‘ಸಂತ ಜ್ಞಾನೇಶ್ವರ, ಸಂತ ಏಕನಾಥ ಮಹಾರಾಜರು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮುಂತಾದ ಸಂತರು ಏಕೆ ಶಾಂತ ಮತ್ತು ಪರಾಕೋಟಿಯ ಪ್ರೀತಿಯನ್ನು ಮಾಡುತ್ತಾರೆ ? ನನ್ನಂತಹ ಸಾಧಕರು ಅವರಂತಾಗಲು ಏನು ಮಾಡಬೇಕು. ?’, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬಂದಿತು. ಆಗ ಗುರುದೇವರು ನನಗೆ ಮುಂದಿನ ವಿಚಾರವನ್ನು ಸೂಚಿಸಿದರು ಮತ್ತು ಸಾಧನೆಯ ದಿಶೆಯನ್ನು ನೀಡಿದರು.
೧. ಸಂತರಲ್ಲಿ ಸ್ವಭಾವದೋಷ ಮತ್ತು ಅಹಂ ಇವುಗಳ ಲಕ್ಷಣಗಳು ಬಹಳ ಕಡಿಮೆ ಇರುತ್ತವೆ. ಅವರ ಮನೋಲಯ ಮತ್ತು ಬುದ್ಧಿಲಯವಾಗಿರುತ್ತದೆ.
೨. ‘ಎಲ್ಲವೂ ಈಶ್ವರೇಚ್ಛೆಯಿಂದ ಘಟಿಸುತ್ತದೆ’ ಎಂದು ಸಂತರ ದೃಢಶ್ರದ್ಧೆಯಾಗಿರುತ್ತದೆ.
೩. ಅಪೇಕ್ಷೆಭಂಗ ಅಥವಾ ಸಿಟ್ಟು ಬರುವ ಯಾವುದಾದರೂ ಪ್ರಸಂಗ ಘಟಿಸಿದ್ದರೆ ‘ಅದು ದೇವರ ಆಯೋಜನೆಯಾಗಿದೆ ಮತ್ತು ಅದರಿಂದ ಎಲ್ಲರ ಕಲ್ಯಾಣವಾಗಲಿದೆ’, ಎಂದು ಅವರ ವಿಚಾರವಿರುತ್ತದೆ.
೪. ‘ಸಿಟ್ಟು ಅಥವಾ ಪ್ರತಿಕ್ರಿಯೆ, ಎಂದರೆ ಇತರರ ತಪ್ಪುಗಳಿಗಾಗಿ ತನ್ನ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿದೆ’, ಎಂದು ಸಂತರಿಗೆ ಸರಿಯಾಗಿ ಗೊತ್ತಿರುತ್ತದೆ. ಆದುದರಿಂದ ಸಂತರಲ್ಲಿ ಸೇಡಿನಭಾವನೆ, ದ್ವೇಷ, ಪೂರ್ವಗ್ರಹ, ಪ್ರತಿಕ್ರಿಯೆ ಇತ್ಯಾದಿ ಯಾವುದೂ ಇರುವುದಿಲ್ಲ.
೫. ಒಬ್ಬ ವ್ಯಕ್ತಿಯು ಸಂತರ ಬಾಹ್ಯ ನಡುವಳಿಕೆಯಿಂದ ‘ಈ ಸಂತರು ಸಿಟ್ಟಿಗೇಳುವವರು ಅಥವಾ ಅನುಚಿತವಾಗಿ ವರ್ತಿಸುವವರಾಗಿದ್ದಾರೆ’, ಎಂದು ಅನಿಸಬಹುದು; ಆದರೆ ಅದು ಸಹ ಈಶ್ವರನ ಆಯೋಜನೆಯಾಗಿರುತ್ತದೆ. ಸಂತರು ಈಶ್ವರೇಚ್ಛೆ ಯಿಂದ ನಡೆದುಕೊಳ್ಳುತ್ತಿರುತ್ತಾರೆ. ಸಂತರು ಯಾರ ಮೇಲೆ ಕೂಗಾಡುತ್ತಾರೆಯೋ, ಆ ವ್ಯಕ್ತಿಯ ಪ್ರಾರಬ್ಧವನ್ನು ಅವರಿಗೆ ಕಡಿಮೆ ಮಾಡುವುದಿರುತ್ತದೆ. ಅವನಿಗೆ ಸಾಧನೆ ಮಾಡಲು ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವ ಮೂಲಕ ಮಾಯೆಯಿಂದ ಹೊರಗೆ ತೆಗೆಯುವುದಿರುತ್ತದೆ.
‘ವ್ಯಕ್ತಿಗಳೆಷ್ಟೋ ಅಷ್ಟು ಪ್ರಕೃತಿಗಳು’ ಇದಕ್ಕನುಸಾರ ಸಂತರು ವಿವಿಧ ರೂಪಗಳಲ್ಲಿ ಕಾಣಿಸಿಕೊಂಡರೂ ಅವರು ಸ್ವಸ್ವರೂಪದೊಂದಿಗೆ, ಅಂದರೆ ಈಶ್ವರನೊಂದಿಗೆ ಏಕರೂಪರಾಗಿರುತ್ತಾರೆ. ಶಾಂತಿಯ ಪ್ರತಿರೂಪವಾಗಿರುವ ಸಂತ ಜ್ಞಾನೇಶ್ವರ, ಸಂತ ಏಕನಾಥ ಮಹಾರಾಜರು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರಂತಹ ಸಂತ ಮಹಾತ್ಮರ ಚರಣಗಳಲ್ಲಿ ಕೋಟಿ ಕೋಟಿ ವಂದನೆಗಳು.’
– (ಪೂ.) ಶ್ರೀ. ಶಿವಾಜಿ ವಟಕರ (ಸನಾತನದ ೧೦೨ ನೇ (ಸಮಷ್ಟಿ) ಸಂತರು, ವಯಸ್ಸು ೭೭ ವರ್ಷಗಳು), ಸನಾತನ ಆಶ್ರಮ, ದೇವದ, ಪನವೇಲ. (೨೭.೯.೨೦೨೪)