ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವ ಭಾವಾವಸ್ಥೆಯಲ್ಲಿರುವ ಹಾಗೂ ಅಹಂ ಇಲ್ಲದಿರುವ, ಸಾಧಕಿಯರೆಂದರೆ ಅವರ ಶಸ್ತ್ರಗಳೇ ಆಗಿದ್ದಾರೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ದೇವರು ಸೂಕ್ಷ್ಮದಲ್ಲಿನ ವಿಷಯ ತಿಳಿಯುವ ಬಹಳಷ್ಟು ಸಾಧಕರನ್ನು ನೀಡುವುದು ಮತ್ತು ಎಲ್ಲರ ಉತ್ತರಗಳು ಒಂದೇ ಆಗಿರುವುದು 

‘ಈಶ್ವರನು ನಮಗೆ ಸೂಕ್ಷ್ಮದಲ್ಲಿನ ಬಹಳಷ್ಟು ವಿಷಯಗಳು ತಿಳಿಯುವ ಸಾಧಕರನ್ನು ಕೊಟ್ಟಿದ್ದನು. ಕು. ಕವಿತಾ ರಾಠೀವಡೆಕರ್‌ (ಈಗಿನ ಸೌ. ಕವಿತಾ ಕಡಣೆ, ಆಧ್ಯಾತ್ಮಿಕ ಮಟ್ಟ ಶೇ. ೬೬), ಕು. ಸುಷ್ಮಾ ಪೆಡ್ಣೆಕರ್‌ (ಈಗಿನ ಸೌ. ಸುಷ್ಮಾ ನಾಯಿಕ್, ಆಧ್ಯಾತ್ಮಿಕ ಮಟ್ಟ ಶೇ. ೬೧), ಕು. ರಸಿಕಾ ಪರಬ್‌ (ಈಗಿನ ಸೌ. ರಸಿಕಾ ಠಾಕೂರ್‌). ಸೌ. ಕವಿತಾ ಮತ್ತು ಸೌ. ಸುಷ್ಮಾ ಇವರಲ್ಲಿ ಒಳ್ಳೆಯ ಸೂಕ್ಷ್ಮದೃಷ್ಟಿ ಇತ್ತು. ಬಹಳಷ್ಟು ಸಲ ಪರೀಕ್ಷಣೆ ಮಾಡುವಾಗ ಅವರಿಗೆ ಸೂಕ್ಷ್ಮದಲ್ಲಿನ ವಿಷಯಗಳು ಕಾಣಿಸುತ್ತಿದ್ದವು, ನನಗೆ ಕೇವಲ ಅರಿವಾಗುತ್ತಿತ್ತು; ಆದರೆ ನಮ್ಮ ಉತ್ತರಗಳು ಹೆಚ್ಚು ಕಡಿಮೆ ಒಂದೇ ಆಗಿರುತ್ತಿದ್ದವು.

೨. ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳಲು ಮಿತಿ ಇಲ್ಲದಿರುವುದರಿಂದ ಪರಾತ್ಪರ ಗುರು ಡಾಕ್ಟರರು ಆರಂಭದಲ್ಲಿ ಸಮೀಪದ ಘಟನೆಗಳ ಮತ್ತು ನಂತರ ದೈವೀ ಶಕ್ತಿಯ ಸಹಾಯದಿಂದ ದೂರದಲ್ಲಿರುವ ಸ್ಥಾನಗಳ ಅಥವಾ ಘಟನೆಗಳ ಪರೀಕ್ಷಣೆ ಮಾಡಲು ಕಲಿಸುವುದು

ಒಮ್ಮೆ ಪರಾತ್ಪರ ಗುರು ಡಾಕ್ಟರರು ನಮಗೆ ಮುಂಬಯಿ ಮರಾಠಿ ಸಾಹಿತ್ಯ ಸಮ್ಮೇಳನದ ಸೂಕ್ಷ್ಮಪರೀಕ್ಷಣೆಯನ್ನು ಮಾಡಲು ಹೇಳಿದ್ದರು. ಆಗ ನಾವು ಈ ಪರೀಕ್ಷಣೆಯನ್ನು ಗೋವಾದಲ್ಲಿ ಕುಳಿತುಕೊಂಡು ಮಾಡಲಿಕ್ಕಿದ್ದೆವು. ಸೂಕ್ಷ್ಮವನ್ನು ತಿಳಿದುಕೊಳ್ಳಲು ಮಿತಿ ಇರುವುದಿಲ್ಲವೆಂಬುದನ್ನು ಪರಾತ್ಪರ ಗುರು ಡಾಕ್ಟರರು ನಮಗೆ ಈ ಪ್ರಸಂಗದಿಂದ ಕಲಿಸಿದರು. ಮೊದಲು ನಾವು ಗೋವಾದ ಆಶ್ರಮದಲ್ಲಿ ಕುಳಿತು ಗೋವಾದಲ್ಲಿನ ಸ್ಥಾನಗಳ ಪರೀಕ್ಷಣೆಯನ್ನು ಮಾಡುತ್ತಿದ್ದೆವು; ಆದರೆ ಪರಾತ್ಪರ ಗುರು ಡಾಕ್ಟರರು, ”ಸೂಕ್ಷ್ಮವೆಂದರೆ ಮಿತಿ ಇಲ್ಲದ ವಿಷಯವಾಗಿದೆ. ಮನಸ್ಸು ಒಂದು ಕ್ಷಣದಲ್ಲಿ ಎಲ್ಲಿಗೂ ಹೋಗಬಹುದು. ಮನಸ್ಸಿನ ವೇಗ ಬಹಳಷ್ಟಿರುತ್ತದೆ. ಈ ಸೂಕ್ಷ್ಮ ವೇಗವನ್ನು ಉಪಯೋಗಿಸಿ ನಾವು ದೇವರ ಸಹಾಯದಿಂದ ದೂರದಲ್ಲಿರುವ ಸ್ಥಳಗಳ ಅಥವಾ ಘಟನೆಗಳ ಪರೀಕ್ಷಣೆ ಮಾಡಬಹುದು. ನೀವು ಕೂಡ ಮಾಡಿ ನೋಡಿ” ಎಂದು ಹೇಳಿದರು. ಈ ರೀತಿ ಪರಾತ್ಪರ ಗುರು ಡಾಕ್ಟರರು ನಮ್ಮನ್ನು ಸೂಕ್ಷ್ಮ ಪರೀಕ್ಷಣೆಯ ಇನ್ನೂ ಮುಂದಿನ ಹಂತಕ್ಕೆ ಒಯ್ದರು ಹಾಗೂ ದೂರದಲ್ಲಿರುವ ಸ್ಥಾನಗಳ ಪರೀಕ್ಷಣೆ ಮಾಡಲು ಕಲಿಸಿದರು. ಈ ಘಟನೆಯಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಯಿತು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

೩. ಸಾಧಕರಿಗೆ ತೊಂದರೆಯಾಗಬಾರದೆಂದು ಮೊದಲೆ ಸೂಕ್ಷ್ಮದಿಂದ ತೊಂದರೆಯ ತೀವ್ರತೆಯನ್ನು ತಿಳಿದುಕೊಳ್ಳುವುದು ಹಾಗೂ ದೇವತೆಗಳು ಮತ್ತು ಅಸುರರ ನಡುವಿನ ಹೋರಾಟದ ಸೂಕ್ಷ್ಮ ಪರೀಕ್ಷಣೆ ಮಾಡುವುದು

ಕು. ಕವಿತಾ ರಾಠೀವಡೆಕರ್‌ (ಈಗಿನ ಸೌ. ಕವಿತಾ ಕಡಣೆ) ಇವರಿಗೆ ಸೂಕ್ಷ್ಮದಲ್ಲಿನ ವಿಷಯ ಬಹಳ ಚೆನ್ನಾಗಿ ತಿಳಿಯುತ್ತಿತ್ತು. ದೇವತೆಗಳು ಮತ್ತು ಅಸುರರ ನಡುವಿನ ಸೂಕ್ಷ್ಮದಲ್ಲಿನ ಯುದ್ಧದ ಅನೇಕ ಸೂಕ್ಷ್ಮ ಪರೀಕ್ಷಣೆಯನ್ನು ನಾವಿಬ್ಬರೂ ಮಾಡಿದೆವು. ಆಗ ಗುರುದೇವರು ನಮಗೆ, ”ಬೆಳಗ್ಗೆ ಸೇವೆಯನ್ನು ಆರಂಭಿಸುವ ಮೊದಲು ಇಂದು ಯಾವ ನಗರದ ಯಾವ ಸೇವಾಕೇಂದ್ರದಲ್ಲಿ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಾಗುವುದು, ಎಂಬುದನ್ನು ಮೊದಲೆ ಸೂಕ್ಷ್ಮದಿಂದ ತಿಳಿದುಕೊಂಡು ಮೊದಲೆ ಅಲ್ಲಿ ಆಧ್ಯಾತ್ಮಿಕ ಸ್ತರದ ಉಪಾಯ ಮಾಡಲು ಆರಂಭಿಸಿರಿ, ಅದರಿಂದ ಸಾಧಕರಿಗೆ ಹೆಚ್ಚು ತೊಂದರೆಗಳನ್ನು ಎದುರಿಸುವ ಆವಶ್ಯಕತೆ ಬೀಳಲಾರದು” ಎಂದು ಹೇಳುತ್ತಿದ್ದರು.

೪. ವಿವಿಧ ಸ್ಥಳಗಳಲ್ಲಾಗುವ ತೊಂದರೆಗಳಿಗೆ ಪರಾತ್ಪರ ಗುರು ಡಾಕ್ಟರರು ಗಂಟೆಗಟ್ಟಲೆ ನಾಮಜಪ ಮಾಡಿಸಿಕೊಂಡು ಒಂದೇ ಸ್ಥಳದಲ್ಲಿ ಕುಳಿತು ನಾಮಜಪ ಮಾಡುವ ಹಂತವನ್ನು ಪೂರ್ಣಗೊಳಿಸಿಕೊಳ್ಳುವುದು

ಅನೇಕ ಬಾರಿ ಮೀರಜ್‌ ಸೇವಾಕೇಂದ್ರದಿಂದ, ದೇವದ್‌ ಆಶ್ರಮದಿಂದ ನಮಗೆ ದೂರವಾಣಿ ಕರೆಗಳು ಬರುತ್ತಿದ್ದವು, ಅಲ್ಲಿ ಇಂತಿಂತಹ ಸಾಧಕರಿಗೆ ತೊಂದರೆ ಹೆಚ್ಚಾಗಿದೆ ಎಂದು ಹೇಳುತ್ತಿದ್ದರು. ಅನಂತರ ಗುರುದೇವರು ನಮ್ಮಿಬ್ಬರನ್ನೂ ಆ ಸಾಧಕರ ತೊಂದರೆ ನಿವಾರಣೆ ಮಾಡಲು ನಾಮಜಪ ಮಾಡಲು ತಿಳಿಸುತ್ತಿದ್ದರು. ಅನೇಕ ಬಾರಿ ವಿವಿಧ ಸ್ಥಳಗಳಲ್ಲಿ ಆಗುವ ಅನೇಕ ಘಟನೆಗಳಿಗೆ ನಾವು ದಿನವಿಡೀ ಸುಮಾರು ೧೧ ಗಂಟೆ ನಾಮಜಪ ಮಾಡುತ್ತಿದ್ದೆವು. ನಾನು ನನ್ನ ಜೀವನದಲ್ಲಿ ಇಷ್ಟು ನಾಮಜಪ ಯಾವತ್ತೂ ಮಾಡಿಲ್ಲ. ನನ್ನ ಒಂದೇ ಸ್ಥಳದಲ್ಲಿ ಕುಳಿತು ನಾಮಜಪ ಮಾಡುವ ಹಂತವನ್ನು ಗುರುದೇವರು ಅದೇ ಸಮಯದಲ್ಲಿ ಮಾಡಿಸಿಕೊಂಡಿರಬಹುದು ಎಂದು ನನಗನಿಸುತ್ತದೆ. ಅನಂತರ ನನಗೆ ಇಷ್ಟು ಗಂಟೆ ನಾಮಜಪ ಮಾಡುವ ಸಮಯ ಯಾವತ್ತೂ ಬಂದಿಲ್ಲ. ಆಗ ಗುರುದೇವರು ನಮಗೆ ‘ಒಂದೇ ಸ್ಥಳದಲ್ಲಿ ಕುಳಿತು ಬೇಸರ ಪಡದೆ ಗಂಟೆಗಟ್ಟಲೆ ಸೂಕ್ಷ್ಮ ಪರೀಕ್ಷಣೆ ಹೇಗೆ ಮಾಡುವುದು’, ಎಂಬುದರ ಶಕ್ತಿಯನ್ನು ಕೊಟ್ಟಿರುವುದರಿಂದ ಅದು ಸಾಧ್ಯವಾಯಿತು. ಸಾಮಾನ್ಯವಾಗಿ ಇತಿಹಾಸದಲ್ಲಿನ ಇಂತಹ ಅನೇಕ ಘಟನೆಗಳನ್ನು ಮೊಟ್ಟಮೊದಲು ಅನುಭವಿಸುವ ಅವಧಿ ೨೦೦೦ ದಿಂದ ೨೦೦೫ ಆಗಿತ್ತು. ನಂತರ ಕೂಡ ಅನೇಕ ಪ್ರಸಂಗಗಳು ಘಟಿಸಿದವು, ಅದರಲ್ಲಿಯೂ ಗುರುದೇವರು ನಮಗೆ ಕಲಿಸಿದರು; ಆದರೆ ಮೊದಲ ೫ ವರ್ಷ ಗುರುದೇವರು ನಮಗೆ ಅಖಂಡವಾಗಿ ಕಲಿಸಿದರು.

೫. ಸೂಕ್ಷ್ಮದಲ್ಲಿನ ವಿಷಯ ತಿಳಿಯಬಲ್ಲ ಸಾಧಕಿಯರು 

೫ ಅ. ಕು. ರಸಿಕಾ ಪರಬ್‌ (ಈಗಿನ ಸೌ. ರಸಿಕಾ ಠಾಕೂರ್)

೫ ಅ ೧. ಶಿಕ್ಷಣ ಕಡಿಮೆಯಿದ್ದರೂ ಮುಂಬಯಿಯಲ್ಲಿನ ಸಾಹಿತ್ಯಸಮ್ಮೇಳನದ ಪರೀಕ್ಷಣೆಯನ್ನು ಕೂಲಂಕಷವಾಗಿ ಮಾಡುವುದು ಹಾಗೂ ಅದನ್ನು ನೋಡಿ ಭಾವಜಾಗೃತವಾಗುವುದು : ಕು.ರಸಿಕಾ ಇವಳು ಗೋವಾದ ಒಂದು ಹಳ್ಳಿಯಿಂದ ಬಂದಿದ್ದಳು. ಅವಳಿಗೆ ಸಂಬಂಧಿಸಿದ ಒಂದು ಪ್ರಸಂಗವನ್ನು ಇಲ್ಲಿ ನಮೂದಿಸಬೇಕೆನಿಸುತ್ತದೆ. ಕು. ರಸಿಕಾಳ ಭಾಷೆ ಕೊಂಕಣಿ ಆಗಿತ್ತು ಹಾಗೂ ಅವಳು ಹೆಚ್ಚು ಕಲಿತಿರಲಿಲ್ಲ; ಆದರೆ ಅವಳು ಮಾಡಿದ ಮರಾಠಿ ಸಾಹಿತ್ಯ ಸಮ್ಮೇಳನದ ಪರೀಕ್ಷಣೆಯನ್ನು ನೋಡಿ ನಾನು ಆಶ್ಚರ್ಯಚಕಿತಳಾದೆ. ‘ಅಲ್ಲಿ ಸಮ್ಮೇಳನದಲ್ಲಿ ಉಪಸ್ಥಿತ ಸಾಹಿತಿಗಳು ಮರಾಠಿ ಭಾಷೆಯ ವಿಷಯದಲ್ಲಿ ಏನೇನು ಹೇಳಿದರು’, ಎಂಬುದನ್ನು ಅವಳು ಯಥಾವತ್ತಾಗಿ ಹೇಳಿದ್ದಳು. ನಿಜವಾಗಿಯೂ ದೇವರು ನಮಗೆ ಇಂತಹ ಸೂಕ್ಷ್ಮದೃಷ್ಟಿ ಇರುವ ಸಾಧಕರನ್ನು ಕೊಟ್ಟಿದ್ದಾನೆ, ಇದನ್ನು ನೋಡಿ ನನಗೆ ಗುರುದೇವರ ಬಗ್ಗೆ ಭಾವಜಾಗೃತಿ ಆಯಿತು. ಗುರುದೇವರ ತಳಮಳದಿಂದಲೇ ಸನಾತನ ಸಂಸ್ಥೆಯಲ್ಲಿ ಇಂತಹ ದೈವೀ ಗುಣಸಂಪನ್ನ ಸಾಧಕರು ಸೇರಿಕೊಂಡಿದ್ದಾರೆ.

೫ ಆ. ಕು. ಕವಿತಾ ರಾಠಿವಡೆಕರ್‌ (ಈಗಿನ ಸೌ. ಕವಿತಾ ಕಡಣೆ) ಮತ್ತು ಕು. ಸುಷ್ಮಾ ಪೆಡ್ಣೆಕರ್‌ (ಈಗಿನ ಸೌ. ಸುಷ್ಮಾ ನಾಯಿಕ್)

೫ ಆ ೧. ಭಾವಾವಸ್ಥೆಯಲ್ಲಿರುವುದರಿಂದ ಹಾಗೂ ಅಹಂ ಇಲ್ಲದಿರುವುದರಿಂದ ಸೂಕ್ಷ್ಮದಲ್ಲಿನ ಕಠಿಣ ಹಾಗೂ ಅಗಮ್ಯ ಜ್ಞಾನವನ್ನು ದೇವರಿಗೆ ಸಾಧಕಿಯರಿಗೆ ಕೊಡುವುದು : ಕು. ಕವಿತಾ ರಾಠೀವಡೆಕರ್‌ (ಈಗಿನ ಸೌ. ಕವಿತಾ ಕಡಣೆ) ಹಾಗೂ ಕು. ಸುಷ್ಮಾ ಪೆಡ್ಣೆಕರ್‌ (ಈಗಿನ ಸೌ. ಸುಷ್ಮಾ ನಾಯಿಕ್) ಇವರು ಕೂಡ ಹಳ್ಳಿಯಿಂದ ಬಂದ ಸಾಧಕಿಯರು; ಅಧ್ಯಾತ್ಮದ ಬಗ್ಗೆ ಏನೂ ಓದದೆ ಸೂಕ್ಷ್ಮ ಪರೀಕ್ಷಣೆಯಲ್ಲಿ ಅಧ್ಯಾತ್ಮದಲ್ಲಿನ ದೊಡ್ಡ ದೊಡ್ಡ ಶಬ್ದಗಳನ್ನು ಅವರು ಹೇಗೆ ಉಪಯೋಗಿಸುತ್ತಾರೆ, ಎಂಬುದು ನನಗೆ ಆಶ್ಚರ್ಯವೆನಿಸುತ್ತಿತ್ತು. ಇವೆಲ್ಲವೂ ನಿಜವಾಗಿಯೂ ದೈವೀ ಆಗಿವೆ. ನನಗೆ ಈ ಸಾಧಕಿಯರ ಸಹವಾಸ ತುಂಬಾ ಲಭಿಸಿತು. ನನಗೆ ಅವರಿಂದ ಬಹಳಷ್ಟು ಕಲಿಯಲು ಸಿಕ್ಕಿತು. ಅವರು ನಿರಂತರ ಭಾವಾವಸ್ಥೆಯಲ್ಲಿರುತ್ತಿದ್ದರು, ಆದ್ದರಿಂದಲೇ ಈಶ್ವರ ಅವರಿಗೆ ಸೂಕ್ಷ್ಮದಲ್ಲಿನ ಕಠಿಣ ಹಾಗೂ ಅಗಮ್ಯ ಜ್ಞಾನವನ್ನು ನೀಡುತ್ತಿದ್ದನು. ಮಹತ್ವದ ವಿಷಯವೆಂದರೆ ಅವರಲ್ಲಿ ‘ನಮಗೆ ಸೂಕ್ಷ್ಮ ವಿಷಯ ತಿಳಿಯುತ್ತದೆ’, ಎನ್ನುವ ಅಹಂ ಇರಲಿಲ್ಲ. ಸೂಕ್ಷ್ಮ ಪರೀಕ್ಷಣೆ ಮಾಡಿ ಪುನಃ ಅವರು ಸಹಸಾಧಕರ ನಡುವೆ ಸಹಜವಾಗಿ ಬೆರೆಯುತ್ತಿದ್ದರು. ಇಲ್ಲದಿದ್ದರೆ ‘ಸೂಕ್ಷ್ಮದ ವಿಷಯ ತಿಳಿಯುತ್ತದೆ’, ಎಂಬುದರ ಅಹಂ ಎಷ್ಟು ಬೆಳೆಯುತ್ತಿತ್ತು ಏನೋ !

೫ ಇ. ಕು. ಅಪರ್ಣಾ ಬಾಣಾವಲೀಕರ್‌ (ಈಗಿನ ಸೌ. ಪೂನಮ್‌ ನಾಯಿಕ್)

೫ ಇ ೧. ಸಮಷ್ಟಿಗಾಗಿ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತು ನಾಮಜಪ ಮಾಡುವ ಅಪಾರ ಕ್ಷಮತೆ ಇರುವುದು : ಇಂತಹ ಓರ್ವ ಸಾಧಕಿ ಕು. ಅಪರ್ಣಾ ಬಾಣಾವಲೀಕರ್‌ ! ಅವಳಲ್ಲಿ ಸಮಷ್ಟಿಗಾಗಿ ನಾಮಜಪ ಮಾಡುವ ಹಾಗೂ ಸ್ವಲ್ಪವೂ ಅಲ್ಲಾಡದೆ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ಕುಳಿತುಕೊಳ್ಳುವ ಬಹಳಷ್ಟು ಕ್ಷಮತೆಯಿತ್ತು. ಒಮ್ಮೆ ನಾಮಜಪಕ್ಕೆ ಕುಳಿತರೆ ಸ್ವಲ್ಪವೂ ಅಲ್ಲಾಡುತ್ತಿರಲಿಲ್ಲ. ಇಂತಹ ಕ್ಷಮತೆಯನ್ನು ನಾನು ಇದುವರೆಗೆ ಯಾರಲ್ಲಿಯೂ ನೋಡಿರಲಿಲ್ಲ. ಆ ಸಮಯದಲ್ಲಿ ಗುರುದೇವರಲ್ಲಿದ್ದ ಸೂಕ್ಷ್ಮದಲ್ಲಿನ ಈ ಸಾಧಕಿಯೆಂದರೆ ಗುರುದೇವರ ಶಸ್ತ್ರವೇ ಆಗಿದ್ದರು. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ   ೫ ಈ. ಕು. ಕಲ್ಯಾಣಿ ಗಾಂಗಣ

೫ ಈ ೧. ಸೂಕ್ಷ್ಮ ಜಗತ್ತನ್ನು ತಿಳಿದುಕೊಳ್ಳುವ ಅಪಾರ ಕ್ಷಮತೆ ಇರುವುದು : ಕು. ಕಲ್ಯಾಣಿ ಗಾಂಗಣ ಇವಳಲ್ಲಿಯೂ ಹೀಗೆಯೆ ಸೂಕ್ಷ್ಮ ಜಗತ್ತನ್ನು ತಿಳಿಯುವ ಅಪಾರ ಕ್ಷಮತೆ ಇತ್ತು. ಈ ಹುಡುಗಿಯರು ಸಾಮಾನ್ಯ ಹುಡಗಿಯರಾಗಿದ್ದರು. ಯಾವುದೇ ಅಹಂ ಇಲ್ಲ. ಯಾವುದೇ ಆಡಂಬರವಿಲ್ಲ. ನಾನು ಈ ಸಾಧಕಿಯರನ್ನು ನೋಡಿಯೇ ಅಧ್ಯಾತ್ಮದಲ್ಲಿ ಸಹಜ ಅಹಂ ರಹಿತವಾಗಿರುವುದಕ್ಕೆ ಎಷ್ಟು ಮಹತ್ವವಿದೆ, ಎಂಬುದನ್ನು ಕಲಿತೆ.

೫ ಉ. ಸೌ. ಮಂಗಲಾ ಮರಾಠೆ 

೫ ಉ ೧. ಧಾಮಸೆ ಸೇವಾಕೇಂದ್ರದಲ್ಲಿ ಸೂಕ್ಷ್ಮವಿಷಯದ ಕಾರ್ಯ ಮಾಡಿ ‘ಸೂಕ್ಷ್ಮವಾರ್ತೆ’ ನೀಡುತ್ತಿದ್ದ ಸೂಕ್ಷ್ಮ ವರದಿಗಾರ್ತಿಯಾಗುವುದು : ಸೌ. ಮಂಗಲಾ ಮರಾಠೆ ಇವರು ಧಾಮಸೆ ಸೇವಾಕೇಂದ್ರದಲ್ಲಿ ಇಂತಹ ಸೂಕ್ಷ್ಮದ ವಿಷಯದಲ್ಲಿ ದೊಡ್ಡ ಕಾರ್ಯವನ್ನು ಮಾಡುತ್ತಿದ್ದರು. ‘ಅವರು ಹಗಲಿರುಳು ಹೇಗೆ ಸೇವೆ ಮಾಡುತ್ತಿದ್ದರು ?’, ಎನ್ನುವ ವಿಷಯದಲ್ಲಿ ನನಗೆ ಪ್ರಶ್ನೆ ಉದ್ಭವಿಸುತ್ತಿತ್ತು. ಅವರು ಯಾವತ್ತೂ ಆಯಾಸವಾಗಿರುವುದನ್ನು ನಾನು ನೋಡಿಯೇ ಇಲ್ಲ. ಅವರು ನಿರಂತರ ಉತ್ಸಾಹಿಯಾಗಿರುತ್ತಿದ್ದರು, ದಿನವಿಡೀ ತೊಂದರೆ ಇರುವ ಸಾಧಕರ ಸಹವಾಸದಲ್ಲಿದ್ದರೂ ಅವರಿಗೆ ಆಯಾಸವಾಗಿದ್ದನ್ನು ನಾನು ಯಾವತ್ತೂ ನೋಡಿಲ್ಲ. ‘ಅನೇಕ ದೈವೀ ಗುಣಗಳ ಸಮುಚ್ಚಯವಿರುವ ಸಾಧಕರಲ್ಲಿ ಸನಾತನದ ನಿಜವಾದ ಶಕ್ತಿ ಅಡಗಿದೆ’, ಎಂದು ಹೇಳಿದರೂ ಆಶ್ಚರ್ಯವೆನಿಸಲಿಕ್ಕಿಲ್ಲ. ಇಂತಹ ಸಾಧಕರನ್ನು ನಿರ್ಮಾಣ ಮಾಡುವ ಗುರು ಎಷ್ಟು ಶ್ರೇಷ್ಠರಾಗಿರಬಹುದಲ್ಲವೇ ! ಆ ಸಮಯದಲ್ಲಿ ‘ಸೂಕ್ಷ್ಮ ವಾರ್ತೆ’ ಎಂಬ ವಿಷಯವನ್ನು ದೈನಿಕ ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಲಾಗುತ್ತಿತ್ತು. ಸೌ. ಮಂಗಲಾ ಮರಾಠೆ ಧಾಮಸೆಯಿಂದ ಕೆಲವು ಸೂಕ್ಷ್ಮ ವಾರ್ತೆಗಳನ್ನು ಕಳುಹಿಸುತ್ತಿದ್ದರು ಹಾಗೂ ನಾನು ಫೋಂಡಾ, ಸುಖಸಾಗರ ಆಶ್ರಮದಲ್ಲಿ ಘಟಿಸಿದ ವಾರ್ತೆಗಳನ್ನು ಬರೆಯುತ್ತಿದ್ದೆನು. ಗುರುದೇವರು ನಮ್ಮನ್ನು ಈ ರೀತಿಯಲ್ಲಿ ಸೂಕ್ಷ್ಮದಲ್ಲಿನ ವಾರ್ತೆಗಳನ್ನು ನೀಡುವ ವರದಿಗಾರ್ತಿಯನ್ನಾಗಿಯೂ ಸಿದ್ಧಪಡಿಸಿದರು.

೬. ಪರಾತ್ಪರ ಗುರು ಡಾಕ್ಟರರು ಅವರು ನಾಮಜಪಕ್ಕೆ ಕುಳಿತಾಗ ಘಟಿಸುವ ಘಟನೆಗಳ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಲು ಹೇಳಿ ಎಲ್ಲ ಸಾಧಕರ ಪರೀಕ್ಷಣೆಯನ್ನು ಬೆರಳಚ್ಚು ಮಾಡಿದ ಕಡತಗಳನ್ನು ಪರಿಶೀಲಿಸಿ ಕೊಡಲು ಹೇಳುವುದು

ಬಹಳಷ್ಟು ಸಲ ಗುರುದೇವರು ಸ್ವತಃ ನಾಮಜಪ ಮಾಡಲು ಕುಳಿತುಕೊಳ್ಳುತ್ತಿದ್ದರು ಮತ್ತು  ನಮಗೆ ಪರೀಕ್ಷಣೆ ಮಾಡಲು ಹೇಳುತ್ತಿದ್ದರು. ಆಗ ನಾವೆಲ್ಲ ಸಾಧಕಿಯರು ‘ಗುರುದೇವರಿಂದ ಈಗ ಏನಾಯಿತು ? ಅದರಿಂದ ದೂರದ ಸ್ಥಾನದಲ್ಲಿ ಎಂತಹ ಪರಿಣಾಮವಾಯಿತು ? ಇದಕ್ಕೆ ಕೆಟ್ಟ ಶಕ್ತಿಗಳು ಗುರುದೇವರಿಗೆ ಏನು ಪ್ರತ್ಯುತ್ತರ ನೀಡಿದವು ?’, ಇವುಗಳನ್ನು ಸರಿಯಾಗಿ ಹೇಗಿದೆಯೋ ಹಾಗೆ ಹೇಳುತ್ತಿದ್ದೆವು. ಎಲ್ಲವೂ ಗುರುಕೃಪೆಯಿಂದಲೆ ಸಾಧ್ಯವಾಗತ್ತಿತ್ತು. ನಾವೆಲ್ಲರೂ ಪುಸ್ತಕದಲ್ಲಿ ನೋಂದಣಿ ಮಾಡಿಕೊಂಡು ಅನಂತರ ನಮ್ಮ ಸೂಕ್ಷ್ಮ ಪರೀಕ್ಷಣೆಯನ್ನು ಗಣಕಯಂತ್ರದಲ್ಲಿ ಬೆರಳಚ್ಚು ಮಾಡುತ್ತಿದ್ದೆವು. ಅನಂತರ ಗುರುದೇವರು ನನಗೆ, ಈಗ ನೀವು ಈ ಸಾಧಕಿಯರು ಬೆರಳಚ್ಚು ಮಾಡಿದ ಕಡತಗಳನ್ನು ತಕ್ಷಣ ಪರಿಶೀಲಿಸಿ ನನಗೆ ಕೊಡಬೇಕು ಎಂದು ಹೇಳಿದರು. ಈ ರೀತಿ ಗುರುದೇವರು ನನ್ನ ಈ ಕ್ಷಮತೆಯನ್ನು ಹೆಚ್ಚಿಸಿದರು. ನಾನು ಸೂಕ್ಷ್ಮ ಪರೀಕ್ಷಣೆ ಮಾಡಿ ಉಳಿದ ಸಾಧಕಿಯರ ಕಡತಗಳನ್ನೂ ಪರಿಶೀಲಿಸಲು ಆರಂಭಿಸಿದೆ.

೭. ‘ಸಾಧಕನಿಗೆ ಪ್ರಾರಬ್ಧದ ಬಿಸಿ ತಟ್ಟದಂತೆ ಅವನನ್ನು ವರ್ತಮಾನದಲ್ಲಿ ಆನಂದವಾಗಿಡುವುದು ಗುರುಗಳ ಕಾರ್ಯವಾಗಿರುತ್ತದೆ; ಆದರೆ ಸಾಧಕನು ಅವರ ಆಶ್ರಯ ಮತ್ತು ಚರಣಗಳನ್ನು ಬಿಡಬಾರದು’, ಎಂಬುದೇ ಅಧ್ಯಾತ್ಮದ ಮೂಲ ಸೂತ್ರವಾಗಿದೆ

ಸಾಧಕ ಸಿದ್ಧನಾಗುವಾಗ ಎಲ್ಲ ರೀತಿಯಿಂಲೂ ಪರಿಪೂರ್ಣವಾಗಬೇಕು. ಅವನಿಗೆ ಎಲ್ಲವೂ ಬರಬೇಕು’, ಎಂಬ ಗುರುದೇವರ ತಳಮಳವೇ ನಮ್ಮೆಲ್ಲ ಸಾಧಕರನ್ನು ಅಧ್ಯಾತ್ಮದಲ್ಲಿ ಮುಂದುಮುಂದಿನ ಹಂತಕ್ಕೆ ಒಯ್ಯುತ್ತಿತ್ತು ಎಂಬುದು ಆಧ್ಯಾತ್ಮಿಕ ಪ್ರವಾಸ ಮಾಡುವಾಗ ನನ್ನ ಗಮನಕ್ಕೆ ಬರತೊಡಗಿತ್ತು. ಗುರುಗಳು ಜೀವನದಲ್ಲಿ ಬಂದಾಗ ಸಾಧಕನ ಜೀವನದಲ್ಲಿ ಪ್ರತಿದಿನ ಅನೇಕ ಘಟನೆಗಳು ಘಟಿಸುತ್ತವೆ ಹಾಗೂ ಅವು ಜೀವನದಿಂದ ಹೊರಟು ಹೋಗುತ್ತವೆ. ಇದರ ಪರಿಣಾಮ ಸಾಧಕನಿಗೆ ಆಗದಂತೆ, ಅವನನ್ನು ಪುನಃ ವರ್ತಮಾನದಲ್ಲಿ ಆನಂದವಾಗಿಡುವುದು, ಇದು ಗುರುಗಳ ಕಾರ್ಯವೇ ಆಗಿರುತ್ತದೆ. ‘ಗುರುಗಳು ಸಾಧಕರಿಗೆ ಪ್ರಾರಬ್ಧದ ಬಿಸಿ ತಟ್ಟಲು ಬಿಡುವುದಿಲ್ಲ; ಆದರೆ ನಾವು ಅವರ ಆಶ್ರಯ ಹಾಗೂ ಚರಣಗಳನ್ನು ಬಿಡಬಾರದು’, ಇದೇ ಅಧ್ಯಾತ್ಮದ ಮೂಲ ಸೂತ್ರ ಆಗಿದೆಯೆಂಬುದು ನನಗೆ ಅರಿವಾಗತೊಡಗಿತು.

(ಮುಂದುವರಿಯುವುದು)

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ, ತಮಿಳುನಾಡು. (೮.೨.೨೦೨೨)

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ವಿಚಾರಧನ !

‘ಜೀವವು ಸಾಧನೆ ಮಾಡದಿದ್ದರೆ, ಅದಕ್ಕೆ ಮರಣದ ನಂತರ ಮುಂದಿನ ಗತಿ ಸಿಗಲು ತುಂಬಾ ಕಷ್ಟವಾಗುತ್ತದೆ; ಆದ್ದರಿಂದ ಜೀವವು ಜೀವಂತ ಇರುವಾಗಲೆ ಗಾಂಭೀರ್ಯದಿಂದ ಸಾಧನೆ ಮಾಡಿ ಮುಕ್ತವಾಗಬೇಕು ‘ಅನೇಕ ಬಾರಿ ಮನುಷ್ಯ ಮಾಯೆಯಲ್ಲಿ ಮುಳುಗಿದ್ದು ಅವನಿಗೆ ಸಾಧನೆಯ ಮಹತ್ವ ಮರಣದ ನಂತರ ತಿಳಿಯುತ್ತದೆ. ಜೀವವು ಸಾಧನೆಯನ್ನು ಮಾಡದೇ ಇದ್ದರೆ, ಅದಕ್ಕೆ ಮರಣದ ನಂತರದ ಮುಂದಿನ ಗತಿ ಸಿಗಲು ಕಠಿಣವಾಗುತ್ತದೆ; ಆದರೆ ಆಗ ಅರಿವಾಗಿ ಏನೂ ಉಪಯೋಗವಾಗುವುದಿಲ್ಲ; ಏಕೆಂದರೆ ಪುನಃ ಮನುಷ್ಯಜನ್ಮ ಸಿಗುವುದು ಕಠಿಣವಾಗಿರುತ್ತದೆ. ಆದ್ದರಿಂದ ಮನುಷ್ಯದೇಹ ಇರುವಾಗಲೇ ಗಾಂಭೀರ್ಯದಿಂದ ಸಾಧನೆ ಮಾಡಿ ಮುಕ್ತವಾಗಬೇಕು.’

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ ಎನ್ನುತ್ತಾರೆ.

* ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.