ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಆಧುನಿಕ ಶಿಕ್ಷಣ ಮತ್ತು ಈಶ್ವರೀ ಜ್ಞಾನದ ವ್ಯತ್ಯಾಸ !

‘ಆಧುನಿಕ ಶಿಕ್ಷಣದಲ್ಲಿ ಹೆಚ್ಚೆಂದರೆ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪ್ರಾಪ್ತ ಮಾಡಿಕೊಳ್ಳ ಬಹುದು. ಅಧ್ಯಾತ್ಮದಲ್ಲಿ  ಈಶ್ವರನಿಂದ ಜ್ಞಾನ  ಪಡೆದು ಗ್ರಹಿಸುವ ಕ್ಷಮತೆ ನಿರ್ಮಾಣವಾದ ಮೇಲೆ ಎಲ್ಲಾ ವಿಷಯಗಳಲ್ಲಿ ಸರ್ವ ಜ್ಞಾನ ಪ್ರಾಪ್ತವಾಗುತ್ತದೆ.’

ವಿಜ್ಞಾನ ಮತ್ತು ಅಧ್ಯಾತ್ಮದಲ್ಲಿನ ವ್ಯತ್ಯಾಸ !

‘ವಿಜ್ಞಾನದಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಪ್ರತಿಯೊಂದು ಪ್ರಶ್ನೆಗೆ ಉತ್ತರವನ್ನು ಹುಡುಕಬೇಕಾಗು ತ್ತದೆ. ತದ್ವಿರುದ್ಧವಾಗಿ ಅಧ್ಯಾತ್ಮದಲ್ಲಿ ಪ್ರಗತಿ ಹೊಂದಿದ ನಂತರ ಮಾಹಿತಿಯನ್ನು ಸಂಗ್ರಹಿಸಬೇಕಾಗುವುದಿಲ್ಲ, ಯಾವುದೇ ಪ್ರಶ್ನೆಗೆ ಉತ್ತರವು ತಕ್ಷಣ ತಿಳಿಯುತ್ತದೆ !’

ರಜ-ತಮ ಪ್ರಧಾನ ವ್ಯಕ್ತಿಸ್ವಾತಂತ್ರ್ಯವಾದಿಗಳು !

‘ರಜ-ತಮ ಪ್ರಧಾನ ಮತ್ತು ಸ್ವೇಚ್ಛೆಗೆ ಮಹತ್ವ ನೀಡುವ ವ್ಯಕ್ತಿಸ್ವಾತಂತ್ರ್ಯವಾದಿಗಳು ನಾಳೆ ‘ಭ್ರಷ್ಟಾಚಾರ, ಅತ್ಯಾಚಾರ, ಹತ್ಯೆ ಮುಂತಾದವುಗಳನ್ನು ಮಾಡಲು ಸ್ವಾತಂತ್ರ್ಯ ಬೇಕು’, ಎಂದರೆ ಆಶ್ಚರ್ಯವೆನಿಸ ಲಾರದು.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ