‘ಜ್ಞಾನ-ಭಕ್ತಿ’ಯ ಅದ್ವಿತೀಯ ಸಂಗಮ ಹಾಗೂ ವಿಶ್ವಕಲ್ಯಾಣದ ತಳಮಳದಿಂದ ದಣಿವರಿಯದೇ ಅಧ್ಯಾತ್ಮ ಮತ್ತು ಧರ್ಮಪ್ರಸಾರ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ೫೪ ನೇ ಹುಟ್ಟುಹಬ್ಬದ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂದೇಶ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಿಗೆ ಶರಣಾಗತಭಾವದಿಂದ ನಮಸ್ಕರಿಸುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

‘ಸಂಗೀತಕಲೆ, ಗ್ರಂಥಗಳಿಗಾಗಿ ಲೇಖನ, ಚಿತ್ರೀಕರಣ ಮಾಡುವುದು, ಸಂದರ್ಶನಗಳನ್ನು ನಡೆಸುವುದು, ಸೂಕ್ಷ್ಮ ಜಗತ್ತಿನ ಬಗ್ಗೆ ವಿಶ್ಲೇಷಣೆ ಮಾಡುವುದು, ಆಧ್ಯಾತ್ಮಿಕ ಸಂಶೋಧನೆ ಮಾಡುವುದು’ ಮುಂತಾದ ವಿವಿಧ ಸೇವೆಗಳ ಮಾಧ್ಯಮದಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸೇವೆಯನ್ನು ಆರಂಭಿಸಿದರು. ‘ಪ್ರಗಲ್ಭ ಬುದ್ಧಿವಂತಿಕೆ ಸೂಕ್ಷ್ಮ ವನ್ನು ತಿಳಿದುಕೊಳ್ಳುವ ಅತ್ಯುಚ್ಚ ಕ್ಷಮತೆ ಮತ್ತು ಪರಿಪೂರ್ಣ ಹಾಗೂ ಭಾವಪೂರ್ಣ ಸೇವೆ ಮಾಡುವ ತಳಮಳ’ ಮುಂತಾದ ಅನೇಕ ಗುಣಗಳಿಂದ ಅವರು ಎಲ್ಲ ಸೇವೆಯನ್ನು ಕೌಶಲ್ಯದಿಂದ ಮತ್ತು ಅತ್ಯಂತ ವೇಗದಿಂದ ಮಾಡಿದರು.

ಅವರು ೨೦೧೧ ರಿಂದ ಬಿಸಿಲು-ಮಳೆ, ಹಸಿವು-ಬಾಯಾರಿಕೆ ಮುಂತಾದವುಗಳನ್ನು ಲೆಕ್ಕಿಸದೆ ಲಕ್ಷಗಟ್ಟಲೆ ಕಿಲೋಮೀಟರ್‌ ಕ್ರಮಿಸಿ ಅಧ್ಯಾತ್ಮ ಪ್ರಸಾರ ಮಾಡುತ್ತಿದ್ದಾರೆ. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು, ತೀರ್ಥಕ್ಷೇತ್ರಗಳು, ದೇವಾಲಯಗಳು, ಮಠಗಳು, ಐತಿಹಾಸಿಕ ಸ್ಥಳಗಳು ಮುಂತಾದ ಸ್ಥಳಗಳಿಗೆ ಹೋಗಿ ಚಿತ್ರೀಕರಣ ಮಾಡುತ್ತಿದ್ದಾರೆ. ಹಾಗೆಯೇ ಅಲ್ಲಿನ ಮಾಹಿತಿ ಮತ್ತು ದುರ್ಲಭ ವಸ್ತುಗಳನ್ನು ಸಂಗ್ರಹ ಮಾಡು ತ್ತಿದ್ದಾರೆ. ದೇವಸ್ಥಾನದ ಚಿತ್ರೀಕರಣ, ಸಂತರ ಮತ್ತು ಭಕ್ತರ ಭೇಟಿ ಮುಂತಾದ ಸೇವೆಗಳಿಗಾಗಿ ದಣಿವರಿಯದೇ ನಿರಂತರ ಪ್ರವಾಸÀ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಮಹರ್ಷಿಗಳ ಆಜ್ಞೆಗನುಸಾರ ಭಾರತದಲ್ಲಿ, ಹಾಗೆಯೇ ವಿದೇಶಗಳಿಗೂ ಹೋಗುತ್ತಿದ್ದಾರೆ.

ಸನಾತನದಲ್ಲಿ ಇಂತಹ ಇಷ್ಟು ವಿವಿಧ ಸೇವೆ, ಇಷ್ಟು ಕೌಶಲ್ಯ ದಿಂದ ಮತ್ತು ತುಂಬಾ ಕಡಿಮೆ ಸಮಯದಲ್ಲಿ ಮಾಡಿದವರು ಬೆರಳೆಣಿಕೆಯಷ್ಟಿರಬಹುದು ! ಇದರಿಂದಲೇ ಶ್ರೀಚಿತ್‌ಶಕ್ತಿಯವÀರ ಏಕಮೇವಾದ್ವಿತೀಯ ವೈಶಿಷ್ಟ್ಯವು ಗಮನಕ್ಕೆ ಬರುತ್ತದೆ. ‘ಪ್ರೀತಿ’ಯು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸ್ಥಾಯಿಭಾವವಾಗಿದ್ದು ಅವರು ಸಹಜವಾಗಿ ಮತ್ತು ಚೈತನ್ಯಮಯ ವಾಣಿಯಿಂದ ಎಲ್ಲರನ್ನು ತಮ್ಮವರನ್ನಾಗಿಸು ತ್ತಾರೆ. ಅವರ ಮೊದಲ ಭೇಟಿಯಲ್ಲಿಯೇ ಅಪರಿಚಿತ ವ್ಯಕ್ತಿ ಗಳೂ ಅವರತ್ತ ಆಕರ್ಷಿತರಾಗುತ್ತಾರೆ ಮತ್ತು ಅವರಿಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದೈವೀ ಶಕ್ತಿ ಹಾಗೂ ಸಾಮರ್ಥ್ಯದ ಅನುಭೂತಿ ಬರುತ್ತದೆ. ಅವರು ಸಮಾಜದ ಅನೇಕ ಜಿಜ್ಞಾಸು, ಸಂತರು ಮತ್ತು ಧರ್ಮಾಭಿಮಾನಿಗಳನ್ನು ಸನಾತನದ ಕಾರ್ಯದೊಂದಿಗೆ ಜೋಡಿಸಿದ್ದಾರೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ಸ್ಥೂಲ ಮತ್ತು ಸೂಕ್ಷ್ಮ ಹೀಗೆ ಎರಡು ಸ್ತರಗಳಲ್ಲಿಯೂ ಅದ್ವಿತೀಯ ಹಾಗೂ ಅವಿರತ ಕಾರ್ಯ ನಡೆಯುತ್ತಿದೆ. ಆದುದರಿಂದ ಅವರ ಕಾರ್ಯವು ಕೇವಲ ‘ಸಾಧಕ ಮತ್ತು ಸನಾತನ’ ಇಷ್ಟಕ್ಕೆ ಮಾತ್ರ ಸೀಮಿತವಾಗಿರದೇ ಅವರು ವಿಶ್ವವ್ಯಾಪಕರಾಗಿದ್ದಾರೆ. ಈಗ ಅವರ ಅಸ್ತಿತ್ವ ಮತ್ತು ಸಂಕಲ್ಪದಿಂದಲೇ ಕಾರ್ಯ ನಡೆಯುತ್ತಲೇ ಇದೆ.

‘ಉತ್ಸಾಹಿ, ಆನಂದಿ, ಧರ್ಮಕಾರ್ಯದ ತಳಮಳ, ಪ್ರೀತಿ, ದೇವರ ಬಗ್ಗೆ ಭಾವ’ ಮುಂತಾದ ಅನೇಕ ದೈವೀ ಗುಣಗಳ ಅಲಂಕಾರವಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ‘ಭಕ್ತಿ ಹೇಗಿರಬೇಕು ?’ ಎಂಬುದರ ಮೂರ್ತಿಮಂತ ಉದಾಹರಣೆಯನ್ನು ಎಲ್ಲರೆದುರು ಇಟ್ಟಿದ್ದಾರೆ. ‘ಅವರಿಂದ ಹೀಗೆಯೇ ಉತ್ತರೋತ್ತರ ಕಾರ್ಯ ನಡೆಯುತ್ತಿರಲಿ’ ಎಂದು ಅವರ ಹುಟ್ಟುಹಬ್ಬದ ನಿಮಿತ್ತ ಶುಭಾಶಯಗಳು.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೧.೧೧.೨೦೨೪)