Canadian Deputy PM Resigned : ರಾಜಿನಾಮೆ ನೀಡಿದ ಕೆನಡಾದ ಉಪಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್

ಆರ್ಥಿಕ ನೀತಿಗಳಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಜೊತೆ ಭಿನ್ನಾಭಿಪ್ರಾಯ !

ಕೆನಡಾದ ಉಪಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್

ಒಟಾವಾ (ಕೆನಡಾ) – ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗಿನ ಆಡಳಿತಾತ್ಮಕ ನೀತಿಗಳ  ಭಿನ್ನಾಭಿಪ್ರಾಯದ ನಂತರ ಉಪ ಪ್ರಧಾನಿ ಹಾಗೂ ಹಣಕಾಸು ಸಚಿವ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ರಿಸ್ಟಿಯಾ ಅವರು ದೇಶದಲ್ಲಿ ಕುಗ್ಗುತ್ತಿರುವ ಆರ್ಥಿಕ ವ್ಯವಸ್ಥೆಯ ಬಗ್ಗೆ ಸಂಸತ್ತಿಗೆ ವರದಿ ಮಾಡಬೇಕಿತ್ತು; ಆದರೆ ಅದಕ್ಕೂ ಕೆಲವು ಗಂಟೆಗಳ ಮೊದಲು ಅವರು ರಾಜೀನಾಮೆ ನೀಡಿದರು. ಯೋಜನೆಗಳಿಗೆ ಖರ್ಚು ಮಾಡಲು ಪ್ರಧಾನಿ ಟ್ರುಡೊ ಅವರು (ಸರಕಾರಿ ತಿಜೋರಿಯನ್ನು) ಬೊಕ್ಕಸವನ್ನು ತೆರೆದಿದ್ದಾರೆ ಅವರ ಈ ನೀತಿಯ ಬಗ್ಗೆ 56 ವರ್ಷದ ಫ್ರೀಲ್ಯಾಂಡ್ ಟೀಕಿಸಿದರು. “ಬೆಳೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆನಡಾಕ್ಕೆ ಇದನ್ನು ಪೂರೈಸಲು ಸಾಧ್ಯವಿಲ್ಲ’, ಎಂದು ಅವರು ಹೇಳಿದರು.

ಟ್ರುಡೊಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, ಫ್ರೀಲ್ಯಾಂಡ್ ಅವರು ಕೆನಡಾವನ್ನು ಉತ್ತಮ ಮಾರ್ಗದಲ್ಲಿ ಒಯ್ಯುವುದಕ್ಕಾಗಿ ಕಳೆದ ಕೆಲವು ವಾರಗಳಿಂದ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ನಡೆಯುತ್ತಿದೆ.  ಡಿಸೆಂಬರ್ 13ರಂದು ನಿಮ್ಮ ಸಚಿವ ಸಂಪುಟದಲ್ಲಿ ನನ್ನನ್ನು ಹಣಕಾಸು ಖಾತೆಯಿಂದ ಬಿಡುಗಡೆ ಮಾಡಿ ಬೇರೆ ಇಲಾಖೆಯ ಜವಾಬ್ದಾರಿ ನೀಡಲಿದ್ದೀರಿ ಎಂದು ಹೇಳಿದ್ದೀರಿ. ಆನಂತರ, ಸಚಿವ ಸಂಪುಟವನ್ನು ತೊರೆಯುವುದು, ಇದೇ ನನಗಾಗಿ ಅತ್ಯುತ್ತಮ ಮತ್ತು ಏಕೈಕ ಕಾರ್ಯಸಾಧ್ಯವಾದ ಆಯ್ಕೆಯಾಗಿದೆ ಎಂದು ನಾನು  ಅರಿತುಕೊಂಡೆ’, ಎಂದಿದ್ದಾರೆ.

ರಾಜೀನಾಮೆ ನೀಡುವ ಸಿದ್ಧತೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ !

ಫ್ರೀಲ್ಯಾಂಡ್ ಇವರ ರಾಜೀನಾಮೆ ನಂತರ ನ್ಯೂ ಡೆಮಾಕ್ರಟಿಕ್ ಪಕ್ಷದ ನಾಯಕ ಜಗ್ಮೀತ್ ಸಿಂಗ್ ಅವರು ಟ್ರುಡೊ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಅಲ್ಲದೆ ಸಂಸತ್ತಿನ 23 ಸಂಸದರು ಅವರ ರಾಜೀನಾಮೆಗಾಗಿ ಪತ್ರ ಬರೆದಿದ್ದಾರೆ. ಮತ್ತೊಂದೆಡೆ, ಕೆನಡಾದ ಮಾಧ್ಯಮಗಳು “ಪ್ರಧಾನಿ ಟ್ರುಡೊ ಇವರೂ ಕೂಡ ರಾಜೀನಾಮೆ ನೀಡುವ ಸಿದ್ದತೆಯಲ್ಲಿದ್ದಾರೆ” ಎಂದು ವರದಿ ಮಾಡಿವೆ.