DTA Agreement Cancelled : ಸ್ವಿಜರ್ಲ್ಯಾಂಡ್ ನಿಂದ ಭಾರತಕ್ಕೆ ನೀಡಿದ್ದ ‘ಅತ್ಯಂತ ನೆಚ್ಚಿನ ರಾಷ್ಟ್ರ’ ದ ಸ್ಥಾನ ರದ್ದು !

ಸ್ವಿಜರ್ಲ್ಯಾಂಡ್ ನಲ್ಲಿ ಕಾರ್ಯನಿರತ ಭಾರತೀಯ ಕಂಪನಿಗಳಿಗೆ ನಷ್ಟವಾಗುವ ಸಾಧ್ಯತೆ

ಬರ್ನ್ (ಸ್ವಿಜರ್ಲ್ಯಾಂಡ್) – ಸ್ವಿಜರ್ಲ್ಯಾಂಡ್ ಸರಕಾರವು ಭಾರತಕ್ಕೆ ನೀಡಿರುವ ‘ಅತ್ಯಂತ ನೆಚ್ಚಿನ ರಾಷ್ಟ್ರ’ ಸ್ಥಾನ ಹಿಂಪಡೆದಿದೆ. ಸ್ವಿಸ್ ಸರಕಾರದ ಈ ನಿರ್ಣಯದ ನಂತರ ಅಲ್ಲಿ ಕಾರ್ಯನಿರತ ಇರುವ ಭಾರತೀಯ ಕಂಪನಿಗಳಿಗೆ ಜನವರಿ ೧, ೨೦೨೫ ರಿಂದ ಶೇಖಡ ೧೦ ರಷ್ಟು ಹೆಚ್ಚಿನ ತೆರಿಗೆ ತುಂಬಬೇಕಾಗಬಹುದು. ಸ್ವಿಜರ್ಲ್ಯಾಂಡಿನ ‘ಡಬಲ್ ಟ್ಯಾಕ್ಸ್ ಅವ್ಹಾಯಿಂಡನ್ಸ್ ಅಗ್ರಿಮೆಂಟ್’ (ಡಿಟಿಎಎ) ಅಡಿಯಲ್ಲಿ ಭಾರತಕ್ಕೆ ‘ಅತ್ಯಂತ ನೆಚ್ಚಿನ ರಾಷ್ಟ್ರ’ದ ಸ್ಥಾನ ನೀಡಲಾಗಿತ್ತು. ಸ್ವಿಜರ್ಲ್ಯಾಂಡ ತೆಗೆದುಕೊಂಡಿರುವ ನಿರ್ಣಯದಿಂದ ಅಲ್ಲಿಯ ವಾಣಿಜ್ಯ, ಔಷಧಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರತ ಇರುವ ಕಂಪನಿಗಳಿಗೆ ನಷ್ಟ ಆಗುವುದು.

೧. ಭಾರತೀಯ ಸರ್ವೋಚ್ಚ ನ್ಯಾಯಾಲಯದ ನಿರ್ಣಯದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು  ಇತ್ತೀಚಿಗಷ್ಟೇ ಸ್ವಿಜರ್ಲ್ಯಾಂಡ್ ಹೇಳಿದೆ.

೨. ಕಳೆದ ವರ್ಷ ‘ನೆಸ್ಲೆ’ ಕಂಪನಿಯಗೆ ಸಂಬಂಧಿತ ಒಂದು ಪ್ರಕರಣದಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯವು, ತೆರಿಗೆ ಕಾನೂನಿನ ಅಡಿಯಲ್ಲಿ ಸುತ್ತೋಲೆ ಹೊರಡಿಸಿ ‘ಡಿಟಿಎಎ’ ಜಾರಿ ಆಗಲು ಸಾಧ್ಯವಿಲ್ಲ ಎಂದು ನಿರ್ಣಯ ತೆಗೆದುಕೊಂಡಿತ್ತು. ‘ನೆಸ್ಲೆ ಇದು ಸ್ವಿಸ್ ಕಂಪನಿ ಆಗಿದೆ.

೩. ಎರಡು ದೇಶ ಅದರ ನಾಗರೀಕರು ಮತ್ತು ಕಂಪನಿಗಳ ಎರಡು ತೆರೆಗೆಯಿಂದ ರಕ್ಷಣೆ ಮಾಡುವುದಕ್ಕಾಗಿ ಪರಸ್ಪರ ಎರಡು ತೆರಿಗೆ ತಪ್ಪಿಸುವ ಒಪ್ಪಂದ (ಡಿಟಿಎಎ) ಮಾಡುತ್ತದೆ. ಇದರ ಅಡಿಯಲ್ಲಿ ಕಂಪನಿಗಳು ಅಥವಾ ನಾಗರಿಕರಿಗೆ ಅವರ ಸೇವೆ ಅಥವಾ ಉತ್ಪಾದನೆಗಾಗಿ ಎರಡು ಬೇರೆ ಬೇರೆ ದೇಶಗಳಲ್ಲಿ ತೆರಿಗೆ ನೀಡಬೇಕಾಗುವುದಿಲ್ಲ.

೪. ಈ ಪ್ರಕರಣದಲ್ಲಿ ಸ್ವಿಜರ್ಲ್ಯಾಂಡ್ ಜೊತೆಗೆ ಮತ್ತೆ ಚರ್ಚೆ ನಡೆಸಲಾಗುವುದು, ಎಂದು ಭಾರತದ ವಿದೇಶಾಂಗ ಸಚಿವಾಲಯದ ವತ್ತಾರ ರಣಧೀರ ಜೈಸ್ವಾಲ್ ಇವರು ಹೇಳಿದರು.