Supreme Court Advocate H.H. Hari Shankar Jain’s : ಕಾಶಿ ಮತ್ತು ಮಥುರ ಅಷ್ಟೇ ಅಲ್ಲದೆ, ಪ್ರತಿಯೊಂದು ದೇವಸ್ಥಾನ ಹಿಂಪಡೆಯುವೆವು ! – ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿ ಶಂಕರ್ ಜೈನ

ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿ ಶಂಕರ್ ಜೈನ ಇವರ ದೃಢನಿಶ್ಚಯ

ಪೂ. (ನ್ಯಾಯವಾದಿ) ಹರಿಶಂಕರ್ ಜೈನ್

ನವ ದೆಹಲಿ – ಕಾಶಿ ಮತ್ತು ಮಥುರದ ದೇವಸ್ಥಾನಗಳು ಪಡೆದು ಉಳಿದಿರುವ ಮುಸಲ್ಮಾನರಿಗೆ ನೀಡಲಾಗದು. ಪ್ರತಿಯೊಂದು ದೇವಸ್ಥಾನ ಹಿಂಪಡೆಯುವೆವು, ಎಂದು ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಪೂ. ಹರಿ ಶಂಕರ್ ಜೈನ ಇವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಇತ್ತೀಚಿಗೆ ವಿಶ್ವ ಹಿಂದೂ ಪರಿಷತ್ತಿನಿಂದ ‘ಕಾಶಿ ಮತ್ತು ಮಥುರ ದೇವಸ್ಥಾನಗಳನ್ನು ಮುಸಲ್ಮಾನರು ಹಿಂದುಗಳಿಗೆ ಹಿಂತಿರುಗಿಸಿದರೆ ಉಳಿಯೆದಿರುವ ದೇವಸ್ಥಾನದ ಬಗ್ಗೆ ಆಗ್ರಹಿಸುವವರಿಗೆ ತಿಳಿಸಿ ಹೇಳಲಾಗುವುದು’, ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಪೂ. ಜೈನ್ ಇವರು ಒಂದು ಹಿಂದಿ ವಾರ್ತ ವಾಹಿನಿಯ ಪ್ರತಿನಿಧಿ ಜೊತೆಗೆ ಮಾತನಾಡುವಾಗ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಶಿ, ಮಥುರ, ಭೋಜಶಾಲೆ, ಸಂಭಲ ಮುಂತಾದ ಸ್ಥಳಗಳಲ್ಲಿನ ದೇವಸ್ಥಾನಗಳನ್ನು ಮುಕ್ತಗೊಳಿಸುವ ಸಂದರ್ಭದಲ್ಲಿ ನ್ಯಾಯವಾದಿ (ಪೂ.) ಹರಿ ಶಂಕರ್ ಜೈನ್ ಇವರು ಅರ್ಜಿ ದಾಖಲಿಸಿದ್ದಾರೆ.

ನ್ಯಾಯವಾದಿ (ಪೂ.) ಹರಿಶಂಕರ್ ಜೈನ್ ಇವರು ಮಾತು ಮುಂದುವರೆಸಿ,

‘ಮೂರು ಕೊಡುವುದು ಮತ್ತು ಉಳಿದಿರುವ ಬಿಡುವುದು’ ಇದು ಗುಲಾಮಗಿರಿಯ ಲಕ್ಷಣ !

ಮಸೀದಿ ಕಟ್ಟುವುದಕ್ಕಾಗಿ ಯಾವೆಲ್ಲಾ ದೇವಸ್ಥಾನಗಳು ನೆಲಸಮ ಮಾಡಲಾಗಿವೆ, ಅದರಲ್ಲಿನ ಒಂದೇ ಒಂದು ದೇವಸ್ಥಾನ ಅಥವಾ ಒಂದು ಇಂಚು ಜಾಗ ಕೂಡ ನಾವು ಅವರಿಗಾಗಿ ಬಾಕಿ ಉಳಿಸಲಾರೆವು. ಎಲ್ಲವೂ ಹಿಂಪಡೆಯಲಾಗುವುದು. ‘ಮೂರು ಕೊಡುವುದು ಮತ್ತು ಉಳಿದಿರುವುದು ಬಿಡುವುದು’ ಇದು ಗುಲಾಮಗಿರಿಯ ಲಕ್ಷಣವಾಗಿದೆ. ಹಾಗೂ ಈ ವಿಚಾರಧಾರೆ ಆಕ್ರಮಣಕಾರರ ಬಗ್ಗೆ ಭಯವು ತೋರಿಸುತ್ತದೆ’, ಎಂದು ಹೇಳಿದರು.

ಹಿಡಿಯಷ್ಟು ಜನರು ಸಂಪೂರ್ಣ ಹಿಂದೂ ಜನಾಂಗದ ಪ್ರತಿನಿಧಿತ್ವ ಮಾಡಲು ಸಾಧ್ಯವಿಲ್ಲ !

ಹಿಡಿಯಷ್ಟು ಜನರು ಸಂಪೂರ್ಣ ಹಿಂದೂ ಜನಾಂಗದ ಪ್ರತಿನಿಧಿತ್ವ ಮಾಡಲು ಸಾಧ್ಯವಿಲ್ಲ. ಇಂದು ಯಾವ ಹಿಂದುಗಳು ರಾಜಿ ಮಾಡಿಕೊಳ್ಳುವ ಬಗ್ಗೆ ಮಾತನಾಡುತ್ತಾರೆ ಅವರು ತನ್ನ ಕಾಲಿನ ಮೇಲೆ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. ಯಾರು ಹಿಂದುಗಳಿಗೆ ರಾಜಿ ಮಾಡಿಕೊಳ್ಳಲು ಕಲಿಸುತ್ತಿದ್ದಾರೆ, ಅವರು ಇತಿಹಾಸಕ್ಕೆ ಅನ್ಯಾಯ ಮಾಡುತ್ತಿದ್ದು ಅವರಿಗೆ ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ.

ಎಲ್ಲಿಯವರೆಗೆ ನಾನು ಬದುಕಿದ್ದೇನೆ, ಅಲ್ಲಿಯವರೆಗೆ ಕಾನೂನು ರೀತಿ ಹೋರಾಡಿ ಎಲ್ಲಾ ದೇವಸ್ಥಾನಗಳನ್ನು ಹಿಂಪಡೆಯುವೆ !

ಅಯೋಧ್ಯ, ಕಾಶಿ ಮತ್ತು ಮಥುರ ಇವುಗಳ ಬಗ್ಗೆ ಹಿಂದುಗಳ ಮನಸ್ಸಿನಲ್ಲಿ ವಿಶೇಷ ಸ್ಥಾನವಿದೆ. ಅದರಂತೆ ಯಾವ ಇತರ ಸ್ಥಳಗಳಲ್ಲಿನ ದೇವಸ್ಥಾನಗಳನ್ನು ಬೀಳಿಸಿ ಮಸೀದಿಗಳನ್ನು ಕಟ್ಟಲಾಗಿದೆಯೋ ಅಲ್ಲಿಯ ಜನರ ಮನಸ್ಸಿನಲ್ಲಿ ಕೂಡ ಅಲ್ಲಿ ನೆಲೆಸಮವಾಗಿರುವ ದೇವಸ್ಥಾನಗಳ ಬಗ್ಗೆ ವಿಶೇಷ ಸ್ಥಾನವಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಿಯವರೆಗೆ ನಾನು ಬದುಕಿದ್ದೇನೆ, ಅಲ್ಲಿಯವರೆಗೆ ಕಾನೂನು ರೀತಿ ಹೋರಾಡಿ ಮಸೀದಿಯಾಗಿ ಬದಲಾಗಿರುವ ೧೦ ಸಾವಿರ ಮಂದಿರಗಳನ್ನು ಹಿಂಪಡೆಯಲಾಗುವುದು. ನಾನು ಎಲ್ಲಾ ದೇವಸ್ಥಾನಗಳನ್ನು ಹಿಂಪಡೆಯುವ ಸಂಕಲ್ಪ ಮಾಡಿದ್ದೇನೆ. ದೇವರ ಹೆಸರಿನಲ್ಲಿ ತೆಗೆದುಕೊಂಡಿರುವ ಧ್ಯೇಯ ಮುರಿಯಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ನನಗೆ ತಿಳಿಸಿ ಹೇಳಬಹುದು, ಹೀಗೆ ಯಾರಿಗಾದರೂ ಅನಿಸುತ್ತಿದ್ದರೆ ಅದು ತಪ್ಪಾಗಿದೆ. ಯಾರು ನನಗೆ ತಿಳಿಸಿ ಹೇಳಲಾರರು ಮತ್ತು ಯಾರು ನಮ್ಮನ್ನು ತಿಳಿದುಕೊಳ್ಳಲಾರರು ! ಎಂದು ಹೇಳಿದರು.