ನವ ದೆಹಲಿ – ಮಸೀದಿಯಲ್ಲಿ ‘ಜಯ ಶ್ರೀ ರಾಮ’ ಎಂದು ಘೋಷಣೆ ನೀಡುವುದು, ಇದು ಹೇಗೆ ಅಪರಾಧ ಆಗುತ್ತದೆ ?’, ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕಡಾಬಾ ತಾಲೂಕಿನ ಒಂದು ಮಸೀದಿಯಲ್ಲಿ ಕೀರ್ತನ ಕುಮಾರ್ ಮತ್ತು ಸಚಿನ ಕುಮಾರ್ ಈ ಇಬ್ಬರು ಹಿಂದೂ ಯುವಕರಿಂದ ‘ಜಯ ಶ್ರೀ ರಾಮ’ ಎಂದು ಘೋಷಣೆ ನೀಡಿರುವುದರಿಂದ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. ಇದರ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡೆದಿರುವ ವಿಚಾರಣೆಯ ಸಮಯದಲ್ಲಿ ಉಚ್ಚ ನ್ಯಾಯಾಲಯವು ಈ ಅಪರಾಧ ರದ್ದುಪಡಿಸಿತ್ತು. ಈ ನಿರ್ಣಯದ ವಿರುದ್ಧ ಅರ್ಜಿದಾರ ಹೈದರ್ ಅಲಿ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆಸಿದ್ದರು. ಅದರ ಕುರಿತು ವಿಚಾರಣೆ ನಡೆಸುವಾಗ ಸರ್ವೋಚ್ಚ ನ್ಯಾಯಾಲಯವು ಮೇಲಿನ ಪ್ರಶ್ನೆ ಕೇಳಿದೆ.
🚨 Supreme Court Questions Karnataka Police! 🤔
The #SupremeCourt of India asks the Karnataka Police and a petitioner to explain why chanting “Jai Shri Ram” inside a mosque is considered an offense.
This comes after the Karnataka High Court quashed criminal proceedings against… pic.twitter.com/dKXV0KLasc
— Sanatan Prabhat (@SanatanPrabhat) December 16, 2024
೧. ನ್ಯಾಯಾಲಯವು ಪ್ರಕರಣ ತಿಳಿದುಕೊಳ್ಳುವಾಗ ಅರ್ಜಿದಾರರ ನ್ಯಾಯವಾದಿಗೆ, ‘ಜಯ ಶ್ರೀ ರಾಮ’ ಘೋಷಣೆ ನೀಡುವುದು ಅಪರಾಧ ಹೇಗೆ ಆಗುತ್ತದೆ ? ಎಂದು ಕೇಳಿದಾಗ ಈ ಬಗ್ಗೆ ನ್ಯಾಯವಾದಿ ಕಾಮತ್ ಇವರು, ಇದು ಇತರ ಧರ್ಮದ ಪ್ರಾರ್ಥನಾ ಸ್ಥಳದಲ್ಲಿ ಬಲವಂತವಾಗಿ ನುಗ್ಗಿ ಬೆದರಿಕೆ ನೀಡುವ ಪ್ರಕರಣವಾಗಿದೆ. ಅಲ್ಲಿ ತಮ್ಮ ಧರ್ಮದ ಘೋಷಣೆ ನೀಡಿ ಆರೋಪಿಯು ಧಾರ್ಮಿಕ ಸೌಹಾರ್ದತೆ ಹದಗೆಡಿಸುವ ಪ್ರಯತ್ನ ಮಾಡಿದ್ದಾರೆ. ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ ೪೮೨ ರ ದುರ್ಬಳಕೆ ಆಗಿದೆ. ಪ್ರಕರಣದ ತನಿಖೆ ಪೂರ್ಣ ಆಗುವ ಮೊದಲೇ ಉಚ್ಚ ನ್ಯಾಯಾಲಯವು ಅಪರಾಧ ರದ್ದು ಪಡಿಸಿದೆ’, ಎಂದು ಹೇಳಿದರು.
೨. ಈ ಬಗ್ಗೆ ನ್ಯಾಯಾಲಯವು, ‘ಆರೋಪಿಯ ವಿರುದ್ಧ ಏನು ಸಾಕ್ಷಿಗಳಿವೆ, ಅದನ್ನು ನಾವು ನೋಡಬೇಕಾಗುವುದು. ಅವರಿಗೆ ನ್ಯಾಯಾಂಗ ಬಂಧನದ ಬೇಡಿಕೆ ಸಲ್ಲಿಸುವಾಗ ಪೊಲೀಸರು ಸತ್ರ ನ್ಯಾಯಾಲಯಕ್ಕೆ ಏನು ಹೇಳಿದ್ದರು ?’, ಎಂದು ವಿಚಾರಣೆ ನಡೆಯಿತು. ಅದರ ಬಗ್ಗೆ ನ್ಯಾಯವಾದಿ, ‘ಸಿಸಿಟಿವಿಯ ದೃಶ್ಯಾವಳಿಯಲ್ಲಿ ಆರೋಪಿ ಘೋಷಣೆ ನೀಡುವುದು ಕಂಡು ಬರುತ್ತದೆ’, ಎಂದು ಹೇಳಿದಾಗ ನ್ಯಾಯಾಲಯವು ಮುಂದಿನ ವಿಚಾರಣೆ ಮುಂದಿನ ತಿಂಗಳಿಗೆ ಮುಂದೂಡಿದೆ.