ಸದ್ಗುರು ಜಗ್ಗಿ ವಾಸುದೇವ ಇವರ ‘ಈಶಾ ಫೌಂಡೇಶನ್‌’ನ ಬಗ್ಗೆ ತಮಿಳುನಾಡು ಸರಕಾರದ ಹಿಂದೂದ್ವೇಷ !

೧. ‘ಈಶಾ ಫೌಂಡೇಶನ್‌’ನ ಕಟ್ಟಡ ನಿರ್ಮಾಣ ಕಾರ್ಯ ಮತ್ತು ಅದನ್ನು ಕೆಡುಹುವ ಕುರಿತು ತಮಿಳುನಾಡು ಸರಕಾರದ ನೋಟೀಸ್‌

ತಮಿಳುನಾಡಿನ ಕೊಯಿಂಬತ್ತೂರಿನಲ್ಲಿ ವೆಲಿಯಾಂಗಗಿರಿ ಪರ್ವತದ ಸಾಲುಗಳಿವೆ. ಅಲ್ಲಿ ಶಿವನ ಪೌರಾಣಿಕ ನಿವಾಸಸ್ಥಾನವಿದೆ. ಅದಕ್ಕೆ ಕೈಲಾಸ ಪರ್ವತದಂತೆ ಮಹತ್ವವಿದೆ. ಅದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಬಲಿಷ್ಠ ಸ್ಥಾನವಾಗಿದೆ. ಇಲ್ಲಿ ಯೋಗಗುರು ಹಾಗೂ ಸದ್ಗುರು ಜಗ್ಗಿ ವಾಸುದೇವ ಇವರು ‘ಈಶಾ ಫೌಂಡೇಶನ್’ ಹೆಸರಿನ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅಲ್ಲಿ ಯೋಗಶಿಕ್ಷಣ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಭಾರತೀಯ ಸಂಸ್ಕೃತಿಯ ವಿಷಯದಲ್ಲಿ ಮಾರ್ಗದರ್ಶನ ಮಾಡಲಾಗುತ್ತದೆ. ಕೇಂದ್ರ ಸರಕಾರ ಪರಿಸರ ನಿಯಂತ್ರಣ ಕಾನೂನಿನಲ್ಲಿ ಕೆಲವು ಸುಧಾರಣೆಗಳನ್ನು ಮಾಡಿದೆ. ಅದಕ್ಕನುಸಾರ ಗುಡ್ಡಬೆಟ್ಟದ ಅಥವಾ ಪರ್ವತ ಪ್ರದೇಶಗಳಲ್ಲಿ ಭಾರತೀಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಮಾಡುವ ಕಟ್ಟಡಗಳ ನಿರ್ಮಾಣಕಾರ್ಯಕ್ಕಾಗಿ ಪೂರ್ವಾನುಮತಿ ಪಡೆಯುವ ಪದ್ಧತಿಯನ್ನು ವರ್ಜಿಸಿದೆ. ಅನಂತರ ಸದ್ಗುರು ಜಗ್ಗಿ ವಾಸುದೇವ ಇವರು ಪರ್ವತಗಳ ಸಾಲಿನಲ್ಲಿ ಕೆಲವು ಕಟ್ಟಡ ನಿರ್ಮಾಣ ಕಾರ್ಯಗಳನ್ನು ಮಾಡಿದರು. ಆದ್ದರಿಂದ ಹಿಂದೂದ್ವೇಷಿ ತಮಿಳುನಾಡು ಸರಕಾರ ‘ಈಶಾ ಫೌಂಡೇಶನ್‌’ಗೆ ೨೦೦೬ ರಿಂದ ೨೦೧೪ ಈ ಅವಧಿಯಲ್ಲಿ ಮಾಡಿದ ನಿರ್ಮಾಣ ಕಾರ್ಯ ಅನಧಿಕೃತವಾಗಿದೆ, ಅದನ್ನೇಕೆ ಕೆಡವಬಾರದು ?’, ಎಂದು ನೋಟೀಸ್‌ ನೀಡಿತು.

೨. ಮದ್ರಾಸ್‌ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣದ ಆಲಿಕೆ ಈ ಪ್ರಕರಣ ಮದ್ರಾಸ್‌ ಉಚ್ಚ ನ್ಯಾಯಾಲಯಕ್ಕೆ ಹೋಯಿತು.

ಅಲ್ಲಿ ಕೇಂದ್ರ ಸರಕಾರ ಪ್ರತಿವಾದಿಯಾಗಿತ್ತು. ‘ಪರಿಸರ ನಿಯಂತ್ರಣ ಕಾನೂನಿನಲ್ಲಿ ಮಾಡಿದ ಸುಧಾರಣೆಗಳ ಆಧಾರದಲ್ಲಿ ‘ಈಶಾ ಫೌಂಡೇಶನ್‌’ಗೆ ತಮಿಳುನಾಡು ಸರಕಾರದ ಅಥವಾ ಪರಿಸರನಿಯಂತ್ರಣ ವಿಭಾಗದ ಪೂರ್ವಾನುಮತಿಯ ಅವಶ್ಯಕತೆ ಇಲ್ಲ’, ಎಂದು ಕೇಂದ್ರ ಸರಕಾರ ನ್ಯಾಯಾಲಯದಲ್ಲಿ ಉತ್ತರ ನೀಡಿತು. ತಮಿಳುನಾಡು ಸರಕಾರದ ಆದೇಶ-೨೦೦೬ ಕ್ಕನುಸಾರ ಪೂರ್ವಾನುಮತಿ ಅಥವಾ ಪರಿಸರನಿಯಂತ್ರಣ ವಿಭಾಗದ ಮನ್ನಣೆ ಆವಶ್ಯಕವಾಗಿದೆ. ‘ಈಶಾ ಫೌಂಡೇಶನ್’ ಹೇಳುತ್ತದೆ, ೧೯೯೪ ರಿಂದ ಅವರ ಸಂಸ್ಥೆ ವೆಲಿಯಾಂಗಿರಿ ಬೆಟ್ಟದ ೪೮ ಹೆಕ್ಟರ್‌ ಭೂಮಿಯಲ್ಲಿ ಕಾರ್ಯನಿರತವಾಗಿದೆ. ೧೯೯೪ ರಲ್ಲಿ ಪರಿಸರನಿಯಂತ್ರಣ ಮಂಡಳಿಯ ಪೂರ್ವಾನುಮತಿ ಪಡೆಯ ಬೇಕೆಂಬ ಕಾನೂನು ಅಸ್ತಿತ್ವದಲ್ಲಿರಲಿಲ್ಲ. ಆದ್ದರಿಂದ ಅವರ ಮೇಲೆ ಕಟ್ಟಡ ನಿರ್ಮಾಣ ಕಾರ್ಯವಾದ ನಂತರದ ನಿಯಮ ಹಾಗೂ ಕಾನೂನುಗಳನ್ನು ಹೇರಲು ಬರುವುದಿಲ್ಲ .

೩. ತಮಿಳುನಾಡು ಸರಕಾರದ ನೋಟೀಸ್‌ ಉಚ್ಚ ನ್ಯಾಯಾಲಯದಿಂದ ರದ್ದು !

ಈ ಪ್ರಕರಣದಲ್ಲಿ ತಮಿಳುನಾಡು ಉಚ್ಚ ನ್ಯಾಯಾಲಯದ ದ್ವಿಸದಸ್ಯ ವಿಭಾಗೀಯ ಪೀಠದ ಮುಂದೆ ಆಲಿಕೆಯಾಯಿತು. ಆಗ ಕೇಂದ್ರ ಸರಕಾರದ ತಮಿಳುನಾಡುವಿನ ಹೆಚ್ಚುವರಿ ಮುಖ್ಯ ಕಾನೂನು ಅಧಿಕಾರಿ ಆರ್. ಶಂಕರ ನಾರಾಯಣ ಅವರು, ”೨೦೧೪ ರಲ್ಲಿ ಕೇಂದ್ರ ಸರಕಾರ ಪರಿಸರ ರಕ್ಷಣೆಯ ಸಂಶೋಧನ ನಿಯಮದಲ್ಲಿ ಕೆಲವು ಬದಲಾವಣೆ ಮಾಡಿತು. ಅದಕ್ಕನುಸಾರ ಯಾವ ಸಂಸ್ಥೆಗಳು ಪರಿಸರಕ್ಕೆ ಹಾನಿ ಮಾಡುವುದಿಲ್ಲವೋ ಹಾಗೂ ಪರಿಸರವನ್ನು ಸಮತೋಲನವಾಗಿಡುತ್ತವೆಯೋ, ಅಂತಹ ಸಂಸ್ಥೆಗಳಿಗೆ ವಿನಾಯಿತಿ ನೀಡಲಾಗುತ್ತಿದೆ. ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆ ಇತ್ಯಾದಿಗಳಿಗೆ ಪರಿಸರನಿಯಂತ್ರಣ ಮಂಡಳಿಯಿಂದ ಪೂರ್ವಾನುಮತಿಯ ಅವಶ್ಯಕತೆಯಿಲ್ಲ” ಎಂದು ಹೇಳಿದರು.

‘ಈಶಾ ಫೌಂಡೇಶನ್‌ ಯೋಗ ವಿದ್ಯೆಯನ್ನು ಪ್ರೋತ್ಸಾಹಿಸುತ್ತದೆ. ಈ ಸಂಸ್ಥೆ ಶಾಸ್ತ್ರೀಯ ಕಲೆ ಮತ್ತು ಸಂಸ್ಕೃತ ಪಠ್ಯಕ್ರಮವನ್ನು ನಡೆಸುತ್ತದೆ. ಇತ್ತೀಚೆಗೆ ಅವರು ‘ಐ.ಸಿ.ಎಸ್‌.ಸಿ.’ (ಇಂಡಿಯನ್‌ ಸರ್ಟಿಫಿಕೇಟ್‌ ಆಫ್‌ ಸೆಕೆಂಡರಿ ಎಜ್ಯುಕೇಶನ್- ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ) ಪಠ್ಯಕ್ರಮವನ್ನೂ ಅವರ ಸಂಸ್ಥೆಯಲ್ಲಿ ಕಲಿಸಲು ಆರಂಭಿಸಿದ್ದಾರೆ. ಹೀಗಿರುವಾಗ ತಮಿಳುನಾಡು ಸರಕಾರದ ಮುಖ್ಯ ಕಾನೂನು ಅಧಿಕಾರಿ ‘ಕೇಂದ್ರ ಸರಕಾರ ಇಂತಹ ಸೌಲಭ್ಯಗಳನ್ನು ಹೇಗೆ ಕೊಡಬಹುದು ?’, ಎಂದು ಪ್ರಶ್ನಿಸಿದರು. ನ್ಯಾಯಾಲಯ ಕೂಡ ‘ಶೈಕ್ಷಣಿಕ ಸಂಸ್ಥೆಯು ಈ ಕಾನೂನಿಗಿಂತ ದೊಡ್ಡದಾಗಿದೆಯೆ ? ಕೇಂದ್ರ ಸರಕಾರ ಇಂತಹ ಸೌಲಭ್ಯಗಳನ್ನು ಹೇಗೆ ಕೊಡಬಹುದು ?’ ಎಂದು ಪ್ರಶ್ನಿಸಿತು. ಅನಂತರ ಎಲ್ಲ ವಿಚಾರಮಂಥನ ಮಾಡಿ ತಮಿಳುನಾಡು ಸರಕಾರ ‘ಈಶಾ ಫೌಂಡೇಶನ್‌’ಗೆ ನೀಡಿರುವ ನೋಟೀಸನ್ನು ಉಚ್ಚ ನ್ಯಾಯಾಲಯ ರದ್ದುಪಡಿಸಿತು.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೪. ಸರ್ವೋಚ್ಚ ನ್ಯಾಯಾಲಯ ಪರಿಸರ ನಿಯಂತ್ರಣ ಮಂಡಳಿಯನ್ನು ನಿಂದಿಸಿತು

ತಮಿಳುನಾಡು ಸರಕಾರ ಹಿಂದೂದ್ವೇಷಿಯಾಗಿದೆ. ಆದ್ದರಿಂದ ಅದು ಹಿಂದೂ ಸಂಸ್ಕೃತಿಯನ್ನು ಕಾಪಾಡುವ ‘ಈಶಾ ಫೌಂಡೇಶನ್‌’ನ ವಿರುದ್ಧ ಹೋಗುವುದು ಸ್ವಾಭಾವಿಕವಾಗಿದೆ. ಉಚ್ಚ ನ್ಯಾಯಾಲಯ ತಮಿಳುನಾಡು ಸರಕಾರದ ವಿರುದ್ಧ ನಿರ್ಣಯ ನೀಡಿದ ನಂತರ ಪರಿಸರ ನಿಯಂತ್ರಣ ಮಂಡಳಿ ಹಾಗೂ ತಮಿಳುನಾಡು ಸರಕಾರ ಅದಕ್ಕೆ ನಿರ್ಧಿಷ್ಟ ಅವಧಿಯೊಳಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅಪೀಲ್‌ ಮಾಡಲಿಲ್ಲ. ಎರಡು ವರ್ಷಗಳ ನಂತರ ಅವರು ಎಚ್ಚೆತ್ತರು ಹಾಗೂ ತಡವಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ನೀಡಿದರು.

೧೪.೨.೨೦೨೫ ರಂದು ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯ ದಲ್ಲಿ ಚರ್ಚೆಗೆ ಬಂತು. ಆಗ ‘ಈ ಪ್ರಕರಣವನ್ನು ದಾಖಲಿಸಲು ೨ ವರ್ಷ ವಿಳಂಬ ಏಕಾಯಿತು ?’, ಎಂದು ಸರ್ವೋಚ್ಚ ನ್ಯಾಯಾಲಯ ಕೇಳಿತು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಕ್ಕೆ ಛೀಮಾರಿ ಹಾಕಿತು, ಅದೇ ರೀತಿ ‘ಇಂತಹ ಕಾಲಬಾಹ್ಯ ಪ್ರಕರಣದಲ್ಲಿ ನೌಕರಶಾಹಿಯೊಂದಿಗೆ ಒಪ್ಪಂದವಿರಬಹುದೆಂದು ಅನಿಸುತ್ತದೆ ಹಾಗೂ ಅದಕ್ಕೆ ಅವರಿಗೆ ಕೇವಲ ನ್ಯಾಯಾಲಯದ ಮುದ್ರೆ ಬೇಕಾಗಿದೆ’, ಎಂದು ಟಿಪ್ಪಣಿ ಮಾಡಿತು. ಸರ್ವೋಚ್ಚ ನ್ಯಾಯಾಲಯದಲ್ಲಿ ‘ಈಶಾ ಫೌಂಡೇಶನ್‌’ನ ವತಿಯಿಂದ ಹಿರಿಯ ನ್ಯಾಯವಾದಿ ಮುಕುಲ ರೋಹತಗೀ ಉಪಸ್ಥಿತರಿದ್ದರು. ಅವರು ಈ ಆಲಿಕೆ ಮಹಾಶಿವರಾತ್ರಿಯ ನಂತರ ಇಡಬೇಕೆಂದು ವಿನಂತಿಸಿದರು. ಅದಕ್ಕೆ ಅವರು ಕೊಯಿಂಬತ್ತೂರಿನ ವೆಲಿಯಾಂಗಿರಿ ಯಲ್ಲಿರುವ ‘ಈಶಾ ಫೌಂಡೇಶನ್‌’ನಲ್ಲಿ ಮಹಾಶಿವರಾತ್ರಿಯಂದು ದೊಡ್ಡ ಉತ್ಸವ ನಡೆಯುತ್ತದೆ. ಈ ಉತ್ಸವ ಮುಗಿದ ನಂತರ ಅವರ ಪಕ್ಷಕಾರರು ಉತ್ತರ ಕೊಡುವರು, ಎಂದು ಕಾರಣ ನೀಡಿದರು. ಆದ್ದರಿಂದ ಈ ಪ್ರಕರಣದ ಆಲಿಕೆಯನ್ನು ಮುಂದೂಡಲಾಯಿತು. ಈ ಪ್ರಕರಣದ ನಿಮಿತ್ತದಲ್ಲಿ ತಮಿಳುನಾಡು ಸರಕಾರದ ಹಿಂದೂದ್ವೇಷ ಸ್ಪಷ್ಟವಾಗಿ ಕಾಣಿಸಿತು.’

– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೧.೨.೨೦೨೫)