ಆದೇಶವನ್ನು ಯಾವಾಗ ನೀಡುತ್ತದೆ ?
ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದನ್ನು ನಿಷೇಧಿಸುವಂತೆ ಇಸ್ರೇಲ್‌ನ ರಕ್ಷಣಾ ಸಚಿವ ಇಟಾಮಾರ್ ಬೆನ್-ಗವಿರ್ ಇವರು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಧ್ವನಿವರ್ಧಕಗಳನ್ನು ತೆಗೆದು ಜಪ್ತಿ ಮಾಡುವಂತೆ ಮತ್ತು ಅವರು ಹಾಗೆ ಮಾಡದಿದ್ದರೆ ಮಸೀದಿಗಳಿಗೆ ದಂಡ ವಿಧಿಸುವಂತೆಯೂ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
೩. ಹಿಂದೂಗಳು ನಿಜವಾದ ಇತಿಹಾಸವನ್ನು ತಿಳಿಯುವುದು ಆವಶ್ಯಕ !
ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ದೆಹಲಿಯ ಜಾಮಾ ಮಸೀದಿಯ ಸಮೀಕ್ಷೆಗೆ ಒತ್ತಾಯಿಸಿ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಹಿಂದೂ ದೇವತೆಗಳ ವಿಗ್ರಹಗಳ ಅವಶೇಷಗಳನ್ನು ಮಸೀದಿಯ ಮೆಟ್ಟಿಲುಗಳಲ್ಲಿ ಬಳಸಲಾಗಿದೆ ಎಂದು ಗುಪ್ತಾರವರು ಹೇಳಿದ್ದಾರೆ.
೪. ಇಡೀ ದೇಶದಲ್ಲಿ ಗೋಮಾಂಸ ನಿಷೇಧಿಸಿರಿ !
ಅಸ್ಸಾಂನಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಅಸ್ಸಾಂ ಮಂತ್ರಿಮಂಡಳವು ರಾಜ್ಯದ ಹೋಟೆಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸವನ್ನು ನಿಷೇಧಿಸಲು ನಿರ್ಧರಿಸಿದೆ.
೫. ಭಾರತವು ಬಾಂಗ್ಲಾದೇಶವನ್ನು ಬಹಿಷ್ಕರಿಸಬೇಕು !
ಬಾಂಗ್ಲಾದೇಶದ ಹಿಂದೂವಿರೋಧಿ ‘ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ’ಯ ಜಂಟಿ ಪ್ರಧಾನ ಕಾರ್ಯದರ್ಶಿ ರುಹೂಲ್ ಕಬೀರ್ ರಿಝವಿ ಅವರು ತಮ್ಮ ಪತ್ನಿಯ ಭಾರತೀಯ ಸೀರೆಯನ್ನು ಸುಡುವ ಮೂಲಕ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು.
೬. ಇಂತಹ ಘಟನೆಗಳು ಹಿಂದೂ ರಾಷ್ಟ್ರವನ್ನು ಅನಿವಾರ್ಯವಾಗಿಸುತ್ತವೆ !
ಡಿಸೆಂಬರ್ ೬ ರ ಶುಕ್ರವಾರದಂದು ದರ್ಭಂಗ (ಬಿಹಾರ)ದ ತರೌನಿ ಗ್ರಾಮದಿಂದ ಹೊರಡಿಸಿದ ರಾಮವಿವಾಹ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲು ತೂರಾಟ ಮಾಡಲಾಯಿತು. ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
೭. ಬಾಂಗ್ಲಾದೇಶದ ಉದ್ಧಟತನವನ್ನು ಭಾರತ ಯಾವಾಗ ಕೊನೆಗೊಳಿಸಲಿದೆ ?
ಭಾರತ ಮತ್ತು ಅಮೆರಿಕ ಕೂಡ ನಮ್ಮ ಮುಂದೆ ನಿಲ್ಲಲು ಸಾಧ್ಯವಿಲ್ಲ ಎಂದು ಬಾಂಗ್ಲಾದೇಶದ ನಿವೃತ್ತ ಮೇಜರ್ ಷರೀಫ್ ಹೇಳಿದ್ದಾರೆ. ಅಗತ್ಯಬಿದ್ದರೆ ಬಾಂಗ್ಲಾದೇಶವು ೪ ದಿನಗಳಲ್ಲಿ ಕೋಲಕಾತಾವನ್ನು ತನ್ನ ವಶಕ್ಕೆ ಪಡೆಯಬಹುದು ಎಂದು ಸಹ ಹೇಳಿದ್ದಾರೆ.