೧. ಅತಿಕ್ರಮಣಕಾರರಿಗೆ ಪುನರ್ವಸತಿ ಕಲ್ಪಿಸುವುದರ ಸಂದರ್ಭದಲ್ಲಿ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದೆಹಲಿ ಸರಕಾರ, ಆಡಳಿತಗಾರರು ಮತ್ತು ಇತರ ಸ್ಥಳೀಯ ಸ್ವಾಯತ್ತ ಸಂಸ್ಥೆಗಳು ಯಾವುದೇ ನೋಟೀಸ್ ಅಥವಾ ಮುನ್ಸೂಚನೆಯನ್ನು ನೀಡದೆ ೨೦.೯.೨೦೨೨ ರಿಂದ ಕೊಳಗೇರಿಯಲ್ಲಿನ (ಸ್ಲಮ್) ಮನೆಗಳನ್ನು ಕೆಡವಲು ಪ್ರಾರಂಭಿಸಿದ ಬಗ್ಗೆ ಅಲ್ಲಿನ ನಿವಾಸಿಗಳು ದೆಹಲಿ ಉಚ್ಚ ನ್ಯಾಯಾಲಯದ ಓರ್ವ ಸದಸ್ಯರ ಪೀಠದ ಮುಂದೆ ಅರ್ಜಿ ಯನ್ನು ದಾಖಲಿಸಿದರು. ಅದರಲ್ಲಿ ‘ಅವರ ಪುನರ್ವಸತಿ ಆಗದೇ ಈ ಕಾರ್ಯವನ್ನು ಮಾಡಬಾರದು, ಅದೇ ರೀತಿ ‘ಸ್ಲಮ್ ರಿಹ್ಯಾಬಿಲಿಟೇಶನ್ ಲೋಕೇಶನ್ ಪಾಲಿಸಿ, ೨೦೧೫’ ಕ್ಕನುಸಾರ ಮೊದಲು ಸಮೀಕ್ಷೆಯನ್ನು ಮಾಡಿ ಅವರಿಗೆ ಪರ್ಯಾಯ ಸ್ಥಳವನ್ನು ಕೊಡಬೇಕು’, ಎಂಬ ಬೇಡಿಕೆಯನ್ನು ಮಾಡಿದ್ದರು.
೨. ೧.೧.೨೦೦೬ ಕ್ಕಿಂತ ಮೊದಲು ವಾಸಿಸುತ್ತಿದ್ದ ಗುಡಿಸಲುವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ವಿಷಯದಲ್ಲಿ ಸಮೀಕ್ಷೆಯನ್ನು ಮಾಡುವುದು !
ಸರ್ವೋಚ್ಚ ನ್ಯಾಯಾಲಯದ ಇಂತಹ ಕೆಲವು ನಿರ್ಣಯಗಳಿವೆ. ಈ ನಿಲುವಿಗನುಸಾರ (ಪಾಲಿಸಿಗನುಸಾರ) ಗುಡಿಸಲುವಾಸಿಗಳು ೧.೧.೨೦೦೬ ರ ಮೊದಲು (ನಿಶ್ಚಯಿಸಿದ ದಿನಾಂಕದ ಮೊದಲು) ಅಲ್ಲಿ ವಾಸಿಸುತ್ತಿದ್ದರೆ, ಅವರನ್ನು ಕೊಳಗೇರಿಯಿಂದ ತೆಗೆದು ಅವರ ಪುನರ್ವಸತಿ ಮಾಡಬೇಕು. ಅದಕ್ಕನುಸಾರ ‘ದೆಹಲಿ ಅರ್ಬನ್ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್ ಎಕ್ಟ್ ೨೦೧೦ (‘ದುಸಿಬ’ ಕಾಯದೆ) ಮತ್ತು ದೆಹಲಿ ಸ್ಲಮ್ ಎಂಡ್ ಜೆಜೆ ರಿಹ್ಯಾಬಿಲಿಟೇಶನ್ ಎಂಡ್ ರಿಲೋಕೇಶನ್ ಪಾಲಿಸಿ, ೨೦೧೫’ ಕ್ಕನುಸಾರ ಸರಕಾರ ಸ್ಥಳೀಯ ಸ್ವಾಯತ್ತ ಸಂಸ್ಥೆಯ ಮೂಲಕ ಒಂದು ಸಮೀಕ್ಷೆಯನ್ನು ಆರಂಭಿಸಿತು. ಅದರ ಮೂಲಕ ಗುಡಿಸಲು ವಾಸಿಗಳ ಸಂಖ್ಯೆ, ವಸತಿ ನಿರ್ಮಾಣವಾಗಿರುವುದರ ಕಾಲಾವಧಿ ಮತ್ತು ೧.೧.೨೦೦೬ ಕ್ಕೂ ಮೊದಲು ನೆಲೆಗೊಂಡಿರುವವರ ಸಂಖ್ಯೆಯ ನೋಂದಣಿಯನ್ನು ಮಾಡಲಾಯಿತು.
೩. ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಅತಿಕ್ರಮಣಕಾರಿಗಳಿಗಾಗಿ ಸರಕಾರದ ಕಾನೂನು !
ದೆಹಲಿ ಸರಕಾರ ಮತ್ತು ಇತರ ಸ್ಥಳೀಯ ಸ್ವಾಯತ್ತ ಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದ ‘ಸುದಾಮಾ ಸಿಂಹ ವಿರುದ್ಧ ದೆಹಲಿ ಸರಕಾರ’ ಈ ಖಟ್ಲೆಯ ನಿರ್ಣಯಕ್ಕನುಸಾರ ಯಾವ ನಿರ್ಣಯವನ್ನು ತೆಗೆದುಕೊಂಡಿತೆಂದರೆ, ದೆಹಲಿಯು ಅಂತರರಾಷ್ಟ್ರೀಯ ಸ್ತರದ ಸ್ಥಳವಾಗಿದ್ದು ಅದು ದೇಶದ ರಾಜಧಾನಿ ಆಗಿದೆ. ಆದ್ದರಿಂದ ಇಲ್ಲಿ ಗುಡಿಸಲುಗಳು ನಿರ್ಮಾಣ ವಾಗಬಾರದು. ಆ ಸಮಯದಲ್ಲಿ ಗುರುದ್ವಾರ ಸಿಲ್ಲಾಮಪುರ, ಚಂದ್ರಪುರ ರೈಲ್ವೇ ಲೈನ್ಸ ಅಥವಾ ಸರೋಜಿನಿ ನಗರ ಮತ್ತು ಕಸ್ತೂರ್ಬಾನಗರದ ಸಮೀಪದ ಜನರಿಗಾಗಿಯೂ ಈ ಕಾನೂನನ್ನು ಸಿದ್ಧಪಡಿಸಲಾಯಿತು. ಸರಕಾರ ಕೈಯಲ್ಲಿ ತೆಗೆದುಕೊಂಡಿರುವ ಸಮೀಕ್ಷೆಗನುಸಾರ ‘ನ್ಯಾಶನಲ್ ಕೆಪಿಟಲ್ ಟೆರಿಟರೀ ಆಫ್ ದೆಹಲಿ’ ಯಲ್ಲಿನ ವಸತಿಗಳಲ್ಲಿ ಆರೋಗ್ಯ ಸುರಕ್ಷೆ, ಸ್ವಚ್ಛತೆ, ತ್ಯಾಜ್ಯ ಜಲ ವ್ಯವಸ್ಥೆಯ ಸೌಲಭ್ಯ ಮತ್ತು ಮಕ್ಕಳಿಗಾಗಿ ಶಾಲೆ ಮತ್ತು ಆಸ್ಪತ್ರೆಗಳಿವೆಯೇ ?’, ಎಂಬುದನ್ನು ನೋಡಲಾಯಿತು. ಈ ಸಮೀಕ್ಷೆಯಲ್ಲಿ ಗಮನಕ್ಕೆ ಬಂದ ಅಂಶವೆಂದರೆ ೩೧.೨.೨೦೦೨ರ ಮೊದಲು ಅಲ್ಲಿ ಸುಮಾರು ೫೦ ಮನೆಗಳಿದ್ದವು ಮತ್ತು ‘ದುಸೀಬ’ ಕಾನೂನಿನ ವ್ಯವಸ್ಥೆಗನುಸಾರ ಅವರನ್ನು ಅಲ್ಲಿಂದ ತೆಗೆಯುವುದು ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವುದು, ಎಂಬ ಯೋಜನೆಯಿತ್ತು. ಈ ಕಾನೂನು ರೂಪಿಸುವುದರ ಹಿಂದಿನ ಉದ್ದೇಶ ಕೇವಲ ಸಣ್ಣಸಣ್ಣ ಗುಡಿಸಲುಗಳಲ್ಲಿರುವ ಜನರನ್ನು ಬೇರೆÀಡೆಗೆ ಸ್ಥಳಾಂತರ ಮಾಡುವುದಾಗಿತ್ತು. ‘ಈ ಕಾನೂನು ರೂಪಿಸುವಾಗ ೧.೧.೨೦೧೫ ರ ನಂತರ ದೆಹಲಿಯ ಪರಿಸರದಲ್ಲಿ ಒಂದು ಗುಡಿಸಲು ಕೂಡ ನಿರ್ಮಾಣವಾಗಬಾರದು, ಎಂಬುದು ಸ್ಪಷ್ಟವಾಗಿತ್ತು.
೪. ಮತಪೆಟ್ಟಿಗೆಗಾಗಿ ರಾಜಕಾರಣಿಗಳಿಂದ ಅತಿಕ್ರಮಣಕಾರಿಗಳ ವೈಭವೀಕರಣ !
ಇಂದು ದೆಹಲಿಯಲ್ಲಿ ಸ್ಥಿತಿ ಬಹಳ ವಿಚಿತ್ರವಾಗಿದೆ. ಇಂದು ಕೂಡ ದೆಹಲಿಯಲ್ಲಿ ಅನೇಕ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮತಾಂಧ ಮುಸಲ್ಮಾನ ನುಸುಳುಕೋರರು ಅನಧಿಕೃತವಾಗಿ ವಾಸಿಸುತ್ತಿದ್ದಾರೆ. ಮತಪೆಟ್ಟಿಗೆಯ ಲಾಲಸೆ ಯಿಂದ ಅಲ್ಲಿನ ಆಡಳಿತದವರು ಇಂತಹ ನುಸುಳುಕೋರರಿಗೆ ಭದ್ರ ಮನೆಗಳನ್ನು ಮತ್ತು ಅನೇಕ ಸೌಲಭ್ಯಗಳನ್ನು ಘೋಷಣೆ ಮಾಡಿದ್ದಾರೆ. ಆದ್ದರಿಂದ ಭಾರತದಲ್ಲಿ ಸರಕಾರಿ ಆಸ್ತಿಯ ಮೇಲೆ ಅತಿಕ್ರಮಣ ಮಾಡುವುದು ಸುಲಭವಾಗಿದೆ. ಅತಿಕ್ರಮಣ ಮಾಡುವವರು ಮತಾಂಧರಾಗಿದ್ದರೆ ಅವರಿಗೆ ಸೌಲಭ್ಯಗಳನ್ನು ಹಂಚಲು ಎಲ್ಲ ರಾಜಕೀಯ ಪಕ್ಷಗಳಲ್ಲ್ಲಿ ಸ್ಪರ್ಧೆ ಏರ್ಪಡುತ್ತದೆ. ಅಂದರೆ ಇದರ ಎಲ್ಲ ಭಾರ ತೆರಿಗೆದಾರರ ಮೇಲೆ ಅಂದರೆ ಹಿಂದೂಗಳ ಮೇಲೆ ಬೀಳುತ್ತದೆ.
೫. ಪುನರ್ವಸತಿಯ ಬೇಡಿಕೆಯನ್ನು ಮಾಡುವ ಅರ್ಜಿಯನ್ನು ದೆಹಲಿ ಉಚ್ಚ ನ್ಯಾಯಾಲಯ ನಿರಾಕರಿಸುವುದು !
೧೧.೪.೨೦೨೨ ರಂದು ದೆಹಲಿ ಉಚ್ಚ ನ್ಯಾಯಾಲಯ ಸರೋಜಿನಿ ನಗರದ ವಸತಿಯಲ್ಲಿರುವ ಸೀತಾದೇವಿಯ ಪುನರ್ವಸತಿಗಾಗಿ ಮಾಡಿದ ಅರ್ಜಿಯನ್ನು ನಿರಾಕರಿಸಿತು. ಈ ಪ್ರಕರಣದಲ್ಲಿ ಸರಕಾರ ಅಥವಾ ಸ್ಥಳೀಯ ಸ್ವಾಯತ್ತ ಸಂಸ್ಥೆಗಳು ವಿರೋಧಿಸಿದವು. ಅರ್ಜಿ ದಾರಳಿಗೆ ‘ದುಸೀಬ’ ಕಾನೂನಿನ ಯಾವುದೇ ರಕ್ಷಣೆ ಸಿಗುವುದಿಲ್ಲ, ಎಂಬುದನ್ನು ಸ್ಪಷ್ಟ ಪಡಿಸಲಾಯಿತು. ಇವರೆಲ್ಲರೂ ನ್ಯಾಯಾಲಯ ಸಮೀಕ್ಷೆ ಮಾಡಲು ಹೇಳಿದ ನಂತರ ೨೦೦೬ ರ ನಂತರ ಅತಿಕ್ರಮಣ ಮಾಡಿದ್ದಾರೆ ಎಂಬುದನ್ನು ಸಾಕ್ಷಿ ಸಹಿತ ಸಿದ್ಧಪಡಿಸಿದರು. ಈ ಅರ್ಜಿಯನ್ನು ನಿರಾಕರಿಸುವಾಗ ಉಚ್ಚ ನ್ಯಾಯಾಲಯ ಸರ್ವೋಚ್ಚ ನ್ಯಾಯಾಲಯದ ತೀರ್ಪುಪತ್ರ ಮತ್ತು ‘ಅಜಯ ಮಾಕನ್ ವಿರುದ್ಧ ಕೇಂದ್ರ ಸರಕಾರ’ ಖಟ್ಲೆಯಲ್ಲಿನ ತೀರ್ಪುಪತ್ರದ ಆಧಾರವನ್ನು ನೀಡಿತು. ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು, ‘ಗುಡಿಸಲುದಾರನಿಗೆ ಅಥವಾ ಅತಿಕ್ರಮಣ ಮಾಡುವ ವ್ಯಕ್ತಿಗಳಿಗೆ ‘ದುಸೀಬ’ ಕಾನೂನು ಅತಿಕ್ರಮಣ ಮಾಡಲು ಅನುಮತಿ ಕೊಡುವುದಿಲ್ಲ.’ ಕೆಲವೊಮ್ಮೆ ಬುಲ್ಡೋಝರ್ ಬಂದರೂ ಗುಡಿಸಲುದಾರರು ಮನೆಗಳನ್ನು ಬಿಡುವುದಿಲ್ಲ ಎಂಬುದನ್ನು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತು. ಆದ್ದರಿಂದ ಇಚ್ಛೆಯಿಲ್ಲದಿದ್ದರೂ ಸ್ಥಳೀಯ ಸ್ವಾಯತ್ತ ಸಂಸ್ಥೆಗೆ ಮನೆಯಲ್ಲಿನ ವಸ್ತು ಸಹಿತ ಮನೆಯನ್ನು ಉರುಳಿಸಲು ಪ್ರಾರಂಭಿಸಬೇಕಾಗುತ್ತದೆ. ಆದ್ದರಿಂದ ಅವರ ಹಾನಿಯಾಗಬಾರದೆಂದು ಅವರಿಗೆ ಸಮೀಕ್ಷೆ ಮಾಡಿ ಪರ್ಯಾಯ ಮನೆ ಸಿಗಬೇಕೆಂಬುದೇ ಅವರ ಉದ್ದೇಶವಿತ್ತು. ಇದರ ಅರ್ಥ ಯಾರು ಕೂಡ, ಯಾವಾಗಲಾದರೂ ಅತಿಕ್ರಮಣ ಮಾಡಬಹುದು ಮತ್ತು ಮೂಲಭೂತ ಹಕ್ಕಿಗಾಗಿ ನ್ಯಾಯಾಲಯಕ್ಕೆ ಹೋಗಬಹುದು, ಹೀಗಾಗುವುದಿಲ್ಲ.
೬. ಅನಧಿಕೃತ ಗುಡಿಸಲುಗಳನ್ನು ಕಟ್ಟುವವರಿಗೆ ನ್ಯಾಯಾಲಯದ ಸ್ಪಷ್ಟ ಸಂದೇಶ !
ಉಚ್ಚ ನ್ಯಾಯಾಲಯದ ನಿರ್ಣಯ ಅತಿಕ್ರಮಣ ಮಾಡಿದವರ ವಿರುದ್ಧ ಹೋದ ನಂತರ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತಾರೆ. ಪ್ರತಿಯೊಬ್ಬ ಗುಡಿಸಲುದಾರನಿಗೆ ಪರ್ಯಾಯ ಮನೆ ಮತ್ತು ಮನೆಯಲ್ಲಿನ ಪ್ರತಿಯೊಬ್ಬನಿಗೆ ೧ ಲಕ್ಷ ರೂಪಾಯಿ ನೀಡಬೇಕು, ಎಂದು ಅರ್ಜಿ ಹಾಕುತ್ತಾರೆ. ಸುದೈವದಿಂದ ನ್ಯಾಯಾಲಯ ಪ್ರಶಂಸಾರ್ಹ ನಿರ್ಣಯ ನೀಡಿ ಇಂತಹ ಅರ್ಜಿಯನ್ನು ನಿರಾಕರಿಸಿತು. ಈ ಮೂಲಕ ಅತಿಕ್ರಮಣ ಮಾಡುವವರಿಗೆ ಅಥವಾ ಅನಧಿಕೃತ ಗುಡಿಸಲುಗಳನ್ನು ಕಟ್ಟುವವರಿಗೆ ಸಂದೇಶ ನೀಡಲಾಗಿದೆ. ಆದರೂ ಈಗಲೂ ಕೆಲವರು ಅತಿಕ್ರಮಣ ಮಾಡುವವರ ತಥಾಕಥಿತ ಹಕ್ಕಿಗಾಗಿ ಅರ್ಜಿ ಹಾಕಿ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ಸಮಯವನ್ನು ಹಾಳು ಮಾಡುತ್ತಾರೆ. ಇದು ನಿಲ್ಲಬೇಕು.’
– ಪೂ. ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೬.೭.೨೦೨೩)