Ex-IAS Offer Oppose Dharma Sansad : ಯತಿ ನರಸಿಂಹಾನಂದರ ಧರ್ಮ ಸಂಸದ್ ವಿಷಯದ ಬಗ್ಗೆ ಮಾಜಿ ಆಡಳಿತಾಧಿಕಾರಿಗಳಿಗೆ ಹೊಟ್ಟೆ ಕಿಚ್ಚು !

ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ

ಗಾಜಿಯಾಬಾದ್ (ಉತ್ತರ ಪ್ರದೇಶ) – ಯತಿ ನರಸಿಂಹಾನಂದ ಮತ್ತು ಇತರರ ಪರವಾಗಿ ಈ ವಾರ ಧರ್ಮ ಸಂಸದ್ ಆಯೋಜಿಸಲಾಗಿದೆ. ಈ ಧರ್ಮ ಸಂಸದ್ಅನ್ನು ರದ್ದುಗೊಳಿಸಲು, ಮಾಜಿ ಆಡಳಿತ ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಧರ್ಮ ಸಂಸದ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಉತ್ತರ ಪ್ರದೇಶ ಪೊಲೀಸರು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಯತಿ ನರಸಿಂಹಾನಂದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾದ ಅರ್ಜಿಯಲ್ಲಿ ಮುಸಲ್ಮಾನರ ವಿರುದ್ಧ ಪದೇ ಪದೇ ದ್ವೇಷದ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. (ಮತಾಂಧರ ನಿಜಸ್ವರೂಪವನ್ನು ಯಾರಾದರೂ ಬಯಲು ಮಾಡಿದಾಗ ಸಂಬಂಧಪಟ್ಟವರ ಮೇಲೆ ಮುಗಿಬೀಳುವ ಸೆಕ್ಯುಲರಿಸ್ಟ್ ಗ್ಯಾಂಗ್ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಸದಾ ಮೌನವಾಗಿರುತ್ತಾರೆ, ಇದನ್ನು ಗಮನದಲ್ಲಿಡಿ ! – ಸಂಪಾದಕರು) ಅರ್ಜಿದಾರರಲ್ಲಿ ಅರುಣಾ ರಾಯ್, ಅಶೋಕ ಕುಮಾರ ಶರ್ಮಾ, ದೇಬ್ ಮುಖರ್ಜಿ, ನವರೇಖಾ ಶರ್ಮಾ, ಸಯ್ಯದಾ ಹಮೀದ್, ವಿಜಯನ್ ಎಂ.ಜೆ. ಇವರ ಜೊತೆಗೆ ನಿವೃತ್ತ ಆಡಳಿತ ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿದ್ದಾರೆ.