ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸನಾತನ ಸಂಸ್ಥೆಯಲ್ಲಿ ಹಾಕಿಕೊಟ್ಟಿರುವ ಅದ್ವಿತೀಯ ಕಾರ್ಯಪದ್ಧತಿ ಮತ್ತು ಅದರಿಂದಾದ ಲಾಭ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹಿಂದಿನ ಭಾಗದಲ್ಲಿ ಪರಾತ್ಪರ ಗುರು ಡಾಕ್ಟರರು ಸಾಧಕರ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗಲು ‘ಗುರುಪೂರ್ಣಿಮಾ ಮಹೋತ್ಸವ’ವನ್ನು ಅನೇಕ ಸ್ಥಳಗಳಲ್ಲಿ ಆಯೋಜಿಸುವುದು, ‘ಸನಾತನ ಪ್ರಭಾತ’ ನಿಯತಕಾಲಿಕೆಗಳನ್ನು ಆರಂಭಿಸಿ ಸಾಧಕರಿಗೆ ಸಾಧನೆಗಾಗಿ ಸತತ ಮಾರ್ಗದರ್ಶನವನ್ನು ಲಭ್ಯ ಮಾಡಿಕೊಡುವುದು, ‘ಸ್ವಭಾವದೋಷ ಮತ್ತು ಅಹಂ’ಇವುಗಳ ನಿರ್ಮೂಲನೆಗಾಗಿ ಪ್ರಯತ್ನಿಸಲು ಕಲಿಸುವುದು; ಈ ಭಾಗಗಳನ್ನು ಓದಿದೆವು. ಈಗ ಅದರ ಮುಂದಿನ ಭಾಗವನ್ನು ನೋಡಲಿದ್ದೇವೆ.                                    (ಭಾಗ ೩)

ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/129406.html
(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೧೮. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಮಾರ್ಗದರ್ಶನ ಮಾಡುವುದು

೧೮ ಅ. ‘ಪರಾತ್ಪರ ಗುರು ಡಾ. ಆಠವಲೆಯವರು ಬರಲಿದ್ದಾರೆ’, ಎಂದು ಕೇವಲ ತಿಳಿದಾಗ ಸಾಧಕರಲ್ಲಿ ಬಹಳ ಉತ್ಸಾಹ ಸಂಚರಿಸುವುದು : ೧೯೯೮ ರಿಂದ ೨೦೦೩ ರವರೆಗೆ ಠಾಣೆ ಜಿಲ್ಲೆಯಲ್ಲಿ ಕ್ರಿಯಾಶೀಲ ಮತ್ತು ಎಲ್ಲ ಸಾಧಕರಿಗಾಗಿ ಪ.ಪೂ. ಡಾಕ್ಟರರ ಬೇರೆ ಬೇರೆ ಮಾರ್ಗದರ್ಶನಗಳು ಇರುತ್ತಿದ್ದವು. ಸಾಧಕರು ಚಾತಕ ಪಕ್ಷಿಯಂತೆ ಈ ಸತ್ಸಂಗದ ದಾರಿ ಕಾಯುತ್ತಿದ್ದರು. ಅದು ಒಂದು ಉತ್ಸವದಂತೆ ಇರುತ್ತಿತ್ತು. ‘ಪ.ಪೂ ಡಾಕ್ಟರರು ಬರಲಿದ್ದಾರೆ’, ಎಂದು ತಿಳಿದಾಗಿನಿಂದಲೇ ಎಲ್ಲ ಸಾಧಕರಲ್ಲಿ ಒಂದು ರೀತಿಯ ಹಿಂದೆಂದೂ ಕಂಡಿರದ ಉತ್ಸಾಹ ಸಂಚರಿಸುತ್ತಿತ್ತು.

೧೮ ಆ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿನ ವಿವಿಧ ಅಂಶಗಳು : ಪ.ಪೂ. ಡಾಕ್ಟರರು ಸಾಧಕರಿಗೆ ಅವರ ಸ್ಥಿತಿಗನುಸಾರ ಮುಂದಿನ ಹಂತದ ಮಾರ್ಗದರ್ಶನ ಮಾಡುತ್ತಿದ್ದರು. ಸಾಧಕರ ಸಂದೇಹಗಳ ನಿವಾರಣೆ ಮಾಡುವಾಗ ಅವರು ‘ಸಾಧಕರು ಸಾಧನೆಯಲ್ಲಿ ಮುಂದೆ ಹೋಗಲು ಸಹಾಯವಾಗುವಂತಹ’ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ತಮ್ಮ ಮಾರ್ಗದರ್ಶನದಲ್ಲಿ ಅವರು ‘ಭಾರತದಾದ್ಯಂತ ಸನಾತನ ಸಂಸ್ಥೆಯ ಪ್ರಚಾರವು ಯಾವ ರೀತಿ ದೊಡ್ಡ ಪ್ರಮಾಣದಲ್ಲಿ ನಡೆದಿದೆ ?’, ‘ಎಲ್ಲಾ ಕಡೆಗಳಲ್ಲಿ ಸಾಧಕರು ಸಾಧನೆಯ ದೃಷ್ಟಿಯಿಂದ ಯಾವ ರೀತಿ ಉತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ?’, ಇತ್ಯಾದಿಗಳನ್ನು ಉದಾಹರಣೆಗಳನ್ನು ನೀಡಿ ಹೇಳುತ್ತಿದ್ದರು. ಸಾಧಕರಿಂದ ಯಾವ ರೀತಿಯ ತಪ್ಪುಗಳಾಗುತ್ತಿವೆ ?’ ಮತ್ತು ‘ಅವುಗಳನ್ನು ತಡೆಗಟ್ಟಲು ಏನು ಮಾಡಬೇಕು ?’ ಈ ಬಗ್ಗೆಯೂ ಅವರು ಮಾರ್ಗದರ್ಶನ ಮಾಡುತ್ತಿದ್ದರು. ‘ಮುಂದೆ ಸನಾತನ ಸಂಸ್ಥೆಯ ಧ್ಯೇಯವೇನು ?’ ಮತ್ತು ‘ಅದನ್ನು ಸಾಧಿಸಲು ಸಾಧನೆಯ ಸ್ತರದಲ್ಲಿ ಹೇಗೆ ಪ್ರಯತ್ನಿಸಬೇಕು ?’, ಇಂತಹ ಅನೇಕ ವಿಷಯಗಳ ಕುರಿತು ಅವರು ಸಾಧಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

೧೮ ಇ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿನ ಕೆಲವು ಪ್ರಮುಖ ಅಂಶಗಳು !

೧. ಈಶ್ವರನಿಗೆ ಪ್ರಾಮಾಣಿಕತೆ ಈ ಗುಣವು ಬಹಳ ಇಷ್ಟವಾಗುತ್ತದೆ. ಆದುದರಿಂದ ಸಾಧಕರು ಆ ಗುಣವನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು.

೨. ಸಾಧಕರಲ್ಲಿ ‘ಧೃತರಾಷ್ಟ್ರ-ಗಾಂಧಾರಿ’ ವೃತ್ತಿ ಬೇಡ. ‘ಯಾವುದು ಸಮಷ್ಟಿಗೆ ಹಾನಿಕರವಾಗಿದೆಯೋ’, ಅದನ್ನು ಕೂಡಲೇ ಮುಂದಿನ ಜವಾಬ್ದಾರ ಸಾಧಕರಿಗೆ ತಿಳಿಸಬೇಕು.

೩. ‘ಕಂಡದ್ದು ಕರ್ತವ್ಯ’ ಈ ಭಾವದಿಂದ ವರ್ತಿಸಬೇಕು.

೪. ಈಶ್ವರಪ್ರಾಪ್ತಿಗಾಗಿ ಕ್ರಮೇಣ ಸರ್ವಸ್ವದ ತ್ಯಾಗ ಮಾಡಲು ಪ್ರಯತ್ನಿಸಬೇಕು.

೫. ನಮ್ಮ ಮನಸ್ಸಿನಲ್ಲಿ ಹಿರಿಯ ಸಹೋದರನ ಬಗ್ಗೆ ಇರುವ ಗೌರವ ಮತ್ತು ಆತ್ಮೀಯತೆಯ ಭಾವವೇ, ನಮಗೆ ಮಾರ್ಗದರ್ಶನ ಮಾಡಲು ಬರುವ ಸಾಧಕರ ಬಗ್ಗೆಯೂ ಇರಬೇಕು. ಅವರೊಂದಿಗೆ ವಿಶೇಷವಾಗಿ ನಡೆದುಕೊಂಡರೆ ನಮ್ಮಲ್ಲಿ ಮತ್ತು ಅವರಲ್ಲಿ ಆತ್ಮೀಯತೆ ಉಂಟಾಗುವುದಿಲ್ಲ. ಅದರಿಂದ ಮಾರ್ಗದರ್ಶಕರ ಅಹಂ ಹೆಚ್ಚಾಗಿ ಅವರ ಸಾಧನೆಯಲ್ಲಿ ಹಾನಿಯೂ ಆಗಬಹುದು.

೧೮ ಈ. ಕೆಟ್ಟ ಶಕ್ತಿಗಳ ಬಗ್ಗೆ ಸಾಧಕರಿಗೆ ಹೇಳಿ ಅವುಗಳಿಂದಾಗುವ ತೊಂದರೆಗಳಿಗೆ ಆಧ್ಯಾತ್ಮಿಕ ಸ್ತರದ ಉಪಾಯ ಮಾಡಲು ಕಲಿಸುವುದು : ಪ.ಪೂ. ಡಾಕ್ಟರರು ಸಾಧಕರಿಗೆ ‘ಕೆಟ್ಟ ಶಕ್ತಿಗಳ ತೊಂದರೆ ಹೇಗಿರುತ್ತದೆ ?’, ‘ಕೆಟ್ಟ ಶಕ್ತಿಗಳು ವ್ಯಕ್ತಿಗೆ ಏಕೆ ತೊಂದರೆ ಕೊಡುತ್ತವೆ ?’, ‘ಆ ಸಾಧಕನ ಸಾಧನೆಯಲ್ಲಿ ಏಕೆ ಅಡಚಣೆಗಳನ್ನು ತರುತ್ತವೆ ?’ ಇತ್ಯಾದಿ ಅನೇಕ ವಿಷಯಗಳ ಕುರಿತು ವಿಸ್ತಾರವಾದ ಮಾಹಿತಿ ನೀಡಿ ಅದಕ್ಕೆ ಆಧ್ಯಾತ್ಮಿಕ ಸ್ತರದ ಉಪಾಯವನ್ನೂ ಹೇಳುತ್ತಿದ್ದರು, ಉದಾ. ಉಪ್ಪು-ನೀರಿನ (ಟಿಪ್ಪಣಿ) ಉಪಾಯ ಮಾಡುವುದು, ಶರೀರದ ವಿವಿಧ ಚಕ್ರಗಳ ಮೇಲೆ ವಿಭೂತಿ ಹಚ್ಚಿಕೊಳ್ಳುವುದು, ಪ್ರಾರ್ಥನೆ ಮಾಡುವುದು, ಸುತ್ತಲೂ ಖಾಲಿ ಪೆಟ್ಟಿಗೆಗಳನ್ನು ಇಟ್ಟುಕೊಂಡು ನಾಮಜಪವನ್ನು ಮಾಡುವುದು, ವಿವಿಧ ದೇವತೆಗಳ ನಾಮಜಪವನ್ನು ಮಾಡುವುದು, ಪ.ಪೂ ಭಕ್ತರಾಜ ಮಹಾರಾಜರ ಧ್ವನಿಯಲ್ಲಿನ ಭಜನೆಗಳನ್ನು ಕೇಳುವುದು ಇತ್ಯಾದಿ. ಆದುದರಿಂದ ಸಾಧಕರಿಗೆ ಕೆಟ್ಟ ಶಕ್ತಿಗಳ ಬಗ್ಗೆ ಭಯವೆನಿಸದೇ ಗುರುಕೃಪೆ ಮತ್ತು ದೇವತೆಗಳ ಆಶೀರ್ವಾದ ಇವುಗಳ ಸಹಾಯದಿಂದ ಆಗುವ ತೊಂದರೆಗಳನ್ನು ಜಯಿಸಲು ಸಾಧ್ಯವಾಗತೊಡಗಿತು. ಕಾಲಾನುಸಾರ ಪ.ಪೂ. ಡಾಕ್ಟರರು ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಗಳ ವಿರುದ್ಧ ಸೂಕ್ಷ್ಮದಿಂದ ಹೋರಾಡಲು ಕಲಿಸಿ (ವಿವಿಧ ಆಧ್ಯಾತ್ಮಿಕ ಮಟ್ಟದ ಉಪಾಯ ಮಾಡಲು ಕಲಿಸಿ) ಅವರಿಗೆ ಅದನ್ನು ಜಯಿಸಲು ಕಲಿಸುತ್ತಿದ್ದಾರೆ.

(ಟಿಪ್ಪಣಿ – ಒಂದು ಟಬ್‌ನಲ್ಲಿ ಕಾಲುಗಳ ಪಾದ ಮುಳುಗುವಷ್ಟು ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚದಷ್ಟು ಕಲ್ಲುಪ್ಪು ಹಾಕಬೇಕು ಮತ್ತು ಅದರಲ್ಲಿ ೧೦-೧೫ ನಿಮಿಷಗಳ ಕಾಲ ಕಾಲುಗಳನ್ನು ಮುಳುಗಿಸಿ ಕುಳಿತು ದೇವತೆಯ ನಾಮಜಪವನ್ನು ಮಾಡಬೇಕು, ನಂತರ ಆ ನೀರನ್ನು ಚೆಲ್ಲಬೇಕು)

೧೯. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಿಂದ ಸಾಧಕರಿಗಾದ ಲಾಭ !

೧೯ ಅ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರ ಜನ್ಮಜನ್ಮಾಂತರಗಳ ತೊಂದರೆಗಳನ್ನು ದೂರ ಮಾಡಿದುದರಿಂದ ಅವರ ಆಧ್ಯಾತ್ಮಿಕ ಉನ್ನತಿಯಾಗುವುದು : ಕಲಿಯುಗದಲ್ಲಿ ಮನುಷ್ಯನು ಸಾಧನೆಯನ್ನು ಮಾಡದ ಕಾರಣ ಪ್ರತಿಯೊಬ್ಬರ ಜೀವನದಲ್ಲಿ ಅದೃಶ್ಯ ಕೆಟ್ಟ ಶಕ್ತಿಗಳು ಬಹಳಷ್ಟು ಅಡಚಣೆಗಳನ್ನು ತರುತ್ತವೆ. ಸಮಾಜದಲ್ಲಿ ‘ಕೆಟ್ಟ ಶಕ್ತಿಗಳೆಂದರೇನು ?’, ‘ಅವುಗಳಿಂದ ಏನೇನು ತೊಂದರೆಗಳಾಗುತ್ತವೆ ?’, ಈ ವಿಷಯದ ಬಗ್ಗೆ ಬಹಳಷ್ಟು ಅಜ್ಞಾನವಿದೆ; ಆದರೆ ಪ.ಪೂ. ಡಾಕ್ಟರರು ಆರಂಭದಿಂದಲೇ ಸಾಧಕರಿಗೆ ಸೂಕ್ಷ್ಮ ಜಗತ್ತಿನ ಪರಿಚಯ ಮಾಡಿಕೊಟ್ಟರು ಮತ್ತು ‘ಆ ತೊಂದರೆಗಳಿಂದ ನಮ್ಮ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು ?’, ಈ ಬಗ್ಗೆ ಅಮೂಲ್ಯ ಜ್ಞಾನವನ್ನು ನೀಡಿದರು. ಆದುದರಿಂದ ಸಾಧಕರ ಜನ್ಮಜನ್ಮಾಂತರಗಳ ತೊಂದರೆಗಳು ದೂರವಾಗಿ ಅವರ ಆಧ್ಯಾತ್ಮಿಕ ಉನ್ನತಿಯಾಗುತ್ತಿದೆ.

೧೯ ಆ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಿಂದ ಸಾಧಕರಿಗೆ ಸ್ಥೂಲ ಮತ್ತು ಸೂಕ್ಷ್ಮ ಸ್ತರಗಳಲ್ಲಿ ಲಾಭವಾಗುವುದು : ಪ.ಪೂ. ಡಾಕ್ಟರರ ಉಚ್ಚತಮ ಆಧ್ಯಾತ್ಮಿಕ ಸ್ತರದ ಮಾರ್ಗದರ್ಶನದಿಂದ ಸಾಧಕರಿಗೆ ಅನೇಕ ಪಟ್ಟುಗಳಲ್ಲಿ ಶಬ್ದಾತೀತ ಲಾಭವಾಗುತ್ತಿತ್ತು. ಸ್ಥೂಲದಲ್ಲಿ ಎಲ್ಲರಿಗೂ ಬಹಳಷ್ಟು ಕಲಿಯಲು ಸಿಗುವುದರೊಂದಿಗೆ ಸೂಕ್ಷ್ಮದಲ್ಲಿಯೂ ಬಹಳಷ್ಟು ಲಾಭವಾಗುತ್ತಿತ್ತು, ಉದಾ. ‘ಪ.ಪೂ. ಡಾಕ್ಟರರು ಬಂದು ಹೋದ ನಂತರ ಆಧ್ಯಾತ್ಮಿಕ ತೊಂದರೆ ಕಡಿಮೆಯಾಗುವುದು, ಉತ್ಸಾಹ ಹೆಚ್ಚಾಗುವುದು, ಸಾಧನೆ ಮತ್ತು ಸೇವೆಯನ್ನು ಮಾಡುವ ತಳಮಳ ಹೆಚ್ಚಾಗುವುದು, ಅವರ ಸತ್ಸಂಗದಲ್ಲಿ ಬರುವ ವಿವಿಧ ಅನುಭೂತಿಗಳಿಂದ ಅವರ ಮೇಲಿನ ಶ್ರದ್ಧೆಯು ಹೆಚ್ಚಾಗುವುದು’, ಹೀಗೆ ಅನೇಕ ಲಾಭಗಳಾಗುತ್ತಿದ್ದವು.’

೨೦. ಪ್ರಚಾರದಲ್ಲಿನ ಅಥವಾ ಆಶ್ರಮದಲ್ಲಿನ ಸಾಧಕರ ಮಾರ್ಗದರ್ಶನ ಏರ್ಪಡಿಸುವುದು

ಅ. ಇತರ ಜಿಲ್ಲೆಗಳಿಂದ ಅಥವಾ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದ ಸಾಧಕರು ತಮ್ಮ ಜಿಲ್ಲೆಗಳಿಗೆ ಹೋದಾಗ, ಆ ಜಿಲ್ಲೆಯಲ್ಲಿನ ಸಾಧಕರಿಗಾಗಿ ಮಾರ್ಗದರ್ಶನ ಇಡಲಾಗುತ್ತಿತ್ತು.

೧. ‘ಸೂಕ್ಷ್ಮ ಜ್ಞಾನವು ಹೇಗೆ ಪ್ರಾಪ್ತವಾಗುತ್ತದೆ ?’, ಈ ಬಗ್ಗೆ ಸೌ. ಅಂಜಲಿ ಗಾಡಗೀಳ (ಈಗಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ) ಇವರ ಮಾರ್ಗದರ್ಶನವನ್ನು ಇಟ್ಟುಕೊಂಡಿದ್ದರು.

೨. ಕು. ಅನುರಾಧಾ ವಾಡೆಕರ (ಈಗಿನ ಸದ್ಗುರು ಅನುರಾಧಾ ವಾಡೆಕರ) ಇವರು ತಮ್ಮ ಮನೆಗೆ ಹೋದಾಗ, ಆ ಪ್ರದೇಶದಲ್ಲಿನ ಸಾಧಕರಿಗೆ ಅವರ ಮಾರ್ಗದರ್ಶನವನ್ನು ಇಡಲು ಹೇಳಲಾಗುತ್ತಿತ್ತು. ಈ ಮಾರ್ಗದರ್ಶನದಲ್ಲಿ ಅವರು ‘ಕೆಟ್ಟ ಶಕ್ತಿಗಳ ತೊಂದರೆ ಹೇಗಿರುತ್ತದೆ ?’, ‘ಅದನ್ನು ಜಯಿಸಲು ಏನು ಮಾಡಬೇಕು ?’, ಈ ಬಗೆಗಿನ ಆಳವಾದ ಅಧ್ಯಯನದ ಅಂಶಗಳನ್ನು ಹೇಳುತ್ತಿದ್ದರು.

೩. ಸೌ. ಸಂಗೀತಾ ಜಾಧವ (ಈಗಿನ ಪೂ. (ಸೌ.) ಸಂಗೀತಾ ಜಾಧವ) ಇವರು ಸೊಲ್ಲಾಪುರದಲ್ಲಿ ವೈಯಕ್ತಿಕ ಸಂಪರ್ಕವನ್ನು ಚೆನ್ನಾಗಿ ಮಾಡುತ್ತಿದ್ದರೆಂದು; ಠಾಣೆ ಮತ್ತು ಮುಂಬಯಿ ಜಿಲ್ಲೆಗಳಲ್ಲಿನ ಸಾಧಕರಿಗಾಗಿ ಅವರ ‘ವೈಯಕ್ತಿಕ ಸಂಪರ್ಕವನ್ನು ಹೇಗೆ ಮಾಡಬೇಕು ?’, ಈ ಬಗ್ಗೆ ಅಭ್ಯಾಸವರ್ಗ ಮತ್ತು ಮಾರ್ಗದರ್ಶನವನ್ನು ಇಟ್ಟುಕೊಂಡಿದ್ದರು.

೪. ಪ.ಪೂ. ಕಾಲಿದಾಸ ದೇಶಪಾಂಡೆ (ಈಗಿನ ಪರಾತ್ಪರ ಗುರು ಕಾಲಿದಾಸ ದೇಶಪಾಂಡೆ) ಇವರ ಮಾರ್ಗದರ್ಶನವನ್ನು ವರ್ಷದಲ್ಲಿ ೧-೨ ಬಾರಿ ಸಹ ಇಟ್ಟುಕೊಳ್ಳಲಾಗುತ್ತಿತ್ತು. ಆಗ ಸನಾತನದಲ್ಲಿ ಅವರೊಬ್ಬರು ಮಾತ್ರ ಸಮಷ್ಟಿ ಸಂತರಿದ್ದರು. ಅವರ ಪ್ರವಾಸದಿಂದ ‘ಸಂತರು ಹೇಗಿರುತ್ತಾರೆ ? ಅವರ ಸಾನ್ನಿಧ್ಯದಲ್ಲಿ ಅನುಭೂತಿಗಳು ಹೇಗೆ ಬರುತ್ತವೆ ? ಸಂತರ ಸಹವಾಸದಲ್ಲಿ ಚೆನ್ನಾಗಿ  ನಾಮಜಪವಾಗುವುದು, ಅವರ ಅಸ್ತಿತ್ವದಿಂದ ಹೇಗೆ ಆನಂದ ಸಿಗುತ್ತದೆ ?’ ಇದೆಲ್ಲವೂ ನಮಗೆ ಅನುಭವಿಸಲು ಸಿಕ್ಕಿತು.

೫. ೨೦೦೪ – ೨೦೦೫ ರಲ್ಲಿ ಪರಾತ್ಪರ ಗುರು ಪಾಂಡೆ ಮಹಾರಾಜರು ಠಾಣೆ ಜಿಲ್ಲೆಯ ಕಳವಾದಲ್ಲಿ ಇರುತ್ತಿದ್ದರು. ಅಗ ಠಾಣೆ ಜಿಲ್ಲೆಯ ಎಲ್ಲ ಸಾಧಕರಿಗಾಗಿ ಅವರ ಮಾರ್ಗದರ್ಶನವನ್ನು ಇಟ್ಟುಕೊಳ್ಳಲಾಗಿತ್ತು. ಆ ಮಾರ್ಗದರ್ಶನದಿಂದಲೂ ಸಾಧಕರಿಗೆ ಅನೇಕ ವಿಷಯಗಳು ಕಲಿಯಲು ಸಿಕ್ಕವು.

೨೧. ಸಾಧಕರಲ್ಲಿ ಭಾವಜಾಗೃತಿಯಾಗಲು ಮಾಡಿದ ಪ್ರಯತ್ನ !

ಅ. ೨೦೦೨ ರಲ್ಲಿ ಪ.ಪೂ. ಡಾಕ್ಟರರ ಸಲಹೆಯಂತೆ ಪ್ರತಿಯೊಂದು ಜಿಲ್ಲೆಯಲ್ಲಿ ಭಾವಸತ್ಸಂಗವನ್ನು ಆರಂಭಿಸಲಾಯಿತು. ಈ ಸತ್ಸಂಗದಲ್ಲಿ ‘ಭಾವ’ ಎಂದರೆ ಏನು ? ಮತ್ತು ಅದನ್ನು ಹೇಗೆ ಹೆಚ್ಚಿಸಬೇಕು ? ಈ ಬಗೆಗಿನ ಅಂಶಗಳನ್ನು ಹೇಳಲಾಗುತ್ತಿತ್ತು. ಭಾವದ ಸ್ತರದಲ್ಲಿ ಪ್ರಯತ್ನಿಸುವ ಸಾಧಕರಿಗೆ ಬಂದ ಅನುಭೂತಿಗಳನ್ನು ಸತ್ಸಂಗದಲ್ಲಿ ಹೇಳಲಾಗುತ್ತಿತ್ತು.

ಆ. ‘ಭಾವಜಾಗೃತಿ’ ಈ ಬಗ್ಗೆ ಸಾಧಕರಿಗೆ ಮಾರ್ಗದರ್ಶನ ಸಿಗಬೇಕೆಂದು ‘ಸನಾತನ ಪ್ರಭಾತ’ ನಿಯತಕಾಲಿಕೆಗಳಲ್ಲಿ ಭಾವಜಾಗೃತಿ ವಿಷಯದ ಲೇಖನಮಾಲೆ ಮುದ್ರಿಸಲು ಆರಂಭಿಸಿದರು.

ಇ. ‘ಭಾವಜಾಗೃತಿಗಾಗಿ ಸಾಧನೆ’ ಈ ಬಗ್ಗೆ ಪ.ಪೂ. ಡಾಕ್ಟರರು ಒಂದು ಗ್ರಂಥವನ್ನೂ ಪ್ರಕಾಶಿಸಿದರು. ಈ ಗ್ರಂಥದಲ್ಲಿ ‘ಭಾವ’ ಎಂದರೇನು ? ಭಾವದ ಘಟಕಗಳು ಯಾವವು ? ಭಾವ ನಿರ್ಮಿತಿ ಆಗುವುದರಲ್ಲಿ ಇರುವ ಅಡಚಣೆಗಳು ಯಾವವು ? ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ದೃಷ್ಟಿಯಿಂದ ಭಾವದ ಮಹತ್ವವೇನು ? ಭಾವವನ್ನು ಹೆಚ್ಚಿಸಲು ಏನು ಮಾಡಬೇಕು ? ಇತ್ಯಾದಿ ಬಹಳ ಉತ್ತಮ ಮಾಹಿತಿಯನ್ನು ನೀಡಲಾಗಿದೆ.

೨೨. ಸೂಕ್ಷ್ಮ ರೂಪದ ಮೂಲಕ ಸನಾತನದ ಆಶ್ರಮಗಳಲ್ಲಿ ಶ್ರೀ ದುರ್ಗಾದೇವಿಯ ಆಗಮನವಾಗುವುದು

೨೦೦೨-೨೦೦೩ ರಲ್ಲಿ ಪ.ಪೂ. ಡಾಕ್ಟರರ ಭಕ್ತಿಯಿಂದಾಗಿ ವಿವಿಧ ಆಶ್ರಮ ಮತ್ತು ಸಾಧಕರ ಮನೆಗಳಲ್ಲಿ ಸೂಕ್ಷ್ಮದಿಂದ ಶ್ರೀ ದುರ್ಗಾದೇವಿಯ ಆಗಮನವಾಗುತ್ತಿತ್ತು. ದುರ್ಗಾದೇವಿಯ ಆಗಮನಕ್ಕಾಗಿ ಉತ್ತಮವಾದ ವಾತಾವರಣವನ್ನು ನಿರ್ಮಿಸಲಾಗುತ್ತಿತ್ತು. ದೇವಿಯ ಆಗಮನದ ಕೆಲವು ದಿನಗಳ ಹಿಂದಿನಿಂದ ಸಾಧಕರಿಗೆ ಪ್ರಾರ್ಥನೆ, ನಾಮಜಪ ಮತ್ತು ಇತರ ಭಾವಜಾಗೃತಿಯ ಪ್ರಯತ್ನಗಳನ್ನು ಹೆಚ್ಚಿಸಲು ಹೇಳಲಾಗುತ್ತಿತ್ತು. ದುರ್ಗಾದೇವಿಯ ನಿಜವಾದ ಆಗಮನದ ಮೊದಲು ಭಾವವಿರುವ ಸಾಧಕರು ಎಲ್ಲರಿಂದ ಭಾವಾರ್ಚನೆಯನ್ನು ಮಾಡಿಸಿಕೊಳ್ಳುತ್ತಿದ್ದರು. ಆದುದರಿಂದ ಸಾಧಕರ ಭಾವಜಾಗೃತವಾಗಿ ಬಹಳಷ್ಟು ಜನರಿಗೆ ದುರ್ಗಾದೇವಿಯ ಸೂಕ್ಷ್ಮದಲ್ಲಿ ಆಗಮನದ ಅರಿವಾಗುತ್ತಿತ್ತು. ಸೂಕ್ಷ್ಮ ಸುಗಂಧ ಬರುವುದು, ಭಾವವು ಉಕ್ಕಿ ಬರುವುದು ಇತ್ಯಾದಿ ಅನುಭೂತಿಗಳೂ ಬರುತ್ತಿದ್ದವು.

೨೨ ಅ. ಸಾಮೂಹಿಕ ನಾಮಜಪದ ಆಯೋಜನೆ ಮಾಡುವುದು : ದೇವತೆಗಳ ಬಗ್ಗೆ ಭಾವವನ್ನು ಹೆಚ್ಚಿಸಲು ನಡುನಡುವೆ ದಿನದಾದ್ಯಂತ ೫ ರಿಂದ ೮ ಗಂಟೆಗಳ ಸಾಮೂಹಿಕ ನಾಮಜಪದ ಆಯೋಜನೆಯನ್ನು ಮಾಡಲಾಗುತ್ತಿತ್ತು. ಈ ನಾಮಜಪವನ್ನು ವೈಖರಿಯಲ್ಲಿ ಮಾಡಲಾಗುತ್ತಿತ್ತು. ಕೇಂದ್ರಸ್ಥಾನದಲ್ಲಿ ವಾಸಿಸುವ ಯಾರಾದರೊಬ್ಬ ಸಾಧಕನ ಮನೆಯಲ್ಲಿ ಸಾಧಕರು ಒಟ್ಟು ಸೇರಿ ಈ ನಾಮಜಪವನ್ನು ಮಾಡುತ್ತಿದ್ದರು. ನೌಕರಿಯನ್ನು ಮಾಡುವ ಸಾಧಕರು ಆ ದಿನ ರಜೆ ಪಡೆದು ಸಾಮೂಹಿಕ ನಾಮಜಪದ ಆನಂದವನ್ನು ಪಡೆಯುತ್ತಿದ್ದರು.’

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ !

ಇದಂ ನ ಮಮ | (ಈ ಬರವಣಿಗೆಯು ನನ್ನದಲ್ಲ ! (೧೭.೪.೨೦೨೪)

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ.