ಟಬಲಿಸಿ – ಜಾರ್ಜಿಯಾಗೆ ಯುರೋಪಿಯನ್ ಯುನಿಯನ್ ಸದಸ್ಯತ್ವ ಬೇಕಾಗಿದೆ. ದೇಶದಲ್ಲಿರುವ ನಾಗರಿಕರು ಅದನ್ನೇ ಬಯಸುತ್ತಾರೆ. ಹೀಗಿರುವಾಗ, ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುವುದು ಅವಶ್ಯಕ ಎಂದು ಜಾರ್ಜಿಯಾದ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮಿಖಾಯಿಲ್ ಕೊವೆಲಾಶವಿಲೀ ಇವರು ಹೇಳಿದರು. ಆಡಳಿತಕ್ಕೆ ಬಂದಿರುವ ಜಾರ್ಜಿಯನ್ ಡ್ರೀಮ್ ಪಾರ್ಟಿಯು ಯುರೋಪಿಯನ್ ಯೂನಿಯನ್‌ಗೆ ಸೇರುವ ನಿರ್ಧಾರವನ್ನು 2028 ರವರೆಗೆ ಮುಂದೂಡಿತ್ತು. ಆ ಹಿನ್ನೆಲೆಯಲ್ಲಿ ಕೋವೆಲಾಶವಿಲೀ ಈ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ, ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಯುರೋಪಿಯನ್ ಯೂನಿಯನ್‌ನ ದ್ವಂದ್ವ ನಿಲುವನ್ನು ಟೀಕಿಸಿದರು. “ಕೆಲವು ನಿದರ್ಶನಗಳಲ್ಲಿ ಯುರೋಪಿಯನ್ ಯೂನಿಯನ್ ಸಂಘಟನೆಯು ನಮ್ಮನ್ನು ಧಿಕ್ಕರಿಸುತ್ತದೆ ಮತ್ತು ಆಗಾಗ್ಗೆ ನಮ್ಮ ಜೊತೆ ಅಯೋಗ್ಯವಾಗಿ ವರ್ತಿಸುತ್ತದೆ. ಯುರೋಪಿಯನ್ ಯೂನಿಯನ್ ಮತ್ತು ಜಾರ್ಜಿಯಾದೊಂದಿಗೆ ಸಂಬಂಧವನ್ನು ಸುಧಾರಿಸಲು ನಾವು ಈ ಸೂತ್ರದ ಬಗ್ಗೆ ಸಂಘಟನೆಯ ಗಮನವನ್ನು ಸೆಳೆಯಲು ಇಚ್ಛಿಸುತ್ತೇವೆ” ಎಂದಿದ್ದಾರೆ.