ಹಿಂದೂಗಳ ಸಾಮೂಹಿಕ ಮತಾಂತರ : ಚಿಂತಾಜನಕ ವಿಷಯ !

‘ಉತ್ತರಪ್ರದೇಶ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ರೋಹಿತ ರಂಜನ ಅಗ್ರವಾಲ ಇವರು ಮತಾಂತರ ಪ್ರಕರಣದ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು ಮತ್ತು ಕ್ರೈಸ್ತರಿಂದಾಗುತ್ತಿರುವ ಹಿಂದೂಗಳ ಸಾಮೂಹಿಕ ಮತಾಂತರದ ವಿಷಯದಲ್ಲಿ ಕಳವಳವನ್ನು ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಅವರು ಇಂತಹ ಮತಾಂತರಗಳನ್ನು ತಡೆಯುವಂತೆಯೂ ಆದೇಶಿಸಿದರು.

೧. ಮತಾಂತರ ಮಾಡಿರುವ ಪ್ರಕರಣದಲ್ಲಿ ಕ್ರೈಸ್ತರ ವಿರುದ್ಧ ಕ್ರಿಮಿನಲ್‌ ಪ್ರಕರಣ

ರಾಮಕಲಿ ಪ್ರಜಾಪತಿ ಹೆಸರಿನ ಮಹಿಳೆಯು ಕೈಲಾಸ ಹೆಸರಿನ ವ್ಯಕ್ತಿಯ ವಿರುದ್ಧ ‘ಉತ್ತರಪ್ರದೇಶ ಕಾನೂನುಬಾಹಿರ ಮತಾಂತರ ನಿಷಧ ಕಾಯ್ದೆ ೨೦೨೧’ ಮತ್ತು ಭಾರತೀಯ ದಂಡ ಸಂಹಿತೆಯ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ಮೌದಾಹ ಪೊಲೀಸ್‌ ಠಾಣೆಯಲ್ಲಿ (ಹಮೀರ್‌ಪುರ ಜಿಲ್ಲೆ, ಉತ್ತರಪ್ರದೇಶ) ಕ್ರಿಮಿನಲ್‌ ಅಪರಾಧವನ್ನು ದಾಖಲಿಸಿದ್ದಾರೆ. ಈ ದೂರಿನಲ್ಲಿ ‘ಕೈಲಾಸ ಹೆಸರಿನ ವ್ಯಕ್ತಿಯು ಅವಳ ಬುದ್ಧಿಮಾಂದ್ಯ ಸಹೋದರನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದಾಗಿ ದೆಹಲಿಗೆ ಕರೆದುಕೊಂಡು ಹೋದನು. ಅಲ್ಲಿ ಒಂದು ಸಾಮಾಜಿಕ ಸಮಾವೇಶ ನಡೆದಿತ್ತು. ಆ ಸಮಾವೇಶವನ್ನು ಸೋಮೂ ಪಾಸ್ಟರ(ಪಾದ್ರಿ) ಎಂಬವರು ತೆಗೆದುಕೊಳ್ಳುತ್ತಿದ್ದರು. ಅಲ್ಲಿ ಹಿಂದೂಗಳನ್ನು ಮತಾಂತರಿಸಲಾಯಿತು. ಅದೇ ರೀತಿ ಊರಲ್ಲಿನ ಅನೇಕ ಜನರನ್ನೂ ದೆಹಲಿಗೆ ಕರೆದೊಯ್ಯಲಾಗಿತ್ತು. ಅವರನ್ನೂ ಮತಾಂತರಿಸುವುದು ಅವರ ಉದ್ದೇಶವಾಗಿತ್ತು. ಆರೋಪಿ ಕೈಲಾಸನು ‘ಪಾದ್ರಿಯು ಅವಳ ಸಹೋದರನ ಮನಸ್ಸಿನ ಮೇಲೆ ಆಗಿರುವ ಆಘಾತಕ್ಕೆ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಾರೆ. ಹಾಗೆಯೇ ಒಂದು ವಾರದ ಬಳಿಕ ಅವರು ಮತ್ತೆ ಬರುತ್ತಾರೆ’ ಎಂದು ಹೇಳಿದನು. ಆದರೆ ಆರೋಪಿ ಮತ್ತು ರಾಮಕಲಿ ಪ್ರಜಾಪತಿಯ ಸಹೋದರ ಇಬ್ಬರೂ ಮರಳಿ ಬರಲಿಲ್ಲ. ತದನಂತರ ಸಹೋದರನ  ಕುರಿತು ವಿಚಾರಿಸಿದಾಗ ಕೈಲಾಸ ಸಮಾಧಾನಕರ ಉತ್ತರ ನೀಡಲಿಲ್ಲ. ಈ ದೂರಿನಲ್ಲಿ ‘ಹಣದ ಆಮಿಷ ತೋರಿಸಿ ಪ್ರಜಾಪತಿಯು ಸಹೋದರನನ್ನು ಮತಾಂತರಿಸಿದ್ದಾನೆ’, ಎಂದು ಆರೋಪಿಸಿದಳು. ಈ ವಿಷಯದ ಸುದ್ದಿಯು ೨ ಜುಲೈ ೨೦೨೪ ರಂದು ವಿವಿಧ ದಿನಪತ್ರಿಕೆಗಳಲ್ಲಿ ಪ್ರಸಾರವಾಯಿತು.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೨. ಆರೋಪಿಗೆ ಜಾಮೀನು ನಿರಾಕರಣೆ

ಹಮೀರ್‌ಪುರ ಜಿಲ್ಲೆಯ ಮೌದಾಹದ ಕೈಲಾಸನ ವಿರುದ್ಧ ಒಂದೇ ಗ್ರಾಮದಲ್ಲಿ ಅನೇಕ ಹಿಂದೂಗಳನ್ನು ಮತಾಂತರಿಸಿದ ಆರೋಪವಿತ್ತು. ಆದ್ದರಿಂದ ಅವನಿಗೆ ಜಾಮೀನು ನಿರಾಕರಿಸ ಲಾಯಿತು. ಆರೋಪಿಯ ಪರವಾಗಿ ವಾದ ಮಾಡಿದ ನ್ಯಾಯವಾದಿಗಳು  ಸೋಮೂ ಪಾಸ್ಟರನಿಗೆ ಜಾಮೀನು ಸಿಕ್ಕಿದೆ ಮತ್ತು ಅವನ ಬಿಡುಗಡೆಯಾಗಿದೆ. ಆದುದರಿಂದ ಕೈಲಾಸನಿಗೂ ಜಾಮೀನು ಸಿಗಬೇಕು ಎಂದು ವಾದಿಸಿದರು. ಆದರೆ ಈ ಜಾಮೀನು ಅರ್ಜಿಯನ್ನು ಸರಕಾರದ ಪರ ವಾದಿಸಿದ ನ್ಯಾಯವಾದಿಗಳು ವಿರೋಧಿಸಿದರು. ಹಾಗೆಯೇ ಕೈಲಾಸನ ವಿರುದ್ಧದ ವಿವಿಧ ವ್ಯಕ್ತಿಗಳ ಸಾಕ್ಷಿಗಳನ್ನು ಮತ್ತು ಮನವಿಗಳನ್ನು ಗೌರವಾನ್ವಿತ ಉತ್ತರಪ್ರದೇಶ ನ್ಯಾಯಾಲಯದ ಎದುರು ಹಾಜರು ಪಡಿಸಲಾಯಿತು. ತದನಂತರ ಬಹಳ ದೊಡ್ಡ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಆರ್ಥಿಕವಾಗಿ ಬಡವರ ಮತಾಂತರಿಸಲಾಗುತ್ತಿದೆಯೆಂದು ಉತ್ತರಪ್ರದೇಶ ಉಚ್ಚ ನ್ಯಾಯಾಲಯವು ಅಭಿಪ್ರಾಯ ಪಟ್ಟಿತು ಹಾಗೂ ಈ ಎಲ್ಲವನ್ನೂ ಪರಿಗಣಿಸಿ ಆರೋಪಿಯ ಅರ್ಜಿಯನ್ನು ತಿರಸ್ಕರಿಸಿತು.

೩. ಹಿಂದೂಗಳ ಮತಾಂತರವು ಭಾರತದ ಸಂವಿಧಾನದ ೨೫ ನೇ ಕಲಮ್‌ ಇದರ ಉಲ್ಲಂಘನೆಯಾಗಿದೆ !

ಈ ಸಂದರ್ಭದಲ್ಲಿ ಸಾಮೂಹಿಕವಾಗಿ ಹಿಂದೂಗಳ  ಮತಾಂತರಗೊಳ್ಳುತ್ತಿರುವ ವಿಷಯದಲ್ಲಿ ಕಳವಳ ವ್ಯಕ್ತಪಡಿಸಿದ ಗೌರವಾನ್ವಿತ ನ್ಯಾಯಮೂರ್ತಿಗಳು ಮಾತನಾಡಿ, ‘ಇಂದು ಹಿಂದೂಗಳು ಬಹುಸಂಖ್ಯಾತರಾಗಿದ್ದರೂ, ಇದೇ ರೀತಿ ಅವರ ಮತಾಂತರವಾಗುತ್ತಿದ್ದರೆ, ಅವರು ಅಲ್ಪಸಂಖ್ಯಾತರಾಗಲು ಹೆಚ್ಚು ಸಮಯ ತಾಗಲಾರದು. ಆದ್ದರಿಂದ ಉತ್ತರಪ್ರದೇಶದಲ್ಲಿ ಹಾಗೂ ಭಾರತದಲ್ಲಿ ನಡೆಯುತ್ತಿರುವ ಇಂತಹ ಮತಾಂತರಗಳನ್ನು ಕೂಡಲೇ ನಿಲ್ಲಿಸಬೇಕು. ಇಂತಹ ಮತಾಂತರಗಳು ಸಂವಿಧಾನದ ೨೫ ನೇ ಕಲಂಮ್‌ನ ಉಲ್ಲಂಘನೆಯಾಗಿದೆ. ಆದ್ದರಿಂದ ಅದನ್ನು ನಿಲ್ಲಿಸುವುದು ಆವಶ್ಯಕವಾಗಿದೆ’, ಎಂದು ಹೇಳಿದರು. ನ್ಯಾಯಮೂರ್ತಿಯವರ ಹೇಳಿಕೆಯನ್ನು ಗಮನಿಸಿದರೆ, ಈಗಲಾದರೂ ಕೇಂದ್ರ ಸರಕಾರವು ಮತಾಂತರ ವಿಷಯಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಮನಹರಿಸಿ ರಾಷ್ಟ್ರಮಟ್ಟದಲ್ಲಿ ಕಟ್ಟುನಿಟ್ಟಾದ ಮತಾಂತರ ನಿಷೇಧ ಕಾನೂನನ್ನು ರಚಿಸಬೇಕು.

೪. ಲವ್‌ ಜಿಹಾದ್‌ ಪ್ರಕರಣದಲ್ಲಿ ಹಿಂದೂ ಯುವತಿಯ ಹತ್ಯೆಯನ್ನು ಮಾಡಿದ ಮತಾಂಧ ಆರೋಪಿಯು ಮೋಸದಿಂದ ಜಾಮೀನು ಪಡೆಯುವುದು ಮತ್ತು ಇತರ ಆರೋಪಿಗಳ ಜಾಮೀನನ್ನು ನಿರಾಕರಿಸಿ ಉತ್ತರಪ್ರದೇಶ ಉಚ್ಚ ನ್ಯಾಯಾಲಯವು ಹೊಸ ಆದೇಶವನ್ನು ನೀಡುವುದು

ಇದೇ ರೀತಿಯ ಮತ್ತೊಂದು ಪ್ರಕರಣವನ್ನು ಉತ್ತರಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು. ಇದರಲ್ಲಿ ಆರೋಪಿ ಶೋಯಬ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದನು. ಹಿಂದೂ ಹುಡುಗಿಯು ಏಜಾಜ ಅಹಮ್ಮದನೊಂದಿಗೆ ಮದುವೆಯಾಗಿದ್ದಳು, ಆದರೆ ತದನಂತರ ಅವಳು ಇಸ್ಲಾಂ ಸ್ವೀಕರಿಸಲಿಲ್ಲ. ಈ ಕಾರಣ ದಿಂದ ೨೧ ಸಪ್ಟೆಂಬರ್‌ ೨೦೨೦ ರಂದು ಶೋಯೆಬ ಮತ್ತು ಏಜಾಜ ಇವರಿಬ್ಬರು ಹುಡುಗಿಯ ಕುತ್ತಿಗೆಯನ್ನು ಸೀಳಿ ಹತ್ಯೆ ಮಾಡಿದರು ಮತ್ತು ಅವಳ ಶವವನ್ನು ನಾಲೆಯಲ್ಲಿ ಎಸೆದರು. ಈ ಪ್ರಕರಣದಲ್ಲಿ ಶೋಯೆಬ ಮತ್ತು ಏಜಾಜ ಇವರಿಬ್ಬರನ್ನು ಬಂಧಿಸಲಾಯಿತು. ಆದರೆ ಏಜಾಜ ಅಹಮ್ಮದ ಸುಳ್ಳು ಹೇಳಿ ಜಾಮೀನು ಪಡೆದನು, ಶೋಯೆಬನ ಜಾಮೀನು ಅರ್ಜಿಯ ಕುರಿತು ವಾದ ನಡೆಸಿ, ‘ಸಹ ಆರೋಪಿಗೆ ಜಾಮೀನು ನೀಡಲಾಗಿದೆ. ಆದ್ದರಿಂದ ನನಗೂ ಜಾಮೀನು ನೀಡಬೇಕು’ ಎಂದು ಹೇಳಿದನು.

ಇದಕ್ಕೆ ಪ್ರತಿವಾದ ಮಂಡಿಸಿದ ಸರಕಾರಿ ನ್ಯಾಯವಾದಿಯು, ‘ಇದರಲ್ಲಿ ಮೊದಲನೆಯ ವಿಷಯವೆಂದರೆ, ಏಜಾಜನು ಮೋಸದಿಂದ ಜಾಮೀನು ಪಡೆದಿದ್ದಾನೆ ಮತ್ತು ಈ ಕಾರಣದಿಂದ ಶೋಯೆಬನ ಅರ್ಜಿಯನ್ನು ತಿರಸ್ಕರಿಸಬೇಕು. ಎರಡನೇಯ ಕಾರಣವೇನೆಂದರೆ ಇಸ್ಲಾಂ ಸ್ವೀಕರಿಸಲಿಲ್ಲವೆಂದು ಹುಡುಗಿಯ ಹತ್ಯೆಯನ್ನು ಮಾಡಲಾಗಿದೆ. ಆದ್ದರಿಂದ ಅವನಿಗೆ ಜಾಮೀನು ನೀಡಬಾರದು’ ಎಂದು ವಾದಿಸಿದರು. ಇದಕ್ಕೆ ನ್ಯಾಯಾಲಯವು ‘ಈ ಪ್ರಕರಣದಲ್ಲಿ ಶೋಯೆಬನಿಗೆ ಜಾಮೀನು ನೀಡಲು ಯಾವುದೇ ಮುಖ್ಯ ಕಾರಣವಿಲ್ಲ, ಹಾಗೆಯೇ ಮದುವೆಯಾಗಿರುವ ಏಜಾಜ ಅಹಮ್ಮದನು ಹುಡುಗಿಯನ್ನು ಹತ್ಯೆ ಮಾಡಿ ಮೋಸದಿಂದ ಜಾಮೀನು ಪಡೆದಿದ್ದಾನೆ. ಆದ್ದರಿಂದ ಅವನ ಜಾಮೀನು ರದ್ದುಗೊಳಿಸಲು ಅರ್ಜಿ ಸಲ್ಲಿಸಬೇಕು. ಹಾಗೆಯೇ ಮತಾಂಧ ಮುಸಲ್ಮಾನರು ಲವ್‌ ಜಿಹಾದ್‌ನಲ್ಲಿ ಹುಡುಗಿಯರಿಗೆ ಮೋಸ ಮಾಡಿ ವಿವಾಹವಾಗುತ್ತಾರೆ ನಂತರ ಹತ್ಯೆ ಮಾಡುತ್ತಾರೆ.

ಈ ವಿಷಯದಲ್ಲಿ ವಿಶೇಷ ನ್ಯಾಯಾಲಯದಲ್ಲಿ (ಸ್ಪೆಶಲ್‌ ಕೋರ್ಟ) ಪ್ರಕರಣದ ವಿಚಾರಣೆ ನಡೆಸಿ ಆರೋಪಿಗೆ  ಮರಣದಂಡನೆಯಾಗುವ ದೃಷ್ಟಿಯಿಂದ ಪ್ರಯತ್ನಿಸಬೇಕು’ ಎಂದು ಸರಕಾರಕ್ಕೆ ಆದೇಶಿಸಿದೆ.

೫. ವಿವರವಾದ ತನಿಖೆಯ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಆವಶ್ಯಕತೆ

ಲವ್‌ ಜಿಹಾದ್‌ ಕಾನೂನು ರಚಿಸಿದ್ದರೂ, ಹತ್ಯೆಗಳು ನಡೆಯುತ್ತಿವೆ. ಸರಕಾರ ಹಿಂದೂಗಳ ಮತವನ್ನು ಗೌರವಿಸಬೇಕು ಹಾಗೂ ಏಜಾಜ ಮೋಸದಿಂದ ಜಾಮೀನು ಪಡೆದಿದ್ದು, ಇದರಲ್ಲಿ  ಸರಕಾರಿ ನ್ಯಾಯವಾದಿಗಳ ಕೈವಾಡವಿದೆಯೇ ಎನ್ನುವ ಬಗ್ಗೆ ತನಿಖೆ ಮಾಡಬೇಕು.  ಒಂದು ವೇಳೆ ಸರಕಾರಿ ನ್ಯಾಯವಾದಿಗಳು ತಪ್ಪಿತಸ್ಥರಾಗಿದ್ದರೆ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು.

ಒಟ್ಟಾರೆ, ಕೆಲವರು ಆಮಿಷವೊಡ್ಡಿ ಮತಾಂತರ ಮಾಡುತ್ತಾರೆ ಕೆಲವರು, ಹಿಂದೂ ಮಹಿಳೆಯರನ್ನು ಮೋಸಗೊಳಿಸಿ ಲವ್‌ ಜಿಹಾದ್‌ನ ಮೂಲಕ ಮತಾಂತರಗೊಳಿಸುತ್ತಾರೆ. ಈ ಎರಡೂ ಅನಿಷ್ಟಗಳನ್ನು ತಡೆಯಲು ಹಿಂದೂ ರಾಷ್ಟ್ರ ಸ್ಥಾಪನೆಯು ಅಗತ್ಯವಾಗಿದೆ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬೈ ಉಚ್ಚ ನ್ಯಾಯಾಲಯ (೪.೭.೨೦೨೪)