ಸೂಕ್ಷ್ಮ-ಚಿತ್ರಕಾರ ಸಾಧಕರಿಗೆ ಕೆಟ್ಟ ಶಕ್ತಿಗಳ ಚಿತ್ರಗಳನ್ನು ಚಿತ್ರಿಸಲು ಹೇಳಿ ಅವುಗಳ ಮೇಲೆ ಉಪಾಯ ಮಾಡುವ ಪರಾತ್ಪರ ಗುರು ಡಾ. ಆಠವಲೆಯವರು ಕಂಡು ಹಿಡಿದ ವಿನೂತನ ಉಪಾಯಪದ್ಧತಿ !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಮುಕುಲ ಗಾಡಗೀಳ

‘ಈಶ್ವರನು ಹೇಗೆ ನಮಗೆ ಸೂಕ್ಷ್ಮ ದೃಷ್ಟಿ ಇರುವ ಸಾಧಕರನ್ನು ನೀಡಿದನೋ, ಹಾಗೆಯೆ ಸೂಕ್ಷ್ಮ-ಚಿತ್ರಗಳನ್ನು ಬಿಡಿಸುವ ಸಾಧಕರನ್ನೂ ನೀಡಿದ್ದಾನೆ. ಈ ಸಾಧಕರಲ್ಲಿ ಸೌ. ಆರತಿ ಪುರಾಣಿಕ, ಕು. ಅನುರಾಧಾ ವಾಡೆಕರ (ಈಗಿನ ಸದ್ಗುರು ಅನುರಾಧಾ ವಾಡೆಕರ) ಮತ್ತು ಕು. ಪ್ರಿಯಾಂಕಾ ಲೋಟಲೀಕರ (ಈಗಿನ ಸೌ. ಪ್ರಿಯಾಂಕಾ ಸುಯಶ ಗಾಡಗೀಳ) ಮುಂತಾದವರಿದ್ದಾರೆ. ಸೂಕ್ಷ್ಮ ಪರೀಕ್ಷಣೆ ಮಾಡುವಾಗ ಪರಾತ್ಪರ ಗುರು ಡಾಕ್ಟರರು ಒಂದು ಉಪಾಯಪದ್ಧತಿಯನ್ನು ಕಂಡು ಹಿಡಿದರು, ಅದೇನೆಂದರೆ, ಯಾವುದಾದರು ಸಾಧಕನಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಯ ಚಿತ್ರವನ್ನು ಕಾಗದದ ಮೇಲೆ ಚಿತ್ರಿಸಿ ಆ ಚಿತ್ರವನ್ನು ಎದುರಿಗೆ ಇಟ್ಟುಕೊಂಡು ಆ ಚಿತ್ರವನ್ನು ನೋಡುತ್ತಾ ನಾಮಜಪ ಮಾಡುವುದು.

(ಭಾಗ ೧೧)

೧. ಸೂಕ್ಷ್ಮದಲ್ಲಿನ ಅನೇಕ ದೈವೀ ಗುಣಗಳ ಸಮುಚ್ಚಯವಾಗಿರುವ ಸದ್ಗುರು ಅನುರಾಧಾ ವಾಡೆಕರ ಇವರು ಕೆಟ್ಟ ಶಕ್ತಿಗಳ ಸೂಕ್ಷ್ಮ-ಚಿತ್ರಗಳನ್ನು ಬಿಡಿಸುವುದು

ಸದ್ಗುರು (ಸುಶ್ರೀ) (ಕು.) ಅನುರಾಧಾ ವಾಡೆಕರ ಇವರಿಗೆ ಸೂಕ್ಷ್ಮದಲ್ಲಿನ ವಿಷಯ ತುಂಬಾ ತಿಳಿಯುತ್ತದೆ ಹಾಗೂ ಸೂಕ್ಷ್ಮದ ವಿಷಯ ಕಾಣಿಸುತ್ತದೆ. ಅವರು ತೊಂದರೆ ಕೊಡುವ ದೊಡ್ಡ ಕೆಟ್ಟ ಶಕ್ತಿಗಳ ಸೂಕ್ಷ್ಮ ಚಿತ್ರಗಳನ್ನೂ ಬಿಡಿಸಬಲ್ಲರು. ಅವರಲ್ಲಿ ಸೂಕ್ಷ್ಮವನ್ನು ತಿಳಿದುಕೊಳ್ಳುವ ಅನೇಕ ಗುಣಗಳು ಒಟ್ಟಿಗೆ ಇವೆ. ಈ ದೈವೀ ಗುಣಗಳನ್ನು ಪರಾತ್ಪರ ಗುರು ಡಾಕ್ಟರರು ಉಪಯೋಗಿಸಿಕೊಳ್ಳದಿದ್ದರೇನೆ ಆಶ್ಚರ್ಯ ! ಸದ್ಗುರು ಅನುರಾಧಾ ವಾಡೆಕರ ಇವರು ನಮಗೆ ಸಾಧಕರಿಗೆ, ಹಾಗೆಯೇ ಸಂಪೂರ್ಣ ಸಮಷ್ಟಿಗೆ ತೊಂದರೆ ಕೊಡುವ ದೊಡ್ಡ ಕೆಟ್ಟ ಶಕ್ತಿಗಳ ಸೂಕ್ಷ್ಮ ಚಿತ್ರಗಳನ್ನು ಬಿಡಿಸಿ ಕಳುಹಿಸುತ್ತಿದ್ದರು.

ಸದ್ಗುರು ಅನುರಾಧಾ ವಾಡೆಕರ

೨. ಸದ್ಗುರು ಅನುರಾಧಾ ವಾಡೆಕರ ಇವರು ಚಿತ್ರಿಸಿದ ಕೆಟ್ಟ ಶಕ್ತಿಯ ಚಿತ್ರವನ್ನು ನೋಡುತ್ತಾ ನಾಮಜಪ ಮಾಡುತ್ತಿರುವಾಗ ಕೆಟ್ಟ ಶಕ್ತಿಯ ಮುಖದ ಹಾವಭಾವ ಬದಲಾಗುವುದು 

ನಾವು ಈ ಚಿತ್ರಗಳ ಝೆರಾಕ್ಸ್ ತೆಗೆದು ಚಿತ್ರವನ್ನು ನಾನು, (ಕು) ಕವಿತಾ ರಾಠೀವಡೆಕರ್‌ (ಈಗಿನ ಸೌ. ಕವಿತಾ ಅನಿಲ ಕಡಣೆ) (ಆಧ್ಯಾತ್ಮಿಕ ಮಟ್ಟ ಶೇ. ೬೬) ಮತ್ತು ಕು. ಸುಷ್ಮಾ ಪೆಡ್ಣೆಕರ್‌ (ಈಗಿನ ಸೌ. ಸುಷ್ಮಾ ಸುನೀಲ ನಾಯಿಕ್‌ (ಆಧ್ಯಾತ್ಮಿಕ ಮಟ್ಟ ಶೇ. ೬೧) ಇವರು ಈ ಚಿತ್ರವನ್ನು ಮುಂದಿಟ್ಟುಕೊಂಡು ಅದನ್ನು ನೋಡುತ್ತಾ ಹಲವಾರು ಗಂಟೆ ನಾಮಜಪ ಮಾಡುತ್ತಿದ್ದೆವು. ಇದರಿಂದ ಅರಿವಾದ ಅಂಶವೆಂದರೆ ಸೂಕ್ಷ್ಮದಿಂದ ದೊಡ್ಡ ಕೆಟ್ಟ ಶಕ್ತಿಯ ಶಕ್ತಿ ಕಡಿಮೆಯಾದಾಗ ಚಿತ್ರದಲ್ಲಿನ ಅದರ ಮುಖ ಅಳುಮುಖವಾಗುತ್ತಿತ್ತು, ಕೆಲವೊಮ್ಮೆ ಕೆಟ್ಟ ಶಕ್ತಿ ಕೋಪಗೊಂಡು ನಮ್ಮ ಮೇಲೆ ಆಕ್ರಮಣ ಮಾಡುತ್ತಿತ್ತು. ಆಗ ಅದರ ಚಿತ್ರದಲ್ಲಿನ ಮುಖದಲ್ಲಿ ಕೋಪ ಕಾಣಿಸುತ್ತಿತ್ತು. ಚಿತ್ರದಲ್ಲಿನ ಈ ಎಲ್ಲ ಬದಲಾವಣೆ ಸೂಕ್ಷ್ಮದಲ್ಲಿಯೇ ಆಗುತ್ತಿತ್ತು. ನಾವು ಇದನ್ನು ನಿಯಮಿತವಾಗಿ ಪರಾತ್ಪರ ಗುರು ಡಾಕ್ಟರರಿಗೆ ಹೇಳುತ್ತಿದ್ದೆವು.

೩. ಕೆಟ್ಟ ಶಕ್ತಿಗಳೊಂದಿಗೆ ಸೂಕ್ಷ್ಮದಲ್ಲಿ ಯುದ್ಧ ಮಾಡುತ್ತಿರುವಾಗ ನಮಗೆ ಅರಿವಾದ ಅವರಲ್ಲಿನ ಜಿಗುಟುತನ ಹಾಗೂ ಸಾಧನೆಯ ಬಗ್ಗೆ ಅರಿವಾದ ಮಹತ್ವ !

ಆಗ ಪರಾತ್ಪರ ಗುರುದೇವರು, ”ಈಗ ನೀವು ‘ಆ ಕೆಟ್ಟ ಶಕ್ತಿಯಲ್ಲಿ ಎಷ್ಟು ಶೇಕಡಾದಷ್ಟು ಶಕ್ತಿ ಉಳಿದಿದೆ ಹಾಗೂ ಅದರೊಂದಿಗಿರುವ ನಮ್ಮ ಸೂಕ್ಷ್ಮ ಯುದ್ಧವನ್ನು ಯಾವಾಗ ನಿಲ್ಲಿಸಬೇಕು ?” ಎಂದು ದೇವರಲ್ಲಿ ಕೇಳಿರಿ, ಎಂದು ಹೇಳುತ್ತಿದ್ದರು. ಹಾಗೆ ಮಾಡಿದಾಗ ನಿರ್ದಿಷ್ಟ ಅವಧಿಯ ನಂತರ ನಾವು ಚಿತ್ರದ ಮೇಲೆ ನಾಮಜಪಾದಿ ಉಪಾಯ ಮಾಡುವುದನ್ನು ನಿಲ್ಲಿಸುತ್ತಿದ್ದೆವು. ನಂತರ ಮರುದಿನ ನಮಗೆ ಆ ಕೆಟ್ಟ ಶಕ್ತಿ ಪುನಃ ಸಾಧನೆ ಮಾಡಿ ಅದರ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ ಎಂಬುದು ನಮ್ಮ ಗಮನಕ್ಕೆ ಬರುತ್ತಿತ್ತು. ಪುನಃ ನಾವು ದೇವರಿಗೆ ಪ್ರಾರ್ಥನೆ ಮಾಡಿ ಯುದ್ಧವನ್ನು ಆರಂಭಿಸುತ್ತಿದ್ದೆವು. ಹೀಗೆ ಒಂದೇ ಚಿತ್ರದ ಮೇಲೆ ೧೫ ದಿನ ಪ್ರಯೋಗ ಮಾಡಿದ ನಂತರ ಆ ಕೆಟ್ಟ ಶಕ್ತಿಯ ಶಕ್ತಿ ಕಡಿಮೆಯಾಗುತ್ತಿತ್ತು. ಇದರಿಂದ ನಾವು ‘ಕೆಟ್ಟ ಶಕ್ತಿಗಳಲ್ಲಿ ಯುದ್ಧ ಮಾಡುವುದರ ಹಾಗೂ ಸಾಧನೆ ಮಾಡಿ ಶಕ್ತಿ ಹೆಚ್ಚಿಸುವುದರಲ್ಲಿನ ಜಿಗುಟುತನ ಎಷ್ಟಿದೆ !’, ಎಂಬುದನ್ನು ಕಲಿತೆವು ಹಾಗೂ ನಮಗೆ ಸಾಧನೆ ಮಾಡುವುದರ ಮಹತ್ವವೂ ತಿಳಿಯಿತು. ಕೆಟ್ಟ ಶಕ್ತಿಗಳೂ ಇತರರ ಮೇಲೆ ಆಕ್ರಮಣ ಮಾಡಲು ಸಾಧನೆ ಮಾಡುತ್ತವೆ. ಕೇವಲ ಅವುಗಳ ಕಾರ್ಯ ಮಾಡುವ ಉದ್ದೇಶ ನಕಾರಾತ್ಮಕವಾಗಿರುತ್ತದೆ, ಇಷ್ಟೇ ವ್ಯತ್ಯಾಸ !

೪. ಸದ್ಗುರು ಅನುರಾಧಾ ವಾಡೆಕರರು ಕೆಟ್ಟ ಶಕ್ತಿಗಳ ಸೂಕ್ಷ್ಮ-ಚಿತ್ರಗಳನ್ನು ಬಿಡಿಸುತ್ತಿರುವುದರಿಂದ ಕೆಟ್ಟ ಶಕ್ತಿಗಳನ್ನು ಸೋಲಿಸಲು ಸುಲಭವಾಗುವುದು, ಆದ್ದರಿಂದ ಅವು ಸದ್ಗುರು ವಾಡೆಕರ ಇವರ ಮೇಲೆ ಆಕ್ರಮಣ ಮಾಡುವುದು

ಸಮಷ್ಟಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಗಳ ಸೂಕ್ಷ್ಮ ಚಿತ್ರಗಳನ್ನು ಸದ್ಗುರು ಅನುರಾಧಾ ವಾಡೆಕರರು ಅವು ಹೇಗಿವೆಯೋ ಹಾಗೆ ಯಥಾವತ್ತಾಗಿ ಬಿಡಿಸುತ್ತಿದ್ದರು. ‘ಕೆಟ್ಟ ಶಕ್ತಿಗಳ ಸೂಕ್ಷ್ಮ ರೂಪ ನಮ್ಮ ಕೈಗೆ ಸಿಗುವುದರಿಂದ ಅವುಗಳನ್ನು ಸೋಲಿಸುವುದು ನಮಗೆ ಸುಲಭವಾಗುತ್ತದೆ’, ಎಂದು ಪರಾತ್ಪರ ಗುರು ಡಾಕ್ಟರರು ನಮಗೆ ಹೇಳುತ್ತಿದ್ದರು; ಆದರೆ ಇದರಿಂದ ಕೆಟ್ಟ ಶಕ್ತಿಗಳು ಕೋಪಗೊಂಡು ಅನುರಾಧಾ ವಾಡೆಕರ ಇವರ ಮೇಲೆ ಆಕ್ರಮಣ ಮಾಡಲು ಆರಂಭಿಸಿದವು.

೫. ಗುರುದೇವರು ‘ಯುದ್ಧಕ್ಕಿಂತ ಸಾಧಕರು ಮಹತ್ವದ್ದಾಗಿದ್ದಾರೆ’, ಎಂದು ಹೇಳಿ ಸದ್ಗುರು ಅನುರಾಧಾ ವಾಡೆಕರ ಇವರಿಗೆ ಸ್ವಲ್ಪ ಸಮಯ ಸೂಕ್ಷ್ಮ ಚಿತ್ರ ಬಿಡಿಸುವುದನ್ನು ನಿಲ್ಲಿಸಲು ಹೇಳುವುದು

ಸದ್ಗುರು ಅನುರಾಧಾ ವಾಡೆಕರ ಇವರಿಗೆ ‘ಪ್ರಾಣಶಕ್ತಿ ಕಡಿಮೆಯಾಗುವುದು, ತುಂಬಾ ನಿದ್ದೆ ಬರುವುದು, ಆಯಾಸವಾಗುವುದು, ಕಣ್ಣು ಮತ್ತು ತಲೆಯ ಮೇಲೆ ಒತ್ತಡದ ಅರಿವಾಗುವುದು’ ಇಂತಹ ಅಸಹನೀಯ ತೊಂದರೆಗಳು ಆಗಲು ಆರಂಭವಾಯಿತು. ಆಗ ಗುರುದೇವರು ಸದ್ಗುರು ಅನುರಾಧಾ ವಾಡೆಕರ ಇವರಿಗೆ ಸ್ವಲ್ಪ ಸಮಯ ಸೂಕ್ಷ್ಮ-ಚಿತ್ರ ಬಿಡಿಸುವುದನ್ನು ನಿಲ್ಲಿಸುವಂತೆ ಹೇಳಿದರು; ಏಕೆಂದರೆ, ”ನಮ್ಮ ಸ್ಥೂಲದೇಹವು ಸಾಧನೆ ಮಾಡಲು ತುಂಬಾ ಮಹತ್ವದ್ದಾಗಿದೆ. ಕೆಟ್ಟ ಶಕ್ತಿಗಳು ಸೂಕ್ಷ್ಮ ಆಗಿರುವುದರಿಂದ, ಅವುಗಳಿಗೆ ಸ್ಥೂಲದೇಹ ಇಲ್ಲದ ಕಾರಣ ಅವು ನಮಗಿಂತ ಹೆಚ್ಚು ಶಕ್ತಿಶಾಲಿಯಾಗಿವೆ. ಕೆಲವೊಮ್ಮೆ ಸೂಕ್ಷ್ಮ ಯುದ್ಧದಲ್ಲಿ ಜೀವ ಹೋಗುವ ಸಾಧ್ಯತೆ ಸಹ ಇರುತ್ತದೆ. ನಮಗೆ ಯುದ್ಧಕ್ಕಿಂತ ಸಾಧಕರು ಮಹತ್ವದವರಾಗಿದ್ದಾರೆ.” ಹೀಗೆ ದೃಷ್ಟಿಕೋನವನ್ನು ನೀಡಿ ಪರಾತ್ಪರ ಗುರು ಡಾಕ್ಟರರು ಸನಾತನದ ಪ್ರತಿಯೊಬ್ಬ ಸಾಧಕ ಅಮೂಲ್ಯವಾಗಿದ್ದಾನೆ ಎಂಬುದರ ಮಹತ್ವವನ್ನು ನಮ್ಮ ಮನಸ್ಸಿನಲ್ಲಿ ಬಿಂಬಿಸಿದರು. ‘ಆ ಸಾಧಕನ ಕಾಳಜಿ ನಾವು ತೆಗೆದುಕೊಳ್ಳಲೇ ಬೇಕು’, ಎಂಬುದನ್ನೂ ಅವರು ನಮಗೆ ತೋರಿಸಿಕೊಟ್ಟರು, ಆದ್ದರಿಂದ ನಾವು ಯುದ್ಧವನ್ನು ನಿಲ್ಲಿಸಿದೆವು.

೬. ಅನೇಕ ಜನ್ಮಗಳಿಂದ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ಸಾಧಕರ ಪ್ರಾಣವನ್ನು ರಕ್ಷಣೆ ಮಾಡುವ ಪರಾತ್ಪರ ಗುರುದೇವರು !

ನಾವು ಪ್ರತ್ಯಕ್ಷ ಯುದ್ಧವನ್ನು ನಿಲ್ಲಿಸಿದರೂ, ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಆಕ್ರಮಣ ಮಾಡುತ್ತಲೇ ಇವೆ ಹಾಗೂ ಅವುಗಳಿಂದ ಗುರುದೇವರು ನಮ್ಮ ರಕ್ಷಣೆ ಮಾಡುತ್ತಿದ್ದಾರೆ, ಅಂದರೆ ‘ಸೂಕ್ಷ್ಮದಿಂದ ಪರೋಕ್ಷವಾಗಿ ಗುರುದೇವರು ಮಾಡುತ್ತಿರುವ ಕಾರ್ಯ ಎಷ್ಟು ದೊಡ್ಡದಾಗಿದೆ !’, ಎಂಬುದು ಕೂಡ ಈ ಉದಾಹರಣೆಯಿಂದ ನಮಗೆ ಕಲಿಯಲು ಸಿಕ್ಕಿತು. ‘ನಮ್ಮಂತಹ ಕ್ಷುದ್ರ ಜೀವಗಳನ್ನು ಗುರುದೇವರು ಎಷ್ಟು ಜನ್ಮಗಳಿಂದ ಜೋಪಾನ ಮಾಡುತ್ತಿದ್ದಾರೆ !’, ಎಂಬುದು ಕೂಡ ನಮ್ಮ ಬುದ್ಧಿಗೆ ಎಟುಕದ ವಿಷಯವಾಗಿದೆ. ಅವರಿಂದಾಗಿಯೇ ನಾವು ಜೀವಂತವಾಗಿದ್ದೇವೆ, ಇಲ್ಲದಿದ್ದರೆ ಈ ದೊಡ್ಡ ಕೆಟ್ಟ ಶಕ್ತಿಗಳಿಗೆ ನಮ್ಮನ್ನು ಕೊಲ್ಲಲು ಹೆಚ್ಚು ಹೊತ್ತು ಬೇಕಾಗಿಲ್ಲ.

ಈ ರೀತಿ ‘ಪ್ರಾಣವನ್ನು ರಕ್ಷಣೆ ಮಾಡಿ ಗುರುದೇವರು ನಮಗೆ ಎಷ್ಟು ಬಾರಿ ‘ಬೋನಸ್’ (ಹೆಚ್ಚುವರಿ) ಜೀವನವನ್ನು ನೀಡಿದ್ದಾರೆ ?’, ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇದರಿಂದ ‘ಪರಾತ್ಪರ ಗುರು ಡಾಕ್ಟರರು ಪ್ರತಿಯೊಬ್ಬ ಸಾಧಕನ ಜನ್ಮಜನ್ಮಾಂತರಗಳಿಂದ ಎಷ್ಟು ಕಾಳಜಿ ವಹಿಸುತ್ತಿದ್ದಾರೆ !’, ಎಂಬುದು ನಮಗೆ ಕಲಿಯಲು ಸಿಕ್ಕಿತು.

ನಮ್ಮ ರಕ್ಷಣೆ ಮಾಡುವ ಆ ಗುರುದೇವರು ಧನ್ಯರು ಹಾಗೂ ಅವರ ಆಶ್ರಯದಲ್ಲಿರುವ ಸಾಧಕರೂ ಧನ್ಯರು !’

(ಮುಂದುವರಿಯುವುದು)

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ ತಮಿಳುನಾಡು  (೮.೨.೨೦೨೨)

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

* ಸೂಕ್ಷ್ಮಜ್ಞಾನದ ಚಿತ್ರ : ಕೆಲವು ಸಾಧಕರಿಗೆ ಯಾವುದಾದರೊಂದು ವಿಷಯದ ಬಗ್ಗೆ ಯಾವುದು ಅರಿವಾಗುತ್ತದೆಯೋ ಮತ್ತು ಅಂತರ್ದೃಷ್ಟಿಗೆ ಕಾಣಿಸುತ್ತದೆಯೋ, ಅದರ ಬಗ್ಗೆ ಅವರು ಕಾಗದದ ಮೇಲೆ ಬಿಡಿಸಿದ ಚಿತ್ರಕ್ಕೆ ‘ಸೂಕ್ಷ್ಮಜ್ಞಾನದ ಚಿತ್ರ ಎಂದು ಹೇಳುತ್ತಾರೆ.