ಇತ್ತೀಚೆಗೆ ‘ವಕ್ಫ್ ಆಸ್ತಿ’ ಈ ಹೆಸರಿನಿಂದ ಸಾಮಾನಿಕ ಮಾಧ್ಯಮ ಹಾಗೂ ದೂರಚಿತ್ರವಾಹಿನಿಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಅದರಲ್ಲಿ ಕೆಲವು ಸತ್ಯ ಹಾಗೂ ಕೆಲವೆಡೆ ಅತಿಶಯೋಕ್ತಿ ಆಗಿರುತ್ತವೆ. ಈ ವಿಷಯದಲ್ಲಿ ಕಾನೂನು ಏನು ಹೇಳುತ್ತದೆ ? ಇದು ಮಹತ್ವದ್ದಾಗಿದೆ.
೧. ವಕ್ಫ್ ಬೋರ್ಡ್‌ನ ಅಂತರ್ಗತ ಯಾವ ಸಂಪತ್ತು ನೋಂದಣಿಯಾಗುತ್ತದೆ ?
‘ವಕ್ಫ್ ಕಾನೂನು’ಅನ್ನು ದೇಶದ ಸ್ವಾತಂತ್ರ್ಯದ ನಂತರ ರೂಪಿಸಲಾಯಿತು ಹಾಗೂ ಅದರ ಕೆಲವು ವ್ಯವಸ್ಥೆಗನುಸಾರ ಭಾರತದಲ್ಲಿ (ಜಮ್ಮು-ಕಾಶ್ಮೀರ ಬಿಟ್ಟು) ಎಲ್ಲೆಲ್ಲಿ ಸ್ಮಶಾನ(ಕಬ್ರಸ್ಥಾನ), ಮಸೀದಿ, ಗೋರಿ, ಮದರಸಾಗಳಿದ್ದು ಅವುಗಳನ್ನು ಕೇವಲ ಧಾರ್ಮಿಕ ಕಾರ್ಯಕ್ಕಾಗಿ ಅಥವಾ ಧರ್ಮದ ಯಾವುದೇ ಕಾರ್ಯಕ್ಕಾಗಿ, ‘ಚಾರಿಟಿ’ಗಾಗಿ (ಧರ್ಮದಾಯಕ್ಕಾಗಿ) ಉಪಯೋಗಿಸುತ್ತಿದ್ದರೆ, ಅದನ್ನು ‘ವಕ್ಫ್ ಬೋರ್ಡ್’ನಲ್ಲಿ ನೋಂದಣಿ (ರಿಜಿಸ್ಟರ್) ಮಾಡಲಾಗುತ್ತದೆ ಹಾಗೂ ಅದರ ಆದಾಯ ಇಸ್ಲಾಮ್ ಪಂಥಕ್ಕಾಗಿ ರಚಿಸಿದ ‘ವಕ್ಫ್’ ಸಂಸ್ಥೆಯ ಒಡೆತನದ್ದಾಗುತ್ತದೆ. ಇದರ ಜೊತೆಗೆ ಯಾವ ಮುಸಲ್ಮಾನನಿಗೆ ತನ್ನ ಭೂಮಿ, ಆಸ್ತಿಯನ್ನು ಸಾಮಾಜಿಕ ಭಾವನೆಯಿಂದ ಇಸ್ಲಾಮ್‌ನ ಧರ್ಮಕಾರ್ಯಕ್ಕಾಗಿ ಉಪಯೋಗವಾಗಬೇಕೆಂದು ಅನಿಸುತ್ತಿದ್ದರೆ ಅದನ್ನು ಅವರಿಗೆ ಉಡುಗೊರೆಯೆಂದು ಕೊಡಬಹುದು. ಆ ಭೂಮಿ ಕೂಡ ‘ವಕ್ಫ್’ ಬೋರ್ಡ್‌ಗೆ ಹೋಗುತ್ತದೆ.
೨. ವಕ್ಫ್ ಬೋರ್ಡ್‌ನಲ್ಲಿ ಸಂಪತ್ತು ದಾಖಲೆಯಾಗುವ ಕಾರ್ಯಪದ್ಧತಿ
‘ವಕ್ಫ್’ ಇದೊಂದು ಟ್ರಸ್ಟ್ ಆಗಿದ್ದು ಶಬ್ದಕೋಶಕ್ಕನುಸಾರ ಅದರ ಅರ್ಥ ‘ಅಲ್ಲಾನ ಸಂಪತ್ತು’ ಎಂದಾಗುತ್ತದೆ ಅಥವಾ ಧರ್ಮಕಾರ್ಯಕ್ಕಾಗಿ ಮೀಸಲಾಗಿಟ್ಟ ‘ಸಂಪತ್ತು’ ಎಂದಾಗುತ್ತದೆ. ಇದರ ಅರ್ಥಕ್ಕನುಸಾರ ಯಾವ ಯಾವ ಭೂಮಿ, ಮನೆ, ಬಂಗಲೆ, ಫ್ಲಾಟ್, ಇತ್ಯಾದಿ ಯಾವುದೇ ಮುಸಲ್ಮಾನ ವ್ಯಕ್ತಿಗೆ ಧರ್ಮ ಕಾರ್ಯಕ್ಕಾಗಿ ಅಥವಾ ಧರ್ಮಕ್ಕಾಗಿ ಉಪಯೋಗಿಸಲು ಕೊಡಲಿಕ್ಕಿದ್ದರೆ, ಆ ಸಂಪತ್ತನ್ನು ವಕ್ಫ್ ಬೋರ್ಡ್’ನಲ್ಲಿ ದಾಖಲಿಸಲಾಗುತ್ತದೆ. ಅನಂತರ ಒಂದು ‘ವಕ್ಫ್ ಸಮಿತಿ (ಕಮಿಟಿ)’ ಇದನ್ನು ಕೇಂದ್ರ ಸರಕಾರ ನೇಮಕ ಮಾಡಿರುತ್ತದೆ. ಅದರಲ್ಲಿ ಮುಸಲ್ಮಾನ ಸಂಸದ, ಪುರುಷ ಸಮಾಜಸೇವಕ, ಗಣ್ಯವ್ಯಕ್ತಿ, ಸರ್ವೋಚ್ಚ ನ್ಯಾಯಾಲಯದಲ್ಲಿನ ಮಾಜಿ ಮುಸಲ್ಮಾನ ನ್ಯಾಯಾಧೀಶ, ವಕೀಲ, ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷ, ಕ್ಯಾಬಿನೆಟ್ ಮಂತ್ರಿ (ಅಲ್ಪಸಂಖ್ಯಾತ), ಮಹಿಳಾ ಮುಸಲ್ಮಾನ ಸಮಾಜ ಸೇವಕಿ ಮುಂತಾದ ಸುಮಾರು ೨೫ ಜನರ ವಕ್ಫ್ ಮಂಡಳಿ ತಯಾರಿಸಲಾಗಿರುತ್ತದೆ. ಅವರಲ್ಲಿ ಈ ಸ್ಥಳಗಳ ನೋಂದಣಿಯಾಗುತ್ತದೆ. ಅವರಿಂದ ಸಮೀಕ್ಷಕನ (ಸರ್ವೇಯರ್) ನೇಮಕ ಮಾಡಲಾಗುತ್ತದೆ. ಆ ಸಮೀಕ್ಷಕ ಆ ತಥಾಕಥಿತ ಸ್ಥಳವನ್ನು ನಮಾಜು, ಶವ ಹುಗಿಯಲು ಅಥವಾ ಧಾರ್ಮಿಕ ಕಾರ್ಯಕ್ಕಾಗಿ ಉಪಯೋಗಿಸಲಾಗುತ್ತದೆಯೇ ಅಥವಾ ಇಲ್ಲವೇ ? ಎಂಬುದರ ತನಿಖೆ ಮಾಡುತ್ತಾನೆ ಹಾಗೂ ಅನಂತರ ಎಲ್ಲ ಕಾಗದಪತ್ರಗಳನ್ನು ಪರಿಶೀಲಿಸಿ ಆದನಂತರ ಆ ಸಂಪತ್ತನ್ನು ‘ವಕ್ಫ್‌ನ’ ಸಂಪತ್ತೆಂದು ಘೋಷಣೆ ಮಾಡಲಾಗುತ್ತದೆ.
೩. ‘ ವಕ್ಫ್’ ಕಾನೂನಿನ ಕೆಲವು ಪರಿಚ್ಛೇದಗಳು
‘ವಕ್ಫ್’ ಕಾನೂನಿಗನ್ವಯ ಈ ಕೆಳಗಿನ ಮುಖ್ಯ ಕಲಂಗಳನ್ನು ನೀಡುತ್ತಿದ್ದೇನೆ.
ಅ. ಲಭಿಸಿದ ಸಂಪತ್ತು ಕೇವಲ ‘ಇಸ್ಲಾಮ್ ಪಂಥ’ದ ಕಾರ್ಯಕ್ಕಾಗಿಯೇ (ಬೇರೆ ಯಾವುದೇ ವೈಯಕ್ತಿಕ ಕಾರ್ಯಕ್ಕಾಗಿ ಅಲ್ಲ) ಉಪಯೋಗಿಸಬೇಕು.
ಆ. ಈ ಸಂಪತ್ತು ‘ದಾನ’ ಮಾಡಿದ್ದಾಗಿರಬೇಕು.
ಈ. ಆ ವಿಷಯದಲ್ಲಿ ಯಾರಿಂದಲೂ ಆಕ್ಷೇಪವಿರಬಾರದು (ಆಬ್ಜೆಕ್ಷನ್).
ಈ. ಅದರ ಸರ್ವೇಕ್ಷಣೆ ಆಗಿರಬೇಕು.
ಉ. ಒಂದು ವೇಳೆ ಏನಾದರೂ ವಿವಾದ/ಜಗಳವಿದ್ದರೆ, ಅದನ್ನು ಕೇವಲ ‘ವಕ್ಫ್ ಟ್ರಿಬ್ಯೂನಲ್’ ನಿವಾರಣೆ ಮಾಡಬಹುದು, ಇತರ ಯಾವುದೇ ನ್ಯಾಯಾಲಯದಲ್ಲಿ ಇದನ್ನು ಅವಲೋಕಿಸುವ ಹಾಗಿಲ್ಲ.
ಊ. ಆ ಸ್ಥಳದ ಅದಾಯದ ವಿಷಯದಲ್ಲಿ ವಾರ್ಷಿಕ ಲೆಕ್ಕಪರಿಶೋಧನೆಯಾಗಿರಬೇಕು.
೪. ಜಿಂದಾಲ್ ಗ್ರೂಪ್ ವಿರುದ್ಧ ಮುಸ್ಲಿಮ್ ವಕ್ಫ್ ಬೋರ್ಡ್‌ನ ನ್ಯಾಯಾಂಗ ಹೋರಾಟದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ಐತಿಹಾಸಿಕ ನಿರ್ಣಯ
ಜಿಂದಾಲ್ ಗ್ರೂಪ್ ವಿರುದ್ಧ ಮುಸ್ಲಿಮ್ ವಕ್ಫ್ ಬೋರ್ಡ್‌ನ ನ್ಯಾಯಾಂಗ ಹೋರಾಟದಲ್ಲಿ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಒಂದು ಅರ್ಜಿಯನ್ನು ದಾಖಲಿಸಿಕೊಂಡಿತು ಹಾಗೂ ಅದರಲ್ಲಿ ಒಂದು ಐತಿಹಾಸಿಕ ನಿರ್ಣಯವನ್ನು ನೀಡಿತು. ಆ ಅರ್ಜಿ ಎಂದರೆ ‘ಜಿಂದಾಲ್ ಗ್ರೂಪ್ ವಿರುದ್ಧ ಮುಸ್ಲಿಮ್ ವಕ್ಫ್ ಬೋರ್ಡ್ !
ಇದರಲ್ಲಿ ಜಿಂದಾಲ್ ಗ್ರೂಪ್ ರಾಜಸ್ಥಾನದಲ್ಲಿ ಗಣಿ ಕೆಲಸಕ್ಕಾಗಿ ಭೂಮಿಯನ್ನು ಖರೀದಿಸಿತ್ತು. ಅದು ಹೆಚ್ಚು ಪ್ರಮಾಣದಲ್ಲಿ ಉಪಯೋಗವಾಗದಿರುವುದರಿಂದ ಅಥವಾ ದುರ್ಲಕ್ಷದಿಂದಾಗಿ ಜಿಂದಾಲ್ ಕಂಪನಿಗೆ ಅರಿವಾದ ವಿಷಯವೆಂದರೆ, ಆ ಸ್ಥಳದ ಒಂದು ಭಾಗವನ್ನು ‘ವಕ್ಫ್’ ಆಕ್ರಮಿಸಿಕೊಂಡಿದೆ. ಅಲ್ಲಿ ಒಂದು ಗೋರಿಯನ್ನು ಸಿದ್ಧಪಡಿಸಿ ಅದರ ಮೇಲೆ ಹೊದಿಕೆ ಹಾಕಿ ಅದಕ್ಕೆ ತಂತಿಯ ಬೇಲಿ ಕೂಡ ಹಾಕಲಾಗಿತ್ತು. ನಿಯಮಕ್ಕನುಸಾರ ‘ವಕ್ಫ್ ಬೋರ್ಡ್’ನ ಟ್ರಿಬ್ಯುನಲ್‌ನಲ್ಲಿ ಈ ಪ್ರಕರಣದ ಖಟ್ಲೆ ನಡೆಯಿತು ಹಾಗೂ ಅವರು ಈ ಸ್ಥಳ ‘ವಕ್ಫ್ ಬೋರ್ಡ್’ನದ್ದೇ ಆಗಿದೆ, ಇದರ ಬಗ್ಗೆ ಇನ್ನೆಲ್ಲಿಯೂ ನ್ಯಾಯ ಕೇಳಲು ಸಾಧ್ಯವಿಲ್ಲ, ಎಂದು ನಿರ್ಣಯ ನೀಡುತ್ತಾ ಇದು ಅಂತಿಮ ನಿರ್ಣಯವೆಂದು ಹೇಳಲಾಯಿತು ! ಆದರೆ ಪರಿಚ್ಚೇದ ೨೨೬ ಕ್ಕನುಸಾರ ರಾಜಸ್ಥಾನ ಉಚ್ಚ ನ್ಯಾಯಾಲಯ ಅರ್ಜಿಯನ್ನು ದಾಖಲಿಸಿಕೊಂಡು ಒಂದು ಸಮಿತಿಯನ್ನು ನೇಮಕ ಮಾಡಿತು. ಆ ಸಮಿತಿ ಎಲ್ಲ ರೀತಿಯಲ್ಲಿ ತನಿಖೆ ಮಾಡಿ ಉಚ್ಚ ನ್ಯಾಯಾಲಯಕ್ಕೆ ನೀಡಿದ ಮಾಹಿತಿ ಹೀಗಿತ್ತು, ‘ವಕ್ಫ್’ನ ನಿಯಮಕ್ಕನುಸಾರ ಅಲ್ಲಿ ಯಾವುದೇ ಧಾರ್ಮಿಕ ಕೃತ್ಯಗಳು ನಡೆಯುತ್ತಿರಲಿಲ್ಲ. ಆದ್ದರಿಂದ ಆ ಸ್ಥಳ ‘ವಕ್ಫ್’ನದ್ದಾಗಿರದೆ ಜಿಂದಾಲ್ ಸಮೂಹದ್ದೇ ಆಗಿದೆ. ಆದ್ದರಿಂದ ಜಿಂದಾಲ್ ಅಲ್ಲಿ ಗಣಿ ಕೆಲಸ ಮಾಡಬಹುದು’. ಅನಂತರ ವಕ್ಫ್ ಬೋರ್ಡ್ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಯಿತು. ಸರ್ವೋಚ್ಚ ನ್ಯಾಯಾಲಯ ಕೂಡ ರಾಜಸ್ಥಾನ ಉಚ್ಚ ನ್ಯಾಯಾಲಯದ ನಿರ್ಣಯವನ್ನೇ ಎತ್ತಿ ಹಿಡಿದು ವಕ್ಫ್ ಬೋರ್ಡ್‌ಗೆ ಗದರಿಸುತ್ತಾ ಆ ಭೂಮಿಯನ್ನು ಜಿಂದಾಲ್ ಸಮೂಹದ ವಶಕ್ಕೆ ಒಪ್ಪಿಸಿತು.
೫. ಸರ್ವೋಚ್ಚ ನ್ಯಾಯಾಲಯ ನಿರ್ಣಯ ನೀಡುವಾಗ ಹೇಳಿದ ಮಹತ್ವಪೂರ್ಣ ಅಂಶಗಳು
ಅ. ವಕ್ಫ್ ಬೋರ್ಡ್‌ನ ಕಾನೂನಿನ ನಿಯಮಗಳಪ್ರಕಾರ ಶೇ. ೧೦೦ ರಷ್ಟು ಪಾಲನೆ ಆಗುತ್ತಿದ್ದರೆ ಮಾತ್ರ ಆ ಸಂಪತ್ತು ‘ವಕ್ಫ್’ ಬೋರ್ಡ್‌ನದ್ದಾಗುತ್ತದೆ, ಆದರೆ ಯಾವುದೇ ನಿಯಮದ ಪಾಲನೆ ಆಗದಿದ್ದರೆ, ‘ವಕ್ಫ್’ ಬೋರ್ಡ್‌ನ ವಶದಲ್ಲಿ ರುವ ಆ ಭೂಮಿ/ಅದರ ಆದಾಯವನ್ನು ಸರಕಾರಕ್ಕೆ ಒಪ್ಪಿಸ ಬೇಕಾಗುತ್ತದೆ ಅಥವಾ ಮೂಲ ಒಡೆಯನಿಗೆ ಹಿಂದಿರುಗಿಸಬೇಕಾಗುತ್ತದೆ. ಇಷ್ಟು ಮಾತ್ರವಲ್ಲ, ಈಗ ಈ ಕ್ಷಣ ನೋಂದಣಿಯಾದ ‘ವಕ್ಫ್’ ಸಂಪತ್ತನ್ನು ಪುನಃ ಸಮೀಕ್ಷೆ ಮಾಡಿ, ಕಾಗದಪತ್ರಗಳನ್ನು ನೋಡಿ ಆ ಸಂಪತ್ತು ‘ವಕ್ಫ್’ನದ್ದಾಗಿದೆಯೇ ಅಥವಾ ಇಲ್ಲವೇ ? ಎಂಬುದನ್ನು ಪರಿಶೀಲಿಸಿರಿ ಎಂದು ನ್ಯಾಯಾಲಯ ಸರಕಾರಕ್ಕೆ ಆದೇಶವನ್ನೂ ನೀಡಬಹುದು.
ಆ. ಸರ್ವೋಚ್ಚ ನ್ಯಾಯಾಲಯ ಹೇಳಿದ ಇನ್ನೊಂದು ವಿಷಯವೆಂದರೆ, ೧೯೪೭ ರ ಮೊದಲು ಯಾವುದೇ ಸಂಪತ್ತನ್ನು ‘ವಕ್ಫ್’ನ ಸಂಪತ್ತು ಎಂದು ಉಲ್ಲೇಖಿಸುತ್ತಿದ್ದರೆ, ಅದು ಕಾನೂನುಬಾಹಿರವಾಗಬಹುದು; ಏಕೆಂದರೆ ೧೯೪೭ ರ ಸ್ವಾತಂತ್ರ್ಯದ ನಂತರದ ಭೂಮಿ ‘ವಕ್ಫ್’ಗೆ ಅನ್ವಯವಾಗುವುದು.
ಇ. ಅದೇ ರೀತಿ ಯಾವ ಭೂಮಿಯಲ್ಲಿ ಗೋರಿ, ಬೇಲಿ, ಪ್ರಾರ್ಥನಾಸ್ಥಳ, ದರ್ಗಾ ಇತ್ಯಾದಿ ಸಿದ್ಧಪಡಿಸಲಾಗಿದ್ದರೂ, ಅದರ ಒಡೆತನಕ್ಕೆ ಸಂಬಂಧಿಸಿದ ಹಾಗೂ ಕಾನೂನು ಪ್ರಕಾರ ಕಾಗದಪತ್ರಗಳು ಅಪೂರ್ಣವಾಗಿದ್ದರೆ ಅಥವಾ ಒಪ್ಪಂದ ಅಥವಾ
ಲೇಖನ ಮಾಡುವುದರಲ್ಲಿ ಕೊರತೆಯಿದ್ದರೆ, ತಿದ್ದುಪಡಿ ಇದ್ದರೆ ಅಥವಾ ಅನಿಯಮಿತತೆ ಇದ್ದರೆ ಅಥವಾ ಕಾನೂನು ಪ್ರಕಾರ ಕಾಗದಪತ್ರ ಇದ್ದರೂ ಧಾರ್ಮಿಕ ಕಾರ್ಯ/ಕಾರ್ಯಕ್ರಮ/ ಪ್ರಾರ್ಥನೆ ನಡೆಯದಿದ್ದರೆ, ಆ ಭೂಮಿ ‘ವಕ್ಫ್ ಬೋರ್ಡ್’ನಿಂದ ಹಿಂಪಡೆದು ಮೂಲ ಒಡೆಯನಿಗೆ ಅಥವಾ ಸರಕಾರಕ್ಕೆ ಹಿಂತಿರುಗಿಸಬಹುದು.
೬. ‘ವಕ್ಫ್ ಟ್ರಿಬ್ಯೂನಲ್’ನ ನಿರ್ಣಯದ ವಿರುದ್ಧ ಉಚ್ಚ ನ್ಯಾಯಾಲಯ ಹಾಗೂ ಸರ್ವೊಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಸಾಧ್ಯವಿದೆ
ಈ ನಿರ್ಣಯದಿಂದ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯವೂ ಇದನ್ನು ಅವಲೋಕಿಸಬಹುದು, ಅದೇ ರೀತಿ ‘ವಕ್ಫ್ ಟ್ರಿಬ್ಯುನಲ್’ನ ಮೇಲೆ ಕೂಡ ಸಂವಿಧಾನದ ಪರಿಚ್ಚೇದ ೨೨೬ ಮತ್ತು ೩೩೨ ಕ್ಕನುಸಾರ ‘ಸ್ಪೆಶಲ್ ಲೀವ್ ಪಿಟಿಶನ್’, ‘ರಿಟ್ ಅರ್ಜಿ’ ಅಥವಾ ‘ಸುಮೊಟೋ’ (ನ್ಯಾಯಾಲಯ ಸ್ವತಃ ಅರ್ಜಿ ದಾಖಲಿಸುವುದು) ಕೂಡ ಇಂತಹ ವಿವಾದಾಸ್ಪದ ಸಂಪತ್ತಿನ ದಾವೆಯನ್ನು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಬಹುದು. ಯಾವ ವಕ್ಫ್ ಸಂಪತ್ತು ಕಾನೂನು ಪ್ರಕಾರ ಯೋಗ್ಯವಾದ ಕಾಗದ ಪತ್ರಗಳು/ಅನುಮತಿ ಇದ್ದರೆ ಅವರು ಇದರಲ್ಲಿ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಆದರೆ ಕುಚೋದ್ಯದಿಂದ ಯಾವುದೇ ಸಂಪತ್ತನ್ನು ಕಬಳಿಸಿದ್ದರೆ ಹಾಗೂ ಅದರ ಕಾಗದಪತ್ರಗಳು ಯೋಗ್ಯವಾಗಿರದಿದ್ದರೆ ಆ ಸಂಪತ್ತಿನ ವಿರುದ್ಧ ದಾವೆ ಹೂಡಲು ಸಾಧ್ಯವಿದೆ.’
– ನ್ಯಾಯವಾದಿ ಶೈಲೇಶ ಕುಲಕರ್ಣಿ, ಕುರ್ಟಿ, ಫೋಂಡಾ ಗೋವಾ. (೭.೭.೨೦೨೩)