ಜ್ಯೇಷ್ಠ ಶುಕ್ಲ ತ್ರಯೋದಶಿಯಂದು (ಜೂನ್ ೨೦ ರಂದು) ಇರುವ ಶಿವರಾಜ್ಯಾಭಿಷೇಕ ದಿನದ ನಿಮಿತ್ತ
೬ ಜೂನ್ ೧೬೭೪ ರಂದು ಶಿವಾಜಿ ಮಹಾರಾಜರ ರಾಜ್ಯಾಭಿಷೇಕ ನಡೆದಿತ್ತು. ಈ ಅದ್ವಿತೀಯ ಸಮಾರಂಭಕ್ಕಾಗಿ ಒಟ್ಟು ಸುಮಾರು ೧ ಕೋಟಿ ರೂಪಾಯಿ ವೆಚ್ಚ (ಆಗ ಸುವರ್ಣ ಮುದ್ರೆ ಇತ್ತು) ಆಗಿತ್ತು. ಈ ವೆಚ್ಚವನ್ನು ಛತ್ರಪತಿ ಶಿವಾಜಿ ಮಹಾರಾಜರು ಮೊಗಲರಿಂದ ಹೇಗೆ ವಸೂಲಿ ಮಾಡಿದರು ? ಈ ಪ್ರಸಂಗ ಮತ್ತು ಗೆರಿಲ್ಲ ಯುದ್ಧದ ಉತ್ಕೃಷ್ಟ ಉದಾಹರಣೆಯನ್ನು ನೋಡೋಣ.
ಮಹಾರಾಷ್ಟ್ರದ ನಗರ ಜಿಲ್ಲೆಯಲ್ಲಿ ಪೆಡಗಾಂವ ಹೆಸರಿನ ಗ್ರಾಮವಿದೆ. ಅಲ್ಲಿ ಬಹಾದೂರಖಾನ ಕೊಕಲತಾಶ ಹೆಸರಿನ ಔರಂಗಜೇಬನ ಸುಬೇದಾರನಿದ್ದನು. ಅವನು ಬಹಳ ಉದ್ಧಟ ನಾಗಿದ್ದನು. ಅವನ ಬಳಿ ೨೦೦ ಉಚ್ಚ ಶ್ರೇಣಿಯ ಅರಬ್ಬಿ ಕುದುರೆ ಗಳು ಮತ್ತು ಸಾಧಾರಣ ೧ ಕೋಟಿ ರೂಪಾಯಿಗಳಿದ್ದು ಅದು ಬಹಾದೂರಕೋಟೆಯಲ್ಲಿದೆಯೆಂದು ಛತ್ರಪತಿ ಶಿವಾಜಿ ಮಹಾರಾಜರಿಗೆ ಮಾಹಿತಿ ಸಿಕ್ಕಿತು. ಅಲ್ಲಿ ನಿಯೋಜಿಸಲಾಗಿದ್ದ ಸೈನ್ಯವೂ ದೊಡ್ಡದಿತ್ತು. ಇವೆಲ್ಲ ಸಂಪತ್ತು ದೆಹಲಿಗೆ ರವಾನೆಯಾಗುವುದರಲ್ಲಿತ್ತು. ಆಗ ಶಿವಾಜಿ ಮಹಾರಾಜರು ತನ್ನ ಸೈನಿಕರಿಗೆ, ೨ ಸಾವಿರ ಸೈನ್ಯದೊಂದಿಗೆ ಬಹಾದೂರಕೋಟೆಯ ಮೇಲೆ ದಂಡೆತ್ತಿ ಹೋಗಬೇಕು, ಅಲ್ಲಿನ ಸಂಪತ್ತು ಮತ್ತು ೨೦೦ ಅರಬ್ಬಿ ಕುದುರೆಗಳನ್ನು ಲೂಟಿ ಮಾಡಿ ತರಬೇಕು ಎಂದು ಆಜ್ಞಾಪಿಸಿದರು. ಈ ವಾರ್ತೆ ಖಾನನಿಗೆ ಸಿಕ್ಕಿತು ಮತ್ತು ಅವನು ತಮಾಷೆಯಿಂದ ನಗುತ್ತ “ಕೇವಲ ೨ ಸಾವಿರ ಮರಾಠಾ ಸೈನಿಕರು ? ಅವರಿಗಾಗಿ ಕೋಟೆಯ ಬಾಗಿಲು ತೆರೆದಿರಲಿ. ಒಂದು ವೇಳೆ ಅವರು ನಮ್ಮ ಹತ್ತಿರ ಬಂದರೂ ಅವರನ್ನು ಕತ್ತರಿಸುತ್ತೇವೆ, ತುಂಡರಿಸುತ್ತೇವೆ”, ಎಂದು ಹೇಳಿದನು.
೧. ಸೈನಿಕರು ಬಹಾದೂರ ಕೋಟೆಯ ಮೇಲೆ ದಂಡೆತ್ತಿ ಬರುವುದು; ಆದರೆ ಮೊಗಲರ ಅನಿರೀಕ್ಷಿತ ಆಕ್ರಮಣದಿಂದ ಅವರು ಹೆದರಿ ಅಲ್ಲಿಂದ ಪರಾರಿಯಾಗುವುದು
೧೬ ಜುಲೈ ೧೬೭೪ ರಂದು ಪೇಡಗಾಂವನ ಈ ಬಹಾದೂರಕೋಟೆಯಿಂದ ಮೊಗಲ ಸೈನಿಕರಿಗೆ ದೂರದ ವರೆಗೆ ಧೂಳು ಹಾರುತ್ತಿರುವುದು ಕಾಣಿಸಿತು. ಇದರಿಂದ ಕುದುರೆಗಳು ಓಡುತ್ತಿವೆಯೆಂದು ಅವರ ಗಮನಕ್ಕೆ ಬಂದಿತು. ತಕ್ಷಣವೇ ಕೋಟೆಯ ಮೇಲೆ ಅಪಾಯದ ಕಹಳೆಯನ್ನು ಊದಿದರು ಮತ್ತು ಮೊದಲೇ ಸಿದ್ಧರಾಗಿದ್ದ ಖಾನನ ಪ್ರಚಂಡ ಸೇನೆಯು ಹೋರಾಡಲು ಮುಂದಾಯಿತು. ಕೋಟೆಯ ಬಾಗಿಲು ತೆರೆಯಿತು. ಮರಾಠಾ ಸೈನಿಕರು ಹತ್ತಿರ ಬರುತ್ತಿದ್ದಂತೆಯೇ, ಖಾನನ ಸೇನಾಪತಿ ಹೋರಾಡಲು ಆದೇಶಿಸಿದನು. ಅನಿರೀಕ್ಷಿತ ಆಕ್ರಮಣದಿಂದ ಮರಾಠಾ ಸೈನಿಕರು ಹೆದರಿದರು. ಜೀವವನ್ನು ರಕ್ಷಿಸಿಕೊಳ್ಳಲು ಹಿಂದಕ್ಕೆ ತಿರುಗಿದರು; ಆದರೆ ಅವರ ಕುದುರೆಗಳು ಓಡುತ್ತಿರಲಿಲ್ಲ. ಖಾನನ ಸಂಪೂರ್ಣ ಸೈನ್ಯ ಹತ್ತಿರ ಬರತೊಡಗಿತು. ಅವರ ಹಣೆಬರಹ ಚೆನ್ನಾಗಿತ್ತು ಅಷ್ಟರಲ್ಲಿ ಕುದುರೆಗಳು ವೇಗವಾಗಿ ಓಡತೊಡಗಿದವು ಮತ್ತು ಸೈನಿಕರು ಬೆನ್ನು ತೋರಿಸಿ ಓಡತೊಡಗಿದರು. ಬಹಾದೂರಖಾನ ಸ್ವತಃ ಅವರನ್ನು ಅಡ್ಡಗಟ್ಟಲು ಮೊಗಲ ಸೈನ್ಯದ ಮುಂದಾಳತ್ವ ವಹಿಸಿದ್ದನು. ಈ ಕುದುರೆಗಳ ಓಟ ಹೀಗೆಯೇ ಅನೇಕ ಮೈಲಿಗಳ ವರೆಗೆ ಮುಂದುವರಿಯಿತು; ಕಾರಣ ಬಹಾದೂರಖಾನನಿಗೆ ಮರಾಠಾ ಸೈನಿಕರ ಕುದುರೆ ಓಟದ ಬಗೆಗಿನ ಹೆದರಿಕೆ ಅವನಲ್ಲಿ ಉನ್ಮಾದವನ್ನುಂಟು ಮಾಡುತ್ತಿತ್ತು. ಮರಾಠಾ ಸೈನಿಕರು ಓಡಿ ಹೋದರು. ಸಂಪೂರ್ಣ ೨ ಸಾವಿರ ಸೈನಿಕರು ಬಚಾವಾದರು; ಆದರೆ ನಮ್ಮ ಶಿವಾಜಿ ಮಹಾರಾಜರು ಸೋತರು.
೨. ಮರಾಠಾ ಸೈನಿಕರು ಬಹಾದೂರಖಾನನ ಗಮನವನ್ನು ಬೇರೆಡೆಗೆ ಹೊರಳಿಸಿ, ಕೋಟೆಯ ಮೇಲೆ ಆಕ್ರಮಣ ನಡೆಸಿ ೨೦೦ ಅರಬ್ಬಿ ಕುದುರೆಗಳನ್ನು ಮತ್ತು ಸಂಪತ್ತನ್ನು ಹೊತ್ತೊಯ್ಯುವುದು.
ಕೊನೆಗೆ ಖಾನನ ಸೈನ್ಯ ನಿಂತಿತು ಮತ್ತು ಸಂತೋಷದಿಂದ ವಿಜೃಂಭಿಸಿತು. ಎಲ್ಲರೂ ಮರಳಿ ಬರತೊಡಗಿದರು. ಈ ಗೆಲುವು ಔರಂಗಜೇಬನಿಗೆ ತಿಳಿದ ಕೂಡಲೇ ಏನು ಬಹುಮಾನ ಸಿಗಬಹುದು? ಎನ್ನುವ ಸಂತೋಷದಿಂದ ಬಹಾದೂರಖಾನನು ಎದೆಯುಬ್ಬಿಸಿಕೊಂಡು ಕುದುರೆಯ ಮೇಲೆ ಬಹಳ ಪೌರುಷದಿಂದ ಬರುತ್ತಿದ್ದನು; ಕಾರಣ ಶಿವಾಜಿ ಸೈನಿಕರನ್ನು ಓಡಿ ಹೋಗುವಂತೆ ಮಾಡುವುದು ಸಣ್ಣ ಕೆಲಸವಾಗಿರಲಿಲ್ಲ. ಅಷ್ಟರಲ್ಲಿಯೇ ಎಲ್ಲ ಸೈನಿಕರು ಶಾಂತರಾದರು ಮತ್ತು ಬಿಟ್ಟ ಕಣ್ಣಿನಿಂದ ಬಹಾದೂರಖಾನನನ್ನು ನೋಡತೊಡಗಿದರು. ಧೂಳಿನ ದೊಡ್ಡ ದೊಡ್ಡ ಅಲೆಗಳು ಕೋಟೆಯಿಂದ ಬರುತ್ತಿತ್ತು. ಖಾನನು ಹೆದರಿಕೆಯಿಂದ ಉಗುಳು ನುಂಗುತ್ತಾ ಕಿಲ್ಲೆದಾರನಿಗೆ “ನಾವೆಲ್ಲರೂ ಇಲ್ಲಿರುವಾಗ, ಕೋಟೆಯಲ್ಲಿ ಯಾರಿದ್ದಾರೆ ?’ ಎಂದು ಕೇಳಿದನು. “ಯಾರೂ ಇಲ್ಲ ಜಹಾಂಪನಾ. ನಿಮ್ಮ ಆದೇಶದಂತೆ ಶಿವಾಜಿಯ ಆ ೨ ಸಾವಿರ ಸೈನಿಕರ ಮೇಲೆ ದಂಡೆತ್ತಿ ಹೋದೆವು”, ಎಂದನು. “ಕಿಲ್ಲೇದಾರ, ಸೇನಾಪತಿ ಮತ್ತು ಸ್ವತಃ ಖಾನನ ಹೃದಯ ಬಡಿತ ಹೆಚ್ಚಾಯಿತು, ಕಾರಣ ಏನಾಗಿದೆಯೆಂದು ಅವರಿಗೆ ಅಂದಾಜು ಬಂದಿತು. ಅದರೊಂದಿಗೆ ಛತ್ರಪತಿ ಶಿವಾಜಿ ಮಹಾರಾಜನು ಯಾರು ಎನ್ನುವುದು ಗಮನಕ್ಕೆ ಬಂದಿತು. ಯಾವ ಹೆದರಿಕೆಯಿತ್ತೋ, ಅದೇ ನಡೆಯಿತು. ಅದೇ ಸಮಯದಲ್ಲಿ ಒಬ್ಬ ಕುದುರೆ ಸವಾರನು ಕೂಗುತ್ತ ಓಡಿ ಬಂದನು ‘ಹುಜೂರ, ಅನಾಹುತವಾಯಿತು. ಸರ್ವನಾಶವಾಯಿತು. ನಮ್ಮದೆಲ್ಲ ಲೂಟಿಯಾಯಿತು. ನೀವೆಲ್ಲರೂ ಅಲ್ಲಿ ೨೦೦೦ ಮರಾಠಾ ಸೈನಿಕರ ಹಿಂದೆ ಓಡಿದಿರಿ ಮತ್ತು ಇಲ್ಲಿ ಕೋಟೆಯ ಮೇಲೆ ೭೦೦೦ ಮರಾಠಾ ಸೈನಿಕರು ಸುತ್ತುವರಿದರು. ಎಲ್ಲವನ್ನೂ ಲೂಟಿ ಮಾಡಿಕೊಂಡು ಕೊಂಡೊಯ್ದರು’ ಎಂದು ಹೇಳಿದನು.
ಈ ರೀತಿ ರಾಜ್ಯಾಭಿಷೇಕದ ೧ ಕೋಟಿ ರೂಪಾಯಿಗಳ ವೆಚ್ಚವೂ ವಸೂಲಾಯಿತು ಮತ್ತು ೨೦೦ ಉಚ್ಚ ಶ್ರೇಣಿಯ ಅರಬ್ಬಿ ಕುದುರೆಗಳು ಛತ್ರಪತಿಯ ಸೈನ್ಯಕ್ಕೆ ಸೇರ್ಪಡೆಯಾಯಿತು. ಒಬ್ಬನೇ ಒಬ್ಬ ಸೈನಿಕನನ್ನು ಕಳೆದುಕೊಳ್ಳದೇ ಈ ನಾಟಕ ನಡೆಯಿತು. ಈ ನಾಟಕ ಎಲ್ಲಿ ನಡೆಯಿತು? ಇದು ಪೇಡಗಾಂವದಲ್ಲಿ ನಡೆಯಿತು. ಖಾನನನ್ನು ಅವರು ಆ ಪೇಡಗಾಂವದಲ್ಲಿ ಮೂರ್ಖನನ್ನಾಗಿ ಮಾಡಿದರು. (ಆಧಾರ: ಸಾಮಾಜಿಕ ಮಾಧ್ಯಮ)