|
ಮುಂಬಯಿ – ಇಸ್ಲಾಮಿಕ್ ಪಾಕಿಸ್ತಾನವು ಅಕ್ಷರಶಃ ಹಿಂದೂಗಳಿಗೆ ನರಕವಾಗಿದೆ. ಇನ್ನೇನು ಕೈ ಬೆರಳಣಿಕೆಯಷ್ಟು ಹಿಂದೂಗಳು ಉಳಿಯುತ್ತಾರೆಯೇ ಎನ್ನುವುದನ್ನು ಹೇಳುವ ಸಮಯ ಬಂದಿದೆ. ಅದೇ ರೀತಿ ಪಾಕಿಸ್ತಾನದಲ್ಲಿ ಹಿಂದೂಗಳ ಹಿತಾಸಕ್ತಿಗಾಗಿ ಧ್ವನಿ ಎತ್ತಿರುವ ಮುಂಬಯಿನ ಮಹೇಶ್ ವಾಸು ಅವರು 2023 ರಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಮತ್ತು ಹತ್ಯಾಕಾಂಡಗಳ ಬಗ್ಗೆ ಹೇಳಿದ್ದಾರೆ. ಅವರು ಪ್ರಸಾರ ಮಾಡಿದ ವರದಿಯು ಸ್ಥಳೀಯ ಮಾಧ್ಯಮಗಳು ಒದಗಿಸಿದ ವರದಿಗಳು ಮತ್ತು ಪುರಾವೆಗಳನ್ನು ಆಧರಿಸಿದೆ. ಅವರು ಈ ಮಾಹಿತಿಯನ್ನು ‘ಸನಾತನ ಪ್ರಭಾತ’ಕ್ಕೆ ಕಳುಹಿಸಿದ್ದಾರೆ.
In 2023 more than 121 Hindu women were converted and raped in Pakistan !
A report has been released, showcasing the horrifying statistics of genocide and torture in Pakistan !
The above information was given to ‘Sanatan Prabhat’ by @maheshmvasu from Mumbai, who works for the… pic.twitter.com/V3FXBWfuOa
— Sanatan Prabhat (@SanatanPrabhat) January 30, 2024
ವಾರ್ಷಿಕ ವರದಿಯಲ್ಲಿ ಪ್ರಮುಖ ಮಾಹಿತಿಗಳು !
1. ಜಿಹಾದಿ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯರು ಅತ್ಯಂತ ಅಸುರಕ್ಷಿತ ಜೀವನ ನಡೆಸುತ್ತಿದ್ದಾರೆ. 2023 ರಲ್ಲಿ, ಬಂದೂಕಿನಿಂದ ಬೆದರಿಸಿ ಅಪಹರಣ, ಅತ್ಯಾಚಾರ, ಬಲವಂತದ ಮತಾಂತರ ಮತ್ತು ಮದುವೆಯ ಹೆಸರಿನಲ್ಲಿ ಬಲವಂತದ ವೇಶ್ಯಾವಾಟಿಕೆ 121 ಪ್ರಕರಣಗಳು ಬೆಳಕಿಗೆ ಬಂದಿವೆ.
2. ಸಾಮೂಹಿಕವಾಗಿ 2 ಸಾವಿರದ 251 ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಯಿತು.
3. ವಿವಾಹಿತ ಹಿಂದೂ ಮಹಿಳೆಯನ್ನು ಅಪಹರಿಸಲು ಸಾಧ್ಯವಾಗದ ಕಾರಣ ಕೊಲೆ ಮಾಡಲಾಯಿತು.
4. ಹಿಂದೂ ಪುರುಷರನ್ನು ಅಪಹರಿಸುವ ಅಥವಾ ಬಲವಂತವಾಗಿ ಮತಾಂತರ ಮಾಡುವ ಅಥವಾ ಲೈಂಗಿಕವಾಗಿ ಹಲ್ಲೆ ಮಾಡುವ 5 ಘಟನೆಗಳು ನಡೆದಿವೆ.
5. 78 ಹಿಂದೂಗಳ ಮೃತದೇಹಗಳು ಮರದ ಕೊಂಬೆಗಳಲ್ಲಿ ಅಥವಾ ಮನೆಗಳಲ್ಲಿ ನೇತಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಕೆಲವರ ಶವಗಳನ್ನು ಬಾವಿಯಿಂದ ಹೊರತೆಗೆದಿರುವ ಅಂಶವೂ ಇದರಲ್ಲಿ ಸೇರಿದೆ.
6. ಹಿಂದೂಗಳನ್ನು ಗುರಿಯಾಗಿಸಿ ಹಿಂಸಾಚಾರ ಮತ್ತು ಹಿಂದೂಗಳ ಹತ್ಯೆಯ 25 ಘಟನೆಗಳು ನಡೆದಿವೆ.
7. 21 ಹಿಂದೂಗಳನ್ನು ಅಪಹರಿಸಿ ಹಣ ವಸೂಲಿ ಮಾಡಲಾಯಿತು ಮತ್ತು ಗುಂಡಿನ ದಾಳಿಯಲ್ಲಿ ಗಾಯಗೊಳಿಸಿದರು.
8. ಹಿಂದೂಗಳ ಅನಧಿಕೃತ ಬಂಧನದ 3 ಘಟನೆಗಳು ಬೆಳಕಿಗೆ ಬಂದಿವೆ.
9. 201 ಹಿಂದೂ ಕಾರ್ಮಿಕರನ್ನು ಮುಸ್ಲಿಂ ಭೂಮಾಲೀಕರು ತಮ್ಮ ಖಾಸಗಿ ಜೈಲುಗಳಲ್ಲಿ ಬಂಧಿಸಿದರು.
10. ಹಿಂದೂಗಳ ದೇವಾಲಯಗಳು, ಮನೆಗಳು ಅಥವಾ ಸ್ಮಶಾನಗಳ ಮೇಲೆ ದಾಳಿಯ 77 ಘಟನೆಗಳು ನಡೆದಿವೆ.
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು ! ‘ಭಾರತದಲ್ಲಿ ಮುಸಲ್ಮಾನರು ಸಂಕಷ್ಟದಲ್ಲಿದ್ದಾರೆ’ ಎಂದು ಗೋಗರೆಯುವ ಮೂಲಕ ಭಾರತದ ಘನತೆಗೆ ಮಸಿ ಬಳಿಯಲು ಯತ್ನಿಸುತ್ತಿರುವ ಪಾಶ್ಚಿಮಾತ್ಯ ಮಾಧ್ಯಮಗಳು ಈಗ ಮೌನವಾಗಿರುವುದೇಕೆ ? ಭಾರತ ಸರಕಾರವು ಇದಕ್ಕೆ ಉತ್ತರಿಸಲು ಮತ್ತು ಭಾರತದಲ್ಲಿ ಅವರನ್ನು ಏಕೆ ನಿಷೇಧಿಸಬಾರದು ? |