ಭಾರತದಲ್ಲಿನ ಮತಾಂತರದ ಷಡ್ಯಂತ್ರ ಹಾಗೂ ಅದರ ಹಿಂದಿರುವ ‘ಡೀಪ್‌ ಸ್ಟೇಟ್‌’ನ ಕೈವಾಡ !

(‘ಡೀಪ್‌ಸ್ಟೇಟ್’ ಎಂದರೆ ಸರಕಾರಿ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳ ರಹಸ್ಯ ಜಾಲ. ಇದರ ಮೂಲಕ ಸರಕಾರಿ ಧೋರಣೆಗಳನ್ನು ಖಾಸಗಿ ಸಂಸ್ಥೆಗಳಿಗೆ ಅನುಕೂಲ ಮಾಡಲಾಗುತ್ತದೆ.)

ಜಗತ್ತಿನ ವಿವಿಧ ಧರ್ಮ/ಪಂಥಗಳನ್ನು ಅಭ್ಯಾಸ ಮಾಡಿದ ಸ್ವಾಮಿ ವಿವೇಕಾನಂದರು ಭಾರತದಲ್ಲಿ ನಡೆಯುತ್ತಿರುವ ಮತಾಂತರದ ಸಮಸ್ಯೆಯನ್ನು ಗುರುತಿಸಿ ಹೇಳಿದ್ದಾರೆ, ‘ಹಿಂದೂಗಳ ಮತಾಂತರವೆಂದರೆ, ಹಿಂದೂ ಧರ್ಮದ ಕೇವಲ ಒಬ್ಬ ಹಿಂದೂ ಕಡಿಮೆಯಾಗುವುದಲ್ಲ, ಹಿಂದೂ ಧರ್ಮದ ಒಬ್ಬ ಶತ್ರು ಹೆಚ್ಚಾದಂತಾಗುತ್ತದೆ. ಮತಾಂತರದಿಂದ ಹಿಂದೂಗಳು ಅಲ್ಪಸಂಖ್ಯಾತರಾದ ಕಾಶ್ಮೀರ, ಮಣೀಪುರ, ನಾಗಾಲ್ಯಾಂಡ್‌ ಇತ್ಯಾದಿ ಭಾರತದ ರಾಜ್ಯಗಳು ಮತ್ತು ಪಾಕಿಸ್ತಾನ, ಬಾಂಗ್ಲಾದೇಶದಂತಹ ದೇಶಗಳಲ್ಲಿ ಇಂದು ಕೂಡ ನಾವು ಇದನ್ನು ಪ್ರತ್ಯಕ್ಷ ಅನುಭವಿಸುತ್ತಿದ್ದೇವೆ. ಇಂದು ದೇಶದಾದ್ಯಂತ ಭಾರತವಿರೋಧಿ ಪ್ರತ್ಯೇಕತಾವಾದಿಗಳ ಚಳವಳಿ ಆರಂಭವಾಗಿದೆ ಹಾಗೂ ತಮ್ಮನ್ನು ‘ಸೆಕ್ಯುಲರ್‌’ವಾದಿ (ನಿಧರ್ಮಿ)ಗಳೆಂದು ಹೇಳಿಸಿಕೊಳ್ಳುವ ರಾಜಕಾರಣಿಗಳಿಂದ ಅವರಿಗೆ ಬೆಂಬಲ ಸಿಗುತ್ತದೆ. ಅದರಿಂದಲೆ ಮೇಲ್ನೋಟಕ್ಕೆ ಕಾಣಿಸುವ ಮತಾಂತರದ ಹಿಂದೆ ‘ಡೀಪ್‌ಸ್ಟೇಟ್’ ಇದೆ, ಎಂಬುದನ್ನು ನಾವು ಖಚಿತಪಡಿಸಬಹುದು.

ಶ್ರೀ. ರಮೇಶ ಶಿಂದೆ

ಇಷ್ಟರ ವರೆಗೆ ಪ್ರಸಿದ್ಧವಾದ ಲೇಖನಗಳಲ್ಲಿ ನಾವು ‘ಚರ್ಚ್‌ನ ಪ್ರಭಾವದಲ್ಲಿ ಕ್ರೈಸ್ತ ದೇಶಗಳ ಪಂಥವಿಸ್ತಾರಕ್ಕಾಗಿ ಜಗತ್ತಿನಾದ್ಯಂತದ ದೇಶಗಳ ಮೇಲೆ ಆಕ್ರಮಣ ಮತ್ತು ಅಲ್ಲಿನ ಮೂಲ ಸಂಸ್ಕೃತಿಯನ್ನು ನಷ್ಟಗೊಳಿಸುವುದು ಹಾಗೂ ವ್ಯಾಪಾರದ ಜೊತೆಗೆ ಕ್ರಿಸ್ತೀಕರಣಕ್ಕಾಗಿ ಪ್ರಯತ್ನ’, ಈಶಾನ್ಯ ಭಾರತದಲ್ಲಿನ ರಾಜ್ಯಗಳು ಪ್ರತ್ಯೇಕತಾವಾದದ ಅಪಾಯದ ಕಡೆಗೆ ಹೋಗಿವೆ’, ಈ ವಿಷಯವನ್ನು ಓದಿದೆವು. ಇಂದು ಅದರ ಮುಂದಿನ ಭಾಗವನ್ನು ನಿಮ್ಮ ಮುಂದಿಡುತ್ತಿದ್ದೇವೆ.

೯. ಶಿಕ್ಷಣ, ಅನಾಥಾಲಯಗಳು ಮತ್ತು ಆಸ್ಪತ್ರೆಗಳನ್ನು ಉಪಯೋಗಿಸಿ ಮತಾಂತರಿಸುವುದು

ಹಿಂದೂ ವಿದ್ಯಾರ್ಥಿನಿಯರ ಕೊರಳಲ್ಲಿ ‘ಕ್ರಾಸ್’ ಹಾಕಿರುವ ಪ್ರಾತಿನಿಧಿಕ ಛಾಯಾಚಿತ್ರ  

ಭಾರತದಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ಕ್ರೈಸ್ತ ಮಿಶನರಿ ಗಳು ಹಿಂದೂ ಪರಂಪರೆಯನ್ನು ನಾಶ ಮಾಡಲು ಶಿಕ್ಷಣ ವ್ಯವಸ್ಥೆಯಲ್ಲಿ ನುಸುಳಿದ್ದಾರೆ. ಅಲ್ಪಸಂಖ್ಯಾತರಿಗಾಗಿ ವಿಶೇಷ ಸೌಲಭ್ಯಗಳನ್ನು ಪಡೆದು ನಡೆಸುತ್ತಿರುವ ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ಬಹುಸಂಖ್ಯಾತ ಹಿಂದೂಗಳೆ ಆಗಿರುತ್ತಾರೆ; ಆದರೂ ಅವರಿಗೆ ಯೇಸುವಿನ ಪ್ರಾರ್ಥನೆ ಮಾಡಲು ಒತ್ತಾಯ, ಕೈಗಳಿಗೆ ಮದರಂಗಿ-ಹಣೆಗೆ ಕುಂಕುಮ/ತಿಲಕ ಹಚ್ಚಲು ನಿರ್ಬಂಧ, ಮತ್ತು ಕೈಯಲ್ಲಿ ರಕ್ಷಾಬಂಧನದ ದಾರ ಕಟ್ಟಲು ನಿರ್ಬಂಧ, ಈ

ರೀತಿ ಎಲ್ಲ ಹಿಂದೂ ಧಾರ್ಮಿಕ ಆಚರಣೆಗಳನ್ನು ವಿರೋಧಿಸ ಲಾಗುತ್ತದೆ. ವಾಸ್ತವದಲ್ಲಿ ಭಾರತದ ಸಂವಿಧಾನವು ಎಲ್ಲರಿಗೂ ಧಾರ್ಮಿಕಸ್ವಾತಂತ್ರ್ಯವನ್ನು  ನೀಡಿದ್ದರೂ ಯಾವುದೇ ಸರಕಾರ ಈ ಕಾನ್ವೆಂಟ್‌ಗಳ ವ್ಯವಸ್ಥಾಪನೆಗೆ ದಂಡ ವಿಧಿಸುವುದು ಅಥವಾ ಕ್ರಮತೆಗೆದುಕೊಳ್ಳುವುದು ಕಾಣಿಸುವುದಿಲ್ಲ. ಹೀಗೆಲ್ಲ ನಡೆಯುತ್ತಿದ್ದರೂ ಇಂದು ಕೂಡ ‘ಕಾನ್ವೆಂಟ್‌ ಶಿಕ್ಷಣವೆ ಉತ್ತಮ’ವೆಂದು ಪರಿಗಣಿಸಿ ಹಿಂದೂ ಪಾಲಕರು ಅಲ್ಲಿಯೆ ತಮ್ಮ ಮಕ್ಕಳಿಗೆ ಪ್ರವೇಶ ಸಿಗಬೇಕೆಂದು ಸಾಲುಕಟ್ಟಿ ನಿಲ್ಲುತ್ತಾರೆ.

ಇದೇ ಸ್ಥಿತಿ ಅನಾಥಾಲಯ ಮತ್ತು ಆಸ್ಪತ್ರೆಗಳಲ್ಲಿಯೂ ಕಾಣಿಸುತ್ತದೆ. ಅಲ್ಲಿಗೆ ಬರುವ ಬಡವರು ಮತ್ತು ಅನಾಥ ಹಿಂದೂ ಗಳಿಗೆ ಮತಾಂತರವಾದರೆ ಉಚಿತ ಉಪಚಾರ ಮಾಡುತ್ತೇವೆ, ಉಪಚಾರದ ಎಲ್ಲ ಖರ್ಚನ್ನು ನಾವು ನೋಡುತ್ತೇವೆ’, ಎಂದು ಆಮಿಷ ತೋರಿಸಲಾಗುತ್ತದೆ.

೧೦. ಮೋದಿ ಸರಕಾರ ‘ಎಫ್‌.ಸಿ.ಆರ್‌.ಎ.’ಯ ಉಲ್ಲಂಘನೆಗಾಗಿ ಕಠಿಣ ಕ್ರಮಕೈಗೊಂಡಿದ್ದರೂ ಭಾರತದ ಕ್ರೈಸ್ತ ಸ್ವಯಂಸೇವಿ ಸಂಸ್ಥೆಗಳಿಗೆ ವಿದೇಶದಿಂದ ಸಾವಿರಾರು ಕೋಟಿ ರೂಪಾಯಿಗಳ ಧನಸಹಾಯ !

(ಟಿಪ್ಪಣಿ : ‘ಎಫ್‌.ಸಿ.ಆರ್‌.ಎ.’ ಎಂದರೆ ‘ಫೋರಿನ್‌ ಕಾಂಟ್ರಿಬ್ಯೂಶನ್‌ (ರೆಗ್ಯುಲೇಶನ್) ಆಕ್ಟ್‌’ – ವಿದೇಶಿ ಯೋಗದಾನ (ನಿಯಂತ್ರಣ) ಕಾನೂನು) ಮತಾಂತರದ ಚಟುವಟಿಕೆಗಳಿಗಾಗಿ ‘ಮಾನವತಾವಾದಿ ಸೇವೆ’ ನೀಡುವ ನೆಪದಲ್ಲಿ ಅನೇಕ ಬಲಾಢ್ಯ ಸಂಸ್ಥೆಗಳು ಸಕ್ರಿಯವಾಗಿವೆ. ಕಾಂಗ್ರೆಸ್ಸಿನ ಕಾಲದಲ್ಲಿ ಸರಕಾರೇತರ ಸಂಘಟನೆಗಳಿಗೆ (‘ಎನ್‌.ಜಿ.ಓ.’ಗಳಿಗೆ) ಮುಕ್ತ ರಹದಾರಿ ನೀಡಲಾಗಿತ್ತು ಹಾಗೂ ಅದರಿಂದ ವಿದೇಶಗಳ ಚರ್ಚ್‌ಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಮತಾಂತರಕ್ಕಾಗಿ ಭಾರತಕ್ಕೆ ಕಳುಹಿಸಲಾಗುತ್ತಿತ್ತು. ಅದರಿಂದ ಮತಾಂತರಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹ ಸಿಗುತ್ತಿತ್ತು. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅವರ ಲೆಕ್ಕಪತ್ರಗಳಲ್ಲಿ ವ್ಯತ್ಯಾಸವಿರುವ ಸುಮಾರು ೨೦ ಸಾವಿರ ‘ಎನ್‌.ಜಿ.ಓ.’ಗಳಿಗೆ ವಿದೇಶದಿಂದ ಹಣ ಪಡೆಯುವ ಅನುಮತಿಯನ್ನು ರದ್ದುಪಡಿಸಿದ್ದರೂ ಅವರಿಗೆ ೫೫ ಸಾವಿರ ಕೋಟಿ ರೂಪಾಯಿಗಳಷ್ಟು ನಿಧಿ ‘ಎನ್‌.ಜಿ.ಓ.’ದ ಮೂಲಕ ಇಂದಿಗೂ ಭಾರತಕ್ಕೆ ಬರುತ್ತಿದೆ. ಈ ನಿಧಿಯು ಅನೇಕ ರಾಜ್ಯಗಳ ವಾರ್ಷಿಕ ಆಯವ್ಯಯ ಪಟ್ಟಿಗಿಂತಲೂ ದೊಡ್ಡದಾಗಿದೆ. ಆದ್ದರಿಂದ ಸರಕಾರವು ಇದರತ್ತ ಗಮನ ಹರಿಸಬೇಕಾಗಿದೆ.

೧೧. ಮದರ್‌ ತೆರೆಸಾರ ‘ಮಿಶನರೀಸ್‌ ಆಫ್‌ ಚಾರಿಟಿ, ರಾಂಚೀ’ ಸಂಸ್ಥೆಯಿಂದ ಮಕ್ಕಳ ಮಾರಾಟದ ದಂಧೆ ಬಯಲು

ಅನಾಥ ಮಕ್ಕಳೊಂದಿಗೆ  ಮದರ್‌ ತೆರೆಸಾ

ಭಾರತದಲ್ಲಿ ಮದರ್‌ ತೆರೆಸಾ ಇವರು ಮಾಡಿದ ಕಾರ್ಯಕ್ಕಾಗಿ ಅವರಿಗೆ ‘ಭಾರತರತ್ನ’ ಈ ಮಹತ್ವದ ಪುರಸ್ಕಾರವನ್ನು ನೀಡಲಾಗಿದೆ; ಆದರೆ ಅವರ ಸಂಸ್ಥೆಯಲ್ಲಿ ನಡೆಯುವ ಪಾಪಕರ್ಮಗಳನ್ನು ಬಹಿರಂಗಗೊಳಿಸುವ ಖ್ರಿಸ್ತೋಫರ್‌ ಹಿಚೆನ್ಸ್ ಇವರ ವಾಸ್ತವವನ್ನು ಅಡಗಿಸಲು ದೊಡ್ಡ ಪ್ರಮಾಣದಲ್ಲಿ ಪ್ರಯತ್ನಿಸಲಾಗಿದೆ. ಬಲವಂತವಾಗಿ, ಮೋಸದಿಂದ, ಆಮಿಷ ಇತ್ಯಾದಿಗಳ ಮೂಲಕ ಮತಾಂತರ ನಡೆಯುತ್ತದೆ; ಆದರೆ ದುರ್ಬಲ, ಕಾಯಿಲೆಯಲ್ಲಿರುವ, ಅಸುರಕ್ಷಿತ ಹಾಗೂ ಸತ್ತವರನ್ನು ಮತಾಂತರಿಸುವುದು, ನಿಜವಾಗಿಯೂ ಅಯೋಗ್ಯವಾಗಿದೆ; ಆದರೆ ಇದು ಮದರ್‌ ತೆರೆಸಾರವರ ‘ಸ್ಪೆಶಲೈಸೇಶನ್’ (ವಿಶೇಷ) ಕ್ಷೇತ್ರವಾಗಿತ್ತು ಹಾಗೂ ಅದರ ಬದಲಿಗೆ ಜಗತ್ತಿನಾದ್ಯಂತದ ಅವರ ಬ್ಯಾಂಕ್‌ ಖಾತೆಗಳಲ್ಲಿ ಲಕ್ಷಾವಧಿ ಡಾಲರ್ಸ್ ಠೇವಣಿಯಾಗುತ್ತಿತ್ತು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಇಂದು ಕೂಡ ಮದರ್‌ ತೆರೆಸಾ ಒಬ್ಬ ಸಂತ/ನನ್‌ ಆಗಿದ್ದರು, ಅವರು ಸಂಪೂರ್ಣ ಜಗತ್ತಿನ ಬಡವರು, ರೋಗಿಗಳು, ಹಾಗೂ ಸಾಯುವವರ ಸೇವೆ ಮಾಡಿದರು, ಎಂಬ ಅಭಿಪ್ರಾಯವಿದೆ.

ಮದರ್‌ ತೆರೆಸಾ ಇವರು ಸ್ಥಾಪಿಸಿದ ‘ಮಿಶನರೀಸ್‌ ಆಫ್‌ ಚಾರಿಟಿ’ಗಾಗಿ ಹಸುಳೆಯರ ಕಳ್ಳಸಾಗಾಟ ನಿಯಮಿತವಾಗಿ ನಡೆಯುತ್ತಿತ್ತು. ಆದರೂ ೨೦೧೪ ರಿಂದ ಕಪ್ಪಕಾಣಿಕೆ (ಹಪ್ತಾ) ಮತ್ತು ಶಿಶುಗಳ ಕಳ್ಳಸಾಗಾಟದ ವಿಷಯದಲ್ಲಿ ಅನೇಕ ದೂರುಗಳು ಬಂದಿರುವುದರಿಂದ ಈ ವಿಷಯ ಸ್ಪಷ್ಟವಾಯಿತು. ಅಲ್ಲಿ ಸಹಜವಾಗಿ ೧ ಲಕ್ಷ ೨೦ ಸಾವಿರ ರೂಪಾಯಿಗಳಿಗೆ ಮಗು ಸಿಗುತ್ತಿತ್ತು. ಇದು ಇಷ್ಟು ದೊಡ್ಡ ವಿಷಯವಾಗಿದ್ದರೂ ಯಾವುದೇ ಜಾತ್ಯತೀತವಾದಿ, ಸಾಮ್ಯವಾದಿ, ಕಾಂಗ್ರೆಸ್‌ ಇತ್ಯಾದಿ ಯಾವುದೇ ಪಕ್ಷಗಳು ಈ ವಿಷಯದಲ್ಲಿ ಧ್ವನಿಯೆತ್ತಲಿಲ್ಲ. ತದ್ವಿರುದ್ಧ ‘ಅಲ್ಲಿನ ಭಾಜಪದ ಸರಕಾರವೇ ಕ್ರೈಸ್ತರ ಬಗ್ಗೆ ಸೇಡು ತೀರಿಸಿಕೊಳ್ಳಲು ಇಂತಹ ಕಾರ್ಯಾಚರಣೆ ಮಾಡುತ್ತಿದೆ’, ಎಂಬ ಅಪಪ್ರಚಾರ ಮಾಡಲಾಯಿತು. ಇಂತಹ ಯಾವುದೇ ಒಂದು ಘಟನೆ ಹಿಂದೂ

ಸಂತರ ಆಶ್ರಮದಲ್ಲಿ ಘಟಿಸಿದ್ದಿದ್ದರೆ, ಆ ವಿಷಯ ಅಂತಾರಾಷ್ಟ್ರೀಯ ಸ್ತರದಲ್ಲಿ ಸದ್ದು ಮಾಡುತ್ತಿತ್ತು.

೧೨. ನಕ್ಸಲವಾದ ಹಾಗೂ ಕ್ರೈಸ್ತ ಧರ್ಮಪ್ರಚಾರಕರ ಮೈತ್ರಿ

ಎಡದಿಂದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ, ಮಧ್ಯದಲ್ಲಿ ಕಲ್ಪವೃಕ್ಷ ಗಿರಿ ಮಹಾರಾಜ ಮತ್ತು ಸುಶೀಲ ಗಿರಿ ಮಹಾರಾಜ

ಧರ್ಮವನ್ನು ‘ಆಫೀಮಿನ ಮಾತ್ರೆ’ ಎನ್ನುವ ಹಾಗೂ ಹಿಂದೂಗಳ ದೇವತೆಗಳನ್ನು, ಮಂದಿರಗಳನ್ನು ವಿರೋಧಿಸುವ ಸಾಮ್ಯವಾದಿ ವಿಚಾರಶೈಲಿಯ ನಕ್ಸಲವಾದಿ ಚಳುವಳಿಯು ಚರ್ಚ್ ಮತ್ತು ಮಿಶನರಿಗಳನ್ನು  ವಿರೋಧಿಸುವುದು ಕಾಣಿಸುವುದಿಲ್ಲ, ಇಷ್ಟು ಮಾತ್ರವಲ್ಲ, ಒಡಿಶಾದ ಕಂಧಮಾಲದಲ್ಲಿ ೨೩ ಅಗಸ್ಟ್ ೨೦೦೮ ರಂದು ೮೨ ವರ್ಷದ ವೃದ್ಧ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಮತ್ತು ಅವರ ೪ ಸಹಾಯಕರನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ಹತ್ಯೆಯಲ್ಲಿ ನಕ್ಸಲವಾದಿಗಳು ಹಾಗೂ ಕ್ರೈಸ್ತ ಮಿಶನರಿಗಳು ಒಟ್ಟಾಗಿ ನಿಯೋಜನೆ ಮಾಡಿ ಅವರ ಹತ್ಯೆ ಮಾಡಿದ್ದು ಸ್ಪಷ್ಟವಾಗಿದೆ. ಕಂಧಮಾಲದಲ್ಲಿ ನಡೆಯುತ್ತಿದ್ದ ಆದಿವಾಸಿ ಸಮಾಜದ ಮತಾಂತರವನ್ನು ತಡೆಯಲು ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಇವರು ಮಕ್ಕಳ ಸೌಲಭ್ಯಕ್ಕಾಗಿ ಶಾಲೆ, ಅನಾಥಾಲಯಗಳನ್ನು ನಡೆಸುತ್ತಿದ್ದರು. ಅವರ ಈ ಕಾರ್ಯದಿಂದ ಮತಾಂತರದ ಪ್ರಮಾಣ ಕಡಿಮೆಯಾಗುತ್ತಿತ್ತು ಹಾಗೂ ಮತಾಂತರವಾಗಿರುವ ವನವಾಸಿಗಳು ಕ್ರೈಸ್ತ ಪಂಥವನ್ನು ತ್ಯಜಿಸಿ ಪುನಃ ಹಿಂದೂಗಳಾಗುತ್ತಿದ್ದರು. ಆದ್ದರಿಂದ ಅವರನ್ನು ಹತ್ಯೆ ಮಾಡಲಾಯಿತು. ಇದರಿಂದ ನಕ್ಸಲವಾದಿ ಮತ್ತು ಕ್ರೈಸ್ತ ಮಿಶನರಿಗಳು ಒಟ್ಟಾಗಿ ಹಿಂದೂಗಳ ಮತ್ತು ಭಾರತದ ವಿರುದ್ಧ ಕಾರ್ಯನಿರತವಾಗಿದ್ದಾರೆ, ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರಕರಣದಲ್ಲಿ ಕಂಧಮಾಲದಲ್ಲಿನ ಗಲಭೆಯಲ್ಲಿ ಕ್ರೈಸ್ತರ ಮೇಲಾದ ಅತ್ಯಾಚಾರಗಳ ಬಗ್ಗೆ ವಿಚಾರಣೆ ನಡೆಸಲು ಯುರೋಪಿಯನ್‌ ಯೂನಿಯನ್‌ನ ನಿಯೋಗ ತಕ್ಷಣ ಭಾರತಕ್ಕೆ ಬಂದಿತ್ತು.

 ಸಾರ್ವಭೌಮ ಭಾರತದಲ್ಲಿ ಕ್ರೈಸ್ತರ ಮೇಲಾಗುವ ಅನ್ಯಾಯಗಳ ಆರೋಪಗಳ ವಿಚಾರಣೆ ಮಾಡಲು ಯುರೋಪಿಯನ್‌ ದೇಶಗಳು ಎಷ್ಟು ಸಕ್ರಿಯವಾಗಿವೆ, ಆದರೆ ಅವು ಮಿಶನರಿಗಳು ಮಾಡಿದ ಸ್ವಾಮಿ ಲಕ್ಷ್ಮಣಾನಂದ ಇವರ ಹತ್ಯೆಯ ವಿಷಯದಲ್ಲಿ ಮಾತ್ರ ವಿಚಾರಣೆಗೆ ಪ್ರಯತ್ನಿಸಲಿಲ್ಲ ಹಾಗೂ ಕೇಂದ್ರದಲ್ಲಿನ ಅಂದಿನ ಕಾಂಗ್ರೆಸ್ಸಿನ ಮನಮೋಹನ ಸಿಂಹ ಸರಕಾರವೂ ಆ ವಿಷಯದಲ್ಲಿ ಏನೂ ಮಾಡಿಲ್ಲ. ಕಾಂಗ್ರೆಸ್ಸಿನ ಅಂದಿನ ಕೇಂದ್ರ ಮಂತ್ರಿಗಳಂತೂ ಸ್ವಾಮೀಜಿಯವರ ಆಶ್ರಮಕ್ಕೆ ಭೇಟಿ ನೀಡದೆ ಗಲಭೆಯಲ್ಲಿ ಸುಡಲಾದ ಕ್ರೈಸ್ತರ ಮನೆಗಳಿಗೆ ಭೇಟಿ ನೀಡಿದರು. ಸಹಾಯ ನಿಧಿಯ ನೆಪದಲ್ಲಿ ಕೋಟಿಗಟ್ಟಲೆ ರೂಪಾಯಿಗಳನ್ನು ಚರ್ಚ್‌ಗೆ ನೀಡಲಾಯಿತು; ಆದರೆ ‘ಚರ್ಚ್‌ಗಳಲ್ಲಿ ಅನಧಿಕೃತ ಅತ್ಯಾಧುನಿಕ ಶಸ್ತ್ರಗಳು ಹೇಗೆ ಬಂದವು ?, ಸ್ವಾಮೀಜಿಯವರ ಹತ್ಯೆಯಲ್ಲಿ ಆ ‘ಎನ್‌.ಜಿ.ಓ.’ದ ಕೈವಾಡ ಏನಿತ್ತು’, ಎಂಬುದರ ಯಾವುದೇ ವಿಚಾರಣೆ ಆಗಲಿಲ್ಲ. ಇದರಿಂದ ಕಾಂಗ್ರೆಸ್‌ ಸರಕಾರ ಕೇವಲ ಕ್ರೈಸ್ತರ ಪರವಾಗಿ ಕಾರ್ಯ ಮಾಡುತ್ತದೆ, ಎಂಬುದು ಅರಿವಾಗುತ್ತದೆ.

೧೩. ‘ಅರ್ಬನ್’ (ನಗರ) ನಕ್ಸಲವಾದ ಮತ್ತು ಅದರಲ್ಲಿ ಕ್ರೈಸ್ತರ ಕೈವಾಡ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ನಿರಂತರ ‘ಕಾಂಗ್ರೆಸ್ಸಿನ ಮೇಲೆ ಅರ್ಬನ್‌ ನಕ್ಸಲವಾದಿಗಳ ಪ್ರಭಾವವಿದೆ’ಯೆಂದು ಬಹಿರಂಗವಾಗಿ ಆರೋಪಿಸುತ್ತಿದ್ದಾರೆ. ಮಹಾರಾಷ್ಟ್ರ ಪೊಲೀಸರು ಅರ್ಬನ್‌ ನಕ್ಸಲವಾದಿಗಳಿಗೆ ಸಂಬಂಧಿಸಿದ ಕೋರೆಗಾವ-ಭೀಮಾ ದಂಗೆಯ ಪ್ರಕರಣ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹತ್ಯೆಯ ಷಡ್ಯಂತ್ರದ ಪ್ರಕರಣದಲ್ಲಿ ಕೆಲವು ಮಾವೋವಾದಿಗಳನ್ನು ಹಾಗೂ ಕ್ರೈಸ್ತ ಪಾದ್ರಿ ಸ್ಟೇನ್‌ ಸ್ವಾಮಿ, ರೋನಾ ವಿಲ್ಸನ್, ವರ್ನೋನ ಗೋನ್ಸಾಲ್ವಿಸ್, ಅರುಣ ಪೆರೇರಾ ಹಾಗೂ ಸುಸಾನ ಅಬ್ರಹಮ್‌ ಎಂಬ ಕ್ರೈಸ್ತ ವ್ಯಕ್ತಿಯನ್ನು ಕೂಡ ಕಾನೂನುಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾನೂನಿನಡಿಯಲ್ಲಿ (ಯು.ಎ.ಪಿ.ಎ) ಮತ್ತು ಮಾವೋವಾದಿ ಸಂಘಟನೆಗಳೊಂದಿಗೆ ಸಂಬಂಧವಿರುವ ಆರೋಪದಡಿಯಲ್ಲಿ ಬಂಧಿಸಿದ್ದರು. ಇದರಲ್ಲಿ ಒಬ್ಬ ಕ್ರೈಸ್ತ ಪಾದ್ರಿಯ ಸಹಭಾಗವೇ ಬಹಳಷ್ಟು ವಿಷಯಗಳನ್ನು ಹೇಳುತ್ತದೆ.

೧೪. ಕಾಂಗ್ರೆಸ್ಸಿನ ರಾಹುಲ ಗಾಂಧಿಯವರಿಂದ ಜಾತಿ ಜನಗಣನೆಯ ಬೇಡಿಕೆ ಮತ್ತು ಸದ್ಯ ಭಾರತದಲ್ಲಿ ಜಾತಿಯ ಆಧಾರದಲ್ಲಿ ಮತಾಂತರಕ್ಕಾಗಿ ಪ್ರಯತ್ನಿಸುವ ‘ಜೋಶುಆ ಯೋಜನೆ’ !

‘ಜೋಶುಆ ಯೋಜನೆಯು ಕ್ರೈಸ್ತ ಪಂಥದಲ್ಲಿ ವಿಶ್ವಾಸವಿಡದವರನ್ನು ಕ್ರೈಸ್ತರನ್ನಾಗಿ ಮತಾಂತರಿಸುವ ಧ್ಯೇಯವಿಟ್ಟಿರುವ ಒಂದು ಯೋಜನೆಯಾಗಿದೆ. ಈ ಸಂಸ್ಥೆಯು ಅಮೇರಿಕಾದಿಂದ ಕಾರ್ಯನಿರ್ವಹಿಸುತ್ತದೆ. ೧೯೯೫ ರಲ್ಲಿ ೪ ಜನರು ಒಟ್ಟಾಗಿ ಅದನ್ನು ಸ್ಥಾಪನೆ ಮಾಡಿದ್ದರು. ಈ ನಾಲ್ಕು ವ್ಯಕ್ತಿಗಳಲ್ಲಿ ಒಬ್ಬ ಭಾರತೀಯನಿದ್ದನು. ‘ಜೋಶುಆ ಯೋಜನೆ’ಯ ಜಾಲತಾಣದಲ್ಲಿ, ‘ಅದು ಬೈಬಲ್‌ನ ಸೂಚನೆಗನುಸಾರ ನಡೆಯುತ್ತದೆ’ ಎಂದು ಹೇಳಲಾಗುತ್ತದೆ. ಬೈಬಲ್‌ನಲ್ಲಿ ಮುಂದಿನಂತೆ ಹೇಳಲಾಗಿದೆ, ‘ಬೈಬಲ್‌ಗೆ ಜಗತ್ತಿನ ವಿವಿಧ ಭಾಗಗಳ ಜನರನ್ನು ಕ್ರೈಸ್ತರನ್ನಾಗಿ ಮಾಡುವ ಹಾಗೂ ‘ಬಾಪ್ತಿಸ್ಮಾ’ ನೀಡುವ ಆದೇಶ ಪ್ರಾಪ್ತಿಯಾಗಿದೆ, ಅದಕ್ಕನುಸಾರ ಅದು ಕಾರ್ಯ ಮಾಡುತ್ತದೆ.’ ‘ಜೋಶುಆ ಯೋಜನೆ’ಯ ಮುಖ್ಯ ಕಾರ್ಯವೆಂದರೆ, ಯಾವ ಗುಂಪಿನ ಮೇಲೆ ಇದುವರೆಗೆ ಕ್ರೈಸ್ತ ಪಂಥದ ಪ್ರಭಾವ ಬಿದ್ದಿಲ್ಲವೋ, ಅಂತಹವರ ಮಾಹಿತಿಗಳನ್ನು ಸಂಗ್ರಹಿಸುವುದು, ‘ಜೋಶುಆ ಯೋಜನೆ’ಗೆ ಹಣ ಎಲ್ಲಿಂದ ಬರುತ್ತದೆ, ಎಂಬುದು ಸ್ಪಷ್ಟವಾಗಿಲ್ಲ. ಈ ಯೋಜನೆಯಲ್ಲಿ ಕ್ರೈಸ್ತ ಮತಾಂತರದಿಂದ ದೂರವಿರುವ ಗುಂಪುಗಳಿಗಾಗಿ ಒಂದು ನಕಾಶೆ ತಯಾರಿಸಲಾಗಿದೆ. ಜಗತ್ತಿನ ನಕಾಶೆಯಲ್ಲಿ ಕ್ರೈಸ್ತ ಪಂಥಕ್ಕಿಂತ ಬಹಳಷ್ಟು ದೂರವಿರುವ ಒಂದು ಕ್ಷೇತ್ರವನ್ನೂ ಗುರುತಿಸಲಾಗಿದೆ. ‘ಜೋಶುಆ ಯೋಜನೆ’ಯು ಇದಕ್ಕೆ ‘೧೦:೪೦ ವಿಂಡೋ’ ಎಂದು ಹೆಸರನ್ನು ನೀಡಿದೆ. ಇದರಲ್ಲಿ ಭಾರತ, ಚೀನಾ, ಸೌದಿ ಅರೇಬಿಯಾ ಮತ್ತು ಮ್ಯಾನಮಾರ ಈ

ದೇಶಗಳ ಸಮಾವೇಶವಿದೆ. ‘ಜೋಶುಆ ಯೋಜನೆ’ಯಲ್ಲಿ ಏನು ಹೇಳಲಾಗಿದೆ ಎಂದರೆ, ‘ಈ ೪ ದೇಶಗಳು ಕ್ರೈಸ್ತ ಪಂಥವನ್ನು ವಿರೋಧಿಸುತ್ತವೆ. ಆದ್ದರಿಂದ ಅಲ್ಲಿ ಮೊದಲು ಕ್ರೈಸ್ತ ಪಂಥದ ಪ್ರಚಾರ ಮಾಡಬೇಕಾಗಿದೆ.’ ಭಾರತದಲ್ಲಿನ ಜಾತಿಯ ಪ್ರಭಾವ ವನ್ನು ಗಮನದಲ್ಲಿಟ್ಟು ಈ ಯೋಜನೆಯ ಆಧಾರದಲ್ಲಿ ಜಾತಿಗಳಲ್ಲಿ ಭೇದಭಾವ ನಿರ್ಮಿಸಿ ಅದರಲ್ಲಿ ಪ್ರವೇಶಿಸಿ ಅವರನ್ನು ಮತಾಂತರದ ಜಾಲದಲ್ಲಿ ಸಿಲುಕಿಸುವ ಷಡ್ಯಂತ್ರ ಇದರ ಹಿಂದಿದೆ.

ಇದರಿಂದಾಗಿ ಒಂದು ಕಾಲದಲ್ಲಿ ‘ನಾನು ಜಾತಿಪಾತಿ ನಂಬುವು ದಿಲ್ಲ’, ಎಂದು ಹೇಳುತ್ತಿದ್ದ ರಾಹುಲ ಗಾಂಧಿಯು ಈಗ ಜಾತಿಯ ಆಧಾರದಲ್ಲಿ ಜನಗಣತಿಯಾಗÀಬೇಕೆಂದು ಯಾಕೆ ಇಷ್ಟೊಂದು ಒತ್ತಾಯಪಡಿಸುತ್ತಿದ್ದಾರೆ, ಎಂದು ತಿಳಿದುಕೊಳ್ಳಲು ಸಹಾಯವಾಗಬಹುದು.

(ಮುಂದುವರಿಯುವುದು)

(ಆಧಾರ : ಸಾಪ್ತಾಹಿಕ ‘ಹಿಂದೂಸ್ಥಾನ ಪೋಸ್ಟ್‌’ನ ದೀಪಾವಳಿ ವಿಶೇಷಾಂಕ ೨೦೨೪)