ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಮೌನ ತಾಳಿರುವುದು ನಾಚಿಗೆಗೇಡು ! – ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೆಟಿಗ ದಾನಿಶ್ ಕನೇರಿಯಾ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದಾಳಿಗೆ ಪಾಕ್ ಮಾಜಿ ಹಿಂದೂ ಕ್ರಿಕೆಟಿಗ ದಾನಿಶ್ ಕನೇರಿಯಾ ಆಕ್ರೋಶ !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನೇರಿಯಾ, ‘ಹಿಂದೂಗಳ ಮೇಲಿನ ದೌರ್ಜನ್ಯವನ್ನು ನೋಡಿ ನನ್ನ ರಕ್ತ ಕುದಿಯುತ್ತಿದೆ.

ಈ ಬಗ್ಗೆ ವಿಶ್ವಸಂಸ್ಥೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳು ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳು ಮೌನವಹಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದವರು ಟೀಕಿಸಿದರು. ಇದರ ಜೊತೆಗೆ ಅವರು ‘ಹ್ಯಾಶ್‌ಟ್ಯಾಗ್’ನಲ್ಲಿ ‘ಸೇವ್ ಬಾಂಗ್ಲಾದೇಶಿ ಹಿಂದೂ’ ಎಂದು ಬರೆದಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿನ ಒಬ್ಬ ಹಾಲಿ-ಮಾಜಿ ಜನ್ಮ ಹಿಂದೂ ಕ್ರಿಕೆಟಿಗರು ಕೂಡ ಬಾಂಗ್ಲಾದೇಶದ ಹಿಂದೂಗಳ ಬಗ್ಗೆ ಹೇಳಿಕೆ ನೀಡಿಲ್ಲ ಎಂಬುದನ್ನು ಗಮನಿಸಿ ! ತುರ್ತು ಪರಿಸ್ಥಿತಿಯಲ್ಲಿ ಇಂತಹ ಜನ್ಮ ಹಿಂದೂಗಳನ್ನು ಉಳಿಸಬೇಕೇ ?