೧. ನರ್ಮದಾ ಸರದಾರ ಸರೋವರದ ವಿರುದ್ಧ ಆಂದೋಲನ ನಡೆಸಿದ ಮೇಧಾ ಪಾಟಕರ್‌ಗೆ ದೊಡ್ಡ ಪ್ರಸಿದ್ಧಿ ಸಿಕ್ಕಿತು
ದೆಹಲಿಯ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಇವರನ್ನು ಅವಮಾನಿಸಿದ ಪ್ರಕರಣದಲ್ಲಿ ನರ್ಮದಾ ಬಚಾವ್ ಆಂದೋಲನದ ಹಿರಿಯ ಸಮಾಜಸೇವಕಿ ಮೇಧಾ ಪಾಟಕರ್ ಇವರನ್ನು ದೆಹಲಿಯ ಮಹಾನಗರ ದಂಡಾಧಿಕಾರಿಗಳು ೨೪.೫.೨೦೨೪ ರಂದು ದೋಷಿಯೆಂದು ನಿರ್ಧರಿಸಿದರು. ೧೯೬೧ ರಲ್ಲಿ ಆಗಿನ ಪ್ರಧಾನಮಂತ್ರಿ ಜವಾಹರಲಾಲ ನೆಹರು ಇವರು ನರ್ಮದಾ ಸರದಾರ ಸರೋವರದ ಅಡಿಪಾಯ ಹಾಕಿದ್ದರಂತೆ. ಕಾಂಗ್ರೆಸ್ಸಿನ ನಿತ್ಯದ ಕಾರ್ಯಶೈಲಿಗನುಸಾರ ಅದರ ಕೆಲಸ ಪೂರ್ಣವಾಗದೆ ಅರ್ಧದಲ್ಲಿಯೇ ಉಳಿಯಿತು. ಕಾಂಗ್ರೆಸ್ಸಿನ ನಾಯಕರು ಯೋಜನೆಗಳಿಗೆ ತಮ್ಮ ಹೆಸರಿನ ಫಲಕಗಳನ್ನು ಹಾಕಿಸುತ್ತಿದ್ದರು; ಆದರೆ ಆ ಯೋಜನೆಗಳನ್ನು ಪೂರ್ಣಗೊಳಿಸುತ್ತಿರಲಿಲ್ಲ. ನರೇಂದ್ರ ಮೋದಿಯವರು ಗುಜರಾತದ ಮುಖ್ಯಮಂತ್ರಿಯಾದಾಗ ಸರದಾರ ಸರೋವರ ಯೋಜನೆಯತ್ತ ಗಮನ ಹರಿಸಿ ಅದನ್ನು ಪೂರ್ಣಗೊಳಿಸಿದರು. ಇದರಿಂದ ಗುಜರಾತ ಸಹಿತ ರಾಜಸ್ಥಾನ ಹಾಗೂ ಇನ್ನಿತರ ನೆರೆರಾಜ್ಯಗಳಿಗೂ ದೊಡ್ಡ ಪ್ರಮಾಣದಲ್ಲಿ ಲಾಭವಾಯಿತು. ‘ಈ ಯೋಜನೆಯಲ್ಲಿ ಕೃಷಿಕರ ಭೂಮಿಗಳು ಹೋದವು’, ‘ಕೃಷಿಕರಿಗೆ ಪರಿಹಾರ ಸಿಗಲಿಲ್ಲ’, ಅವರಿಗೆ ಪರ್ಯಾಯ ಸ್ಥಳ ಕೊಡಲಿಲ್ಲ’, ಇಂತಹ ವಿಷಯಗಳನ್ನು ದೊಡ್ಡದು ಮಾಡಿ ಸರದಾರ ಸರೋವರದ ವಿರುದ್ಧ ಮೇಧಾ ಪಾಟಕರ್ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅನೇಕ ಸಾರ್ವಜನಿಕಹಿತಾಸಕ್ತಿ ಅರ್ಜಿಗಳನ್ನು ದಾಖಲಿಸಿದರು. ದುರ್ಭಾಗ್ಯದಿಂದ ಅದರಲ್ಲಿನ ಕೆಲವು ಅರ್ಜಿಗಳನ್ನು ಸ್ವೀಕರಿಸಲಾಯಿತು. ಇದರಿಂದ ಪಾಟಕರ್ ಇವರಿಗೆ ದೊಡ್ಡ ಪ್ರಸಿದ್ಧಿ ಸಿಕ್ಕಿತು. ‘ಸರದಾರ ಸರೋವರ ಯೋಜನೆಯು ರೈತರ ವಿರುದ್ಧವಿದೆ’, ‘ಈ ಯೋಜನೆ ಜನರ ವಿರುದ್ಧವಿದೆ’, ಎಂದು ಕಥೆ ಕಟ್ಟುವುದರಲ್ಲಿ ಅವರು ಸ್ವಲ್ಪಮಟ್ಟಿಗೆ ಯಶಸ್ವಿಯಾದರು. ‘ಸತ್ಯವನ್ನು ಸಿದ್ಧಪಡಿಸಲು ಸ್ವಲ್ಪ ಸಮಯ ತಗಲುತ್ತದೆ; ಆದರೆ ಅದು ಒಂದು ದಿನ ಬೆಳಕಿಗೆ ಬಂದೇ ಬರುತ್ತದೆ’, ಎನ್ನುವ ನಾಣ್ನುಡಿಯಂತೆ ಮೇಧಾ ಪಾಟಕರ್ ಇವರು ಯಾರದ್ದೋ ಸಲಹೆಗನುಸಾರ ಭಾರತ ಮತ್ತು ಗುಜರಾತ ರಾಜ್ಯದ ವಿರುದ್ಧ ಸಾರ್ವಜನಿಕಹಿತಾಸಕ್ತಿ ಅರ್ಜಿ ಸಲ್ಲಿಸುತ್ತಾರೆ, ಎಂಬುದು ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿತು. ಆದ್ದರಿಂದ ಅವರ ಕೆಲವು ಅರ್ಜಿಗಳನ್ನು ತಳ್ಳಿ ಹಾಕಲಾಯಿತು
೨. ಮೇಧಾ ಪಾಟಕರ್ ಇವರು ವಿ.ಕೆ. ಸಕ್ಸೇನಾ ಇವರನ್ನು ಅವಮಾನಿಸಿದ ವಿಷಯವನ್ನು ಸ್ವೀಕರಿಸಿದ ನ್ಯಾಯಾಲಯ
೨೦೦೩ ರಲ್ಲಿ ಮೇಧಾ ಪಾಟಕರ್ ನರ್ಮದಾ ಬಚಾವ್ ಆಂದೋಲನದಲ್ಲಿ ಸಕ್ರಿಯರಾಗಿದ್ದರು. ಆಗ ವಿ.ಕೆ.ಸಕ್ಸೇನಾ ‘ನಾಗರೀ ಉದಾರೀಕರಣಕ್ಕಾಗಿ ರಾಷ್ಟ್ರೀಯ ಪರಿಷತ್ತು’ (ನ್ಯಾಶನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್) ಈ ಸಂಸ್ಥೆಯ ಮೂಲಕ ಸಕ್ರಿಯರಾಗಿದ್ದರು. ಈ ಸಂಸ್ಥೆಗೆ ಸರದಾರ ಸರೋವರ ಆಗಬೇಕು, ಎಂದು ಅನಿಸುತ್ತಿತ್ತು. ಅವರಿಂದ ಮೇಧಾ ಪಾಟಕರ್ ಇವರಿಂದ ಆಂದೋಲನಕ್ಕೆ ವಿರೋಧವಿತ್ತು. ಆಗ ಸಕ್ಸೇನಾ ಇವರು ಮೇಧಾ ಪಾಟಕರ್ ಮತ್ತು ಅವರ ನರ್ಮದಾ ಬಚಾವ್ ಆಂದೋಲನದ ವಿರುದ್ಧ ಒಂದು ಜಾಹೀರಾತನ್ನು ಪ್ರಸಿದ್ಧಪಡಿಸಿದ್ದರು. ಅನಂತರ ಮೇಧಾ ಪಾಟಕರ್ ಇವರು ಪ್ರಸಾರ ಮಾಧ್ಯಮಗಳ ಮುಂದೆ ಸಕ್ಸೇನಾ ಇವರ ವಿರುದ್ಧ ‘ಅಂಜುಬುರುಕ’, ‘ದೇಶಭಕ್ತರಲ್ಲ’, ಇತ್ಯಾದಿ ಅವಮಾನಕರ ಹೇಳಿಕೆಗಳನ್ನು ನೀಡಿದ್ದರು. ಆದ್ದರಿಂದ ಅವರು ಪಾಟಕರ್ ಇವರ ವಿರುದ್ಧ ಮಾನಹಾನಿಯ ಎರಡು ಖಟ್ಲೆಗಳನ್ನು ದಾಖಲಿಸಿದ್ದರು. ಆ ಮಾನಹಾನಿಯ ಖಟ್ಲೆಯನ್ನು ಭಾರತೀಯ ದಂಡಸಂಹಿತೆ ಕಲಮ್ ೫೦೦ ಕ್ಕನುಸಾರ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಮಹಾನಗರ ದಂಡಾಧಿಕಾರಿ ರಾಘವ ಶರ್ಮಾ ಇವರು ಇತ್ತೀಚೆಗೆ ಪಾಟಕರ್ ಇವರನ್ನು ದೋಷಿಯೆಂದು ನಿರ್ಧರಿಸಿದರು. ಈ ತೀರ್ಪುಪತ್ರದಲ್ಲಿ ಮಹಾನಗರ ದಂಡಾಧಿಕಾರಿ ಶರ್ಮಾ ಹೇಳುತ್ತಾರೆ, ‘ಮನುಷ್ಯನಿಗೆ ಘನತೆಯೆ ಮಹತ್ವದ್ದಾಗಿದ್ದು ಕೀರ್ತಿ ಎಂಬುದು ಎಲ್ಲಕ್ಕಿಂತ ದೊಡ್ಡ ಠೇವಣಿಯಾಗಿದೆ.’ ಮೇಧಾ ಪಾಟಕರ್ ಇವರು ಉದ್ದೇಶಪೂರ್ವಕ ಸಮಾಜದಲ್ಲಿ ಸಕ್ಸೇನಾ ಇವರನ್ನು ಅವಮಾನಿಸಿದರು. ಆದ್ದರಿಂದ ಅವರ ವಿಶ್ವಾಸಾರ್ಹತೆಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಯಿತು. ಇದನ್ನು ನ್ಯಾಯಾಲಯ ಒಪ್ಪಿಕೊಂಡು ಅವರನ್ನು ದೋಷಿಯೆಂದು ನಿರ್ಣಯ ನೀಡಿತು.
೩. ಅವಮಾನದ ಪ್ರಕರಣದಲ್ಲಿ ಎರಡೂ ಕಡೆಯ ನ್ಯಾಯವಾದಿಗಳ ಯುಕ್ತಿವಾದ
ಈ ಪ್ರಕರಣದಲ್ಲಿ ೩೦.೫.೨೦೨೪ ರಂದು ಎರಡೂ ಕಡೆಯ ನ್ಯಾಯವಾದಿಗಳು ಯುಕ್ತಿವಾದ ಮಂಡಿಸಿದರು. ವಿ.ಕೆ.ಸಕ್ಸೇನಾ ಇವರ ನ್ಯಾಯವಾದಿಗಳು ಮುಂದಿನಂತೆ ಹೇಳಿದರು, ‘ಮೇಧಾ ಪಾಟಕರ್ ಇವರಿಗೆ ಬೇರೆಯವರನ್ನು ಅವಮಾನಿಸುವ ಅಭ್ಯಾಸ ಆಗಿದೆ. ಅವರು ಉದ್ದೇಶಪೂರ್ವಕ ಸಕ್ಸೇನಾ ಇವರನ್ನು ಅವಮಾನಿಸಿದರು ಹಾಗೂ ಅವರ ದೇಶಭಕ್ತಿಯ ಮೇಲೆ ಸಂಶಯ ವ್ಯಕ್ತಪಡಿಸಿದರು. ಈ ಪ್ರಕರಣದ ಹೊರತು ೨೦೦೬ ರಲ್ಲಿ ಒಂದು ವಾರ್ತಾವಾಹಿನಿಗೆ ತಪ್ಪು ಮಾಹಿತಿ ನೀಡಿದ ಪ್ರಕರಣದಲ್ಲಿ ಸಕ್ಸೇನಾ ಇವರು ಪಾಟಕರ್ ಇವರ ವಿರುದ್ಧ ಮಾನಹಾನಿಯ ಖಟ್ಲೆಯನ್ನು ದಾಖಲಿಸಿದ್ದರು. ಆದ್ದರಿಂದ ಅವರಿಗೆ ಭಾರತೀಯ ದಂಡಸಂಹಿತೆಯ ಕಲಮ್ ೫೦೦ ಕ್ಕನುಸಾರ ಕಠಿಣ ಶಿಕ್ಷೆಯಾಗ ಬೇಕು.’ ಮೇಧಾ ಪಾಟಕರ್ ಇವರ ನ್ಯಾಯವಾದಿಗಳು ಮುಂದಿನಂತೆ ಯುಕ್ತಿವಾದ ಮಾಡಿದರು, ‘ಪಾಟಕರ್ ಇವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ತರದಲ್ಲಿ ೫ ಪ್ರಶಸ್ತಿಗಳು ಸಿಕ್ಕಿವೆ. ಅವರು ಪೂರ್ಣ ಜೀವನವನ್ನು ರೈತರು ಮತ್ತು ದೇಶದ ಜನರ ಕಲ್ಯಾಣಕ್ಕಾಗಿ ಸವೆಸಿದರು. ಆದ್ದರಿಂದ ಅವರಿಗೆ ಸಣ್ಣ ಶಿಕ್ಷೆಯಾಗಬೇಕು.’
೪. ಸಂತ್ರಸ್ತ ಪರಿಹಾರ ಯೋಜನೆ
ಈ ಪ್ರಕರಣದಲ್ಲಿ ಮಹಾನಗರ ದಂಡಾಧಿಕಾರಿ ರಾಘವ ಶರ್ಮಾ ಇವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕರಣದಿಂದ (‘ಲೀಗಲ್ ಸರ್ವಿಸೆಸ್ ಅಥಾರಿಟಿ’ಯಿಂದ) ‘ಸಂತ್ರಸ್ತ ಪ್ರಭಾವ ವರದಿ’ (ವಿಕ್ಟಿಮ್ ಇಂಪ್ಯಾಕ್ಟ್ ರಿಪೋರ್ಟ್) ತರಿಸಿದ್ದಾರೆ. ಆರೋಪಿಯನ್ನು ಅಪರಾಧಿಯೆಂದು ನಿರ್ಧರಿಸಿದ ನಂತರ ಸಂತ್ರಸ್ತರಿಗೆ ಎಷ್ಟು ಆರ್ಥಿಕ ಹಾನಿಯಾಗಿದೆ ?, ಅವರಿಗೆ ಎಷ್ಟು ಅವಮಾನವಾಗಿದೆ ?, ಅಪರಾಧದಿಂದ ಅಥವಾ ಪ್ರಸಂಗದಿಂದ ಸಂತ್ರಸ್ತರಿಗೆ ಹೇಗೆ ಪರಿಣಾಮವಾಗಿದೆ ?, ಈ ರೀತಿಯ ವರದಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕರಣವು ಸಿದ್ಧಪಡಿಸುತ್ತಿರುತ್ತದೆ. ಅದನ್ನು ಶೀಘ್ರದಲ್ಲಿಯೇ ಮಹಾನಗರ ದಂಡಾಧಿಕಾರಿ ನ್ಯಾಯಾಲಯದಲ್ಲಿ ಸಲ್ಲಿಸಲಾಗುವುದು.
ಸಂತ್ರಸ್ತರಿಗೆ ಪರಿಹಾರ ನೀಡುವುದು ಅಥವಾ ಪರಿಹಾರ ಎಷ್ಟು ನೀಡಬೇಕು, ಎಂಬ ವಿಷಯದಲ್ಲಿ ಸಂಯುಕ್ತ ರಾಷ್ಟ್ರಗಳು ೧೯೯೫ ರಲ್ಲಿ ಘೋಷಣೆಯನ್ನು ಮಾಡಿದ್ದವು. ಅನಂತರ ಭಾರತದಲ್ಲಿ ಭಾರತೀಯ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯಲ್ಲಿ ಬದಲಾವಣೆ ಮಾಡಲಾಯಿತು. ಕಲಮ್ ೩೫೭ ಕ್ಕನುಸಾರ ಆರೋಪಿಯನ್ನು ದೋಷಿಯೆಂದು ನಿರ್ಧರಿಸಿದಾಗ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎನ್ನುವ ಆದೇಶ ನೀಡಲು ನ್ಯಾಯಾಧೀಶರಿಗೆ ಸಾಧ್ಯವಾಗುತ್ತದೆ. ಈ ಕಲಮ್ ಇರುವಾಗಲೇ ೨೦೦೯ ರಲ್ಲಿ ಇದರಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಕಲಮ್ ೩೫೭-ಅ, ೩೫೭-ಬ, ಮತ್ತು ೩೫೭-ಕ ಸೇರಿಸಲಾಯಿತು. ಕಲಮ್ ೩೫೭-ಅ ಕ್ಕನುಸಾರ ಸಂತ್ರಸ್ತ ಪರಿಹಾರ ಯೋಜನೆಯಲ್ಲಿ ಮುಂದಿನಂತೆ ಹೇಳಲಾಗಿದೆ, ‘ಪ್ರತಿಯೊಂದು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದೊಂದಿಗೆ ವಿಚಾರವಿನಿಮಯ ಮಾಡಿ ಒಂದು ಯೋಜನೆಯನ್ನು ಸಿದ್ಧಪಡಿಸಲಾಗುವುದು, ಅದರಲ್ಲಿ ಹಣ ಇಡಲಾಗುವುದು ಹಾಗೂ ಆ ಹಣದಿಂದ ಅಪರಾಧದಲ್ಲಿನ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು.’ ಈ ವಿಷಯದಲ್ಲಿ ಮಹಾನಗರ ದಂಡಾಧಿಕಾರಿ ಅಥವಾ ನ್ಯಾಯಾಧೀಶರು ಆರೋಪಿಯನ್ನು ದೋಷಿಯೆಂದು ನಿರ್ಧರಿಸಿ ಆದೇಶ ನೀಡಿದರೆ ಕಾನೂನು ಸೇವಾ ಪ್ರಾಧಿಕರಣ ಅದರ ವರದಿಯನ್ನು ಕಳುಹಿಸಬೇಕು. ಈ ವರದಿ ದಾಖಲಾದ ನಂತರ ಅವರು ಮಾನಹಾನಿಯನ್ನು ತುಂಬಿಸುವ ವಿಷಯದಲ್ಲಿ ಸ್ವತಂತ್ರವಾಗಿರುವ ಕಲಮ್ ೩೫೭ ಕ್ಕನುಸಾರ ಆದೇಶವನ್ನು ನೀಡಬಹುದು.
೫. ಸಂತ್ರಸ್ತರನ್ನು ಅವಮಾನಿಸಿದ ಪ್ರಕರಣದಲ್ಲಿ ಕಠೋರ ಶಿಕ್ಷೆಯಾಗುವುದು ಆವಶ್ಯಕ !
೨೦೧೮ ರಲ್ಲಿ ಈ ವಿಷಯದಲ್ಲಿ ಮಲ್ಲಿಕಾರ್ಜುನ ಕೋಡಗಲ್ಲಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಚರ್ಚೆಯಾಗಿತ್ತು. ಅದರಲ್ಲಿ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕರಣದಿಂದ ವರದಿಯನ್ನು ತರಿಸಿದ್ದರು; ಆದರೆ ನಿಜವಾಗಿ ನೋಡಿದರೆ ದೆಹಲಿ ಉಚ್ಚ ನ್ಯಾಯಾಲಯ ೨೦೨೦ ರಲ್ಲಿ ‘ಕರಣ ವಿರುದ್ಧ ರಾಜ್ಯ ಸರಕಾರ’ ಈ ಪ್ರಕರಣದಲ್ಲಿ ಇಂತಹ ವರದಿಯನ್ನು ತರಿಸಿ ಸಂತ್ರಸ್ತರಿಗೆ ಪರಿಹಾರ ನೀಡಿತು. ಇದರಲ್ಲಿ ಇನ್ನೂ ಒಂದು ವಿಷಯವನ್ನು ಚರ್ಚಿಸಲಾಯಿತು, ‘ಯಾವಾಗ ಸಂತ್ರಸ್ತೆಯ ಮೇಲಿನ ಲೈಂಗಿಕ ಅತ್ಯಾಚಾರದ ಪ್ರಕರಣದಲ್ಲಿ ಖಟ್ಲೆಯ ಆಲಿಕೆ ಯಾಗುತ್ತದೆಯೋ, ಆಗ ಅವಳಿಗೆ ಅವಮಾನಕರ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆದ್ದರಿಂದ ಸಂತ್ರಸ್ತೆಗೆ ನ್ಯಾಯಾಲಯದಲ್ಲಿಯೂ ಅವಮಾನವಾಗುತ್ತದೆ.’ ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಹೀಗೆ ಹೇಳಿತು, ‘ಆರೋಪಿಯೊಂದಿಗೆ ವರ್ತಿಸುವಾಗ ಸಂತ್ರಸ್ತೆಗೆ ಅನ್ಯಾಯವಾಗದೆ, ಅವಳ ಮಾನ ಸನ್ಮಾನದ ಬಗ್ಗೆ ವಿಚಾರ ಮಾಡಬೇಕು, ಅಂದರೆ ‘ಅಪರಾಧದ ನ್ಯಾಯಾಂಗ ಪದ್ಧತಿ’ ಇರಬೇಕು.
ವಿ.ಕೆ. ಸಕ್ಸೇನಾ ಪ್ರಕರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕರಣದಿಂದ ವರದಿ ಬಂದ ನಂತರ ಸಂಬಂಧಪಟ್ಟವರಿಗೆ ಶಿಕ್ಷೆಯನ್ನು ಹೇಳಲಾಗುವುದು, ಅದೇ ರೀತಿ ಸಂತ್ರಸ್ತರಿಗೆ ಪರಿಹಾರ ಹಣ ಎಷ್ಟು ಕೊಡಬೇಕು, ಎಂದು ನಿರ್ಧರಿಸಲಾಗುವುದು. ನ್ಯಾಯಾಲಯದ ತೀರ್ಪುಪತ್ರದಲ್ಲಿ ನಮೂದಿಸಿದ ವ್ಯಕ್ತಿಗೆ ವಿ.ಕೆ. ಸಕ್ಸೇನಾ ಇವರ ನ್ಯಾಯವಾದಿಗಳು ಹೇಳಿದಂತೆ (ಮೇಧಾ ಪಾಟಕರ್ ಇವರಿಗೆ) ಕಠಿಣ ಶಿಕ್ಷೆ ನೀಡಬೇಕು. ಇದರಲ್ಲಿ ಆರೋಪಿಗೆ ೨ ವರ್ಷಗಳ ವರೆಗಿನ ಶಿಕ್ಷೆಯಾಗಬಹುದು.
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೮.೬.೨೦೨೪)