ಸನಾತನ ಸಂಸ್ಥೆಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಹಿಂದೂ ರಾಷ್ಟ್ರದ ಧ್ಯೇಯ ಸಾಕಾರಗೊಳಿಸುವ ಸಮಯ ಬಂದಿದೆ ! – ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು

ಗೋವಾದಲ್ಲಿ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಇವರ ಅಮೃತ ಮಹೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !

ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ

ಪರ್ವರೀ (ಗೋವಾ ) – 25 ವರ್ಷಗಳ ಹಿಂದೆ ಹಿಂದೂ ಶಬ್ದ ಉಚ್ಚರಿಸುವುದು ಕೂಡ ಕಷ್ಟವಾಗಿತ್ತು; `ಸನಾತನ’ವೆಂದು ಉಚ್ಛರಿಸುವುದು ಅದಕ್ಕಿಂತಲೂ ಕಠಿಣವಾಗಿತ್ತು. ಆ ಕಾಲದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯಂತಹ ಸತ್ಪುರುಷರು, ಗೋವಾದಲ್ಲಿ ಬಂದು ನೆಲೆಸಿದರು ಮತ್ತು ತಮ್ಮ ತಪಸ್ಸನ್ನು ಆರಂಭಿಸಿದರು. ಇದು ಸನಾತನ ಧರ್ಮದ ಶಂಖನಾದ, ಕೇವಲ ಶಂಖನಾದವಷ್ಟೇ ಅಲ್ಲದೇ ಹಿಂದೂ ರಾಷ್ಟ್ರದ ಸ್ಥಾಪನೆಯ ಶಂಖನಾದವಾಗಿದೆ. ಸನಾತನ ಸಂಸ್ಥೆಯ ಕಾರ್ಯ ಹೆಚ್ಚುತ್ತಿರುವುದು ನೋಡಿದರೆ, “ಈ ಕಾರ್ಯ ಇನ್ನು ನಿಲ್ಲುವುದಿಲ್ಲ, ಅದು ಹೆಚ್ಚುತ್ತಲೇ ಹೋಗಲಿದೆ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಧ್ಯೇಯ ಸಾಕಾರವಾಗಲಿದೆ, ಎಂದು ಪ್ರಚೀತಿಯಾಗುತ್ತಿದೆ. ಸನಾತನದ 25 ವರ್ಷದ ಕಾರ್ಯ ನೋಡಿದರೆ ಹಿಂದೂ ರಾಷ್ಟ್ರದ ಧ್ಯೇಯ ಸಾಕಾರಗೊಳ್ಳುವ ಸಮಯ ಹತ್ತಿರ ಬಂದಿದೆ.” ಎಂದು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ’ದ ಕೋಶಾಧ್ಯಕ್ಷರಾದ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು ಉದ್ಗರಿಸಿದರು. ಅವರು ರಾಮರಾಜ್ಯದ ಧ್ಯೇಯ ಹೊತ್ತಿರುವ ‘ಸನಾತನ ಸಂಸ್ಥೆ’ಯ ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 1350 ಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮ ಗೋವಾದ ಸುಕುರ ಪಂಚಾಯತ ಸಭಾಗೃಹದಲ್ಲಿ ನವಂಬರ್ 30 ರಂದು ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಈ ವೇಳೆ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಕೇಂದ್ರ ಇಂಧನ ರಾಜ್ಯ ಸಚಿವ ಶ್ರೀ. ಶ್ರೀಪಾದ ನಾಯಿಕ, ಗೋವಾದ ಪ್ರವಾಸೋದ್ಯಮ ಸಚಿವ ಶ್ರೀ. ರೋಹನ ಖಂವಟೆ, ಮಹಾರಾಷ್ಟ್ರ ಗೋಸೇವಾ ಆಯೋಗದ ಅಧ್ಯಕ್ಷ ಶ್ರೀ. ಶೇಖರ ಮುಂದಡ, ಗೋವಾದ ಶಾಸಕ ಶ್ರೀ. ಚಂದ್ರಕಾಂತ ಶೆಟ್ಯೆ, ಶಾಸಕ ಶ್ರೀ. ಪ್ರೇಮೇಂದ್ರ ಶೆಟ್, ಶಾಸಕ ಶ್ರೀ. ಉಲ್ಲಾಸ ತುಯೇಕರ ಮತ್ತು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಸಹಿತ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಇದರ ಜೊತೆಗೆ ಈ ಸಮಾರಂಭಕ್ಕೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀ ಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನದ ಸಂತರಾದ ಪೂ. ದೀಪಾಲಿ ಮತಕರ ಹಾಗೂ ‘ಸನಾತನ ಪ್ರಭಾತ’ ನಿಯತಕಾಲಿಕೆಯ ಮಾಜಿ ಸಮೂಹ ಸಂಪಾದಕರಾದ ಪೂ. ಪೃಥ್ವಿರಾಜ ಹಜಾರೆ ಇವರ ವಂದನೀಯ ಉಪಸ್ಥಿತಿಯಿತ್ತು.

ಗೋವಾ ಸರಕಾರ ದೇವರು, ದೇಶ ಮತ್ತು ಧರ್ಮ ರಕ್ಷಣೆಯ ಕಾರ್ಯಕ್ಕೆ ಕಟಿಬದ್ಧ ! – ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ

ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ

ದೇವರಿಗೆ ಮಹತ್ವ ನೀಡಿದರೆ, ಧರ್ಮ ಜಾಗೃತವಾಗಿರುವುದು ಮತ್ತು ಧರ್ಮ ಜಾಗೃತವಾಗಿದ್ದರೆ ದೇಶ ಜಾಗೃತವಾಗಿರುವುದು. ಇದಕ್ಕಾಗಿ ಗೋವಾ ಸರಕಾರ ದೇವರು, ದೇಶ ಮತ್ತು ಧರ್ಮರಕ್ಷಣೆಯ ಕಾರ್ಯಕ್ಕೆ ಕಟಿಬದ್ಧವಾಗಿದೆ. ಸನಾತನ ಸಂಸ್ಥೆಯು ಕಠಿಣ ಪ್ರಸಂಗಗಳನ್ನು ಎದುರಿಸಿ ಇಂದು ದೇಶಾದ್ಯಂತ ಗಣನೀಯ ಕಾರ್ಯ ನಿರ್ವಹಿಸುತ್ತಿದೆ.

ಸನಾತನ ಸಂಸ್ಥೆಯ ಗೋವಾದ ರಾಮನಾಥಿ ಆಶ್ರಮದಿಂದ ಹಿಂದೂ ಧರ್ಮದ ರಕ್ಷಣೆಯ ಮಹತ್ವದ ಕಾರ್ಯ ನಡೆಯುತ್ತಿದೆ. ಸನಾತನ ಸಂಸ್ಥೆಯ ‘ಸನಾತನ ಪ್ರಭಾತ’ ನಿಯತಕಾಲಿಕೆ ಹಿಂದೂಗಳ ಮೇಲೆ, ದೇಶ-ವಿದೇಶದಲ್ಲಿರುವ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯ, ಹಾಗೂ ಹಿಂದೂಗಳು ಮಾಡುತ್ತಿರುವ ಉತ್ತಮ ಕಾರ್ಯದ ಮಾಹಿತಿ ನಿರಂತರವಾಗಿ ನೀಡುತ್ತಾ ಹಿಂದುತ್ವದ ಜಾಗೃತಿಯ ಕಾರ್ಯ ಮಾಡುತ್ತಿದೆ. ಪ. ಪೂ. ಗೋವಿಂದದೇವ ಗಿರಿ ಮಹಾರಾಜರಂತಹ ಅನೇಕ ರಾಷ್ಟ್ರಸಂತರಿಂದ ಭಾರತದಲ್ಲಿ ದೇವರು, ದೇಶ ಮತ್ತು ಧರ್ಮರಕ್ಷಣೆಯ ಕಾರ್ಯ ನಡೆಯುತ್ತಿದೆ, ಎಂದು ಗೋವಾದ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ ಇವರು ಹೇಳಿದರು.

ಸನಾತನ ಸಂಸ್ಥೆಯ ಕಾರ್ಯದಿಂದ ಸಾವಿರಾರು ಜನರು ಒತ್ತಡ ಮುಕ್ತ ಮತ್ತು ವ್ಯಸನ ಮುಕ್ತರಾಗಿದ್ದಾರೆ ! – ಶ್ರೀ. ಶ್ರೀಪಾದ ನಾಯಿಕ, ಕೇಂದ್ರ ಇಂಧನ ರಾಜ್ಯಸಚಿವ

ಶ್ರೀ. ಶ್ರೀಪಾದ ನಾಯಿಕ, ಕೇಂದ್ರ ಇಂಧನ ರಾಜ್ಯಸಚಿವ

ಪ. ಪೂ. ಗೋವಿಂದದೇವ ಗಿರಿ ಮಹಾರಾಜರು ಮಹರ್ಷಿ ವಸಿಷ್ಠರಂತೆ ಅಖಂಡವಾಗಿ ಧರ್ಮರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ. ಮಹಾರಾಜರ ಸಾಧನೆ ಮತ್ತು ಕಾರ್ಯ ಇವುಗಳಿಂದ ಅಸಂಖ್ಯ ಜೀವಗಳ ಜೀವನದಲ್ಲಿ ಉತ್ತಮ ಬದಲಾವಣೆಯಾಗಿ ಇಂದು ರಾಷ್ಟ್ರಭಕ್ತಿ ನಿರ್ಮಾಣವಾಗುತ್ತಿದೆ. ಸನಾತನ ಸಂಸ್ಥೆಯು ಹಿಂದೂ ಧರ್ಮದ ಪುನರ್ಸ್ಥಾಪನೆಯ ವಿಲಕ್ಷಣ ಕಾರ್ಯ ಮಾಡುತ್ತಿದೆ. ಈ ಕಾರ್ಯದಿಂದ ಸಾವಿರಾರು ಜನರು ಒತ್ತಡಮುಕ್ತ ಮತ್ತು ವ್ಯಸನಮುಕ್ತ ಜೀವನ ನಡೆಸುತ್ತಿದ್ದಾರೆ. ಸನಾತನದ ಕಾರ್ಯದಿಂದ ಧರ್ಮ ಮತ್ತು ಅಧ್ಯಾತ್ಮದ ರಕ್ಷಣೆಯಾಗಿದೆ ಎಂದು ಕೇಂದ್ರ ಇಂಧನ ರಾಜ್ಯ ಸಚಿವ ಶ್ರೀ. ಶ್ರೀಪಾದ ನಾಯಿಕ ಇವರು ಹೇಳಿದರು.

ಗೋವಾದ ಪ್ರವಾಸೋದ್ಯಮ ಸಚಿವ ಶ್ರೀ. ರೋಹನ ಖವಂಟೆ

ಗೋವಾದ ಪ್ರವಾಸೋದ್ಯಮ ಸಚಿವ ಶ್ರೀ. ರೋಹನ ಖವಂಟೆ ಇವರು, ‘ಸನಾತನ ಸಂಸ್ಥೆ’ಯು ಸನಾತನ ಧರ್ಮದ ರಕ್ಷಣೆ ಮತ್ತು ಮಾನವೀ ಮೌಲ್ಯದ ರಕ್ಷಣೆ ಮಾಡುವ ಮಹಾನ್ ಮತ್ತು ಪವಿತ್ರ ಕಾರ್ಯ ಮಾಡುತ್ತಿದೆ. ರಾಜಕೀಯ ಕ್ಷೇತ್ರದಲ್ಲಿ ಕಾರ್ಯನಿರತವಾಗಿರುವ ಜನರು ಧರ್ಮರಕ್ಷಣೆಯ ಕಾರ್ಯದಲ್ಲಿಯೂ ಕೈಜೋಡಿಸಬೇಕು. ಗೋವಾದ ಪರಿಚಯ ಕೇವಲ ‘ಸನ್, ಸ್ಯಾಂಡ್ ಮತ್ತು ಸೀ'(ಸಮುದ್ರ ತಟ) ಹೀಗೆ ಆಗುತ್ತದೆ. ಪ್ರವಾಸೋದ್ಯಮ ಇಲಾಖೆಯಿಂದ ಗೋವಾದ ಈ ಗುರುತು ಬದಲಾಯಿಸುವ ಪ್ರಯತ್ನ ಮಾಡುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ ‘ಏಕಾದಶ ತೀರ್ಥ’ ಯೋಜನೆ ಕಾರ್ಯಾನ್ವಿತಗೊಳಿಸಿ ಗೋವಾದಲ್ಲಿನ 100 ಪ್ರಾಚೀನ ಮತ್ತು ಪ್ರಸಿದ್ಧ ದೇವಸ್ಥಾನಗಳನ್ನು ಈ ಯೋಜನೆಯ ವ್ಯಾಪ್ತಿಗೆ ತಂದಿದೆ. ಗೋವಾ ಸರಕಾರವು ಛತ್ರಪತಿ ಶಿವಾಜಿ ಮಹಾರಾಜರ ಗೋವಾದಲ್ಲಿನ ಕಾರ್ಯದ ಮಾಹಿತಿಯನ್ನು ಮುಂದಿನ ಪೀಳಿಗೆಯವರೆಗೆ ತಲುಪಿಸಲು ಇಲ್ಲಿಯ ಶ್ರೀ ಸಪ್ತಕೋಟೇಶ್ವರ ದೇವಸ್ಥಾನದ ಪುನರ್ನಿರ್ಮಾಣ ಮಾಡಿದೆ ಎಂದು ಹೇಳಿದರು.

ಈ ಸಮಯದಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು, ಸನಾತನ ಸಂಸ್ಥೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಳೆದ 25 ವರ್ಷಗಳಿಂದ ಜಿಹಾದಿ, ಕಮ್ಯುನಿಸ್ಟ್, ಅರ್ಬನ್ ನಕ್ಸಲ್ ವಾದ, ಮುಂತಾದವುಗಳ ಕಠೋರವಾದ ವಿರೋಧ ಸಹಿಸಿ ಅಗ್ನಿಯಿಂದ ಹೊಳೆಯುತ್ತಾ ಹೊರ ಬಂದಿದೆ. ಸನಾತನ ಸಂಸ್ಥೆ ‘ಒಂದು ಪ್ರಖರ ಹಿಂದುತ್ವನಿಷ್ಠ ಸಂಘಟನೆ’ ಎಂದು ಪ್ರಸಿದ್ಧವಾಗಿದೆ. ಕೇಂದ್ರ ಗೃಹ ಸಚಿವಾಲಯ ರೂಪಿಸಿರುವ ಸಿ.ಎ.ಎ. ಕಾನೂನು ಪ್ರಕ್ರಿಯೆಯಲ್ಲಿ ಸನಾತನ ಸಂಸ್ಥೆಯ ಸಹಭಾಗವಿತ್ತು. ವಕ್ಫ್ ತಿದ್ದುಪಡಿ ಮಸೂದೆಯ ರೂಪರೇಖೆಯ ಪ್ರಕ್ರಿಯೆಯಲ್ಲಿ ಕೂಡ ಸನಾತನ ಸಂಸ್ಥೆ ನೀಡಿದ ಸೂಚನೆಗಳನ್ನು ಸ್ವೀಕರಿಸಲಾಗಿದೆ ಎಂದರು.

ಮಹಾರಾಷ್ಟ್ರ ಗೋ ಸೇವಾ ಆಯೋಗದ ಅಧ್ಯಕ್ಷ ಶ್ರೀ. ಶೇಖರ ಮುಂದಡ ಇವರು ಮಹಾರಾಷ್ಟ್ರದಂತೆ ಗೋವಾ ರಾಜ್ಯ ಕೂಡ ಗೋಮಾತೆಗೆ ರಾಜ್ಯ ಮಾತೆಯ ದರ್ಜೆ ನೀಡಲು ಆಗ್ರಹಿಸಿದೆ. ಎಲ್ಲ ರಾಜ್ಯದಲ್ಲಿ ಗೋಮಾತೆಗೆ ರಾಜ್ಯ ಮಾತೆಯ ಸ್ಥಾನ ನೀಡಿದರೆ ಗೋಮಾತೆಗೆ ರಾಷ್ಟ್ರಮಾತೆಯ ಸ್ಥಾನ ಸಿಗದೇ ಇರಲಾರದು, ಎಂದು ಕೂಡ ಅವರು ಹೇಳಿದರು.

ದೀಪ ಪ್ರಜ್ವಲನೆ, ಹಾಗೂ ವೇದಮಂತ್ರ ಪಠಣದಿಂದ ಸಮಾರಂಭದ ಆರಂಭವಾಯಿತು. ಅದರ ನಂತರ ಉಪಸ್ಥಿತ ಗಣ್ಯರು ದೀಪ ಬೆಳಗಿಸಿದರು. ಆರಂಭದಲ್ಲಿ ಪರಮಪೂಜ್ಯ ಸ್ವಾಮಿ ಗೋವಿಂದ ದೇವಗಿರಿ ಇವರ ಅಮೃತ ಮಹೋತ್ಸವದ ಪ್ರಯುಕ್ತ ಅವರಿಗೆ 25 ದೀಪಗಳಿಂದ ಆರತಿ ಮಾಡಲಾಯಿತು. ತದನಂತರ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಪ್ರವಾಸೋದ್ಯಮ ಸಚಿವ ಶ್ರೀ. ರೋಹನ ಖವಂಟೆ, ಸನಾತನ ಸಂಸ್ಥೆ ವಿಶ್ವಸ್ಥರಾದ ಶ್ರೀ. ವೀರೇಂದ್ರ ಮರಾಠೆ ಇವರು ಪ. ಪೂ. ಸ್ವಾಮೀಜಿಯವರನ್ನು ಸತ್ಕರಿಸಿದರು. ನಂತರ ತಪೋಭೂಮಿ ಕುಂಡಯಿನ ಪೀಠಾಧೀಶ್ವರ ಬ್ರಹ್ಮೇಶಾನಂದ ಸ್ವಾಮಿ ಮಹಾರಾಜ ಇವರ ಆಶೀರ್ವಚನದ ವಿಡಿಯೋ ಸಂದೇಶ ಪ್ರಸಾರ ಮಾಡಲಾಯಿತು.

ಸನಾತನ ಸಂಸ್ಥೆ ನಿರ್ಮಿತ ‘ಈ ಬುಕ್ ನ ಲೋಕಾರ್ಪಣೆ !’

ಸಮಾರಂಭದಲ್ಲಿ ‘ಸನಾತನ ಸಂಸ್ಥೆ’ಯ ಈ ಬುಕ್ ಗಳ ಲೋಕಾರ್ಪಣೆ

ಈ ಸಮಯದಲ್ಲಿ ಪರಮಪೂಜ್ಯ ಸ್ವಾಮೀಜಿ ಹಾಗೂ ಕೇಂದ್ರ ಇಂಧನ ರಾಜ್ಯ ಸಚಿವರಾದ ಶ್ರೀ. ಶ್ರೀಪಾದ ನಾಯಿಕ್ ಇವರ ಶುಭಹಸ್ತದಿಂದ ‘ಸನಾತನ ಪ್ರಭಾತ’ದ ವರ್ಧಂತ್ಯುತ್ಸವದ ಅಂಕಣ ಪ್ರಕಾಶನ, ಸನಾತನ ಸಂಸ್ಥೆ ನಿರ್ಮಿತ ಮರಾಠಿ ಮತ್ತು ಹಿಂದಿ ಭಾಷೆಯ ‘ಕುಂಭಪರ್ವ ಮಹಾತ್ಮೆ’, ಮರಾಠಿ ಭಾಷೆಯ ‘ನಾಮಜಪ ಹೇಗೆ ಮಾಡಬೇಕು? ಈ ‘ಈ ಬುಕ್’ಗಳ ಲೋಕಾರ್ಪಣೆ ಮತ್ತು ‘ಸನಾತನ ಆಶ್ರಮ ದರ್ಶನ’ ಈ ವಿಡಿಯೋ ಲೋಕಾರ್ಪಣೆ ಮಾಡಲಾಯಿತು.