Jamaat E Islami : ಬಾಂಗ್ಲಾದೇಶ : ಮೀಸಲಾತಿಗಾಗಿ ನಡೆದ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಜಮಾತ್-ಎ-ಇಸ್ಲಾಮಿ ಸಂಘಟನೆಯ ಕೈವಾಡ !

ಬಾಂಗ್ಲಾದೇಶದಲ್ಲಿ ಮೀಸಲಾತಿಗಾಗಿ ನಡೆದ ಹಿಂಸಾತ್ಮಕ ಪ್ರತಿಭಟನೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಮೀಸಲಾತಿಗಾಗಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಹಿಂದೆ ಪಾಕಿಸ್ತಾನದಲ್ಲಿನ ಜಮಾತ್-ಎ-ಇಸ್ಲಾಮಿ ಸಂಘಟನೆಯ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಈ ಪ್ರತಿಭಟನೆಯಲ್ಲಿ ಹತರಾಗಿರುವ ಪ್ರತಿಯೊಬ್ಬ ವಿದ್ಯಾರ್ಥಿಗಾಗಿ ೫ ಸಾವಿರ ಟಕ (ಸುಮಾರು ೩, ೫೦೦ ರೂಪಾಯಿ) ಮತ್ತು ಓರ್ವ ಪೊಲೀಸ್ ಸಿಬ್ಬಂದಿಯನ್ನು ಕೊಲ್ಲುವುದಕ್ಕಾಗಿ ೧೦ ಸಾವಿರ ಟಕ (ಸುಮಾರು ೭,೦೦೦ ರೂಪಾಯಿ) ನೀಡಲಾಗಿತ್ತು, ಎಂದು ಗೂಡಾಚಾರರು ನೀಡಿರುವ ಮಾಹಿತಿಯಿಂದ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ವಿರೋಧ ಪಕ್ಷವಾದ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿಯ (ಬಿ ಎನ್ ಪಿ ಯ) ವಿದ್ಯಾರ್ಥಿ ಸಂಘಟನೆಯಾದ ‘ಯುವಾ ದಳ’ ಈ ಪ್ರತಿಭಟನೆ ಆರಂಭಿಸಿತ್ತು.

ಈ ಪ್ರತಿಭಟನೆಯ ಷಡ್ಯಂತ್ರವನ್ನು ಲಂಡನ್ ನಲ್ಲಿ ರೂಪಿಸಲಾಗಿತ್ತು. ಅಲ್ಲಿ ಬಿ.ಎನ್ .ಪಿ. ಯ ಮುಖ್ಯಸ್ಥ ತಾರೀಕ್ ರಹಮಾನ್ ವಾಸವಾಗಿದ್ದು ಅವನು ಲಂಡನ್ ನಲ್ಲಿ ಪಾಕಿಸ್ತಾನಿ ದಲ್ಲಾಳಿಗಳ ಜೊತೆಗೆ ಸಂಪರ್ಕ ಮಾಡಿ ಹಣ ಸಂಗ್ರಹಿಸಿ ಆ ಹಣವನ್ನು ಢಾಕಾದಲ್ಲಿನ ಸುಲ್ತಾನ ಎಂಬ ವ್ಯಕ್ತಿಗೆ ಕಳುಹಿಸಿದ್ದನು. ಇದೇ ಹಣದಿಂದ ಹಿಂಸಾಚಾರ ನಡೆಸಲಾಗಿದೆ. ಬಾಂಗ್ಲಾದೇಶದ ಪೊಲೀಸರು ಸದ್ಯ ಸುಲ್ತಾನ್ ನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಇಸ್ಲಾಮಿಕ್ ದೇಶದಲ್ಲಿಯೂ ಕೂಡ ಹಿಂಸಾಚಾರದ ಕುತಂತ್ರ ನಡೆಸುವ ಪಾಕಿಸ್ತಾನ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಇಂತಹ ಕುತಂತ್ರ ನಡೆಸದಿರಲು ಸಾಧ್ಯವೇ ?