ತಾಯ್ತನದ ಜವಾಬ್ದಾರಿ !

ತಾಯಿಯ ಮಹತ್ವ ಎಷ್ಟಿದೆಯೆಂದರೆ, ಆ ಬಗ್ಗೆ ಹೀಗೆ ಹೇಳುತ್ತಾರೆ, ‘ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧುವಿಲ್ಲ’’… ಸಂಕ್ಷಿಪ್ತದಲ್ಲಿ ಉಪ್ಪಿಲ್ಲದೇ ಯಾವುದೇ ಅಡುಗೆ ರುಚಿ ಇರುವುದಿಲ್ಲ ಹಾಗೂ ಸುಖ-ದುಃಖ, ನೋವು-ನಲಿವು ಹಂಚಿಕೊಳ್ಳಲು ತಾಯಿಗಿಂತ ಉತ್ತಮ ಸ್ನೇಹಿತರಿಲ್ಲ’ ! ಮೂರು ಲೋಕದ ಸ್ವಾಮಿಯಾದರೂ, ತಾಯಿ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ‘ತಾಯಿ’ಯು ಪ್ರತಿಯೊಬ್ಬರ ಜೀವನದಲ್ಲಿಯೂ ಆಧಾರಸ್ತಂಭವಾಗಿದ್ದಾಳೆ, ಅವಳ ಸ್ಥಾನವನ್ನು ಎಂದಿಗೂ ಯಾರು ಪಡೆಯಲು ಸಾಧ್ಯವಿಲ್ಲ; ಆದರೆ ಈ ಕಲಿಯುಗದ ಪ್ರಭಾವವು ಎಷ್ಟು ತೀವ್ರವಾಗಿದೆಯೆಂದರೆ, ಈ ತಾಯಿಯ ಮನಸ್ಸು ಮತ್ತು ಹೃದಯ ಅಗ್ರಾಹ್ಯ ಅಥವಾ ಕಲ್ಪನಾತೀತವಾಗಿ ಬಿಟ್ಟಿದೆ. ‘ವಿಡಿಯೋ’ ಒಂದರಲ್ಲಿ ಕಂಡುಬಂದಿರುವುದೇನೆಂದರೆ, ಕೇವಲ ಪ್ರಸಿದ್ಧಿಗಾಗಿ ಅಥವಾ ಬೇರೆ ಹೊಸದೇನಾದರೂ ಮಾಡುವುದಕ್ಕಾಗಿ ತಾಯಿಯೊಬ್ಬಳು ತನ್ನ ಚಿಕ್ಕ ಮಗುವಿನೊಂದಿಗೆ ಬಾವಿಯ ಮೇಲೆ ಕುಳಿತಿದ್ದಾಳೆ. ಚಿಕ್ಕ ಮಗು ಬಾವಿಯ ಒಳಬದಿಗೆ ನೇತಾಡುತ್ತಿದೆ ಮತ್ತು ತಾಯಿಯು ಕೈಯಾಡಿಸುತ್ತ ಹಾಡನ್ನು ಹಾಡುತ್ತಿದ್ದಾಳೆ. ಮಗುವಿಗೆ ಒಮ್ಮೆ ಆ ಕೈಯಿಂದ ಇನ್ನೊಮ್ಮೆ ಈ ಕೈಯಿಂದ ಹಿಡಿಯುವುದು-ಬಿಡುವುದು ಮಾಡುತ್ತಿದ್ದಾಳೆ. ಈ ವಿಡಿಯೋ ನೋಡುವವರ ಎದೆಬಡಿತವೂ ಒಂದು ಕ್ಷಣ ತಪ್ಪುತ್ತದೆ. ಮನಸ್ಸಿನಲ್ಲಿ ‘ಇವಳು ‘ತಾಯಿ’ಯೇ ಹೌದಲ್ಲ ?’, ಎಂಬ ಪ್ರಶ್ನೆ ಬರುತ್ತದೆ. ಮಗು ಚೌರಂಗವನ್ನು ಹತ್ತುತ್ತಿರುವಾಗಲೂ ಬಿದ್ದರೆ ಹಿಡಿಯಲು ಆಗಬೇಕೆಂದು ತಾಯಿಯು ಸ್ವಲ್ಪ ದೂರದಲ್ಲಿ ಕೈ ಹಿಡಿದಿರುತ್ತಾಳೆ, ಇಲ್ಲಿಯಂತೂ ‘ಬಾವಿ‘ಯೇ ಇದೆ. ಮನಸ್ಸು ಮತ್ತು ಬುದ್ಧಿ ಈ ಸ್ಥಳದಲ್ಲಿ ಸ್ತಬ್ಧವಾಗುತ್ತವೆ !

ಸೌ. ಸ್ನೇಹಾ ತಾಮ್ಹನಕರ

ದೇವರ ನಂತರ ಮೊತ್ತಮೊದಲು ಯಾರಿಗೆ ನಮಸ್ಕಾರ ಮಾಡಬೇಕೆಂದರೆ, ಅದು ‘ತಾಯಿ’ಗೆ ಎಂದು ಹೇಳಲಾಗುತ್ತದೆ. ವ್ಯಕ್ತಿಯು ಎಷ್ಟೇ ದೊಡ್ಡವನಾದರೂ, ತಾಯಿಯ ಚರಣಗಳು ಯಾವಾಗಲೂ ವಂದನೀಯವಾಗಿರುತ್ತವೆ. ಕೌಶಲ್ಯೆಯ ರಾಮ, ದೇವಕಿಯ ಕೃಷ್ಣ ಮತ್ತು ಯಾವ ತಾಯಿಯು ಛತ್ರಪತಿ ಶಿವಾಜಿ ಮಹಾರಾಜರನ್ನು ಸಿದ್ಧಪಡಿಸಿದಳೋ, ಅವರ ಚರಣಗಳಲ್ಲಿ ಈ ವಸುಂಧರೆಯು ಯಾವಾಗಲೂ ಕೃತಜ್ಞಳಾಗಿದ್ದಾಳೆ. ಝಾನ್ಸಿ ರಾಣಿಯು ತನ್ನ ಮಗುವನ್ನು ಬೆನ್ನಿನ ಹಿಂದೆ ಕಟ್ಟಿಕೊಂಡು ಬ್ರಿಟಿಷರ ಸೈನ್ಯವನ್ನು ವಿರೋಧಿಸುತ್ತ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದಳು. ಈ ಎಲ್ಲ ಮಾತೆಯರಲ್ಲಿ ಯಾವುದೇ ಸ್ವಾರ್ಥವಿರಲಿಲ್ಲ ಅಥವಾ ಪ್ರಸಿದ್ಧಿಯ ಗೀಳು ಇರಲಿಲ್ಲ. ಅವರಲ್ಲಿದ್ದ ಮಾತೃತ್ವದಿಂದಾಗಿ ಇಂದಿಗೂ ಅವರ ಹೆಸರು ಉಳಿದಿದೆ ಮತ್ತು ಚಂದ್ರ-ಸೂರ್ಯ ಇರುವ ತನಕ ಅವರ ಹೆಸರು ಇರಲಿದೆ.

ವ್ಯಕ್ತಿಯು ಎಡವಿ ಬಿದ್ದಾಗ ಮೊದಲಿಗೆ ‘ಅಮ್ಮಾ’ ಎಂದು ಕರೆಯುತ್ತಾನೆ. ‘ತಾಯಿ’ಯು ಆ ಹುಟ್ಟಿದ ಮಗುವನ್ನು ರೂಪಿಸುತ್ತಾಳೆ. ಧಾರಾವಾಹಿಯೊಂದರಲ್ಲಿ, ‘ತಾಯಿ ಎಂದರೆ ಸೊಂಟದ ಮೇಲೆ ಕೈ ಇಟ್ಟಿಲ್ಲದ ವಿಠಲನೇ ಆಗಿದ್ದಾಳೆ, ಮಕ್ಕಳಿಗಾಗಿ ಭಗವಂತನೇ ಅವಳನ್ನು ಕಳುಹಿಸಿದ್ದಾನೆ, ಅಂದರೆ ಭಗವಂತನ ರೂಪವಾಗಿದ್ದಾಳೆ’, ಇಂತಹ ತಾಯಿಯ ಮಹಿಮೆಯನ್ನು ಎಷ್ಟು ಹೊಗಳಿದರೂ ಕಡಿಮೆಯೇ ಇದೆ. ಮೇಲಿನ ಪ್ರಸಂಗವನ್ನು ನೋಡಿದರೆ, ಈ ವಿಷಯದಲ್ಲಿಯೂ ಪ್ರಶ್ನೆ ಮೂಡುತ್ತದೆ. ಇಂತಹ ಸ್ಥಿತಿ ಏಕೆ ಉಂಟಾಯಿತು ? ಇಲ್ಲಿನ ತಾಯಿಯ ರೂಪವನ್ನು ನೋಡಿ ನೇರವಾಗಿ ‘ದೇವರ’ದ್ದೇ ಸ್ಮರಣೆಯಾಗುತ್ತದೆ.

ಇಂದು ತಾಯಿಯ ‘ಕರಿಯರ್‌’ಗಾಗಿ ಮಕ್ಕಳ ಮುಗ್ಧ ಬಾಲ್ಯವು ಪರೀಕ್ಷೆಗೆ ಒಳಗಾಗುತ್ತಿದೆ. ಕೆಲವು ಶಿಶುಗಳಿಗೆ ಅವರ ಅಧಿಕಾರದ ಹಾಲೂ ಸಿಗುವುದಿಲ್ಲ. ಇಂತಹ ಒಂದಲ್ಲ ಅನೇಕ ‘ತಾಯಿ’ತನದ ರೀತಿಯು ಸದ್ಯ ಸಮಾಜದಲ್ಲಿ ನಿರ್ಮಾಣವಾಗಿದೆ. ‘ತಾಯ್ತನ’ ಇದು ದೇವರು ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ‘ತಾಯಿ’ ಎಂಬ ಶಬ್ದವೇ ನಿಶ್ಚಿಂತೆ ಮೂಡಿಸುತ್ತದೆ. ಕಲಿಯುಗದಲ್ಲಿನ ‘ತಾಯಿ’ಯು ತನ್ನ ಸಂಬಂಧವನ್ನು ನಿಭಾಯಿಸಲು ಇದೆಲ್ಲವನ್ನೂ ಗಮನದಲ್ಲಿಟ್ಟು ತನ್ನಲ್ಲಿನ ತಾಯ್ತನವನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು ! – ಸೌ. ಸ್ನೇಹಾ ತಾಮ್ಹನಕರ, ರತ್ನಾಗಿರಿ.