‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಭಾಗವಾಗಿರುವುದರಿಂದ ತೊಂದರೆ ಇರುವ ಸಾಧಕರಿಗೆ ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಸಾಧಕರು ಕೇಳುವುದು ಅಯೋಗ್ಯ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

‘ಪ್ರಸ್ತುತ ಕಾಲಮಹಾತ್ಮೆಗನುಸಾರ ಸರಿಸುಮಾರು ಅನೇಕ ವ್ಯಕ್ತಿಗಳಿಗೆ ಅನಿಷ್ಟ ಶಕ್ತಿಗಳ ತೊಂದರೆಯಿಂದ ಹೆಚ್ಚು ಕಡಿಮೆ ಪ್ರಮಾಣದಲ್ಲಿ ತೊಂದರೆಯಾಗುತ್ತಿರುತ್ತದೆ. ಸನಾತನದ ಕೆಲವು ಸಾಧಕರಿಗೆ ತೀವ್ರ ಸ್ವರೂಪದ ಆಧ್ಯಾತ್ಮಿಕ ತೊಂದರೆಯಾಗುತ್ತದೆ. ಅವರಿಗೆ ಇತರ ಸಾಧಕರು ‘ನಿಮ್ಮ ತೊಂದರೆ ಯಾವಾಗ ಕಡಿಮೆಯಾಗುವುದು ?’, ಎಂದು ಕೇಳಬಾರದು; ಏಕೆಂದರೆ ಅವರಿಗೆ ಅದರ ಉತ್ತರ ಗೊತ್ತಿರುವುದಿಲ್ಲ. ‘ಆಧ್ಯಾತ್ಮಿಕ ತೊಂದರೆಯಾಗುವುದು’, ಇದು ಪ್ರಾರಬ್ಧದ ಒಂದು ಭಾಗವಾಗಿದ್ದು ಪ್ರಾರಬ್ಧದಲ್ಲಿ ಹೇಗಿರುತ್ತದೆಯೋ, ಅದರಂತೆ ಘಟಿಸುತ್ತಿರುತ್ತದೆ. ಸಾಧನೆಯಿಂದ ಸಾಧಕರ ಪ್ರಾರಬ್ಧದ ತೀವ್ರತೆ ಕಡಿಮೆಯಾಗುತ್ತಿದ್ದಂತೆ, ಅವರ ಆಧ್ಯಾತ್ಮಿಕ ತೊಂದರೆಯೂ ಕ್ರಮೇಣ ಕಡಿಮೆಯಾಗತೊಡಗುತ್ತದೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ