ಸಹೋದರ ಮತ್ತು ಸಹೋದರಿಯ ಪ್ರೇಮಾನುಬಂಧಕ್ಕೆ ಸಾಕ್ಷಿಯಾದ ‘ರಕ್ಷಾಬಂಧನ’

ಆಗಸ್ಟ್ ೧೯ ರಂದು ಇರುವ ರಕ್ಷಾಬಂಧನದ ನಿಮಿತ್ತ

೧. ಸಹೋದರಿಯ ಸಂಕಲ್ಪದ ಅದ್ಭುತ ಶಕ್ತಿ ಇರುವ ರಾಖಿಯ ದಾರ !

‘ರಕ್ಷಾಬಂಧನದ ದಿನ ಸಹೋದರಿಯ ರಕ್ಷಣೆಯ ಸಂಕಲ್ಪವನ್ನು ಸಾಕಾರಗೊಳಿಸಲು ಸಹೋದರಿಯು ಸಹೋದರನ ಮನೆಗೆ ಬರುತ್ತಾಳೆ. ರಾಖಿಯ ದಾರ ಚಿಕ್ಕದಾಗಿರುತ್ತದೆ; ಆದರೆ ಸಹೋದರಿಯ ಸಂಕಲ್ಪ ಅದರಲ್ಲಿ ಅದ್ಭುತ ಶಕ್ತಿಯನ್ನು ತುಂಬುತ್ತದೆ. ಸಂಕಲ್ಪ ಎಷ್ಟು ನಿಃಸ್ವಾರ್ಥ, ನಿರ್ದೋಷ ಹಾಗೂ ಪವಿತ್ರವಾಗಿರುತ್ತದೋ, ಅಷ್ಟೇ ಅದರ ಪ್ರಭಾವ ಹೆಚ್ಚಾಗುತ್ತದೆ.

ಸಹೋದರಿಯು ಸಹೋದರನಿಗೆ ರಾಖಿ ಕಟ್ಟುತ್ತಾಳೆ; ಏಕೆಂದರೆ ‘ನನ್ನ ಸಹೋದರನು ವರ್ಷವಿಡೀ ಬರುವ ವಿಘ್ನಗಳು ಮತ್ತು ಬಾಧೆಗಳನ್ನು ಜಯಿಸಬೇಕು’, ಎಂಬುದು ಅವಳ ಕಾಮನೆಯಾಗಿರುತ್ತದೆ. ಸಹೋದರಿಯು ಸಹೋದರನ ಹಣೆಗೆ ತಿಲಕವನ್ನಿಟ್ಟು ಸಂಕಲ್ಪ ಮಾಡುತ್ತಾಳೆ, ‘ನನ್ನ ಸಹೋದರ ತ್ರಿಲೋಚನ (ಮುಕ್ಕಣ್ಣ- ಶಿವ)ನಾಗಬೇಕು, ಅವನು ಭೋಗಗಳಿಗೆ ಬಲಿಯಾಗಬಾರದು. ಭೋಗದಿಂದ ರೋಗಳು ಬರುತ್ತವೆ ಹಾಗೂ ಭಯ ನಿರ್ಮಾಣವಾಗುತ್ತದೆ. ನನ್ನ ಸಹೋದರ ಭೋಗಿಯಲ್ಲ, ಅವನು ಯೋಗಿಯಾಗಬೇಕು. ನನ್ನ ಸಹೋದರನ ದೃಷ್ಟಿ ಮಂಗಲಮಯವಾಗಬೇಕು, ಅವನಿಗೆ ಮಂಗಲವಾಗಬೇಕು’ ಸಹೋದರ ಕೂಡ ಈ ದಿನ ಸಹೋದರಿಗೆ ಐತಿಹಾಸಿಕ ವಸ್ತುವನ್ನು ನೀಡಿ ಸಂತೋಷಗೊಳಿಸುತ್ತಾನೆ. ಅದರ ಜೊತೆಗೆ ಸಹೋದರಿಯ ಜೀವನದ ಹೊಣೆ, ಅವಳ ಜೀವನದಲ್ಲಿ ಬರುವ ಅಡಚಣೆಗಳು ಮತ್ತು ಸಮಸ್ಯೆಗಳನ್ನು ದೂರಗೊಳಿಸುವ ಹೊಣೆಯನ್ನು ಕೂಡ ಚಿತ್ತದಲ್ಲಿ ಬಿಂಬಿಸಿಕೊಳ್ಳುತ್ತಾನೆ.

೨. ಭಾರತೀಯ ನರ-ನಾರಿಯರೆ, ತಮ್ಮ ದೃಷ್ಟಿ ವಿಶಾಲವಾಗಿರಲಿ !

ಸಹೋದರ-ಸಹೋದರಿಯರಿಂದ ನಿರೀಕ್ಷಿಸುವುದೇನೆಂದರೆ, ನೀವು ನಿಮ್ಮ ಮನೆಯ ವರೆಗೆ ಮಾತ್ರ ಸೀಮಿತವಾಗಿರಬೇಡಿ; ‘ಅಕ್ಕ ನೀನು ಭಾರತದ ನಾರಿಯಾಗಿದ್ದೀಯ,’ ಸಹೋದರಿಗೆ ಅನಿಸುತ್ತದೆ, ‘ಅಣ್ಣ ನೀನು ಭಾರತದ ನರನಾಗಿದ್ದೀಯ.’ ನಾರಿಯರು ತಮ್ಮ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ತಮ್ಮ ಹೃದಯದಲ್ಲಿ ಜೋಪಾನ ವಾಗಿಟ್ಟುಕೊಂಡರೆ, ತಮ್ಮ ಹೃದಯದಲ್ಲಿ ದೃಢಪಡಿಸಿಕೊಂಡರೆ, ಪಾಶವೀ ವರ್ತನೆಯ (ಮನಸ್ಸನ್ನು ಪಾಶವೀ ವೃತ್ತಿಯ ಕೈಗೆ ಕೊಟ್ಟಿರುವ) ಪತಿಯನ್ನು ಅವಳು ಪಶುಪತಿ ಮಾಡುವುದರಲ್ಲಿ ಸಫಲವಾಗಬಹುದು.

‘ಸಹೋದರನೂ ಸಂಕುಚಿತನಾಗಬಾರದು’, ಕೇವಲ ತನ್ನ ೧-೨ ಸಹೋದರಿಯರಲ್ಲ, ‘ನೆರೆಕರೆಯ ಸಹೋದರಿಯರೂ ನನ್ನ ಸಹೋದರಿಯರೆ ಆಗಿದ್ದಾರೆ’, ಎಂದು ತಿಳಿಯಬೇಕು. ‘ಸಹೋದರನಿಂದ ನೆರೆಮನೆಯ ಸಹೋದರಿಯ ರಕ್ಷಣೆಯೂ ಆಗಲಿ ಹಾಗೂ ಸಹೋದರಿಯಿಂದ ನೆರೆಮನೆಯ ಸಹೋದರನಿಗೂ ಶುಭವಾಗಲಿ’, ಎನ್ನುವ ಸದ್ಭಾವನೆ ಇರಬೇಕು. ಇಂತಹ ಪರಸ್ಪರ ಹಿತದ ಭಾವ ಸಮಾಜದಲ್ಲಿ ಹರಡಬೇಕು.

೩. ಸ್ತ್ರೀಯರಲ್ಲಿ ಮಾತೃಶಕ್ತಿ ಹಾಗೂ ಆದಿಶಕ್ತಿ ಅಡಗಿದೆ !

‘ನಾರಿಗೆ ಸಮಾನ ಅಧಿಕಾರವಿಲ್ಲ…!’ ಈಶ್ವರನು ನಾರಿಗೆ ಎಷ್ಟು ಅಧಿಕಾರ ಮತ್ತು ಕ್ಷಮತೆಯನ್ನು ನೀಡಿದ್ದಾನೋ, ಅದನ್ನು ಬೇರೆ ಯಾವುದರೊಂದಿಗೂ ತುಲನೆ ಮಾಡಲು ಸಾಧ್ಯವಿಲ್ಲ. ಮಾತಾ-ಪಿತರ ಹೆಸರನ್ನು ಉಚ್ಚರಿಸುವಾಗ, ಮೊದಲು ಮಾತೆಯ ಹೆಸರು ಬರುತ್ತದೆ. ‘ಮಾತೃದೇವೋಭವ |’, ಆಮೇಲೆ ಬರುತ್ತದೆ, ಪಿತೃದೇವೋಭವ |’ ದೇವಿಯರೇ, ನಿಮ್ಮಲ್ಲಿ ಮಾತೃಶಕ್ತಿ, ಆದಿಶಕ್ತಿ ಅಡಗಿದೆ.’