೧. ಪ್ರಸಾರಕಾರ್ಯಕ್ಕಾಗಿ ಬೇಕಾಗುವ ಖರ್ಚಿನ ಬಗ್ಗೆ ಚಿಂತೆಯನ್ನು ವ್ಯಕ್ತಪಡಿಸಿದಾಗ ಪ.ಪೂ. ಡಾಕ್ಟರರು ಪ.ಪೂ. ಭಕ್ತರಾಜ ಮಹಾರಾಜರ ಆಧ್ಯಾತ್ಮಿಕ ದೃಷ್ಟಿಕೋನವನ್ನು ನೀಡಿ ನಿಶ್ಚಿಂತಗೊಳಿಸುವುದು
‘ಸಂಸ್ಥೆಯ ಆರಂಭದ ದಿನಗಳಲ್ಲಿ ಸಂಸ್ಥೆಗೆ ಯಾವ ಆರ್ಥಿಕ ಆದಾಯವಿರಲಿಲ್ಲ. ಅನೇಕ ಸ್ಥಳಗಳಲ್ಲಿ ಸಾಧಕರೇ ತಮ್ಮ ಕ್ಷಮತೆಗನುಸಾರ ಮಾಸಿಕ ಅರ್ಪಣೆಯನ್ನು ಮಾಡುತ್ತಿದ್ದರು ಮತ್ತು ಅದರಿಂದ ಸಂಸ್ಥೆಯ ಕಾರ್ಯವು ನಡೆಯುತ್ತಿತ್ತು. ‘ಗುರುಪೂರ್ಣಿಮೆ ಮತ್ತು ಅಭ್ಯಾಸವರ್ಗದಲ್ಲಿ ಅರ್ಪಣೆಯನ್ನು ಮಾಡಲು ಇಟ್ಟಿರುವ ಪೆಟ್ಟಿಗೆ ಮತ್ತು ಗ್ರಂಥಗಳ ಮಾರಾಟ’ ಇವೆರಡೇ ಆದಾಯದ ಮುಖ್ಯ ಮಾರ್ಗವಾಗಿತ್ತು. ಸಾಧಕರು ಬಹಳ ಮಿತವ್ಯಯ ಮಾಡುತ್ತಿದ್ದರು ಮತ್ತು ಪ್ರತಿಯೊಂದು ಚಿಕ್ಕ ವಸ್ತುವನ್ನೂ ಅರ್ಪಣೆಯ ಸ್ವರೂಪದಲ್ಲಿ ಪಡೆಯಲು ಪ್ರಯತ್ನಿಸುತ್ತಿದ್ದರು. ಅದರಿಂದ ಸನಾತನ ಸಂಸ್ಥೆಯ ಕಾರ್ಯವು ನಡೆಯುತ್ತಿತ್ತು. ಈ ಹಿನ್ನಲೆಯಲ್ಲಿ ‘ಹೊಸಹೊಸ ಉಪಕ್ರಮಗಳು, ಗ್ರಂಥಗಳ ಪ್ರತಿಗಳನ್ನು ಮುದ್ರಿಸುವುದು ಮತ್ತು ಪತ್ರಿಕೆಗಳನ್ನು ನಡೆಸುವುದು’, ಇವುಗಳಿಗಾಗಿ ಎಷ್ಟು ಖರ್ಚಾಗುತ್ತಿರಬಹುದು ?’, ಎಂಬ ವಿಚಾರ ಮಾಡಿ ನನ್ನ ಮನಸ್ಸಿನ ಮೇಲೆ ಒತ್ತಡ ಬರುತ್ತಿತ್ತು; ಏಕೆಂದರೆ ಸೇವಾಕೇಂದ್ರ ಮತ್ತು ಆಶ್ರಮದ ಖರ್ಚಿನ ಲೆಕ್ಕವನ್ನು ನಾನು ನೋಡುತ್ತಿದ್ದೆನು.
ಒಮ್ಮೆ ಪ್ರಸಾರಕ್ಕಾಗಿ ಕೆಲವು ದ್ವಿಚಕ್ರ ವಾಹನಗಳನ್ನು (ಸ್ಕೂಟರ್ ಗಳನ್ನು) ಖರೀದಿಸಬೇಕಾಗಿತ್ತು. ನಾನು ಈ ಖರ್ಚಿನ ಬಗ್ಗೆ ಪ.ಪೂ. ಡಾಕ್ಟರರೊಂದಿಗೆ ಮಾತನಾಡಿದೆನು. ಆ ಸಮಯ ದಲ್ಲಿ ಅವರು, “ಪ.ಪೂ. ಬಾಬಾ (ಪ.ಪೂ. ಭಕ್ತರಾಜ ಮಹಾರಾಜರವರ ಬಗ್ಗೆ ಹೇಳುತ್ತಿದ್ದರು, ‘ಉಳಿದವರೆಲ್ಲರೂ ಹಾಸಿಗೆ ನೋಡಿ ಕಾಲು ಚಾಚುತ್ತಾರೆ; ಆದರೆ ನಾವು ಕಾರ್ಯವನ್ನು ಮಾಡುತ್ತಿರುವುದರಿಂದ ಕಾಲು ಚಾಚ ಬೇಕು. ಹಾಸಿಗೆಯನ್ನು ದೇವರು ಕೊಡುವನು’, ಎಂಬ ಶ್ರದ್ಧೆಯನ್ನಿಡ ಬೇಕು. ಆಗ ತಾನಾಗಿಯೇ ಸಿಗುತ್ತದೆ !” ಎಂದು ಹೇಳಿದರು.
೨. ‘ದೈನಿಕ ಸನಾತನ ಪ್ರಭಾತ’ ಪ್ರಾರಂಭವಾದ ನಂತರ ಬಂದ ಅಡಚಣೆಗಳನ್ನು ನಿವಾರಿಸುವಾಗ ‘ಪರಿಸ್ಥಿತಿಯಿಂದಾಗಿ ಸಾಧ್ಯವಿಲ್ಲ, ಎಂಬ ಮಾನಸಿಕತೆಯಲ್ಲಿರದೇ ದೇವರ ಮೇಲೆ ಶ್ರದ್ಧೆಯನ್ನಿಡಲು ಕಲಿಸುವುದು !
ಅ. ‘ದೈನಿಕ ‘ಸನಾತನ ಪ್ರಭಾತ’ ಪ್ರಾರಂಭವಾದ ಒಂದು ವರ್ಷದ ನಂತರ ‘ಅದರ ವಿತರಣೆ ಒಳ್ಳೆಯದಾಗಿರಬೇಕು. ಅದು ಹೆಚ್ಚುತ್ತ ಹೋಗಬೇಕು’, ಎಂದು ನನಗೆ ಅನಿಸುತ್ತಿತ್ತು; ಆದರೆ ಅದೇ ಸಮಯದಲ್ಲಿ ನನಗೆ ‘ದೈನಿಕ ‘ಸನಾತನ ಪ್ರಭಾತ’ ವು ಆಧ್ಯಾತ್ಮಿಕ ದೃಷ್ಟಿಕೋನದಿಂದ ಆಧಾರಿತ ದೈನಿಕವಾಗಿದೆ; ಹಾಗಾಗಿ ಅದರಲ್ಲಿನ ಲೇಖನಗಳೂ ಯೋಗ್ಯವಾಗಿರಬೇಕು’, ಎಂದು ಎನಿಸುತ್ತಿತ್ತು.
ಆ. ‘ದೈನಿಕ ಸನಾತನ ಪ್ರಭಾತ’ ಪ್ರತಿದಿನ ಪೂರ್ಣಗೊಳ್ಳುವುದು’, ಇದೇ ಒಂದು ಸಮಸ್ಯೆಯಾಗಿತ್ತು. ಆದ್ದರಿಂದ ಆರ್ಥಿಕ ವಿಷಯದ ವಿಚಾರ ಮಾಡಲು ನನಗೆ ಸಮಯವೇ ಸಿಗುತ್ತಿರಲಿಲ್ಲ. ಆದ್ದರಿಂದ ‘ನಾವು ಬಹಳ ಮಾಡುತ್ತಿದ್ದೇವೆ’, ಎಂದು ನನಗೆ ಅನಿಸುತ್ತಿತ್ತು
ಇ. ಕೆಲವೊಮ್ಮೆ ನನ್ನ ಮನಸ್ಸಿನಲ್ಲಿ, ‘ದೈನಿಕ ‘ಸನಾತನ ಪ್ರಭಾತ’ ಸಮಾಜದ ಪರಿವರ್ತನೆಗಾಗಿ ಇದೆ ಮತ್ತು ಸಮಾಜಪರಿವರ್ತನೆ ಆಗದಿದ್ದರೆ, ಸಾಧಕರಿಗೆ ಸಾಧನೆ ಅರ್ಥವಾಗದಿದ್ದರೆ, ಅವರು ಸಾಧನೆಯಲ್ಲಿ ಮುಂದೆ ಹೋಗದಿದ್ದರೆ, ಈ ಎಲ್ಲ ಪರಿಶ್ರಮದಿಂದ ಏನು ಉಪಯೋಗ ?’, ಎಂಬ ಪ್ರಶ್ನೆಯೂ ಬರುತ್ತಿತ್ತು.
ಮೇಲಿನ ಅಡಚಣೆಗಳ ಬಗ್ಗೆ ಪ.ಪೂ. ಡಾಕ್ಟರರ ಬಳಿ ಕೇಳಿದಾಗ ಅವರು, “ನೀವು ಈ ಕೆಲಸಕ್ಕಾಗಿ ದೈನಿಕ ‘ಸನಾತನ ಪ್ರಭಾತ’ವನ್ನು ಕೇವಲ ಶೇ. ೧೫ ರಷ್ಟು ಇಷ್ಟೇ ಉಪಯೋಗಿಸುತ್ತಿರುವಿರಿ.” ಎಂದು ಹೇಳಿದರು. ಆದ್ದರಿಂದ ‘ಏನು ಮಾಡುವುದಿದ್ದರೂ, ‘ಪರಿಸ್ಥಿತಿಯಿಂದಾಗಿ ಸಾಧ್ಯವಾಗುತ್ತಿಲ್ಲ, ಎಂಬ ಮಾನಸಿಕತೆಯಿಂದ ನಾವು ಹೊರಗೆ ಬರಬೇಕು’, ಎಂಬುದು ನನಗೆ ತಿಳಿಯಿತು.
೩. ಚೌಕಟ್ಟಿನ ಹೊರಗೆ ಹೋಗಿ ವಿಚಾರ ಮಾಡುವುದು ಮತ್ತು ಅದನ್ನು ಸ್ವೀಕರಿಸಲು ಕಲಿಸುವುದು
‘ಆಶ್ರಮದಲ್ಲಿರುವುದು’, ಇದು ನನಗೆ ಮತ್ತು ನನ್ನ ಜೊತೆಯಲ್ಲಿ ರುವ ಅನೇಕರಿಗೆ ಸಂಪೂರ್ಣ ಹೊಸದಾಗಿತ್ತು ಮತ್ತು ‘ನಿಖರವಾಗಿ ಏನು ಯೋಗ್ಯವಾಗಿದೆ ? ಏನು ಅಯೋಗ್ಯವಾಗಿದೆ ? ನಿಖರ ವಾಗಿ ಹೇಗಿರಬೇಕು ? ಯಾವ ಅಡಚಣೆಗಳು ಬರುತ್ತವೆ ? ಯಾವ ವಿಷಯದ ಬಗ್ಗೆ ಯಾರಿಗೆ ತೊಂದರೆ ಅನಿಸುತ್ತದೆ ? ಯಾವ ವಿಷಯಗಳನ್ನು ಸುಧಾರಿಸಲು ಗಮನ ಕೊಡಬೇಕು ? ಯಾವ ವಿಷಯಗಳನ್ನು ಯಾವ ರೀತಿಯಲ್ಲಿ ಸುಧಾರಿಸಬೇಕು ?’, ಎಂಬುದರ ಬಗ್ಗೆ ನಾನು ಕಲಿಯುತ್ತಿದ್ದೆನು. ತಪ್ಪುಗಳ ಫಲಕ, ಸ್ವಯಂಸೂಚನೆ ಇತ್ಯಾದಿಗಳು ಆಗ ಇರಲಿಲ್ಲ. ಆದ್ದರಿಂದ ನನ್ನ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾಡುವ ವಿಧಾನವು ಒಂದು ನಿರ್ದಿಷ್ಟ ಚೌಕಟ್ಟಿನಲ್ಲಿ ಸೀಮಿತವಾಗಿರುತ್ತಿತ್ತು. ಕೆಲವೊಮ್ಮೆ ಸಮಸ್ಯೆಗಳು ತಕ್ಷಣ ಪರಿಹಾರ ಆಗುತ್ತಿರಲಿಲ್ಲ. ಇಂತಹ ಸಮಯದಲ್ಲಿ ‘ಚೌಕಟ್ಟಿನ ಹೊರಗೆ ಬಂದು ವಿಚಾರ ಮಾಡಬೇಕು ಮತ್ತು ಅದು ಸ್ವಲ್ಪ ಕಠಿಣವೆನಿಸಿದರೂ ಸ್ವೀಕರಿಸಬೇಕು’, ಎಂಬ ಮಾನಸಿಕತೆ ನನ್ನಲ್ಲಿರಲಿಲ್ಲ. ಆದರೆ ಮುಂದಿನ ಪ್ರಸಂಗಗಳಿಂದ ಈ ಮಾನಸಿಕತೆ ಬದಲಾಯಿಸಲು ಸಹಾಯವಾಯಿತು.
೩ ಅ. ಪ್ರಸಂಗ ಕ್ರ. ೧ – ಪ.ಪೂ. ಡಾಕ್ಟರರು ‘ಸುಖಸಾಗರ’ ಆಶ್ರಮದಲ್ಲಿನ ಸ್ನಾನಗೃಹದ ಬಕೆಟ್‌ಗಳು ಇಟ್ಟ ಜಾಗದಲ್ಲಿ ಇರದಿರುವುದ ರಿಂದ ಅವುಗಳನ್ನು ಸರಪಳಿಯಿಂದ ಸ್ನಾನಗೃಹದ ನಲ್ಲಿಗೆ ಕಟ್ಟಲು ಹೇಳುವುದು :
ಫೊಂಡಾ (ಗೋವಾ)ದಲ್ಲಿನ ‘ಸುಖಸಾಗರ’ ಆಶ್ರಮದಲ್ಲಿ ೩ ಸ್ನಾನಗೃಹಗಳಿದ್ದವು ಮತ್ತು ಬಟ್ಟೆಗಳನ್ನು ತೊಳೆಯುವ ವ್ಯವಸ್ಥೆಯು ಹೊರಗೆ ಸ್ವಲ್ಪ ದೂರವಿತ್ತು. ಬಕೆಟ್‌ಗಳು ಸ್ನಾನಗೃಹದಲ್ಲಿರುತ್ತಿದ್ದವು. ಎಲ್ಲವೂ ಹೊಸದಾಗಿರುವುದರಿಂದ ‘ಸ್ನಾನಕ್ಕಾಗಿ ಮತ್ತು ಬಟ್ಟೆ ತೊಳೆಯಲು ಬೇರೆ ಬಕೆಟ್‌ಗಳಿರುತ್ತವೆ’, ಎಂಬ ವ್ಯತ್ಯಾಸವು ಕೆಲವರಿಗೆ ಗಮನಕ್ಕೆ ಬರುತ್ತಿರಲಿಲ್ಲ. ಬಕೆಟ್ಟಿನ ಬಣ್ಣ ಬದಲಾಯಿತು, ಆಕಾರ ಬದಲಾಯಿತು, ಅದರ ಮೇಲೆ ಬರೆದರೂ, ‘ಒಂದು ಸ್ನಾನಗೃಹದಿಂದ ಇನ್ನೊಂದು ಸ್ನಾನಗೃಹದಲ್ಲಿ ಹೋಗುವುದು ಅಥವಾ ಮೊದಲನೇ ಸ್ನಾನಗೃಹದಲ್ಲಿ ಬಕೆಟ್ ಇರದಿರುವುದು’, ಈ ರೀತಿ ಗೊಂದಲವಾಗುತ್ತಿತ್ತು. ವಿವಿಧ ರೀತಿಯಲ್ಲಿ ಉಪಾಯಗಳನ್ನು ಮಾಡಿದರೂ ಈ ರೀತಿ ಆಗುವುದು ನಿಲ್ಲುತ್ತಲೇ ಇರಲಿಲ್ಲ; ಆದ್ದರಿಂದ ನಾನು ಈ ಅಡಚಣೆಯನ್ನು ಪ.ಪೂ. ಡಾಕ್ಟರರಿಗೆ ಹೇಳಿದೆನು. ಆಗ ಅವರು, “ಬಕೆಟ್‌ಗಳಿಗೆ ಸರಪಳಿ (ಚೈನ್)ಕಟ್ಟಿರಿ ಮತ್ತು ಆ ಸರಪಳಿಗಳನ್ನು ಆಯಾ ಸ್ನಾನಗೃಹದಲ್ಲಿನ ನಲ್ಲಿಗೆ ಕಟ್ಟಿರಿ, ಅಂದರೆ ಆ ಸ್ನಾನಗೃಹದಲ್ಲಿನ ಬಕೆಟ್‌ಗಳು ಅದೇ ಸ್ನಾನಗೃಹ ದಲ್ಲಿರುವವು.” ಎಂದು ಹೇಳಿದರು. ಈ ಪರಿಹಾರವು ನನಗಾಗಿ ಸಂಪೂರ್ಣ ಚೌಕಟ್ಟಿನ ಹೊರಗಿನದಾಗಿತ್ತು.
೩ ಆ. ಪ್ರಸಂಗ ಕ್ರ. ೨
೩ ಆ ೧. ಅನೇಕಬಾರಿ ಮಧ್ಯಾಹ್ನದ ಮಹಾಪ್ರಸಾದವನ್ನು ಸಿದ್ಧಪಡಿಸಲು ತಡವಾಗುವುದು ಮತ್ತು ಅದರ ಮೇಲೆ ದೀರ್ಘಕಾಲದವರೆಗೆ ಪರಿಹಾರೋಪಾಯ ಸಿಗದಿರುವುದು : ‘ಸುಖಸಾಗರ’ ಆಶ್ರಮದಲ್ಲಿರುವಾಗ ಅಡುಗೆಮನೆಯಲ್ಲಿ ಸೇವೆ ಮಾಡುವ ಸಾಧಕರ ಒಂದು ಪ್ರತ್ಯೇಕ ಗುಂಪು ಇತ್ತು. ಆ ಸಾಧಕಿಯರು ಅಥವಾ ಅಲ್ಲಿ ಸೇವೆ ಮಾಡುವ ಸಾಧಕರು ಅಡುಗೆಮನೆಯಲ್ಲಿನ ಎಲ್ಲ ಸೇವೆಗಳನ್ನು ಮಾಡುತ್ತಿದ್ದರು. ‘ಉಪಹಾರ ಮತ್ತು ಅಡುಗೆಯನ್ನು ಸಿದ್ಧಪಡಿಸುವುದು, ತರಕಾರಿ ಹೆಚ್ಚುವುದು’ ಇತ್ಯಾದಿ ಎಲ್ಲ ಸೇವೆಗಳನ್ನು ಆ ಸಾಧಕರು ನೋಡಿಕೊಳ್ಳುತ್ತಿದ್ದರು. ಆದ್ದರಿಂದ ಕೆಲವೊಮ್ಮೆ ಮಧ್ಯಾಹ್ನದ ಮಹಾಪ್ರಸಾದಕ್ಕೆ ತಡವಾಗುತ್ತಿತ್ತು. ‘ಏಕೆ ತಡವಾಯಿತು ?’, ಎಂದು ನೋಡಲು ಹೋದರೆ, ಒಂದಲ್ಲ ಒಂದು ಕಾರಣ ಮುಂದೆ ಬರುತ್ತಿತ್ತು. ಆ ಕಾರಣಕ್ಕಾಗಿ ಪರಿಹಾರ ನೀಡಿದರೆ, ಇನ್ನೊಂದು ಕಾರಣ ಉದ್ಭವಿಸಿ ಎಲ್ಲ ಆಯೋಜನೆಗಳು ವ್ಯರ್ಥವಾಗುತ್ತಿದ್ದವು.
೩ ಆ ೨. ‘ಉಪಾಹಾರವನ್ನು ತಯಾರಿಸುವ ಮತ್ತು ಅಡುಗೆ ಮಾಡುವ ಸಾಧಕರು’, ಹೀಗೆ ಪ್ರತ್ಯೇಕ ಎರಡು ಗುಂಪು ಮಾಡಿ ಪ್ರಕ್ರಿಯೆ ಪ್ರಾರಂಭಿಸಿದ ನಂತರ ಸಮಸ್ಯೆ ಪರಿಹರಿಸಲು ಸಾಧ್ಯವಾಗುವುದು : ಕಾಲಾಂತರದಿಂದ ಗಮನಕ್ಕೆ ಬಂದಿರುವುದೇನೆಂದರೆ, ‘ಉಪಾಹಾರಕ್ಕೆ ತಡವಾಗುತ್ತಿರುವುದರಿಂದ ನಂತರ ಎಲ್ಲವನ್ನು ಜೋಡಿಸಲು ತಡವಾಗುತ್ತಿತ್ತು. ಆದ್ದರಿಂದ ಮಹಾಪ್ರಸಾದಕ್ಕೆ ತಡವಾಗುತ್ತಿತ್ತು.’ ಕೆಲವೊಮ್ಮೆ ಮಹಾಪ್ರಸಾದವನ್ನು ಸಿದ್ಧಪಡಿಸುವಾಗ ಏನಾದರೊಂದು ಅಡಚಣೆಗಳು ಬಂದಾಗ ಇನ್ನೂ ತಡವಾಯಿತು, ಹೀಗೆ ಒಂದಲ್ಲ ಒಂದು ಕಾರಣದಿಂದ ತಡವಾಗುತ್ತಿತ್ತು. ಅದಕ್ಕಾಗಿ ಏನು ಪ್ರಯತ್ನ ಗಳನ್ನು ಮಾಡಿದರೂ ಅಷ್ಟೊಂದು ಸುಧಾರಣೆ ಆಗುತ್ತಿರಲಿಲ್ಲ. ಹೀಗೆ ಕೆಲವು ವಾರಗಳು ಕಳೆದನಂತರ, ‘ಅಡುಗೆ ಮಾಡುವ ಸಾಧಕರ ಗುಂಪು ಒಂದೇ ಆಗಿರುವುದರಿಂದ ಅವರಿಗೆ ದೈಹಿಕ ಇತಿಮಿತಿಗಳಿವೆ.’ ಎಂಬುದು ನನ್ನ ಗಮನಕ್ಕೆ ಬಂದಿತು. ಇದೆಲ್ಲವನ್ನು ನೋಡಿ ನನ್ನ ಮನಸ್ಸಿನಲ್ಲಿ, ಮುಂದಿನ ವಿಚಾರ ಬಂತು, ‘ನಾವು ಉಪಾಹಾರವನ್ನು ತಯಾರಿಸುವ ಮತ್ತು ಮಹಾಪ್ರಸಾದವನ್ನು ಸಿದ್ಧಪಡಿಸುವ ಸಾಧಕರ ಬೇರೆ ಬೇರೆ ಗುಂಪು ಮಾಡಿದರೆ, ಉಪಾಹಾರ ಮತ್ತು ಮಹಾಪ್ರಸಾದದ ಸೇವೆಯನ್ನು ತಮ್ಮತಮ್ಮ ಸಮಯಕ್ಕನುಸಾರವಾಗಿ ಪ್ರಾರಂಭ ಮಾಡುವರು ಮತ್ತು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವರು’. (ಈ ಮೊದಲು ಉಪಾಹಾರದ ಸೇವೆಯನ್ನು ಮುಗಿಸಲು ತಡವಾಗುತ್ತಿರುವುದರಿಂದ ಮಹಾಪ್ರಸಾದದ ಸೇವೆಯನ್ನು ಪ್ರಾರಂಭಿಸಲು ತಡವಾಗುತ್ತಿತ್ತು ಮತ್ತು ರಾತ್ರಿ ಮಹಾಪ್ರಸಾದದ ಸೇವೆ ಮುಗಿಸಲು ತಡವಾಗು ವುದರಿಂದ ಹೊರಗಿನ ಸ್ವಚ್ಛತೆ ಇತ್ಯಾದಿ ಸೇವೆಗಳನ್ನು ಮಾಡಲು ತಡವಾಗುತ್ತಿತ್ತು.) ಅನಂತರ ‘ಇತರ ವಿಭಾಗದಲ್ಲಿ ಸೇವೆ ಮಾಡುವ ಸಾಧಕರು ಉಪಾಹಾರದ ಸೇವೆಯನ್ನು ಮಾಡಬೇಕು ಮತ್ತು ಅಡುಗೆಮನೆಯಲ್ಲಿನ ಸಾಧಕರು ಮಹಾಪ್ರಸಾದವನ್ನು ಸಿದ್ಧಪಡಿಸುವ ಸೇವೆಯನ್ನು ಮಾಡಬೇಕು’, ಎಂದು ನಿರ್ಧರಿಸಲಾಯಿತು.
೩ ಆ ೩. ‘ಇದೆಲ್ಲ ಸರಾಗವಾಗಿ ನಡೆಯುತ್ತಿದೆ’, ಎಂದೆನಿಸಿ ನಾನು ಪ.ಪೂ. ಡಾಕ್ಟರರಿಗೆ ಇದರ ಬಗ್ಗೆ ಹೇಳಿದೆನು. ನನ್ನ ಮನಸ್ಸಿನಲ್ಲಿ, ‘ಅವರು ‘ಒಳ್ಳೆಯದಾಯಿತು’ ಎಂದು ಹೇಳುವರು.’ ಎಂಬ ವಿಚಾರ ಇತ್ತು. ವಾಸ್ತವದಲ್ಲಿ ಅವರು, “ಈ ಪರಿಹಾರೋಪಾಯ ಮಾಡಲು ಇಷ್ಟೊಂದು ದಿನ ಏಕೆ ಬೇಕಾಯಿತು ?”ಎಂದು ಕೇಳಿದರು.
೩ ಆ ೪. ಕಲಿಯಲು ಸಿಕ್ಕಿದ ಅಂಶಗಳು
ಅ. ಮೇಲಿನ ಪ್ರಸಂಗದಲ್ಲಿ ನನಗೆ ನನ್ನ ಕರ್ತೃತ್ವ ಗಮನಕ್ಕೆ ಬಂದಿತು.
ಆ. ‘ಆಯಾಯ ವಿಭಾಗದ ಸಾಧಕರು ಅಲ್ಲಿನ ಎಲ್ಲ ಸೇವೆಗಳನ್ನು ಮಾಡಬೇಕು, ಅಂದರೆ ‘ಅಡುಗೆಮನೆಯಲ್ಲಿನ ಸಾಧಕರು ಅಲ್ಲಿನ ಎಲ್ಲ ಸೇವೆಗಳನ್ನು ಮಾಡಬೇಕು’, ಎಂಬುದು ನನ್ನ ಸಂಕುಚಿತ ಮಾನಸಿಕತೆ ಆಗಿತ್ತು.
ಇ. ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಿ ನಂತರ ಚೌಕಟ್ಟಿನ ಹೊರಗಿನ ಪರಿಹಾರೋಪಾಯಗಳನ್ನು ಮಾಡಬೇಕು.’
– ಆಧುನಿಕ ವೈದ್ಯ (ಡಾ.) ದುರ್ಗೇಶ ಸಾಮಂತ (ವಯಸ್ಸು ೬೩ ವರ್ಷ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೩.೪.೨೦೨೪)