ಶತ್ರು ಸೈನ್ಯವನ್ನು ನಿದ್ರೆಗೆ ಜಾರಿಸಲು ಚೀನಾದಿಂದ ‘ಎಐ’ ದ ಸಹಾಯದಿಂದ ಶಸ್ತ್ರಗಳ ನಿರ್ಮಾಣ !

ಭಾರತ, ಅಮೆರಿಕಾ ಮತ್ತು ಆಸ್ಟ್ರೇಲಿಯಾದ ವಿರುದ್ಧ ಬಳಕೆ !

ಬೀಚಿಂಗ (ಚೀನಾ) – ಚೀನಿ ಸೈನ್ಯ ಯುದ್ಧದ ಮೈದಾನದಲ್ಲಿ ಇಳಿಯದೆ ಯುದ್ಧ ಮಾಡುವ ಸಿದ್ಧತೆಯಲ್ಲಿ ಇದೆ. ಭಾರತ, ಅಮೆರಿಕಾ ಅಥವಾ ಆಸ್ಟ್ರೇಲಿಯಾ ಇವುಗಳಂತಹ ದೇಶಗಳ ಜೊತೆಗೆ ಹೋರಾಡುವುದಕ್ಕಾಗಿ ಚೀನಾ ‘ಬಯೋ ವೆಪನ್ಸ್’ ಮತ್ತು ‘ಕೃತಕ ಬುದ್ಧಿಮತ್ತೆ’ಯ ಸಹಾಯ ಪಡೆಯುತ್ತಿದೆ. ಇದಕ್ಕಾಗಿ ಚೀನಾ ಸೈನ್ಯ ಪಿ.ಎಲ್.ಎ. ಇಂದ ‘ಬ್ರೈನ್ ವಾರ್ ಫೇರ್’ (ಮೆದುಳು ಯುದ್ಧ ತಂತ್ರಜ್ಞಾನ) ಹೆಸರಿನ ಒಂದು ಇಲಾಖೆ ಸ್ಥಾಪಿಸಿದೆ. ಇದರಲ್ಲಿ ಶತ್ರು ಸೈನಿಕರ ಮನಸ್ಸಿನ ಮೇಲೆ ನಿಯಂತ್ರಣ ಪಡೆದು ಅವರನ್ನು ನಿದ್ರಿಸುವಂತೆ ಮಾಡಬಹುದಾದ ಶಸ್ತ್ರಾಸ್ತ್ರಗಳ ನಿರ್ಮಾಣ ಮಾಡಲಾಗುತ್ತಿದೆ.

ಈ ರೀತಿಯ ಕಾರ್ಯ ಮಾಡುವ ಚೀನಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು !

  • ‘ಬ್ರೈನ್ ವಾರ್ ಫೇರ್ ಯೂನಿಟ್’ ಚೀನಾದ ಮನೋವೈಜ್ಞಾನಿಕ ಯುದ್ಧ ನೀತಿಯ ಒಂದು ಭಾಗ !
  • ಶತ್ರುಗಳ ಮನಸ್ಸು ನಿಯಂತ್ರಿಸುವ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಲಾಗುವುದು.
  • ಕೆಲವು ಶಾಸ್ತ್ರಗಳಲ್ಲಿ ಶತ್ರುಗಳಿಗೆ ನಿದ್ರಿಸುವ ಕ್ಷಮತೆಇದೆ !
  • ಶಸ್ತ್ರಗಳು ‘ಎಲೆಕ್ಟ್ರೋ ಮ್ಯಾಗ್ನೆಟಿಕ್ ಎನರ್ಜಿ’ಯ (ಚುಂಬಕಿಯ ಉರ್ಜೆ) ಬಳಕೆ ಮಾಡಲಾಗುವುದು.
  • ಶಸ್ತ್ರಗಳಲ್ಲಿ ‘ಸಾಫ್ಟ್ ಕೀಲ್ ರೇಡಿಯೋ ಲಹರಿ’ಗಳನ್ನು ಬಿಡುಗಡೆಗೊಳಿಸುವುದು. ಇದರಿಂದ ಶತ್ರುದೇಶದಲ್ಲಿನ ಸೈನಿಕರು ನಿದ್ರಿಸುವರು.
  • ಚೀನಾ ಸೈನಿಕರ ಮೇಲೆ ಇದರ ಪರಿಣಾಮ ಆಗದಿರಲು ‘ಆಂಟಿ ಸ್ಲೀಪ್ ಗ್ಲಾಸೆಸ್’ ಬಳಕೆ, ಇದರ ಮೇಲೆ ಕೂಡ ಸಂಶೋಧನೆ ಆರಂಭ !

ಶತ್ರು ಸೈನ್ಯದ ವರ್ತನೆಯ ಮೇಲೆ ನಿಯಂತ್ರಣ ಇಡುವುದರ ಸಿದ್ಧತೆಯಲ್ಲಿ !

ಚೀನಿ ಸೈನ್ಯ ಮೆದುಳು ಮತ್ತು ಬಾಹ್ಯ ತಂತ್ರಜ್ಞಾನವನ್ನು ನೇರ ಜೋಡಿಸಲು ಸಾಧ್ಯವಾಗುವಂತಹ ಯಂತ್ರ ಕೂಡ ತಯಾರಿಸುತ್ತಿದೆ. ಇದರಿಂದ ಚೀನಾಗೆ ಕಾರ್ಯ ನಿಯಂತ್ರಣ ಮಾಡುವ ಕ್ಷಮತೆ ದೊರೆಯುವುದು. ಸುಲಭವಾಗಿ ಹೇಳುವುದಾದರೆ, ಯಂತ್ರಗಳ ಮೂಲಕ ಶತ್ರು ಸೈನ್ಯದ ವರ್ತನೆಯ ಮೇಲೆ ನಿಯಂತ್ರಣ ಇಡಲು ಸಾಧ್ಯವಾಗುವುದು. ಒಟ್ಟಾರೆ ಈ ಮುಂದುವರೆದ ‘ಮೈಂಡ್ ಕಂಟ್ರೋಲ್ ಶಸ್ತ್ರಗಳು’ ಚೀನಿ ಸೈನಿಕರ ಮನಸ್ಸಿನ ಮೇಲೆ ನಿಯಂತ್ರಣ ಇಡುವುದು ಮತ್ತು ಶತ್ರು ಸೈನ್ಯದ ಮನಸ್ಸಿನ ಮೇಲೆ ನಿಯಂತ್ರಣ ಪಡೆಯಲು ಪ್ರಯತ್ನ ಮಾಡುವರು.

ಸಂಪಾದಕೀಯ ನಿಲುವು

ಯುದ್ಧ ಹವ್ಯಾಸ ಇಟ್ಟು ಕೊಂಡಿರುವ ಕಪಟಿ ಚೀನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಈಗ ಭಾರತ ಆಕ್ರಮಣಕಾರಿ ನಿಲುವು ತಾಳುವುದು ಯೋಗ್ಯವಾಗುವುದು !