ಅಸ್ತಾನಾ (ಕಜಕಿಸ್ತಾನ) – ಇತ್ತೀಚೆಗೆ ಇಲ್ಲಿ ಜರುಗಿದ `ಶಾಂಘೈ ಕೋ-ಆಪರೇಶನ ಆರ್ಗನೈಝೇಶನ’ (ಎಸ್.ಸಿ.ಓ.) ಪರಿಷತ್ತಿನ ನಾಯಕರ 24ನೇ ಸಭೆಯ ವಿಷಯದ ಕುರಿತು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇವರು ಮಾತನಾಡಿ, ‘ಭಯೋತ್ಪಾದನೆಯು ಜಗತ್ತಿನೆದುರಿಗೆ ಎಲ್ಲಕ್ಕಿಂತ ದೊಡ್ಡ ಸವಾಲಾಗಿದೆ. ಭಯೋತ್ಪಾದನೆಯಿಂದ ಜಾಗತಿಕ ಮತ್ತು ಪ್ರಾದೇಶಿಕ ಶಾಂತತೆ ಅಪಾಯಕ್ಕೀಡಾಗಿದೆ. ಭಯೋತ್ಪಾದನೆಯಂತಹ ಅಪರಾಧಗಳ ಸೂತ್ರಧಾರ ಮತ್ತು ಹಣಕಾಸು ಪೂರೈಕೆದಾರರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಆವಶ್ಯಕತೆಯಿದೆ. ‘ಶಾಂಘೈ ಕೋ-ಆಪರೇಶನ ಆರ್ಗನೈಝೇಶನ್’ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಕಟ್ಟರವಾದದ ವಿರುದ್ಧ ಹೋರಾಡಲು ಆದ್ಯತೆ ನೀಡಲಿದೆ.’ ಎಂದು ಹೇಳಿದ್ದಾರೆ. ಈ ಪರಿಷತ್ತಿನಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಇವರೂ ಉಪಸ್ಥಿತರಿದ್ದರು.
ಸಂಪಾದಕೀಯ ನಿಲುವುಕಳೆದ 75 ವರ್ಷಗಳಲ್ಲಿ, ಭಾರತ ಭಯೋತ್ಪಾದನೆಯನ್ನು ಸಂಪೂರ್ಣ ನಷ್ಟಗೊಳಿಸಿದ್ದರೆ, ಇಂದು ಭಾರತಕ್ಕೆ ‘ಭಯೋತ್ಪಾದನೆಯನ್ನು ಈ ರೀತಿ ನಾಶಪಡಿಸಬೇಕು’’ ಎಂದು ಜಗತ್ತಿನೆದುರಿಗೆ ಎದೆತಟ್ಟಿಕೊಂಡು ಹೇಳಲು ಸಾಧ್ಯವಾಗುತ್ತಿತ್ತು. |