ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಸನಾತನ ಸಂಸ್ಥೆಯಲ್ಲಿ ಹಾಕಿಕೊಟ್ಟಿರುವ ಅದ್ವಿತೀಯ ಕಾರ್ಯಪದ್ಧತಿ !

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

೨೬/೦೬ ನೇ ಸಂಚಿಕೆಯಲ್ಲಿ ಪ್ರಕಟಿಸಲಾದ ‘ಪರಾತ್ಪರ ಗುರು ಡಾಕ್ಟರರು ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಹಾಕಿಕೊಟ್ಟ ಕೆಲವು ಕಾರ್ಯಪದ್ಧತಿಗಳನ್ನು ನೋಡಿದೆವು. ಇಂದು ಅದರ ಮುಂದಿನ ಅಂಶಗಳನ್ನು ನೋಡೋಣ                 (ಭಾಗ ೨)

ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/128451.html

೧೦. ಪರಾತ್ಪರ ಗುರು ಡಾ. ಆ ಠವಲೆಯವರ ವೈಶಿಷ್ಟ್ಯ ಅಂದರೆ ಸಾಧಕರು ಪ್ರತ್ಯಕ್ಷ ಅವರ ಒಡನಾಟದಲ್ಲಿ ಇರದಿದ್ದರೂ ಅವರು ಸಾಧಕರಿಂದ ಸಾಧನೆ ಮಾಡಿಸಿಕೊಳ್ಳುವುದು

‘ಗುರು-ಶಿಷ್ಯ ಸಂಪ್ರದಾಯದಲ್ಲಿ ಶಿಷ್ಯನು ಶ್ರೀ ಗುರುಗಳ ಜೊತೆಯಲ್ಲಿದ್ದು ಎಲ್ಲವನ್ನೂ ಕಲಿಯುತ್ತಿರುತ್ತಾನೆ. ಶ್ರೀ ಗುರುಗಳು ಶಿಷ್ಯನ ಮನಸ್ಸಿನಲ್ಲಿ ಉದ್ಭವಿಸುವ ಅನೇಕ ವಿಚಾರಗಳು ಮತ್ತು ಪ್ರಶ್ನೆಗಳಿಗೆ ಮಾರ್ಗವನ್ನು ತೋರಿಸಿ ಅವರಿಂದ ಸಾಧನೆಯನ್ನು ಮಾಡಿಸಿಕೊಳ್ಳುವ ಕಾರ್ಯವನ್ನು ಮಾಡುತ್ತಿರುತ್ತಾರೆ; ಆದರೆ ಸನಾತನದ ಸಾಧಕರು ಶ್ರೀ ಗುರುಗಳ, ಅಂದರೆ ಪ.ಪೂ. ಡಾಕ್ಟರರ ನೇರ ಒಡನಾಟದಲ್ಲಿ ಇಲ್ಲದಿದ್ದರೂ ಪ.ಪೂ. ಡಾಕ್ಟರರು ಸಾಧಕರ ಮನಸ್ಸಿನಲ್ಲಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಪಡೆಯುವ ಮತ್ತು ಅವರಿಗೆ ಆವಶ್ಯಕವಾಗಿರುವ ಮುಂದಿನ ಮಾರ್ಗದರ್ಶನವನ್ನು ಪಡೆಯಲು ಉತ್ತಮ ವ್ಯವಸ್ಥೆಯನ್ನು ಮಾಡಿದ್ದಾರೆ.

೧೧. ‘ಸಾಧಕರಿಗೆ ಗುರುಪೂರ್ಣಿಮೆಯ ಲಾಭವಾಗಲು’, ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ಕಡೆಗಳಲ್ಲಿ ಗುರುಪೂರ್ಣಿಮೆಯನ್ನುಆಯೋಜಿಸುವುದು

‘ಸಾಧಕರ ಜೀವನದಲ್ಲಿ ಶ್ರೀ ಗುರುಗಳ ಅಪಾರ ಮಹತ್ವವಿದೆ. ಸಾಧಕರಲ್ಲಿ ಈ ಅರಿವು ಮತ್ತು ಅಂತಹ ಭಾವವಿರುವುದರಿಂದ ಗುರುಪೂರ್ಣಿಮೆ ಸಮಯದಲ್ಲಿ ಸಾಧಕರು ಸಮರ್ಪಣಾಭಾವದಿಂದ ಸೇವೆಯನ್ನು ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ಮೊದಲು ೩-೪ ತಿಂಗಳು ಈ ಸೇವೆಗಳು ಲಭ್ಯವಿರುತ್ತವೆ. ‘ಸಾಧಕರಿಗೆ ಅವರಿದ್ದಲ್ಲಿಯೇ ಆಧ್ಯಾತ್ಮಿಕ ಸ್ತರದಲ್ಲಿ ಗುರುಪೂರ್ಣಿಮೆಯಿಂದ ಪೂರ್ಣ ಲಾಭವಾಗಬೇಕೆಂದು ೧೦೦ ಕ್ಕೂ ಹೆಚ್ಚು ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಇದು ಸಾಧಕರ ಮೇಲೆ ಅವರು ಮಾಡಿದ ಬಹುದೊಡ್ಡ ಕೃಪೆಯಾಗಿದೆ. ಇದರಿಂದ ಹೊಸ ಸಾಧಕನಿಗೂ ಜಿಲ್ಲೆಯಲ್ಲಿ ಅನೇಕ ಸ್ಥಳಗಳಲ್ಲಿ ನಡೆಯುವ ಗುರುಪೂರ್ಣಿಮಾ ಮಹೋತ್ಸವದಲ್ಲಿ ಸಹಜವಾಗಿ ಭಾಗವಹಿಸಲು ಸಾಧ್ಯವಾಗಿ ಅವನಿಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಹಳ ಅವಕಾಶ ಸಿಗುತ್ತದೆ.

೧೧ ಅ. ‘ಭಾವಪೂರ್ಣ ಮತ್ತು ಪರಿಪೂರ್ಣವಾಗಿ ಗುರುಪೂರ್ಣಿಮೆಯ ಸೇವೆಯಾಗಲು ಪರಾತ್ಪರ ಗುರು ಡಾ. ಆಠವಲೆಯವರು ಹಾಕಿದ ಕೆಲವು ಕಾರ್ಯಪದ್ಧತಿಗಳು

೧. ಗುರುಪೂರ್ಣಿಮೆಯ ವಾತಾವರಣವನ್ನು ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಅನೇಕ ಶಿಬಿರಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಗುರುಪೂರ್ಣಿಮೆಯ ಎಲ್ಲ ಸೇವೆಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ‘ಆ ಸೇವೆಗಳನ್ನು ಹೇಗೆ ಮಾಡಬೇಕು ?’, ಎಂಬುದನ್ನು ಕಲಿಸಲಾಗುತ್ತದೆ.

೨. ಗುರುಪೂರ್ಣಿಮೆಯ ಸೇವೆಯನ್ನು ಮಾಡುವ ಪ್ರತಿಯೊಬ್ಬ ಸಾಧಕನಿಂದ ಸೇವೆಯ ಆಯೋಜನೆ ಮತ್ತು ಆಳವಾಗಿ ಚಿಂತನೆ ಮಾಡಿಸಿಕೊಳ್ಳಲಾಗುತ್ತದೆ.

೩. ಗುರುಪೂರ್ಣಿಮೆಯ ದೃಷ್ಟಿಯಿಂದ ಈ ಸೇವೆಯ ಮಾಧ್ಯಮದಿಂದ ಸಾಧಕರು ‘ಸಾಧನೆಯ ಯಾವ ಧ್ಯೇಯವನ್ನು ಇಟ್ಟುಕೊಳ್ಳುವರು ?’, ಎಂಬುದನ್ನು ನಿಶ್ಚಿತಪಡಿಸಿಕೊಳ್ಳಲಾಗುತ್ತದೆ, ಉದಾ. ‘ಈ ಸೇವೆಯ ಮಾಧ್ಯಮದಿಂದ ‘ಸ್ವಭಾವದೋಷ ಅಥವಾ ಅಹಂನ ಯಾವ ಲಕ್ಷಣಗಳನ್ನು ಕಡಿಮೆ ಮಾಡಲು ಗಮನ ನೀಡುವರು ?’, ‘ಯಾವ ಗುಣವನ್ನು ಹೆಚ್ಚಿಸುವರು ?’, ಹಾಗೆಯೇ ಭಾವಜಾಗೃತಿಗಾಗಿ ‘ಸೇವೆ ಮಾಡುವಾಗ ಯಾವ ಭಾವ ಇಟ್ಟುಕೊಳ್ಳುವರು ?’ ಇತ್ಯಾದಿ

೪. ‘ಪೂಜೆಗೆ ಕುಳಿತುಕೊಳ್ಳುವ ಸಾಧಕರು, ಪೌರೋಹಿತ್ಯ ಮಾಡುವ ಸಾಧಕರು, ಭಾಷಣಕಾರರಾಗಿ ಮಾತನಾಡುವ ಸಾಧಕರು, ನಿವೇದಕ ಸಾಧಕರು ಇತ್ಯಾದಿ ಸಾಧಕರ ಸೇವೆಯು ಭಾವಪೂರ್ಣ ಮತ್ತು ಪರಿಪೂರ್ಣವಾಗಿ ಆಗಬೇಕು’, ಎಂಬುದಕ್ಕಾಗಿ ಅವರ ಸೇವೆಯ ಪೂರ್ವಾಭ್ಯಾಸ ತೆಗೆದುಕೊಳ್ಳಲಾಗುತ್ತದೆ.

೫. ‘ಪ್ರತ್ಯಕ್ಷ ಗುರುಪೂರ್ಣಿಮೆಯು ದೋಷರಹಿತ ಮತ್ತು ಭಾವಪೂರ್ಣವಾಗಿ ಗುರುಪೂರ್ಣಿಮೆಯ ಸಂಪೂರ್ಣ ಲಾಭ ಸಾಧಕರಿಗೆ ಆಗಬೇಕು’, ಎಂಬುದಕ್ಕಾಗಿ ಗುರುಪೂರ್ಣಿಮೆಯ ಒಂದು ವಾರದ ಮೊದಲು ‘ಮಾದರಿ ಗುರುಪೂರ್ಣಿಮೆ’ಯ ತಾಲೀಮು ನಡೆಸಲಾಗುತ್ತದೆ. ಇದರಲ್ಲಿ ನಿಜವಾದ ಗುರುಪೂರ್ಣಿಮೆಯಂತೆ ಸಿದ್ಧತೆಯನ್ನು ಮಾಡಿ ಆ ದಿನದಂತೆ ಎಲ್ಲ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಮತ್ತು ‘ಯಾವ ತಪ್ಪುಗಳಾಗುತ್ತವೆ ?’, ಎಂಬುದನ್ನು ನೋಡಿ ಅದರಲ್ಲಿ ಸುಧಾರಣೆ ಮಾಡಲಾಗುತ್ತದೆ.

ಇದರಿಂದ ‘ಶ್ರೀಗುರುಗಳಿಗೆ ಅಪೇಕ್ಷಿತವಾದ ಭಾವಪೂರ್ಣ ಮತ್ತು ಪರಿಪೂರ್ಣ ಸೇವೆಯನ್ನು ಹೇಗೆ ಮಾಡಬೇಕು ?’, ಎಂಬ ಸಂಸ್ಕಾರವನ್ನು ಸಾಧಕರ ಮನಸ್ಸಿನಲ್ಲಿ ಬಿಂಬಿಸಲಾಗುತ್ತದೆ. ಸನಾತನ ಸಂಸ್ಥೆಯಿಂದ ತೆಗೆದುಕೊಳ್ಳಲಾಗುವ ಪ್ರತಿಯೊಂದು ಕಾರ್ಯಕ್ರಮವನ್ನು ಇದೇ ರೀತಿ ಆಯೋಜನೆ ಮಾಡಲಾಗುತ್ತದೆ.

೧೨. ಪರಾತ್ಪರ ಗುರು ಡಾ. ಆಠವಲೆಯವರು ‘ಸನಾತನ ಪ್ರಭಾತ’ ವರ್ತಮಾನಪತ್ರಿಕೆಯನ್ನು ಆರಂಭಿಸಿ ಆ ಮೂಲಕ ಮಾರ್ಗದರ್ಶನ ಮಾಡುವುದು

ಪ.ಪೂ. ಡಾಕ್ಟರರು ಬಹಳ ದೂರದೃಷ್ಟಿಯಿಂದ ಮರಾಠಿ, ಹಿಂದಿ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ‘ಸನಾತನ ಪ್ರಭಾತ’ ವರ್ತಮಾನಪತ್ರಿಕೆಗಳನ್ನು ಆರಂಭಿಸಿದ್ದಾರೆ. ಈ ಮೂಲಕ ಹಿಂದುತ್ವನಿಷ್ಠರಿಗೆ ‘ಹಿಂದೂ ರಾಷ್ಟ್ರ’ದ ಬಗ್ಗೆ ಮತ್ತು ಸಾಧಕರಿಗೆ ಸಾಧನೆಯ ಬಗ್ಗೆ ಅಮೂಲ್ಯ ಮಾರ್ಗದರ್ಶನ ಮಾಡಲಾಗುತ್ತದೆ. ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ. ಆದುದರಿಂದ ಸಾಧನೆಯನ್ನು ಮಾಡುವಾಗ ಸಾಧಕರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಪ್ರತಿ ಬಾರಿ ಯಾರಿಗಾದರೂ ಆ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದೇನಿಲ್ಲ; ಆದರೆ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಸಾಧಕರ ಇಂತಹ ಸಂದೇಹಗಳ ನಿವಾರಣೆಯಾಗುತ್ತದೆ. ಹಾಗೆಯೇ ಅವರಿಗೆ ದೈನಂದಿನ ಸಾಧನೆಯ ಬಗ್ಗೆ ನಿರಂತರ ಮಾರ್ಗದರ್ಶನವೂ ಸಿಗುತ್ತದೆ. ‘ಸನಾತನ ಪ್ರಭಾತ’ವನ್ನು ನಿಯಮಿತವಾಗಿ ಓದುವುದು ಪ್ರತಿದಿನದ ಅಮೂಲ್ಯ ಸತ್ಸಂಗವೇ ಆಗಿದೆ. ಸಾಧನೆಯಲ್ಲಿ ಸಾತತ್ಯ ಉಳಿಯಲು ಅದರಿಂದಾಗುವ ಲಾಭವನ್ನು ಇಲ್ಲಿ ಕೊಡಲಾಗಿದೆ.

ಅ. ಸಂತರ ಮತ್ತು ಸಾಧಕರ ಸಾಧನಾಪ್ರವಾಸದ ಲೇಖನಗಳನ್ನು ಓದಿ ಸಾಧಕರಿಗೆ ಸಾಧನೆಗಾಗಿ ಬಹಳ ಪ್ರೇರಣೆ ಸಿಗುತ್ತದೆ. ‘ಎಷ್ಟೋ ಸಾಧಕರು ಬಹಳ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಜಿಗುಟುತನದಿಂದ ಮತ್ತು ತಳಮಳದಿಂದ ಸಾಧನೆಯನ್ನು ಮಾಡುತ್ತಾರೆ’, ಎಂಬುದನ್ನು ಓದಿ ಸಾಧಕರಿಗೆ ‘ನಾವೂ ಇಂತಹ ಪ್ರಸಂಗವನ್ನು ಹೇಗೆ ಎದುರಿಸಬಹುದು ?’ ಎಂಬುದು ಗಮನಕ್ಕೆ ಬರುತ್ತದೆ. ಇದರಿಂದ ಸಾಧಕರ ಸಾಧನೆಯ ತಳಮಳ ಹೆಚ್ಚಾಗುತ್ತದೆ.

ಆ. ನಿಯಮಿತ ಸಾಧನೆಯ ಬಗ್ಗೆ ಪ.ಪೂ. ಗುರುದೇವರು ಬರೆದ ಚೌಕಟ್ಟುಗಳಲ್ಲಿ ಸಾಧನೆಯ ಬಗ್ಗೆ ಹೊಸ ಅಂಶಗಳು ಕಲಿಯಲು ಸಿಗುತ್ತವೆ. ಈ ಚೌಕಟ್ಟುಗಳಿಂದ ನೇರ ಪ.ಪೂ. ಗುರುದೇವರ ಮಾರ್ಗದರ್ಶನ ಸಿಗುತ್ತಿರುವುದರಿಂದ ಆ ಅಂಶಗಳು ಸಾಧಕರ ಅಂತರ್ಮನದವರೆಗೆ ತಲುಪುತ್ತವೆ.

ಇ. ಸಾಧಕರಿಗೆ ಬರುವ ಅನುಭೂತಿಗಳಿಂದ ಇತರ ಸಾಧಕರಿಗೂ ಬಹಳಷ್ಟು ವಿಷಯಗಳು ಕಲಿಯಲು ಸಿಗುತ್ತವೆ. ಆದುದರಿಂದ ಅವರ ಗುರು ಮತ್ತು ದೇವರ ಮೇಲಿನ ಶ್ರದ್ಧೆ ಹೆಚ್ಚಾಗುತ್ತದೆ.

ಈ. ಸಾಧಕರು ಮಾಡುತ್ತಿರುವ ವಿವಿಧ ಮತ್ತು ವೈಶಿಷ್ಟ್ಯಪೂರ್ಣ ಭಾವಜಾಗೃತಿಯ ಮತ್ತು ‘ಸ್ವಭಾವದೋಷ ಮತ್ತು ಅಹಂ’ ನಿರ್ಮೂಲನೆಯ ಪ್ರಯತ್ನಗಳನ್ನು ಓದಿ ‘ನಾವೂ ಆ ರೀತಿ ಪ್ರಯತ್ನಿಸಬೇಕು’, ಎಂಬ ತೀವ್ರ ಭಾವನೆ ಸಾಧಕರ ಮನಸ್ಸಿನಲ್ಲಿ ಮೂಡುತ್ತದೆ ಮತ್ತು ಅವರಿಂದ ಆ ರೀತಿ ಆಚರಣೆಯಾಗುತ್ತದೆ.

ಉ. ಕೆಲವು ಸಾಧಕರ ಲೇಖನದಿಂದ ಅವರಿಗೆ ‘ಇತರ ಸಾಧಕರು, ಪ್ರಸಂಗ, ಪ್ರಾಣಿ, ಪಕ್ಷಿ, ಹೂವುಗಳು ಇತ್ಯಾದಿ ಸಜೀವ ಅಥವಾ ಪಂಖಾ, ಪರ್ವತ, ಉಪಕರಣಗಳು ಇತ್ಯಾದಿ ನಿರ್ಜೀವ ವಸ್ತುಗಳಿಂದ ಏನು ಕಲಿಯಲು ಸಿಕ್ಕಿತು ?’, ಇವುಗಳ ಬಗ್ಗೆ ಓದಲು ಸಿಗುತ್ತದೆ. ಇದರಿಂದ ‘ನಾವೂ ಸಜೀವ-ನಿರ್ಜೀವ ಇಂತಹ ಎಲ್ಲವುಗಳಿಂದ ಕಲಿಯಬೇಕು’, ಎಂಬ ಸ್ಫೂರ್ತಿ ಸಾಧಕರಲ್ಲಿ ಜಾಗೃತವಾಗುತ್ತದೆ.

ಊ. ‘ಸನಾತನ ಪ್ರಭಾತ’ದಲ್ಲಿ ನಿಯಮಿತವಾಗಿ ಅನೇಕ ಸಂತರ ಚೈತನ್ಯದಾಯಕ ಮಾರ್ಗದರ್ಶನ ಸಿಗುತ್ತದೆ. ಅದರಲ್ಲಿಯೂ ಸಾಧಕರು ಮತ್ತು ವಾಚಕರ ಮನಸ್ಸಿನಲ್ಲಿನ ಅನೇಕ ಸಂದೇಹಗಳ ನಿವಾರಣೆಯಾಗುತ್ತದೆ.

ಎ. ‘ಸನಾತನ ಪ್ರಭಾತ’ದ ಮಾಧ್ಯಮದಿಂದ ‘ದೈನಂದಿನ ಜೀವನ ದಲ್ಲಿ ಧರ್ಮಾಚರಣೆಯನ್ನು ಹೇಗೆ ಮಾಡಬೇಕು ?’, ‘ವರ್ಷದ ಹಬ್ಬ, ಉತ್ಸವಗಳು ಮತ್ತು ವ್ರತಗಳನ್ನು ಹೇಗೆ ಆಚರಿಸಬೇಕು ?’, ಎಂಬ ಬಗ್ಗೆ ಅತ್ಯಂತ ಸರಳ ಭಾಷೆಯಲ್ಲಿ ಮಾರ್ಗದರ್ಶನ ಸಿಗುತ್ತಿರುವುದರಿಂದ ಧರ್ಮಾಚರಣೆಯ ಮೂಲಕವೂ ಸಾಧಕರು ಮತ್ತು ವಾಚಕರ ಸಾಧನೆ ಮುಂದುವರಿಯುತ್ತದೆ. ‘ಧರ್ಮಾಚರಣೆ ಮಾಡದಿರುವುದರಿಂದ ಸಾಧನೆಯಲ್ಲಿ ಹಾನಿಯಾಗುತ್ತದೆ’, ಎಂದು ತಿಳಿದ ಕಾರಣ ಧರ್ಮಾಚರಣೆ ಮಾಡಿ ಸಾಧಕರಿಗೆ ಸಾಧನೆಯಲ್ಲಿನ ಹಾನಿಯನ್ನು ತಪ್ಪಿಸಲು ಸಾಧ್ಯವಾಯಿತು.

೧೩. ಸಾಧಕರ ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುವುದು

ಪ.ಪೂ. ಡಾಕ್ಟರರು ಸನಾತನ ಸಂಸ್ಥೆಯಲ್ಲಿ ಸಾಧಕರ ಸಾಧನೆಯ ನಿಯಮಿತ ವರದಿಯನ್ನು (ಟಿಪ್ಪಣಿ ೧) ತೆಗೆದುಕೊಳ್ಳುವ ಕಾರ್ಯ ಪದ್ಧತಿಯನ್ನು ಆರಂಭಿಸಿದ್ದಾರೆ. ಇದರ ಅಂತರ್ಗತ ೪ ರಿಂದ ೮ ಸಾಧಕರ ಗುಂಪನ್ನು ತಯಾರಿಸಿ ಆ ಗುಂಪಿನ ವರದಿಯನ್ನು ಓರ್ವ ಸಾಧಕರು ನಿಯಮಿತವಾಗಿ ತೆಗೆದುಕೊಳ್ಳುತ್ತಾರೆ. ಈ ವರದಿಯಲ್ಲಿ ‘ಸಾಧಕರು ಸಾಧನೆಯ ಪ್ರಯತ್ನವನ್ನು ಹೇಗೆ ಮಾಡುತ್ತಿದ್ದಾರೆ ?’, ಎಂಬುದರ ವರದಿಯನ್ನು ತೆಗೆದುಕೊಳ್ಳುವುದರ ಜೊತೆಗೆ ‘ಸಾಧಕರಿಂದ ದಿನವಿಡಿ ಆಗುವ ತಪ್ಪುಗಳು, ಅದಕ್ಕೆ ಸಾಧಕರು ತೆಗೆದುಕೊಳ್ಳುತ್ತಿರುವ ದೃಷ್ಟಿಕೋನ ಅಥವಾ ಸೂಚನೆಯು ಯೋಗ್ಯವಾಗಿದೆಯೇ ?’, ಎಂಬುದನ್ನೂ ನೋಡಲಾಗುತ್ತದೆ. ಮನೆಯಲ್ಲಿ, ಕಚೇರಿಯಲ್ಲಿ, ಸಂಬಂಧಿಕರು ಅಥವಾ ಸ್ನೇಹಿತರೊಂದಿಗೆ ವರ್ತಿಸುವಾಗ-ಮಾತನಾಡುವಾಗ ಘಟಿಸುವ ಪ್ರಸಂಗಗಳಲ್ಲಿ ಯಾವ ಸ್ವಭಾವದೋಷಗಳು ಪ್ರಕಟವಾಗುತ್ತವೆ ?, ಅವುಗಳನ್ನು ಹೇಗೆ ಜಯಿಸಬೇಕು ?, ಯೋಗ್ಯ ಕೃತಿ ಅಥವಾ ಯೋಗ್ಯ ವಿಚಾರ ಹೇಗಿರಬೇಕು ?, ದೈನಂದಿನ ಜೀವನದಲ್ಲಿ ಮಾಡುತ್ತಿರುವ ಅನೇಕ ಕೃತಿಗಳನ್ನು ಸಾಧನೆಯೆಂದು ಹೇಗೆ ಮಾಡಬೇಕು ?’, ಈ ಬಗ್ಗೆ ಮಾರ್ಗದರ್ಶನ ಮಾಡಲಾಗುತ್ತದೆ.

ಸಾಧಕನಿಗೆ ವರದಿಸೇವಕರು ಮತ್ತು ವರದಿಯ ಗುಂಪಿನಲ್ಲಿರುವ ಇತರ ಸಾಧಕರಿಂದ ‘ಯಾವುದಾದರೊಂದು ಕೃತಿಯನ್ನು ಮಾಡುವಾಗ ಯಾವ ರೀತಿ ಭಾವವಿಟ್ಟುಕೊಳ್ಳಬೇಕು ?, ಈಶ್ವರನೊಂದಿಗೆ ನಿರಂತರವಾಗಿ ಅನುಸಂಧಾನದಲ್ಲಿ ಹೇಗಿರಬೇಕು ?’, ಇವುಗಳಂತಹ ಅನೇಕ ವಿಷಯಗಳು ಕಲಿಯಲು ಸಿಗುತ್ತವೆ. ಈ ವರದಿಯ ಮಾಧ್ಯಮದಿಂದ ಸಾಧಕನಿಗೆ ತನ್ನ ಸಾಧನೆ ಸರಿಯಾಗಿ ಆಗುತ್ತಿದೆಯೇ ?, ಮುಂದಿನ ಪ್ರಯತ್ನವನ್ನು ಹೇಗೆ ಮಾಡಬೇಕು ? ಎಂದು ತಿಳಿಯಲು ಸಹಾಯವಾಗುತ್ತದೆ.

(ಟಿಪ್ಪಣಿ ೧ – ಸಾಧಕರು ಮಾಡುತ್ತಿರುವ ನಾಮಜಪ, ಪ್ರಾರ್ಥನೆ, ಭಾವಜಾಗೃತಿಯ ಪ್ರಯತ್ನ, ಕೃತಜ್ಞತೆ, ‘ಸ್ವಭಾವದೋಷ ಮತ್ತು ಅಹಂ’ಇವುಗಳ ನಿರ್ಮೂಲನೆಗಾಗಿ ಮಾಡುತ್ತಿರುವ ಪ್ರಯತ್ನ ಇವುಗಳ ಬಗ್ಗೆ ತಿಳಿದುಕೊಂಡು ಆವಶ್ಯಕವಿದ್ದಲ್ಲಿ ಸಾಧಕರಿಗೆ ದಿಶೆಯನ್ನು ನೀಡುವುದು)

೧೪. ಅದ್ವಿತೀಯವಾದ ‘ಸ್ವಭಾವದೋಷ ಮತ್ತು ಅಹಂ’ನಿರ್ಮೂಲನೆಯ ಪ್ರಕ್ರಿಯೆಯನ್ನು ಕಲಿಸಿದುದರಿಂದ ಸಾಧಕರ ಆಧ್ಯಾತ್ಮಿಕ ಉನ್ನತಿಯು ವೇಗದಿಂದಾಗುತ್ತಿರುವುದು

ಮೇಲಿನ ಎಲ್ಲ ಕಾರ್ಯಪದ್ಧತಿಗಳ ಜೊತೆಗೆ ಪ.ಪೂ. ಡಾಕ್ಟರರು ಸಾಧಕರಿಗೆ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ತಮ್ಮಲ್ಲಿರುವ ‘ಸ್ವಭಾವದೋಷ ಮತ್ತು ಅಹಂ’ ಇವುಗಳ ನಿರ್ಮೂಲನೆಯ ಪ್ರಕ್ರಿಯೆಯನ್ನು (ಟಿಪ್ಪಣಿ ೨) ಮಾಡಲು ಕಲಿಸಿದರು; ಏಕೆಂದರೆ ಇತರ ಯುಗಗಳಿಗೆ ಹೋಲಿಸಿದರೆ ಕಲಿಯುಗದಲ್ಲಿ ಮನುಷ್ಯನಲ್ಲಿ ಸಾಕಷ್ಟು ‘ಸ್ವಭಾವದೋಷ ಮತ್ತು ಅಹಂಕಾರ’ದ ಲಕ್ಷಣಗಳಿವೆ. ಎಲ್ಲಿಯವರೆಗೆ ಸಾಧಕರಿಂದ ‘ಸ್ವಭಾವದೋಷ ಮತ್ತು ಅಹಂ’ನ ನಿರ್ಮೂಲನೆಯ ಪ್ರಯತ್ನ ಆಗುವುದಿಲ್ಲವೋ, ಅಲ್ಲಿಯವರೆಗೆ ಅವರಿಂದ ಒಳ್ಳೆಯ ರೀತಿಯಲ್ಲಿ ಸಾಧನೆಯಾಗುವುದಿಲ್ಲ. ಹೆಚ್ಚಿನ ಬಾರಿ ‘ಸ್ವಭಾವದೋಷಗಳು ಮತ್ತು ಅಹಂ’ ಇವುಗಳಿಂದಾಗಿ ಸಾಧಕರಿಂದ ತಪ್ಪುಗಳಾಗುತ್ತವೆ, ಆ ತಪ್ಪುಗಳನ್ನು ಸರಿಪಡಿಸುವಲ್ಲಿ ಅವರ ಸಾಧನೆ ಖರ್ಚಾಗುತ್ತದೆ. ಸಾಧಕರು ತಮ್ಮಲ್ಲಿನ ‘ಸ್ವಭಾವದೋಷ ಮತ್ತು ಅಹಂ’ ಅನ್ನು ದೂರ ಮಾಡಿದಾಗ ಅವರ ಸಾಧನೆಯ ಹಾನಿ ತಡೆಗಟ್ಟಲ್ಪಟ್ಟು ಆಧ್ಯಾತ್ಮಿಕ ಪ್ರಗತಿ ಸಹಜವಾಗಿ ಆಗತೊಡಗುತ್ತದೆ. ಇದನ್ನು ಗಮನದಲ್ಲಿಟ್ಟು ಪ.ಪೂ. ಡಾಕ್ಟರರು ‘ಗುರುಕೃಪಾಯೋಗಾ’ನುಸಾರ ಮಾಡಬೇಕಾದ ಸಾಧನೆಯಲ್ಲಿ ‘ಸ್ವಭಾವದೋಷ ಮತ್ತು ಅಹಂ’ನ ನಿರ್ಮೂಲನೆಗೆ ಶೇ. ೬೦ ರಷ್ಟು ಮಹತ್ವವನ್ನು ನೀಡಿದ್ದಾರೆ; ಆದುದರಿಂದ ‘ಶೀಘ್ರ ಆಧ್ಯಾತ್ಮಿಕ ಉನ್ನತಿಯ ಮಾರ್ಗವು ‘ಸ್ವಭಾವದೋಷ ಮತ್ತು ಅಹಂ’ನ ನಿರ್ಮೂಲನೆಯ ಪ್ರಕ್ರಿಯೆಯ ಮೂಲಕ ಹೋಗುತ್ತದೆ ಎಂದು ಹೇಳಬೇಕೆನಿಸುತ್ತದೆ.

(ಟಿಪ್ಪಣಿ ೨ – ದಿನವಿಡಿ ನಮ್ಮಿಂದಾದ ತಪ್ಪುಗಳನ್ನು ಪುಸ್ತಕದಲ್ಲಿ ಬರೆದು ಅದರ ಮುಂದೆ ಅದು ಯಾವ ‘ಸ್ವಭಾವದೋಷ ಅಥವಾ ಅಹಂ’ನಿಂದಾಗಿ ಆಗಿದೆ, ಎಂದು ಬರೆಯಬೇಕು. ಅದರ ಮುಂದೆ ಯೋಗ್ಯ ದೃಷ್ಟಿಕೋನದ ಸೂಚನೆಯನ್ನು ಬರೆದು ‘ಅಂತಹ ತಪ್ಪು ಪುನಃ ಆಗಬಾರದು’, ಎಂಬುದಕ್ಕಾಗಿ ಆ ಸ್ವಯಂಸೂಚನೆಯನ್ನು ದಿನದಲ್ಲಿ ೧೦-೧೨ ಬಾರಿ ಮನಸ್ಸಿಗೆ ನೀಡಬೇಕು)

೧೭ ಅ. ‘ಸ್ವಭಾವದೋಷ ಮತ್ತು ಅಹಂ’ ನಿರ್ಮೂಲನೆಯ ಪ್ರಕ್ರಿಯೆ’ಯನ್ನು ಕಲಿಸುವ ಲೇಖನಮಾಲೆ ಮತ್ತು ಗ್ರಂಥಗಳನ್ನು ಪ್ರಕಾಶಿಸುವುದು : ‘ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರಿಂದ ‘ಸ್ವಭಾವದೋಷಗಳು ಮತ್ತು ಅಹಂ’ ಇವುಗಳಿಂದಾಗಿ ಯಾವ ರೀತಿಯ ತಪ್ಪುಗಳಾಗುತ್ತವೆ ಮತ್ತು ಅವುಗಳನ್ನು ಹೇಗೆ ಜಯಿಸಬೇಕು ?, ಎಂಬ ಬಗ್ಗೆ ಸಾಧಕರಿಗೆ ಒಳ್ಳೆಯ ರೀತಿಯಲ್ಲಿ ಅರ್ಥವಾಗಬೇಕೆಂದು ಪ.ಪೂ ಡಾಕ್ಟರರು ‘ಸ್ವಭಾವದೋಷ ಮತ್ತು ಅಹಂ’ನ ನಿರ್ಮೂಲನೆಯ ಪ್ರಕ್ರಿಯೆಯನ್ನು ಕಲಿಸುವ ಲೇಖನಮಾಲೆಯನ್ನು ‘ಸನಾತನ ಪ್ರಭಾತ’ ಪತ್ರಿಕೆಗಳಲ್ಲಿ ಆರಂಭಿಸಿದರು ಮತ್ತು ಈ ಬಗೆಗಿನ ವಿಸ್ತಾರ ಮಾಹಿತಿಯನ್ನು ನೀಡುವ ಗ್ರಂಥವನ್ನೂ ಪ್ರಕಾಶಿಸಿದರು.

೧೭ ಆ. ‘ಸ್ವಭಾವದೋಷ ಮತ್ತು ಅಹಂ’ ಇವುಗಳ ನಿರ್ಮೂಲನೆಗಾಗಿ ಸತ್ಸಂಗವನ್ನು ಆರಂಭಿಸುವುದು : ‘ಸ್ವಭಾವದೋಷ ಮತ್ತು ಅಹಂ’ನ ನಿರ್ಮೂಲನಾ ಸತ್ಸಂಗಗಳಲ್ಲಿ ತಪ್ಪುಗಳ ಮೂಲದಲ್ಲಿರುವ ‘ಸ್ವಭಾವದೋಷ ಮತ್ತು ಅಹಂ’ ಇವುಗಳ ಲಕ್ಷಣಗಳನ್ನು ಹೇಗೆ ಗುರುತಿಸಬೇಕು ? ಮತ್ತು ಅವುಗಳನ್ನು ಹೇಗೆ ಕಡಿಮೆ ಮಾಡಬೇಕು ?, ಎಂದು ಅತ್ಯಂತ ವೈಜ್ಞಾನಿಕ ಪದ್ಧತಿಯಲ್ಲಿ ಕಲಿಸಲಾಗುತ್ತದೆ.

೧೭ ಇ. ‘ಸ್ವಭಾವದೋಷ ಮತ್ತು ಅಹಂ’ ಇವುಗಳಿಂದ ಸಾಧನೆಯಲ್ಲಿ ಬರುವ ಅಡಚಣೆಗಳು ಮತ್ತು ಅವುಗಳನ್ನು ದೂರ ಮಾಡಿದಾಗ ಆಗುವ ಲಾಭಗಳು !

೧. ನಾಮಜಪವನ್ನು ಮಾಡುವಾಗ ಮನಸ್ಸಿನಲ್ಲಿ ವಿಚಾರಗಳು ಬರುತ್ತವೆ ಮತ್ತು ನಾಮಜಪವು ಏಕಾಗ್ರತೆಯಿಂದ ನಡೆಯುವುದಿಲ್ಲ.

೨. ಭಾವಜಾಗೃತಿಯಾಗುವಲ್ಲಿ ಅಡಚಣೆಗಳು ಬರುತ್ತವೆ. ಮನಸ್ಸಿನಲ್ಲಿ ಬರುವ ವಿಚಾರಗಳಿಂದಾಗಿ ಭಾವವು ಹೆಚ್ಚು ಸಮಯ ಉಳಿಯುವುದಿಲ್ಲ.

೩. ಪರಿಪೂರ್ಣ ಸೇವೆ ಮಾಡದ್ದರಿಂದ ಅನೇಕ ತಪ್ಪುಗಳಾಗುತ್ತವೆ.

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತಾಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ !’

ಇದಂ ನ ಮಮ | (ಈ ಬರವಣಿಗೆ ನನ್ನದಲ್ಲ !)

– (ಸದ್ಗುರು) ರಾಜೇಂದ್ರ ಶಿಂದೆ, ದೇವದ ಆಶ್ರಮ, ಪನವೇಲ. (೧೭.೪.೨೦೨೪)