೧. ಉತ್ತರಪ್ರದೇಶದಲ್ಲಿ ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಾನ ‘ನೈಮಿಷಾರಣ್ಯ’ದ ಸ್ಥಾನಮಹಾತ್ಮೆ !
‘ನಮಗೆ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ಆಯೋಜಿಸಿದ ಪ್ರವಾಸದಲ್ಲಿ ಉತ್ತರಪ್ರದೇಶದ ಪ್ರಾಚೀನ ಧಾರ್ಮಿಕ ಸ್ಥಾನ ‘ನೈಮಿಷಾರಣ್ಯ’ಕ್ಕೆ ಹೋಗುವ ಭಾಗ್ಯ ಲಭಿಸಿತು. ಈ ಸ್ಥಳವು ಪೃಥ್ವಿಯ ಮೇಲಿನ ಮಹತ್ವದ ಧಾರ್ಮಿಕ ಸ್ಥಳಗಳ ಪೈಕಿ ಒಂದಾಗಿದೆ. ಇದು ೮೮ ಸಾವಿರ ಋಷಿಗಳ ತಪಸ್ಯಸ್ಥಾನವಾಗಿದೆ. ಇಲ್ಲಿ ಮನು ಮತ್ತು ಸತರೂಪಾ ಇವರು ೨೩ ಸಾವಿರ ವರ್ಷ ತಪಶ್ಚರ್ಯ ಮಾಡಿದ್ದಾರೆ. ವ್ಯಾಸರ ಕೃಪೆಯಿಂದ ಈ ಪವಿತ್ರ ಸ್ಥಾನದಲ್ಲಿ ‘ಸುತ, ಶೌನಕ ಮುಂತಾದ ೮೮ ಸಾವಿರ ಋಷಿಗಳಿಗೆ ಒಂದು ಸಾವಿರ ವರ್ಷ ೧೮ ಪುರಾಣಗಳು, ನಾಲ್ಕು ವೇದಗಳು ಮತ್ತು ಭಾಗವತ ಕಥೆಯನ್ನು ಹೇಳಿದರು. ಇದರ ಜೊತೆಗೆ ಸುತ ಇವರು ಮೊದಲು ‘ಸತ್ಯನಾರಾಯಣ ಕಥೆ’ಯನ್ನು ಇದೇ ಸ್ಥಳದಲ್ಲಿ ಹೇಳಿದರು. ಇದನ್ನು ಶ್ರವಣ ಮಾಡಲು ೮೮ ಸಾವಿರ ಋಷಿಗಳು ೨೫೨ ಕಿಲೋ ಮೀಟರ್‌ನ ಪರಿಸರದಲ್ಲಿ ಕುಳಿತಿದ್ದರು.

೨. ಎಲ್ಲಿ ದೈವೀ ಕಥೆಗಳ ಮೂಲಕ ನಾದದ ಸ್ತರದಲ್ಲಿ ಜಗತ್ಕಲ್ಯಾಣಕ್ಕಾಗಿ ಚೈತನ್ಯ ಊರ್ಜೆಯನ್ನು ನಿರ್ಮಾಣ ಮಾಡುವ ಋಷಿಗಳು ಹಾಗೂ ಮಹರ್ಷಿಗಳು ಮತ್ತು ಎಲ್ಲಿ ಕರ್ಣಕರ್ಕಶ ಧ್ವನಿಯಲ್ಲಿ ಧ್ವನಿವರ್ಧಕದಲ್ಲಿ ಭಜನೆಗಳನ್ನು ಹಾಕಿ ಚೈತನ್ಯವನ್ನು ನಷ್ಟಗೊಳಿಸುವ ತಥಾಕಥಿತ ಭಕ್ತರು !
ಇಂದು ಜನರು ಈ ಸ್ಥಾನವನ್ನು ಸಂಪೂರ್ಣ ನಾಶ ಮಾಡಿದ್ದಾರೆ. ಈ ಹಿಂದೆ ಋಷಿಗಳು ಮತ್ತು ಮಹರ್ಷಿಗಳು ದೈವೀ ಕಥೆಗಳ ಮೂಲಕ ನಾದದ ಸ್ತರದಲ್ಲಿ ಜಗತ್ಕಲ್ಯಾಣಕ್ಕಾಗಿ ಇಲ್ಲಿ ಚೈತನ್ಯ ಊರ್ಜೆಯನ್ನು ನಿರ್ಮಿಸಿದ್ದರು. ಇಲ್ಲಿ ಇಂದು ಅಸುರೀ ವೃತ್ತಿಯ ಮಾನವರು ಆ ಚೈತನ್ಯವನ್ನು ನಷ್ಟಗೊಳಿಸುತ್ತಿದ್ದಾರೆ. ಸ್ಥಾನಮಹಾತ್ಮೆಯಿಂದ ಈ ಪರಿಸರದಲ್ಲಿ ಅನೇಕ ಸ್ಥಳಗಳಲ್ಲಿ ಸತತ ಕಥೆಗಳ ಹಾಗೂ ಪುರಾಣಗಳ ಪಠಣ ನಡೆಯುತ್ತದೆ. ಈ ಪಠಣವು ದೊಡ್ಡ ದೊಡ್ಡ ಧ್ವನಿವರ್ಧಕಗಳಲ್ಲಿ ಅತ್ಯಂತ ಕರ್ಣಕರ್ಕಶ ಧ್ವನಿಯಲ್ಲಿ ನಡೆಯುತ್ತದೆ. ರಾತ್ರಿ ಅಪರಾತ್ರಿಯೂ ದೊಡ್ಡ ಪ್ರಮಾಣದಲ್ಲಿ ಇದೆಲ್ಲ ನಡೆಯುತ್ತಿರುತ್ತದೆ. ಕೆಲವೊಮ್ಮೆ ‘ಕಥೆ ಓದುವವರು ಏನು ಹೇಳುತ್ತಿದ್ದಾರೆ, ಎಂಬುದು ಸರಿಯಾಗಿ ತಿಳಿಯುವುದೂ ಇಲ್ಲ. ಅದರ ಜೊತೆಗೆ ವಾದಕರು ಹಾಗೂ ಈಗ ‘ಡೀಜೆ’ ಧ್ವನಿಯಂತ್ರವೂ ಇರುತ್ತದೆ. ಕಥೆಗಳಲ್ಲಿನ ಅನೇಕ ಭಜನೆಗಳನ್ನು ಓರೆಕೋರೆ ಧ್ವನಿಯಲ್ಲಿ ಹಾಡಲಾಗುತ್ತದೆ. ಜನರನ್ನು ಆಕರ್ಷಿಸಲು ಅನೇಕ ಬಾರಿ ಈ ಭಜನೆಗಳನ್ನು ಚಲನಚಿತ್ರಗಳಲ್ಲಿನ ಹಾಡುಗಳ ಶೈಲಿಯಲ್ಲಿ ರಚಿಸಿರುತ್ತಾರೆ. ಕೆಲವರು ಸರಾಯಿ ಕುಡಿದು ಕಥೆ ಕೇಳಲು ಬರುತ್ತಾರೆ. ಇಲ್ಲಿಗೆ ಬರುವ ಹೆಚ್ಚಿನ ಜನರು ಮನೋರಂಜನೆಗಾಗಿ ಕುಣಿದಾಡುವುದರಲ್ಲಿಯೆ ಮಗ್ನರಾಗಿರುತ್ತಾರೆ.
೩. ಪಂಚಮಹಾಭೂತಗಳ ಸ್ತರದಲ್ಲಿ ಯುದ್ಧಗಳ ಪೈಕಿ ಇದು ನಾದದ ಸ್ತರದಲ್ಲಿನ ಒಂದು ಯುದ್ಧವೇ ಆಗಿದೆ
ವಾತಾವರಣದಲ್ಲಿ ಎಲ್ಲಿ ದೈವೀ ಊರ್ಜೆ ನಾದಸ್ವರೂಪದಲ್ಲಿದೆಯೊ, ಅಲ್ಲಿ ಇಂತಹ ಕರ್ಣಕರ್ಕಶ ಧ್ವನಿಯಲ್ಲಿ ಅಯೋಗ್ಯ ಪದ್ಧತಿಯಲ್ಲಿ ದೇವತೆಗಳ ಕಥೆಗಳ ಪಾರಾಯಣ ಹಾಗೂ ಭಜನೆ ಹಗಲಿರುಳು ನಡೆಯುತ್ತದೆ. ಇದು ದೈವೀನಾದದ ಹಾಗೂ ಅಸುರೀ ನಾದದ ಯುದ್ಧವೆ ಆಗಿದೆ. ಈ ಸ್ಥಿತಿ ಕೇವಲ ಇಲ್ಲಿ ಮಾತ್ರವಲ್ಲ, ಎಲ್ಲ ಕಡೆಗಳಲ್ಲಿಯೂ ಇಂತಹ ದುರ್ಗತಿಯೆ ನೋಡಲು ಸಿಗುತ್ತದೆ. (ಹಿಂದೂಗಳೆ, ಇನ್ನಾದರೂ ಈ ಸ್ಥಿತಿಯನ್ನು ಸುಧಾರಿಸಿಕೊಳ್ಳಿರಿ, ಇಲ್ಲದಿದ್ದರೆ ಸಂಕಟಕಾಲದಲ್ಲಿ ದೇವರು ನಿಮ್ಮತ್ತ ಗಮನ ಹರಿಸಲಿಕ್ಕಿಲ್ಲ. – ಸಂಕಲನಕಾರರು) ಧರ್ಮಶಿಕ್ಷಣದ ಅಭಾವದಿಂದ ಜನರು ಯೋಗ್ಯ ಕೃತಿ ಹಾಗೂ ಅದರ ಮಹತ್ವವನ್ನೂ ಮರೆತಿದ್ದಾರೆ. ‘ಇಂತಹ ಧಾರ್ಮಿಕ ಸ್ಥಳಗಳ ಪಾವಿತ್ರ್ಯವನ್ನು ಉಳಿಸಿಕೊಳ್ಳಲು ಹಾಗೂ ಅಲ್ಲಿನ ಚೈತನ್ಯದಿಂದ ನಮಗೆ ಲಾಭವಾಗಬೇಕೆಂದು ಪ್ರಯತ್ನಿಸಲು ಜನರಲ್ಲಿ ಧರ್ಮಜಾಗೃತಿ ಮೂಡಿಸುವುದು ಆವಶ್ಯಕವಾಗಿದೆ.’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ದೆಹಲಿ.