ಇಸ್ಲಾಮಾಬಾದ್ (ಪಾಕಿಸ್ತಾನ) – ‘ಸೇಂಟರ್ ಫಾರ್ ರಿಸರ್ಚ್ ಅಂಡ್ ಸೆಕ್ಯೂರಿಟಿ ಸ್ಟಡೀಸ್’ನ ವರದಿಯ ಪ್ರಕಾರ 2024 ರ ಎರಡನೇ ತ್ರೈಮಾಸಿಕದಲ್ಲಿ ಪಾಕಿಸ್ತಾನದಲ್ಲಿ 240 ಭಯೋತ್ಪಾದಕ ಘಟನೆಗಳು ಮತ್ತು ಉಗ್ರ ವಿರೋಧಿ ಕಾರ್ಯಾಚರಣೆಗಳು ನಡೆದಿವೆ. ಇದರಲ್ಲಿ 380 ಜನರು ಸಾವನ್ನಪ್ಪಿದ್ದಾರೆ ಮತ್ತು 220 ನಾಗರಿಕರು, ಭದ್ರತಾ ಸಿಬ್ಬಂದಿ ಮತ್ತು ಅಪರಾಧಿಗಳು ಗಾಯಗೊಂಡಿದ್ದಾರೆ.
ಈ ವರದಿ ಪ್ರಕಾರ ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯವು ಹಿಂಸಾಚಾರದ ಕೇಂದ್ರವಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಪಾಕಿಸ್ತಾನದಲ್ಲಿ ಹಿಂಸಾಚಾರ ಮತ್ತು ರಕ್ತಪಾತದ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ. ದೇಶದಲ್ಲಿ ಒಟ್ಟು ಹಿಂಸಾಚಾರದ ಶೇಕಡಾ 12 ರಷ್ಟು ಕಡಿಮೆಯಾಗಿದೆ ಮತ್ತು ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) 432ರೊಂದಿಗೆ ಹೋಲಿಸಿದಾಗ ಈ ಬಾರಿ 380 ಸಾವಿನ ಪ್ರಮಾಣ ದಾಖಲಿಸಲಾಗಿದೆ. ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಅತ್ಯಂತ ಗಮನಾರ್ಹ ಸುಧಾರಣೆ ಕಂಡುಬಂದಿದೆ, ಅಲ್ಲಿ ಹಿಂಸಾಚಾರವು ಶೇಕಡಾ 46 ರಷ್ಟು ಕಡಿಮೆಯಾಗಿದೆ, ಮೊದಲ ತ್ರೈಮಾಸಿಕದಲ್ಲಿ 178 ಸಾವಿನ ಪ್ರಮಾಣವು ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ 96 ಕ್ಕೆ ಇಳಿದಿದೆ.
ಸಂಪಾದಕೀಯ ನಿಲುವುಮಾಡಿದ್ದುಣ್ಣೋ ಮಹಾರಾಯ ಎಂಬ ಪರಿಸ್ಥಿತಿಗೆ ತಲುಪಿದ ಪಾಕಿಸ್ತಾನ |