ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರಿಂದ ಸ್ಥಾಪನೆಗೊಂಡ ಸನಾತನ ಸಂಸ್ಥೆಯು ಈ ವರ್ಷ ರಜತ ಮಹೋತ್ಸವ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವಾಗ ಅದರ ಅದ್ವಿತೀಯ ಕಾರ್ಯ ವೈಶಿಷ್ಟ್ಯಗಳ ಅವಲೋಕನ ಮಾಡುವ ಅವಕಾಶ ನಮಗೆ ಸಿಕ್ಕಿದಕ್ಕಾಗಿ ಅಪಾರ ಕೃತಜ್ಞತೆ ಅನಿಸುತ್ತಿದೆ ! ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಹತ್ತರ ಕಾರ್ಯವನ್ನು ಮಾಡುತ್ತಿರುವ ಸನಾತನ ಸಂಸ್ಥೆಯು ಧರ್ಮ ಮತ್ತು ರಾಷ್ಟ್ರದ ಕಾರ್ಯದಲ್ಲಿಯೂ ಅಷ್ಟೇ ಮಹತ್ವದ ಪಾತ್ರ ವಹಿಸಿರುವುದು ಸನಾತನದ ವೈಶಿಷ್ಟ್ಯವಾಗಿದೆ. ‘ಕೇವಲ ಸಾಧನೆ ಮಾಡುವುದಷ್ಟೇ ಅಲ್ಲ, ಆದರೆ ‘ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಂಡು ಆನಂದಪ್ರಾಪ್ತಿಯನ್ನು ಮಾಡಿಕೊಳ್ಳುವುದಿರುತ್ತದೆ, ಎಂದು ಸಮಾಜಕ್ಕೆ ಹೇಳುವ ಸನಾತನ ಸಂಸ್ಥೆಯು ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಒಂದು ‘ಆದರ್ಶ ಸಂಸ್ಥೆಯಾಗಿದೆ. ಗುರುಕುಲದಂತೆ ಸಂತರನ್ನು ರೂಪಿಸುವ ಶಾಲೆಯಾಗಿದೆ…! ಸದ್ಯದ ‘ಅರ್ಥ ಮತ್ತು ‘ಕಾಮ ಇವುಗಳಿಂದ ತುಂಬಿದ ವಾತಾವರಣದಲ್ಲಿ ಭಕ್ತಿ, ಕರ್ಮ ಮತ್ತು ಜ್ಞಾನ ಈ ಯೋಗಗಳ ಏಕತ್ರೀಕರಣದಿಂದ ‘ಗುರುಕೃಪೆಯನ್ನು ಹೇಗೆ ಸಂಪಾದಿಸಬೇಕು ? ಮತ್ತು ‘ಧರ್ಮ ಮತ್ತು ‘ಮೋಕ್ಷ ಈ ೨ ಮರೆತು ಹೋದ ಪುರುಷಾರ್ಥಗಳ ದಿಶೆಗೆ ಹೇಗೆ ಮಾರ್ಗಕ್ರಮಣ ಮಾಡಬೇಕು ?, ಎಂಬುದನ್ನು ಬಹಳ ಸುಲಭವಾಗಿ ಹೇಳುವ ಸನಾತನ ಸಂಸ್ಥೆಯು ಕಲಿಯುಗಕ್ಕಾಗಿ ಒಂದು ವರದಾನವೇ ಆಗಿದೆ !, ಎಂದು ಹೇಳುವುದು ಅತಿಶಯೋಕ್ತಿಯಾಗಲಾರದು. ದುರ್ಲಭವಾದ ಮಾನವಜನ್ಮವನ್ನು ಸಾರ್ಥಕ ಪಡಿಸಲು ಸಾಧನೆಯನ್ನು ಹೇಳುವ ಸನಾತನ ಸಂಸ್ಥೆಯು ಮುಂಬರುವ ಆಪತ್ಕಾಲದ ಬಗ್ಗೆ ಜಾಗೃತಿ ಮೂಡಿಸಿ ಅದರಿಂದ ಪಾರಾಗಲು ಪರಿಹಾರೋಪಾಯಗಳನ್ನೂ ಹೇಳುತ್ತಿದೆ. ಸನಾತನದ ಸ್ಥೂಲ, ಹಾಗೆಯೇ ಸೂಕ್ಷ್ಮದ ಕಾರ್ಯದ ಮಹತ್ವವನ್ನು ಅರಿತುಕೊಂಡರೆ, ಇದು ಸಹಜವಾಗಿ ಗಮನಕ್ಕೆ ಬರುತ್ತದೆ. ಸದ್ಯದ ‘ಡಿಜಿಟಲ್ ಮತ್ತು ವೇಗದ ಯುಗದಲ್ಲಿ ‘ವೈಜ್ಞಾನಿಕ ಪರಿಭಾಷೆ ಮತ್ತು ನಿಖರವಾಗಿ ಸಾರವನ್ನು ಹೇಳುವುದು ಎಂಬ ಸನಾತನ ಸಂಸ್ಥೆಯ ವೈಶಿಷ್ಟ್ಯವು ಸತ್ಯವಾಗಿ ಹೊರಹೊಮ್ಮಿದೆ !
ರಾಷ್ಟ್ರ-ಧರ್ಮದ ಕಾರ್ಯಕ್ಕಾಗಿ ಸಮರ್ಪಿತ !
ವೇದಜ್ಞಾನಕ್ಕನುಸಾರ ‘ಧರ್ಮವೇ ಮಾನವನ ಸಂಪೂರ್ಣ ಜೀವನದ ಮೂಲವಾಗಿರುತ್ತದೆ. ರಾಷ್ಟ್ರವು ಧರ್ಮದ ಅತಿವ್ಯಾಪಕ ಅಂಗದ ಒಂದು ಭಾಗ ವಾಗಿದೆ. ರಾಷ್ಟ್ರವನ್ನು ಧರ್ಮದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ರಾಷ್ಟ್ರನಿರ್ಮಿತಿಯ ಪ್ರತಿಯೊಂದು ಅಂಶ ಮತ್ತು ರಾಷ್ಟ್ರದ ಪ್ರತಿಯೊಂದು ಸಮಸ್ಯೆಯ ಉತ್ತರ ಧರ್ಮದಲ್ಲಿದೆ. ಸನಾತನ ಪರಂಪರೆಯಲ್ಲಿ ರಾಷ್ಟ್ರವು ಧರ್ಮಾಧಿಷ್ಠಿತವೇ ಆಗಿರುವುದರಿಂದ ಈ ಪರಂಪರೆ ಸಮೃದ್ಧ ಮಾನವಿ ಜೀವನದ ಬುನಾದಿಯಾಗಿದೆ. ಸಾಧನಾನಿರತ ಮತ್ತು ಧರ್ಮಾಚರಣಿ ರಾಜ ಮತ್ತು ಪ್ರಜೆಗಳು ಆದರ್ಶ ರಾಷ್ಟ್ರದ ಮೂಲವಾಗಿದ್ದಾರೆ. ಇಂತಹ ಪ್ರಜೆಗಳನ್ನು ರೂಪಿಸುವ ಕೆಲಸವನ್ನು ಸನಾತನ ಸಂಸ್ಥೆಯು ನಿರಪೇಕ್ಷವಾಗಿ ಮಾಡುತ್ತಿದೆ. ಸನಾತನ ಸಂಸ್ಥೆಯು ಸಮಷ್ಟಿ ಸಾಧನೆಗೆ ಶೇ. ೬೫ ರಷ್ಟು ಮಹತ್ವ ನೀಡುತ್ತದೆ. ಇದರ ಅಂತರ್ಗತ ಧರ್ಮಪ್ರಸಾರವನ್ನು ಮಾಡಿ ನೀತಿವಂತ ಸಮಾಜವನ್ನು ರೂಪಿಸಲು ಪ್ರಯತ್ನಿಸುವುದು ಮತ್ತು ಸಮಾಜ ಮತ್ತು ರಾಷ್ಟ್ರದ ಸಮಸ್ಯೆಗಳನ್ನು ಬೇರು ಸಹಿತ ಕಿತ್ತು ಹಾಕುವುದು, ಈ ಕಾರ್ಯವನ್ನು ಸನಾತನ ಸಂಸ್ಥೆಯು ಮಾಡುತ್ತಿದೆ. ಸಂಪೂರ್ಣ ರಾಷ್ಟ್ರ ಮತ್ತು ಸಮಾಜದ ಚೇತನದ ಊರ್ಜಾಸ್ರೋತವಾದ ದೇವತೆಗಳು ಮತ್ತು ದೇವಸ್ಥಾನಗಳು ಇವು ಮುಚ್ಚಲ್ಪಟ್ಟಿವೆ, ಎಂದು ಗಮನದಲ್ಲಿಟ್ಟು ಮೊಟ್ಟಮೊದಲು ಸನಾತನವು ‘ದೇವತೆಗಳ ವಿಡಂಬನೆಯನ್ನು ತಡೆಗಟ್ಟುವುದು ಮತ್ತು ‘ದೇವಸ್ಥಾನ ರಕ್ಷಣೆ ಈ ಅಭಿಯಾನವನ್ನು ಕೈಗೆತ್ತಿಕೊಂಡು ಈ ಚೈತನ್ಯಸ್ರೋತಗಳನ್ನು ಮುಕ್ತ ಮಾಡುವ ಕೆಲಸವನ್ನು ಆರಂಭಿಸಿತು. ದೇವತೆಗಳ ವಿಡಂಬನೆಯನ್ನು ತಡೆಗಟ್ಟುವ ಬಗೆಗಿನ ಸನಾತನದ ಜನಜಾಗೃತಿ ಅಭಿಯಾನಕ್ಕೆ ಯಶಸ್ಸು ಪ್ರಾಪ್ತವಾಗುತ್ತಿದೆ. ಅನೇಕ ಹಿಂದುತ್ವನಿಷ್ಠರು ಈ ತತ್ತ್ವವನ್ನು ದೊಡ್ಡ ಪ್ರಮಾಣದಲ್ಲಿ ಸ್ವೀಕರಿಸಿ ಅವರು ಈಗ ತತ್ಪರತೆಯಿಂದ ಅನೇಕ ಸ್ತರಗಳಲ್ಲಿ ಅದರ ವಿರುದ್ಧ ಕೃತಿಗಳನ್ನು ಮಾಡುತ್ತಿದ್ದಾರೆ.
ಹಿಂದುದ್ವೇಷಿ ಪತ್ರಕರ್ತ ಮ.ಫಿ. ಹುಸೇನ್ ವಿರುದ್ಧ ದೂರು ದಾಖಲಿಸುವುದರಿಂದ ಹಿಡಿದು ಮದ್ಯದಂಗಡಿಗಳಿಗೆ ದೇವತೆಗಳ, ಮಹಾಪುರುಷರ ಹೆಸರುಗಳನ್ನು ಇಡದಿರಲು ಪ್ರಬೋಧನೆ ಮಾಡುವುದು, ಆರಂಭದ ಕಾಲದಲ್ಲಿ ಕಾಶ್ಮೀರಿ ಜನರ ಮೇಲಿನ ದೌರ್ಜನ್ಯದ ವಿರುದ್ಧ ಪ್ರದರ್ಶನವನ್ನು ಏರ್ಪಡಿಸಿ ಅವರ ಮೇಲಿನ ಅತ್ಯಾಚಾರವನ್ನು ಜಗತ್ತಿನೆದುರು ಬಹಿರಂಗಪಡಿಸುವುದು, ತೂಕದಲ್ಲಿ ಮೋಸಗೊಳಿಸುವವರಿಂದ ಹಿಡಿದು ಕಲಬೆರಕೆ ಮಾಡುವವರ ವರೆಗೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು, ರಸ್ತೆಯ ಮೇಲೆ ಹಗಲು ಹೊತ್ತಿನಲ್ಲಿ ಉರಿಯುವ ದೀಪಗಳಿಂದ ಹಿಡಿದು ಬೀದಿನಾಯಿಗಳ ಉಪಟಳಗಳ ಬಗ್ಗೆ ಜಾಗೃತಿ ಮೂಡಿಸುವುದು, ಸಾರ್ವಜನಿಕ ಉತ್ಸವಗಳಲ್ಲಿ ನಡೆಯುವ ತಪ್ಪು ಆಚರಣೆಗಳ ವಿರುದ್ಧ ಅಭಿಯಾನ ನಡೆಸಿ ‘ಆದರ್ಶ ಉತ್ಸವವನ್ನು ಹೇಗೆ ಆಚರಿಸಬೇಕು ? ಎಂದು ಹೇಳುವುದು, ಕಾಶ್ಮೀರಕ್ಕೆ ಹೋಗಿ ಪ್ರವಚನ ಮತ್ತು ವ್ಯಾಖ್ಯಾನಗಳನ್ನು ತೆಗೆದುಕೊಳ್ಳುವುದು, ಆದರ್ಶ, ಅಂದರೆ ರಾಮರಾಜ್ಯದ ಸಂಕಲ್ಪನೆಯನ್ನು ಪ್ರಸ್ತುತ ಪಡಿಸುವುದು, ಲವ್ ಜಿಹಾದ್ ಮತ್ತು ಮತಾಂತರದ ವಿರುದ್ಧ ಜನಜಾಗೃತಿ ಮಾಡುವುದು ಮುಂತಾದ ಅನೇಕ ಅಭಿಯಾನಗಳಲ್ಲಿ ಸನಾತನ ಸಂಸ್ಥೆಯ ದೊಡ್ಡ ಸಹಭಾಗವಿತ್ತು. ದೇವತೆಗಳು, ಧರ್ಮ, ಹಿಂದೂ, ರಾಷ್ಟ್ರ ಮುಂತಾದವುಗಳಿಗೆ ಸಂಬಂಧಿಸಿದಂತೆ ಯಾವುದೇ ಅನ್ಯಾಯಕರ ಘಟನೆಗಳು ಗಮನಕ್ಕೆ ಬಂದರೆ ಹಿಂದುತ್ವನಿಷ್ಠ ಸಂಘಟನೆಗಳನ್ನು ಒಗ್ಗೂಡಿಸಿ ಸರಕಾರಕ್ಕೆ ನಿವೇದನೆ ನೀಡಿ ಜಾಗೃತಿ ಮಾಡುವ ನೂತನ ಮತ್ತು ಅತ್ಯಂತ ಕಾನೂನುಬದ್ಧ ಪದ್ಧತಿಯನ್ನು ಸನಾತನವು ಅಂಗೀಕರಿಸಿತು. ಇಂದು ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ರಾಷ್ಟ್ರ-ಧರ್ಮಗಳ ಮೇಲಿನ ಆಘಾತಗಳ ವಿರುದ್ಧ ಸರಕಾರಕ್ಕೆ ಮನವಿಯನ್ನು ನೀಡುತ್ತಿವೆ. ಹಿಂದೂಗಳ ಮೇಲಿನ ವಿವಿಧ ಆಘಾತಗಳ ವಿಷಯದಲ್ಲಿ ಏಕಕಾಲದಲ್ಲಿ ರಾಜ್ಯದಲ್ಲಿ ಅನೇಕ ಸ್ಥಳಗಳಲ್ಲಿ ಮನವಿಯನ್ನು ನೀಡಿದುದರಿಂದ ವಿವಿಧ ಚಳುವಳಿಗಳು ತಾವಾಗಿಯೇ ಹುಟ್ಟಿಕೊಂಡು ಜಾಗೃತಿ ಮತ್ತು ಪರಿವರ್ತನೆಯಾಗುವುದಕ್ಕೆ ಚಾಲನೆ ಸಿಕ್ಕಿದೆ. ಇದೇ ರೀತಿ ಈಗ ‘ಹಿಂದೂ ರಾಷ್ಟ್ರ ಈ ಶಬ್ದದ ಜಯಘೋಷವೂ ಆರಂಭವಾಗಿದೆ. ಇದರಿಂದ ಗಮನಿಸಬೇಕಾದ ವಿಷಯವೆಂದರೆ ಸನಾತನದಂತಹ ಆಧ್ಯಾತ್ಮಿಕ ಸಂಸ್ಥೆ ಯಾವುದಾದರೊಂದು ರಾಷ್ಟ್ರಕ್ಕೆ ಸಂಬಂಧಿಸಿದ ಅಭಿಯಾನವನ್ನು ಕೈಗೆತ್ತಿಕೊಂಡರೆ, ಅದರ ಹಿಂದೆ ಸಾಕ್ಷಾತ್ ಈಶ್ವರನ ಆಶೀರ್ವಾದ ಮತ್ತು ಗುರುಗಳ ಸಂಕಲ್ಪ ಇರುವುದರಿಂದ ಅದರ ಯಶಸ್ಸು ಸುನಿಶ್ಚಿತವಾಗಿರುತ್ತದೆ. ಸನಾತನ ಸಾಧಕರು ಇಂದು ಇದನ್ನೇ ಅನುಭವಿಸುತ್ತಿದ್ದಾರೆ !
ಸಾಮರ್ಥ್ಯವಿದೆ ಚಳುವಳಿಯಲ್ಲಿ… !
ಅತ್ಯಂತ ನಿರಪೇಕ್ಷವಾಗಿ ಸಮಾಜ ಮತ್ತು ರಾಷ್ಟ್ರದ ಕಾರ್ಯವನ್ನು ಮಾಡುವ ಸನಾತನದ ಸಾಧಕರು ತಮ್ಮ ಸಮಷ್ಟಿ ಸಾಧನೆಯೆಂದು ರಾಷ್ಟ್ರಕ್ಕೆ ಸಂಬಂಧಿತ ಚಳುವಳಿಗಳಲ್ಲಿಯೂ ಭಾಗವಹಿಸುತ್ತಾರೆ. ಅವರ ಸಾಧನೆ ಮನೋಬಲವು ಅವರಿಗೆ ದೇವತೆಗಳು, ಧರ್ಮ ಮತ್ತು ಹಿಂದೂಗಳ ಮೇಲಿನ ಅನ್ಯಾಯದ ಹೋರಾಟದಲ್ಲಿ ಭಾಗವಹಿಸಲು ಪ್ರೇರಣೆ ನೀಡುತ್ತದೆ. ಅವರ ಜೀವನದ ಧ್ಯೇಯ ಈಶ್ವರ (ಆನಂದ) ಪ್ರಾಪ್ತಿಯಾಗಿರುವುದರಿಂದ ಮತ್ತು ಸಮಾಜ ಅಥವಾ ರಾಷ್ಟ್ರದ ಕಾರ್ಯದಲ್ಲಿ ಭಾಗವಹಿಸುವ ಹಿಂದೆ ಅವರ ಕಿಂಚಿತ್ತೂ ಯಾವುದೇ ಸ್ವಾರ್ಥವಿಲ್ಲ. ಎಲ್ಲಕ್ಕಿಂತ ಮಹತ್ವದ್ದೆಂದರೆ ಬೀಜರೂಪದಿಂದ ಸಮಾಜ, ಧರ್ಮ ಅಥವಾ ರಾಷ್ಟ್ರ ಇವುಗಳ ಮೇಲಿನ ದಾಳಿಗಳ ಮೇಲೆ ಪ್ರಹಾರ ಮಾಡಲಾಗುತ್ತದೆ. ಮುಂದೆ ಸಂಬಂಧಿತ ಅಭಿಯಾನ ಅಥವಾ ಅಂಶಗಳು ಇದು ಕಾಲಗತಿಗನುಸಾರ ವ್ಯಾಪಕವಾಗುತ್ತಾ ಸಮಾಜಪರಿವರ್ತನೆಗೆ ಆರಂಭವಾಗುತ್ತದೆ. ಸ್ಥೂಲ ದಿಂದಾದ ಈ ಪರಿವರ್ತನೆಯ ಹಿಂದೆ ಮೇಲಿನ ಸೂಕ್ಷ್ಮ ಈಶ್ವರೀ ತತ್ತ್ವವು ಕಾರ್ಯನಿರತವಾಗಿರುತ್ತದೆ.
ಇಲ್ಲಿ ಈ ಸೂಕ್ಷ್ಮದಲ್ಲಿನ ಕಾರ್ಯದ ಪ್ರಕ್ರಿಯೆ ಬಹಿರಂಗಪಡಿಸಿ ಹೇಳುವ ಕಾರಣವೆಂದರೆ ‘ಸಾಮರ್ಥ್ಯವಿದೆ ಚಳುವಳಿಯಲ್ಲಿ | ಯಾರ‍್ಯಾರು ಭಾಗವಹಿಸುವರೋ ಅವರದ್ದು | ಆದರೆ ಅಲ್ಲಿ ಭಗವಂತನ ಆಧಿಷ್ಠಾನ ಇರಬೇಕು |’ ಎಂಬ ಸಮರ್ಥ ರಾಮದಾಸ ಸ್ವಾಮಿಯವರ ಉಕ್ತಿಯನ್ನು ಸಾಕ್ಷಾತ್ ಅನುಭವಿಸುವ ಮತ್ತು ಅದರ ಅನುಭೂತಿ ನೀಡುವ ಸನಾತನ ಸಂಸ್ಥೆಯು ಅದ್ವಿತೀಯವಾಗಿದೆ, ಎಂದು ಇದರಿಂದ ಗಮನಕ್ಕೆ ಬರುತ್ತದೆ !
ಛತ್ರಪತಿ ಶಿವಾಜಿ ಮಹಾರಾಜರ ಭವಾನಿದೇವಿಯ ಮೇಲಿನ ಶ್ರದ್ಧೆ, ಸತತವಾಗಿ ಅವಳ ನಾಮಸ್ಮರಣೆ ಮಾಡುವುದು, ಗುರುಗಳ ಆಜ್ಞಾಪಾಲನೆ ಮಾಡುವುದು, ಶ್ರೀಗಳ ಇಚ್ಛೆಯನ್ನು ಅರಿತು ರಾಜ್ಯವನ್ನು ನಡೆಸುವುದು ಈ ಎಲ್ಲ ವಿಷಯಗಳು ಹಿಂದವೀ ಸ್ವರಾಜ್ಯದ ಹಿಂದಿನ ದೊಡ್ಡ ಆಧ್ಯಾತ್ಮಿಕ ಅಧಿಷ್ಠಾನವನ್ನು ದರ್ಶಿಸುತ್ತವೆ. ಅಂದರೆ ಮುಂಬರುವ ಹಿಂದೂ ರಾಷ್ಟ್ರ ನಿರ್ಮಿತಿಯ ಹಿಂದಿರುವ ಆಧ್ಯಾತ್ಮಿಕ ಅಧಿಷ್ಠಾನದ ಜವಾಬ್ದಾರಿಯನ್ನು ಒಂದು ದೀಪಸ್ತಂಭದಂತೆ ಸನಾತನ ಸಂಸ್ಥೆಯು ಎತ್ತಿಕೊಂಡಿದೆ, ಎಂದು ಹೇಳಿದರೆ ಅದು ತಪ್ಪಾಗಲಾರದು.
ಹಿಂದುತ್ವನಿಷ್ಠರಿಗಾಗಿ ಮಾತೃ-ಪಿತೃ ಸಮಾನ ಸಂಸ್ಥೆ
ಸನಾತನದ ಸಾಧಕರು ಹಿಂದುತ್ವನಿಷ್ಠರ ಅಭಿಯಾನಗಳಲ್ಲಿಯೂ ಭಾಗವಹಿಸುತ್ತಾರೆ, ಹಾಗೆಯೇ ಅವರಿಗೆ ನಾಮಜಪದ ಆತ್ಮಿಕ ಬಲ ಮತ್ತು ಉತ್ಸಾಹವರ್ಧಕ ಸತ್ಸಂಗವನ್ನೂ ನೀಡುತ್ತಾರೆ. ವಿವಿಧ ಹಿಂದುತ್ವನಿಷ್ಠ ಸಂಘಟನೆಗಳಿಗೆ ತಾಯಿ-ತಂದೆ ಸಮಾನ ಸನಾತನದ ಆಧಾರ ವೆನಿಸುತ್ತದೆ. ಆದರೆ ‘ಯತೋ ಧರ್ಮಸ್ತತೋಜಯಃ| ಅಂದರೆ ‘ಧರ್ಮದ ಅಧಿಷ್ಠಾನದಿಂದ ಅವರು ವಿಜಯಶ್ರೀಯನ್ನು ಎಳೆದು ತರಬಹುದು, ಇದನ್ನು ಸನಾತನ ಸಂಸ್ಥೆಯು ಅವರ ಮೇಲೆ ಬಿಂಬಿಸಿದೆ. ಅದರ ಅನುಭವವನ್ನು ಪಡೆದು ಅನೇಕ ಹಿಂದುತ್ವನಿಷ್ಠರೂ ಸಾಧನಾನಿರತರಾಗಿದ್ದಾರೆ. ಧರ್ಮಸಂಸ್ಥಾಪನೆ ಇದು ಅವತಾರದ ಕಾರ್ಯವಾಗಿದೆ. ಯೋಗ್ಯ ಸಮಯ ಬಂದಾಗ ಹಿಂದೂ ರಾಷ್ಟ್ರ ಸ್ಥಾಪನೆಯೂ ಆಗಲಿದೆ; ಆದರೆ ‘ಉದ್ಧರೆತ ಆತ್ಮ ಆತ್ಮಾನಾಮ್ |’ ಅಂದರೆ ಸ್ವತಃದ ಉದ್ಧಾರ ಸ್ವತಃ ಮಾಡಬೇಕಾದುದರಿಂದ ಸಾಧನೆ ಮಾಡುವುದು ಆವಶ್ಯಕವಾಗಿದೆ, ಎಂದು ಸನಾತನ ಸಂಸ್ಥೆಯು ಮಾಡಿದ ಮಾರ್ಗದರ್ಶನವು ಕ್ರಮೇಣ ರಾಷ್ಟ್ರ ಮತ್ತು ಧರ್ಮಪ್ರೇಮಿಗಳಿಗೂ ಈಗ ಮನವರಿಕೆಯಾಗತೊಡಗಿದೆ. ಯಾವುದೇ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಅಭಿಯಾನ ಯಶಸ್ವಿಯಾಗಲು, ಅದರಲ್ಲಿ ಸೂಕ್ಷ್ಮದ ಅಡಚಣೆಗಳು ದೂರವಾಗಲು ಆವಶ್ಯಕ ಆಧ್ಯಾತ್ಮಿಕ ಬಲ ದೊರಕಲು ಸನಾತನದ ಸಂತರು ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡುತ್ತಾರೆ. ಮುಂಬರುವ ಹಿಂದೂ ರಾಷ್ಟ್ರದ ಅಂದರೆ ರಾಮರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಧರ್ಮದ, ಅಂದರೆ ಭಗವಂತನ ಅಧಿಷ್ಠಾನ ನೀಡುವ ಕೆಲಸವನ್ನು ಮಾಡಿದರೆ ಸನಾತನ ಸಂಸ್ಥೆಯ ಹೆಸರು ವಿಶ್ವದ ಇತಿಹಾಸ ದಲ್ಲಿ ಸುವರ್ಣಾಕ್ಷರಗಳಲ್ಲಿ ಮೂಡುವುದರಲ್ಲಿ, ಸಂದೇಹವಿಲ್ಲ !