Diwali 2023 : ದೀಪಾವಳಿಯ ಪ್ರತಿಯೊಂದು ದಿನದ ಆಧ್ಯಾತ್ಮಿಕ ಭಾವಾರ್ಥವನ್ನರಿತು ಆನಂದೋತ್ಸವವನ್ನು ಆಚರಿಸೋಣ

ಶ್ರೀ ಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ

ಜೀವನದ ಸರ್ವೋಚ್ಛ ಧ್ಯೇಯವಾಗಿರುವ ಆನಂದಪ್ರಾಪ್ತಿಗಾಗಿ ನಾವು ಜೀವನ ಪ್ರವಾಸದಲ್ಲಿ ವಿವಿಧ ಮಾಧ್ಯಮಗಳನ್ನು ಹುಡುಕುತ್ತಾ ಆನಂದ ಪಡೆಯಲು ಪ್ರಯತ್ನಿಸುತ್ತೇವೆ. ಆ ಆನಂದವು ವಿವಿಧ ಮಾಧ್ಯಮಗಳಿಂದ ನಮಗೆ ಲಭಿಸುತ್ತದೆ. ಅಂತಹ ಆನಂದದ ಕ್ಷಣವನ್ನು ನೀಡಲು ಬರುವ ಒಂದು ದಿವ್ಯ ತೇಜೋಮಯ ಹಬ್ಬ ಎಂದರೆ ದೀಪಾವಳಿ.

ದೀಪಾವಳಿಯ ಅಂತರ್ಗತ ಬರುವ ಪ್ರತಿಯೊಂದು ದಿನ ಆಧ್ಯಾತ್ಮಿಕ ಭಾವಾರ್ಥವನ್ನು ಅರಿತುಕೊಂಡು ದೀಪಾವಳಿಯ ಪ್ರತಿಯೊಂದು ದಿನ ಆಧ್ಯಾತ್ಮಿಕ ಆನಂದವನ್ನು ಅನುಭವಿಸೋಣ. ಈ ದೀಪಾವಳಿಯ ಪ್ರತಿಯೊಂದು ದಿನವು ನಮ್ಮನ್ನು ಪ್ರತಿದಿನ ಮುಂದುಮುಂದಿನ ಆಧ್ಯಾತ್ಮಿಕ ಹಂತಕ್ಕೆ ಕರೆದುಕೊಂಡು ಹೋಗಲಿದೆ. ಆ ದೃಷ್ಟಿಯಿಂದ ನಾವು ದೀಪಾವಳಿಯ ಕಾಲಾವಧಿಯಲ್ಲಿ ಆಧ್ಯಾತ್ಮಿಕ ಸ್ತರದಲ್ಲಿ ಪ್ರತಿದಿನ ಹೇಗೆ ಪ್ರಯತ್ನಿಸಬೇಕು ? ಈ ವಿಷಯದಲ್ಲಿ ಲೇಖನವನ್ನು ನೀಡುವವರಿದ್ದೇವೆ. ಆ ಪ್ರಕಾರ ಪ್ರಯತ್ನಿಸಿ ನಾವು ತೇಜೋನಿಧಿ ಭಗವಂತನ ಕೃಪೆಯನ್ನು ಸಂಪಾದಿಸೋಣ.

ಆಧ್ಯಾತ್ಮಿಕ ದೀಪಾವಳಿಯನ್ನು ಆಚರಿಸೋಣ

ದೀಪಾವಳಿಯಂದು  ಬಾಹ್ಯ ದೀಪಗಳ ದೀಪೋತ್ಸವ ಸಹಿತ ಆಂತರಿಕ ಗುಣದೀಪಗಳಿಂದಲೂ ನಮ್ಮ ಮನಮಂದಿರವನ್ನು ಬೆಳಗಿ ಬಿಡೋಣ. ನಮ್ಮ ಮನರೂಪೀ ಗರ್ಭಗುಡಿಯಲ್ಲಿರುವ ಭಗವತ್ ಮೂರ್ತಿಯ ದಿವ್ಯ ರೂಪವನ್ನು ಆ ದೀಪ ಪ್ರಕಾಶದಿಂದ ದಿಟ್ಟಿಸಿ ನೋಡೋಣ ಮತ್ತು ಅದರ ಆರಾಧನೆಯನ್ನು ಮಾಡೋಣ. ಈ ರೀತಿಯಲ್ಲಿ ಈ ದೀಪಾವಳಿಯನ್ನು ‘ಆಧ್ಯಾತ್ಮಿಕ ದೀಪೋತ್ಸವ’, ಆಧ್ಯಾತ್ಮಿಕ ಪ್ರಕಾಶೋತ್ಸವ’ ಮತ್ತು ಆಧ್ಯಾತ್ಮಿಕ ಆನಂದೋತ್ಸವ’ವನ್ನು ಆಚರಿಸೋಣ !

ಸರ್ವೋಚ್ಚ ಆಧ್ಯಾತ್ಮಿಕ ಇಚ್ಛಾಪೂರ್ತಿಗಾಗಿ ಗೋವತ್ಸದ್ವಾದಶಿಯಂದು ಕೃತಜ್ಞತೆಯಿಂದ ಗೋವಿನ ಹಾಗೂ ಕರುವಿನ ಪೂಜೆಯನ್ನು  ಮಾಡಲಾಗುತ್ತದೆ

ಕಾಮಧೇನುವಿನ ಸ್ವರೂಪವಾಗಿರುವ ಗೋಮಾತೆಯನ್ನು  ನಾವು ಗೋವತ್ಸ ದ್ವಾದಶಿಯ ದಿನದಂದು ಪೂಜೆ ಮಾಡಿ ಅವಳ ಕೃಪಾಶೀರ್ವಾದವನ್ನು ಗಳಿಸೋಣ!

ದೀಪಾವಳಿ ಹಬ್ಬಕ್ಕೆ ಜೋಡಿಸಿ ಬರುವ ಮೊದಲನೇ ದಿನವೆಂದರೆ ಗೋವತ್ಸ ದ್ವಾದಶಿ ! ಇದನ್ನು ‘ಗೋವತ್ಸ ದ್ವಾದಶಿ’ ಎಂದಲೂ ಕರೆಯುತ್ತಾರೆ. ಇದು ಕೃತಜ್ಞತೆಯ ವ್ರತವಾಗಿದೆ. ಈ ದಿನ ಹಸುವಿನ ಮತ್ತು ಅದರ ಕರುವಿನ ಪೂಜೆಯನ್ನು ಮಾಡಲಾಗುತ್ತದೆ. ಗೋವತ್ಸ ದ್ವಾದಶಿ ಎಂದರೆ ಈ ದಿನ ಪೃಥ್ವಿಲೋಕದಲ್ಲಿನ ಎಲ್ಲ ಹಸುಗಳಿಗೆ ವಿಷ್ಣುಲೋಕದಲ್ಲಿನ ಹಸುಗಳ ಸ್ವರೂಪ ಪ್ರಾಪ್ತವಾಗುತ್ತದೆ. ಅಂದರೆ ಅವುಗಳಿಗೆ ದೈವತ್ವ ಪ್ರಾಪ್ತವಾಗುತ್ತದೆ, ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಸುವನ್ನೇ ಕಾಮಧೇನು ಎಂದು ಕರೆಯುತ್ತಾರೆ. ಈ ಕಾಮಧೇನು ಎಲ್ಲ ಇಚ್ಛೆಗಳನ್ನು ಪೂರ್ತಿ ಮಾಡುತ್ತದೆ. ನಾವೆಲ್ಲರೂ ಸಾಧನೆ ಮಾಡುತ್ತಿದ್ದೇವೆ. ಸಾಧನೆ ಮತ್ತು ಈಶ್ವರಪ್ರಾಪ್ತಿಯೇ ನಮ್ಮ ಆದ್ಯತೆಯಾಗಿದೆ ಮತ್ತು ಇದೇ ನಮ್ಮ ಜೀವನದ ಧ್ಯೇಯವಾಗಿದೆ. ‘ಈಶ್ವರಪ್ರಾಪ್ತಿ’ ಎಂಬ ನಮ್ಮ ಸವೋಚ್ಚ ಆಧ್ಯಾತ್ಮಿಕ ಇಚ್ಛೆಯನ್ನು ಪೂರ್ಣಗೊಳಿಸಲು ನಾವೆಲ್ಲರೂ ಈ ಗೊವತ್ಸ ದ್ವಾದಶಿಯಂದು ಕಾಮಧೇನು, ಗೋಮಾತೆಯ ಬಳಿ ಪ್ರಾರ್ಥಿಸೋಣ. ಅವಳ ಬಳಿ ಇದನ್ನೇ ಪ್ರಾರ್ಥನೆ ಮಾಡೋಣ. ಇದನ್ನೇ ಪ್ರಾರ್ಥನೆ ಮಾಡೋಣ. ಮತ್ತು ಅವಳ ಕೃಪಾಶೀರ್ವಾದವನ್ನು ಪಡೆದುಕೊಳ್ಳೋಣ !

– ಶ್ರೀ ಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ (೭.೧೧.೨೦೨೩)