ಸದ್ಯ ದೇಶದಲ್ಲಿ ಹಿಂದೂಗಳ ಮೇಲೆ ವಿವಿಧ ರೀತಿಯ ಆಕ್ರಮಣಗಳಾಗುತ್ತಿವೆ. ಇಂದು ಹಿಂದೂಗಳಿಗೆ ಬಂದಿರುವ ಭಯಾನಕ ಆಪತ್ತುಗಳು ಈ ಹಿಂದೆ ಯಾವತ್ತೂ ಬಂದಿರಲಿಲ್ಲ. ೮೦೦ ರಿಂದ ೧ ಸಾವಿರ ವರ್ಷಗಳ ವರೆಗೆ ಇಸ್ಲಾಮ್ ನಮ್ಮನ್ನು ಆಳಿತು; ಆದರೆ ಅವರಿಗೆ ಸಂಪೂರ್ಣ ಭಾರತವನ್ನು ಆಳಲು ಎಂದಿಗೂ ಸಾಧ್ಯವಾಗಲಿಲ್ಲ. ಅವರು ನಮ್ಮ ಮೇಲೆ ಆಕ್ರಮಣ ಮಾಡುವಾಗ ನಮ್ಮಲ್ಲಿ ಒಗ್ಗಟ್ಟು ಇತ್ತು. ಆದ್ದರಿಂದ ಅವರ ವಿರುದ್ಧ ನಾವು ಒಗ್ಗಟ್ಟಾಗಿ ಹೋರಾಡಲು ಮುಂದೆ ಬರುತ್ತಿದ್ದೆವು. ಇಂದು ಎಲ್ಲರೂ ವಿಭಜಿಸಲ್ಪಟ್ಟಿದ್ದಾರೆ. ಅದರ ಹಿಂದೆ ಜಾತ್ಯತೀತ ಹಾಗೂ ಮೀಸಲಾತಿ ಎಂಬ ಕಾರಣಗಳಿವೆ, ಈ ಹಿಂದೆ ಅದು ಇರಲಿಲ್ಲ.
ಇನ್ನೊಂದು ವಿಷಯವೆಂದರೆ ಆ ಕಾಲದಲ್ಲಿ ಜನರು ಶಸ್ತ್ರಗಳನ್ನು ಉಪಯೋಗಿಸುತ್ತಿದ್ದರು. ಸತ್ಯಕ್ಕಾಗಿ ಅದನ್ನು ಎತ್ತುವಾಗ ಯಾರೂ ತಡೆಯುತ್ತಿರಲಿಲ್ಲ. ಇಂದು ನಾವು ಶಸ್ತ್ರ ಹಿಡಿದರೆ, ನಮ್ಮನ್ನು ‘ಹಿಂದೂ ಭಯೋತ್ಪಾದಕ’ರೆನ್ನಲಾಗುತ್ತದೆ. ವಾಸ್ತವದಲ್ಲಿ ನಮ್ಮ ಸಂವಿಧಾನಕ್ಕನುಸಾರ ನಾವು ಸ್ವರಕ್ಷಣೆಗಾಗಿ ಶಸ್ತ್ರ ಕೈಗೆತ್ತಿಕೊಳ್ಳಬಹುದು; ಆದರೆ ಸರಕಾರ ಅದಕ್ಕೆ ಅನುಮತಿ ನೀಡುವುದಿಲ್ಲ. ನಮ್ಮ ದೇಶದ ಸ್ಥಿತಿ ಹೇಗಿದೆ ಎಂದರೆ, ಆಕ್ರಮಣಕಾರನನ್ನು ಮತ್ತು ಸಂತ್ರಸ್ತನನ್ನು ಒಂದೇ ಶ್ರೇಣಿಯಲ್ಲಿ ಇಡಲಾಗುತ್ತದೆ. ಎಲ್ಲಿಯಾದರೂ ಗಲಭೆಯಾದರೆ, ಗಲಭೆ ಎಬ್ಬಿಸುವ ೫ ಮತಾಂಧ ಮುಸಲ್ಮಾನರನ್ನು ಬಂಧಿಸಲಾಗುತ್ತದೆ ನಿಜ; ಆದರೆ ಸಮತೋಲನÀವನ್ನು ಕಾಪಾಡಲು ೧೦ ನಿರಪರಾಧಿ ಹಿಂದೂಗಳನ್ನೂ ಬಂಧಿಸಲಾಗುತ್ತದೆ. ನಾವು ಬೌದ್ಧಿಕ ಸ್ತರದಲ್ಲಿಯೂ ಹೋರಾಡುವ ಹಾಗಿಲ್ಲ. ನಾವು ಏನೇ ಹೇಳಿದರೂ ಅದನ್ನು ದ್ವೇಷಯುಕ್ತ ಹೇಳಿಕೆ (‘ಹೇಟ್ ಸ್ಪೀಚ್’) ಎಂದು ಪರಿಗಣಿಸಲಾಗುತ್ತದೆ.
ಡಾ. ನೀಲ ಮಾಧವ ದಾಸ ಇವರ ಪರಿಚಯ

ಧನಬಾದ (ಝಾರ್ಖಂಡ)ದಲ್ಲಿನ ಡಾ. ನೀಲ ಮಾಧವ ದಾಸ ಇವರು ‘ತರುಣ ಹಿಂದೂ’ ಸಂಘಟನೆಯ ಸಂಸ್ಥಾಪಕರಾಗಿದ್ದಾರೆ. ಈ ಸಂಘಟನೆ ಹಿಂದೂಗಳಲ್ಲಿ ಧರ್ಮಚೇತನವನ್ನು ಜಾಗೃತಗೊಳಿಸಿ ಅವರನ್ನು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರೇರೇಪಿಸುತ್ತದೆ ಹಾಗೂ ಮತಾಂತರ ಹಾಗೂ ‘ಲವ್ ಜಿಹಾದ್’ ವಿರುದ್ಧ ಜಾಗೃತಿ ಮೂಡಿಸುತ್ತದೆ. ಈ ಸಂಘಟನೆಯಿಂದ ‘ತರುಣ ಹಿಂದೂ’ ಹೆಸರಿನ ದಿನನಪತ್ರಿಕೆಯೂ ಪ್ರಕಾಶನವಾಗುತ್ತದೆ.
೧. ಸ್ವಾತಂತ್ರ್ಯಪ್ರಾಪ್ತಿಯ ನಂತರ ಭಾರತದಲ್ಲಿ ಹೆಚ್ಚುತ್ತಿರುವ ಕ್ರೈಸ್ತೀಕರಣ
ಸರ್ವೋಚ್ಚ ನ್ಯಾಯಾಲಯವು ಮುಂದಿನಂತೆ ಹೇಳಿದೆ, ಯಾರಾದರೂ ಪ್ರಚೋದನಕಾರಿಯಾಗಿ ಮಾತನಾಡಿದರೆ, ನ್ಯಾಯಾಲಯವು ತಾನಾಗಿಯೇ ಅದರ ವಿರುದ್ಧ ಕ್ರಮ (‘ಸೂಮೋಟೊ’) ತೆಗೆದುಕೊಳ್ಳಬೇಕು. ಕ್ರೈಸ್ತರು ಮತ್ತು ಆಂಗ್ಲರು ಯಾವುದೇ ದೇವಸ್ಥಾನವನ್ನು ಕೆಡವಲಿಲ್ಲ ಅಥವಾ ಯಾವುದೇ ದೇವಸ್ಥಾನವನ್ನು ಲೂಟಿ ಮಾಡಿಲ್ಲ. ಇಂದು ಸ್ವಾತಂತ್ರ್ಯ ಸಿಕ್ಕಿದ ನಂತರ ದೇವಸ್ಥಾನÀಗಳನ್ನು ಧ್ವಂಸ ಮಾಡಲಾಗುತ್ತದೆ. ಕಾನೂನು ಮಾಡಿ ಹಿಂದೂಗಳ ದೇವಸ್ಥಾನÀಗಳನ್ನು ರಾಜಾರೋಷವಾಗಿ ಲೂಟಿ ಮಾಡಲಾಗುತ್ತಿದೆ. ಇಂದು ನಾಗಾಲ್ಯಾಂಡ್ ರಾಜ್ಯವು ದೇಶ ಸ್ವಾತಂತ್ರ್ಯವಾದ ನಂತರವೇ ಶೇ. ೧೦೦ ರಷ್ಟು ಕ್ರೈಸ್ತ ರಾಜ್ಯವಾಗಿದೆ. ಅದಕ್ಕೂ ಮೊದಲು ಭಾರತೀಯರು ಕ್ರೈಸ್ತರಾಗಿರಲಿಲ್ಲ. ಆಂಗ್ಲರು ಅಥವಾ ಕ್ರೈಸ್ತರು ಹಿಂದೂಗಳನ್ನು ಕ್ರೈಸ್ತರನ್ನಾಗಿ ಮಾಡಿರಲಿಲ್ಲ. ಅವರು ಯಾವತ್ತೂ ಪೋಪ್‌ರನ್ನು ಭಾರತಕ್ಕೆ ಆಮಂತ್ರಿಸಿರಲಿಲ್ಲ. ನಮ್ಮ ಜನರಿಗೆ ಪೋಪ್‌ರವರನ್ನು ಕರೆಸುವಂತಹ ದೀನ ಸ್ಥಿತಿ ಏಕೆ ಬಂತು ಗೊತ್ತಿಲ್ಲ. ಪೋಪ್ ಕೂಡ ಇಲ್ಲಿ ನಮ್ಮದೇ ದೇಶದಲ್ಲಿ ಬಂದು ಬಹಿರಂಗವಾಗಿ, ‘ನಾವು ಭಾರತವನ್ನು ಕ್ರೈಸ್ತ ದೇಶವನ್ನಾಗಿ ಮಾಡೋಣ’ ಎನ್ನುತ್ತಾರೆ. ಇಂದು ನಮ್ಮದೇ ಸರಕಾರ ನಮ್ಮ ವಿರುದ್ಧ ಕಾರ್ಯ ಮಾಡುತ್ತಿದೆ. ಇಂದಿನ ಆಧುನೀಕರಣದಿಂದಾಗಿ ಹಿಂದೂ ಧರ್ಮದ ವಿರುದ್ಧ ಇಂಗ್ಲೆಂಡ್ ಮತ್ತು ಅಮೇರಿಕಾದಲ್ಲಿ ಕುಳಿತು ಸುಳ್ಳು ಕಥೆ (ನ್ಯಾರೇಟಿವ್) ರಚಿಸಲು ತುಂಬಾ ಸುಲಭವಾಗಿದೆ. ಆದ್ದರಿಂದ ಇಂದು ಹಿಂದೂ ಸಮಾಜ ಅತ್ಯಂತ ಅಪಾಯದಲ್ಲಿದೆ.
೨. ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವುದೇ ದೇಶವಿರೋಧಿ ಶಕ್ತಿಗಳ ಧ್ಯೇಯ !
ಇಂದು ಭಾರತದ ಒಳಗೆ ಮತ್ತು ಹೊರಗೆ ಎರಡೂ ಕಡೆಗಳಲ್ಲಿ ಶತ್ರುಗಳಿದ್ದಾರೆ. ಅರಬ ದೇಶಗಳಿಂದ ಹಿಡಿದು ಮಲೇಷ್ಯಾದ ವರೆಗೆ ಎಲ್ಲರೂ ಭಾರತದ ಹಿಂದೂಗಳ ಬಹುಮತವನ್ನು ಹೇಗೆ ಕಡಿಮೆಗೊಳಿಸಬಹುದು ಎಂಬುದರಲ್ಲಿಯೆ ಮಗ್ನರಾಗಿದ್ದಾರೆ. ಈ ಜನರು ಭಾರತವನ್ನು ‘ಗಜವಾ-ಎ-ಹಿಂದ’ (ಕಾಫೀರರನ್ನು ಹತ್ಯೆಗೊಳಿಸುವ ಯುದ್ಧ) ಮಾಡಲು ಪ್ರಯತ್ನಿಸುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ಭಾರತವನ್ನು ‘ಕ್ರೈಸ್ತ ರಾಷ್ಟ್ರ’ವನ್ನಾಗಿ ಹೇಗೆ ಮಾಡಬಹುದು, ಎಂಬುದಕ್ಕಾಗಿ ಕ್ರೈಸ್ತ ಪ್ರಚಾರಕರು ಮತ್ತು ಅವರ ಪೋಪ್ ಕೂಡ ಪ್ರಯತ್ನಿಸುತ್ತಿದ್ದಾರೆ. ಈ ರೀತಿ ಕ್ರೈಸ್ತರು ಮತ್ತು ಇಸ್ಲಾಮ್ ಇವೆರಡೂ ಬಣಗಳು ವಿವಿಧ ರೀತಿಯಲ್ಲಿ ಹಿಂದೂಗಳ ಬಹುಮತವನ್ನು ಕಡಿಮೆಗೊಳಿಸಿ ಇಲ್ಲಿ ಅವರ ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿವೆ. ಭಾರತದ ದೃಷ್ಟಿಯಿಂದ ನೋಡಿದರೆ, ಆ ಎರಡೂ ಗುಂಪಿನವರು ಒಂದು ‘ಇಕೋಸಿಸ್ಟಮ್’ನ ಭಾಗವಾಗಿದ್ದಾರೆ.
ಖಲಿಸ್ತಾನಿ ಸಂಘಟನೆಗೆ ಪುನಃ ಜೀವಕಳೆ ಬಂದಿದೆ. ‘ಬಿಬಿಸಿ’, ‘ಅಲ್ ಜಝಿರಾ’ದಂತಹ ಪ್ರಸಾರ ಸಂಸ್ಥೆಗಳು ಹಿಂದೂವಿರುದ್ಧ ಸುಳ್ಳು ಕಥೆÀಗಳನ್ನು ರಚಿಸುವುದರಲ್ಲಿ ಮಗ್ನರಾಗಿದ್ದಾರೆ. ‘ಫೋರ್ಡ್ ಫೌಂಡೇಶನ್’, ಹಿಂದುತ್ವದ ಜಾಗತಿಕ ಸ್ತರದಲ್ಲಿ ಉಚ್ಚಾಟನೆ (ಡಿಸ್‌ಮ್ಯಾಂಟಲಿಂಗ್ ಹಿಂದುತ್ವ) ಪರಿಷತ್ತು, ಎಲ್ಲ ಬುದ್ಧಿಜೀವಿಗಳು, ಹೆಚ್ಚಿನÀ ನಟ-ನಟಿಯರು, ಸಾಮಾಜಿಕ ಕಾರ್ಯಕರ್ತರು ಕೂಡ ಇದನ್ನೇ ಮಾಡುತ್ತಿದ್ದಾರೆ. ಭಾರತದಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಮುಸಲ್ಮಾನಪ್ರೇಮಿಗಳಾಗಿವೆ. ಆದ್ದರಿಂದ ಮುಸಲ್ಮಾನಪ್ರೇಮಿ ಆಗಬೇಕಾದರೆ ಅವರು ಹಿಂದೂವಿರೋಧಿಗಳಾಗಲೇ ಬೇಕು. ಈ ಪಕ್ಷಗಳು ಕೇವಲ ಮುಸಲ್ಮಾನಪ್ರೇಮಿಗಳಷ್ಟೆ ಅಲ್ಲ, ಕ್ರೈಸ್ತಪ್ರೇಮಿಗಳೂ ಆಗಿದ್ದಾರೆ. ಅನೇಕ ರಾಜ್ಯ ಸರಕಾರಗಳು, ಸಾಮ್ಯವಾದಿ ಸಂಘಟನೆಗಳು, ನಗರ ನಕ್ಸಲವಾದಿಗಳು, ಎಲ್ಲ ಬುದ್ಧಿಜೀವಿಗಳು ಕೂಡ ಹಿಂದೂವಿರೋಧಿಗಳಾಗಿಯೆ ಕಾರ್ಯ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಹಿಂದೂವಿರೋಧಿ ಸರಕಾರ ಬಂದನಂತರ ಮತಾಂತರನಿಷೇಧ ಕಾನೂನನ್ನು ತಕ್ಷಣ ರದ್ದುಪಡಿಸಲಾಯಿತು. ‘ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡುವುದು’, ಇದೇ ಎಲ್ಲರ ಧ್ಯೇಯವಾಗಿದೆ.
೩. ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಇಲ್ಲದೇ ದುರ್ಬಲರಾದ ಹಿಂದೂಗಳು ಸಮಾಜದ ಉನ್ನತಿಗಾಗಿ ೪ ಶಕ್ತಿಗಳ ಅವಶ್ಯಕತೆಯಿರುತ್ತದೆ.
ಅ. ಮೊದಲ ಶಕ್ತಿ ರಾಜಕೀಯ ಶಕ್ತಿ, ಅದು ಹಿಂದೂಗಳಲ್ಲಿ ಇಲ್ಲ. ಯಾವುದೇ ರಾಜಕೀಯ ಪಕ್ಷ ನಮಗೆ ಸಹಾಯ ಮಾಡಲು ಸಿದ್ಧವಿಲ್ಲ.
ಆ. ಎರಡನೆಯ ಶಕ್ತಿ ಸೈನ್ಯ ಶಕ್ತಿ ! ನಮಗೆ ಪೊಲೀಸ್ ಹಾಗೂ ಸೈನ್ಯದ ಸಹಾಯವಿಲ್ಲ. ಹಿಂದೂ ಬಾಂಧವರು ಯಾವತ್ತೂ ಭಯೋತ್ಪಾದಕರಾಗಲು ಸಾಧ್ಯವಿಲ್ಲ, ನಮ್ಮ ಶಾಸ್ತ್ರ ನಮ್ಮನ್ನು ಭಯೋತ್ಪಾದಕರಾಗಲು ಹೇಳುವುದಿಲ್ಲ. ಶಾಸ್ತ್ರವು ರಾಜರಿಗೆ, ಕ್ಷತ್ರೀಯ ಹಾಗೂ ದೇವತೆಗಳಿಗೆ ಮಾತ್ರ ಶಸ್ತ್ರವನ್ನು ಹಿಡಿಯಲು ಹೇಳಿದೆ. ಅನಂತರ ನಮ್ಮ ಶಾಸ್ತ್ರಗಳಲ್ಲಿ ಎಲ್ಲರಿಗೂ ಅಹಿಂಸೆಯನ್ನೇ ಕಲಿಸಲಾಗಿದೆ. ಉದಾ. ನಮ್ಮವರ ಯಮ-ನಿಯಮಗಳಲ್ಲಿ ಎಲ್ಲಿಯೂ ಹಾಗೆ ಹೇಳಿಲ್ಲ ಅಥವಾ ಭಗವದ್ಗೀತೆಯಲ್ಲಿನ ೧೬ ನೇ ಅಧ್ಯಾಯದಲ್ಲಿ ೨೬ ದೈವೀ ಗುಣಗಳನ್ನು ಕಲಿಸಲಾಗಿದೆ, ಅದರಲ್ಲಿ ಎಲ್ಲಿಯೂ ಶಸ್ತ್ರ ಹಿಡಿಯುವ ಆದೇಶವಿಲ್ಲ. ನಮ್ಮ ಜನರ ಯಮ-ನಿಯಮಗಳು ಅಹಿಂಸೆಯಿಂದಲೇ ಆರಂಭವಾಗಿದೆ. ಅಹಿಂಸಾಸತ್ಯಾಸ್ತೇಯಬ್ರಹ್ಮಚರ್ಯಾಪರಿಗ್ರಹಾ ಯಮಾಃ |
ಅರ್ಥ : ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಈ ೫ ಯಮಗಳಾಗಿವೆ.
ಶೌಚಸನ್ತೋಷತಪಃಸ್ವಾಧ್ಯಾಯೇಶ್ವರಪ್ರಣಿಧಾನಾನಿ ನಿಯಮಾಃ |
– ಪಾತಂಜಲಿಯೋಗದರ್ಶನ, ಸಾಧನಪಾದ, ಸೂತ್ರ ೩೦-೩೨
ಅರ್ಥ : ಶೌಚ, ಸಂತೋಷ, ತಪ, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ ಇವು ನಿಯಮಗಳಾಗಿವೆ. ಇಲ್ಲಿ ನಮಗೆ ಹೇಳಿರುವ ೧೦ ನಿಯಮಗಳಲ್ಲಿ ಎಲ್ಲಿಯೂ ಶಸ್ತ್ರ ಹಿಡಿಯಬಾರದೆಂದೇ ಹೇಳಿದೆ.
ಇ. ನಂತರ ಇಲ್ಲಿ ಆರ್ಥಿಕ ಶಕ್ತಿ. ನಮ್ಮ ಜನರಲ್ಲಿ ಆರ್ಥಿಕ ಶಕ್ತಿಯೂ ಇಲ್ಲ. ಜನರು ದೇವಸ್ಥಾನಗಳಿಗೆ ಹೋಗುತ್ತಾರೆ. ಕೋಟ್ಯಾವಧಿ ರೂಪಾಯಿಗಳ ದಾನ ಮಾಡುತ್ತಾರೆ; ಆದರೆ ಹಿಂದುತ್ವದ ಹೋರಾಟ ಮಾಡಲು ಹಿಂದುತ್ವನಿಷ್ಠರಿಗೆ ದಾನದ ರೂಪದಲ್ಲಿ ಹಣ ನೀಡುವವರೇ ಇಲ್ಲ.
ಈ. ಅನಂತರ ನಾಲ್ಕನೇ ಶಕ್ತಿ, ಅಂದರೆ ಸಾಮಾಜಿಕ ಶಕ್ತಿ ಯಾಗಿರುತ್ತದೆ. ಅದು ಎಲ್ಲರ ಉನ್ನತಿಗಾಗಿ ಆವಶ್ಯಕವಾಗಿರುತ್ತದೆ. ಆ ಸಮಾಜವೂ ನಮ್ಮ ಜೊತೆಗಿಲ್ಲ. ಹಿಂದುತ್ವದ ವಿಷಯದಲ್ಲಿ ಅನೇಕ ಸುಳ್ಳು ಕಥೆಗಳನ್ನು ಸಮಾಜದಲ್ಲಿ ಬಿಂಬಿಸಲಾಗಿದೆ. ಇಂದು ಹಿಂದುತ್ವದ ವಿಷಯದಲ್ಲಿ ಮಾತನಾಡುವಾಗ ಸಮಾಜವು ಅಲ್ಪಸ್ವಲ್ಪವಾದರೂ ಕೇಳಿಸಿಕೊಳ್ಳುತ್ತದೆ. ೧೯೯೮ ಕ್ಕಿಂತ ಮೊದಲು ಹಿಂದುತ್ವ ಅಥವಾ ಹಿಂದೂ ರಾಷ್ಟ್ರದ ವಿಷಯದಲ್ಲಿ ಮಾತನಾಡಿದರೆ, ‘ನೀವು ಹಿಂದೂ-ಮುಸಲ್ಮಾನರಲ್ಲಿ ಜಗಳ ಮಾಡಿಸಲು ಪ್ರಯತ್ನಿಸುತ್ತಿದ್ದೀರಿ’, ಎಂದು ಜನರು ಹೇಳುತ್ತಿದ್ದರು.
ಈಗ ಆ ಸಮಾಜವು ಕ್ರಮೇಣ ನಮ್ಮ ಸಮೀಪ ಬರುತ್ತಿದೆ. ಈ ಸಮಾಜವು ಸಂಘಟಿತವಾಗಿ ನಮ್ಮ ಜೊತೆಗೆ ಬಂದರೆ, ಅನ್ಯಾಯದ ವಿರುದ್ಧ ಪ್ರಜಾಪ್ರಭುತ್ವದ ಮಾರ್ಗದಲ್ಲಿ ರಸ್ತೆಗಿಳಿಯ ಬಹುದು. ಇಂದು ಸಮಾಜದ ದೊಡ್ಡ ವರ್ಗ ನಗರನಕ್ಸಲವಾದಿ, ಬುದ್ಧಿವಾದಿ, ಸಾಮ್ಯವಾದಿಯಾಗಿದೆ, ಇವರೆಲ್ಲರೂ ದೇಶ ವಿರೋಧಿಗಳಾಗಿದ್ದಾರೆ. ಆಸ್ಟ್ರೇಲಿಯಾದ ಪ್ರಾ. ಸಾಲ್ವಾಟೋರ್ ಬಾಬೋನ್ಸ್ ಇವರು ಹೇಳಿದ್ದಾರೆ, ‘ಭಾರತದ ಬುದ್ಧಿವಾದಿಗಳು ರಾಷ್ಟ್ರವಿರೋಧಿಗಳಾಗಿದ್ದಾರೆ.’
೪. ಧರ್ಮನಿರಪೇಕ್ಷೆಯಿಂದಾಗಿ ದೇಶದಲ್ಲಿನ ಸುಶಿಕ್ಷಿತ ಜನರು ಹಿಂದುತ್ವದಿಂದ ದೂರವಾಗಿದ್ದಾರೆ
ದೇಶದಲ್ಲಿನ ಸುಶಿಕ್ಷಿತ ಜನರನ್ನು ಧರ್ಮನಿರಪೇಕ್ಷತೆಯು ಹಿಂದೂವಿರೋಧಿಗಳನ್ನಾಗಿ ಮಾಡಿದೆ. ಆದ್ದರಿಂದ ಸಮಾಜವನ್ನು ನಾವು ಒಗ್ಗಟ್ಟು ಮಾಡುವುದು ಹೇಗೆ ?, ಎಂಬುದು ಮಹತ್ವದ ಪ್ರಶ್ನೆಯಾಗಿದೆ. ದೇಶದಲ್ಲಿ ಅನೇಕ ಹಿಂದೂ ಸಂಘಟನೆಗಳಿವೆ, ಅವುಗಳ ನಿಜವಾದ ಸಂಖ್ಯೆ ಎಷ್ಟಿದೆಯೆಂಬುದು ನಮಗೂ ಗೊತ್ತಿಲ್ಲ. ದೇಶದಲ್ಲಿ ಸಾವಿರಾರು ಹಿಂದೂ ಸಂಘಟನೆಗಳಿರಬಹುದು; ಆದರೆ ಹಿಂದೂಗಳ ಮೇಲಾಗುವ ಆಘಾತದ ವಿರುದ್ಧ ನಾವು ರಸ್ತೆಗಿಳಿ ಯುವಾಗ ಅದರಲ್ಲಿನ ಎಷ್ಟು ಜನರು ಮನೆಯಿಂದ ಹೊರಗೆ ಬರುವರು ? ಹಿಂದೂಗಳ ಸಂಘಟನೆಯ ಕೊರತೆಯಿಂದಾಗಿ ಪೊಲೀಸ್, ಆಡಳಿತ ಹಾಗೂ ಸರಕಾರ ನಮ್ಮ ಬೇಡಿಕೆಗಳನ್ನು ದುರ್ಲಕ್ಷಿಸುತ್ತದೆ.
೫. ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ರಚನೆ
ಅ. ಧನಬಾದದಲ್ಲಿ (ಝಾರಖಂಡ) ನಾವು ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ ಈ ಹೆಸರಿನಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸಿ ದ್ದೇವೆ. ಅದರಲ್ಲಿ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿದ್ದೇವೆ. ಈ ಸಂಸ್ಥೆಯ ಮೂಲಕ ಕೆಲವು ಕಾರ್ಯಕ್ರಮಗಳನ್ನೂ ಆಯೋಜಿಸಿ ದ್ದೇವೆ. ವಿವಿಧ ಸಂಘಟನೆಗಳನ್ನು ಸೇರಿಸಿ ಮಾಡಿದ ಈ ಸಂಸ್ಥೆಯಲ್ಲಿ ಒಬ್ಬ ಅಧ್ಯಕ್ಷ ಇರುವರು, ಈ ಸಂಸ್ಥೆಯ ಮುಖ್ಯ ಕಾರ್ಯಾಲಯ ಇರುತ್ತದೆ. ಈ ಸಂಸ್ಥೆಯ ಶಾಖೆಗಳನ್ನು ರಾಜ್ಯ ಮತ್ತು ಜಿಲ್ಲೆಯ ಸ್ತರದಲ್ಲಿ ಸ್ಥಾಪಿಸಬಹುದು. ಅನಂತರ ಗ್ರಾಮೀಣ ಭಾಗಗಳಲ್ಲಿ ಸಮಿತಿಗಳನ್ನು ಮಾಡಲಾಗುವುದು. ಆ ಸಮಿತಿಯ ಸಾಪ್ತಾಹಿಕ ಬೈಠಕ್ (ಸಭೆ) ನಡೆಯುವುದು. ಈ ಬೈಠಕಿನ ಮೂಲಕ ಸಮಾಜವನ್ನು ಜೋಡಿ¸ಲು ಪ್ರಯತ್ನಿಸಲಾಗುವುದು. ಈ ಪದ್ಧತಿಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ವಿಷಯದ ವಿಚಾರವನ್ನು ಸಮಾಜಕ್ಕೆ ತಲಪಿಸಲಾಗುವುದು.
ಆ. ಸಂಸ್ಥೆಯ ಅಧ್ಯಕ್ಷರ ಸಹಾಯಕ್ಕೆ ಒಂದು ಕಾರ್ಯಕಾರಿಣಿ ಸಮಿತಿ, ಒಂದು ಸಲಹೆಗಾರ ಮಂಡಲಿ ಮತ್ತು ಒಬ್ಬ ಮತದಾರ ಇರುವನು. ಸಂಪೂರ್ಣ ಭಾರತದಲ್ಲಿ ಒಂದು ಮತದಾರ ಸಮಿತಿ ಇರುವುದು, ಅದರಲ್ಲಿ ೨ ವರ್ಷಕ್ಕೊಮ್ಮೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಆರಿಸಲಾಗುವುದು. ಈ ಸಮಿತಿಯು ಪ್ರತಿಯೊಂದು ಊರಿನ ಇತರ ಪಂಥದ ಜನಸಂಖ್ಯೆ, ಮತಾಂತರಿತರ ಸಂಖ್ಯೆ, ಕ್ರೈಸ್ತ ಪ್ರಚಾರಕರ ಸಂಖ್ಯೆ, ಇವರೆಲ್ಲರಿಗೂ ಹೊರಗಿಂದ ಸಿಗುವ ಆರ್ಥಿಕ ಸಹಾಯ ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸುವುದು. ನಮ್ಮಲ್ಲಿ ಜನಬಲವಿದ್ದರೆ, ಸರಕಾರವೂ ನಮಗೆ ಮಹತ್ವ ನೀಡುವುದು.
ಇ. ಸಮಿತಿಯ ವಕೀಲರ ತಂಡ ಇರುವುದು. ಈ ತಂಡ ನಿರಪರಾಧಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ಅವರಿಗೆ ನ್ಯಾಯಾಂಗ ಸಹಾಯ ನೀಡುವುದು. ನಮ್ಮ ಜನರ ಒಂದು ಕೇಂದ್ರ ನಿಧಿ ಇರುವುದು. ಅದನ್ನು ಸದಸ್ಯ ಸಂಸ್ಥೆಗಳ ಮೂಲಕ ಸಂಗ್ರಹಿಸ ಲಾಗುವುದು. ಈ ಸಮಿತಿಯಿಂದ ಚುನಾವಣೆಯ ಸಮಯದಲ್ಲಿ ಮತದಾನಕ್ಕೆ ಸಂಬಂಧಿಸಿದ ಸಂದೇಶ ಎಲ್ಲ ಊರಿನ ಶಾಖೆಗಳಿಗೆ ತಲುಪಿಸಬಹುದು. ಇದರಲ್ಲಿ ರಾಜಕೀಯ ಪಕ್ಷ ಇರುವ ಹಾಗಿಲ್ಲ. ಈ ಸಂಸ್ಥೆಯ ಪದಾಧಿಕಾರಿಗಳು ಸಂಪೂರ್ಣ ನಿಃಸ್ವಾರ್ಥಿ ಹಾಗೂ ಭ್ರಷ್ಟಾಚಾರರಹಿತ ಆಗಿರುವರು. ಇದರಲ್ಲಿ ಕೆಲಸ ಮಾಡುವವರಿಗೆ ನಿಷ್ಠೆ, ಕೌಶಲ್ಯ ಹಾಗೂ ಸಮರ್ಪಣೆ ಈ ಗುಣಗಳಿರಬೇಕು.
– ಡಾ. ನೀಲ ಮಾಧವ ದಾಸ, ಸಂಸ್ಥಾಪಕರು ‘ತರುಣ ಹಿಂದೂ’.