ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸನಾತನದಲ್ಲಿ ಪ್ರಾರಬ್ಧವನ್ನು ಎದುರಿಸಲು ಅಥವಾ ಪ್ರಾರಬ್ಧ ತೀವ್ರವಾಗಿದ್ದರೆ ಅದನ್ನು ಸಹಿಸಲು ಯೋಗ್ಯವಾದ ಸಾಧನೆಯನ್ನು ಕಲಿಸಲಾಗುತ್ತದೆ. ಸನಾತನದ ಸಾಧಕರು ನಿಷ್ಕಾಮ ಸಾಧನೆಯನ್ನು ಮಾಡುತ್ತಾರೆ. ಸನಾತನದ ಸತ್ಸಂಗಗಳಲ್ಲಿ ಸಾಧಕರು ತಮಗೆ ಬಂದ ಕೇವಲ ಆಧ್ಯಾತ್ಮಿಕ ಸ್ತರದ ಅನುಭೂತಿಗಳನ್ನು ಹೇಳುತ್ತಾರೆ.

ರಾಜದಂಡದ ಅಂಕುಶವಿಲ್ಲದ್ದರಿಂದ ಸಮಾಜದ ಸ್ಥಿತಿ ಅರಾಜಕವಾಗಿದೆ !

‘ಮನುಷ್ಯನು ಮೂಲತಃ ಮತ್ತು ಸ್ವಭಾವತಃ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡವಳಿಕೆಯ ಮೇಲೆ ರಾಜದಂಡದ ಅಂಕುಶವಿಲ್ಲದಿದ್ದರೆ ಅವನು ಅನಿಯಂತ್ರಿತವಾಗಲು ತಡವಾಗಲಾರದು. ಅಂತಹ ಮನುಷ್ಯನನ್ನು ನಿಯಂತ್ರಿಸುವುದು, ಧರ್ಮದ ಮತ್ತು ದಂಡದ ಕರ್ತವ್ಯವಿದೆ.

ಎಲ್ಲ ಪರಿಸ್ಥಿತಿಗಳಲ್ಲಿ ಸಾಧನೆಯ ದೃಷ್ಟಿಕೋನವನ್ನು ಕೃತಿಯಲ್ಲಿ ತರಲು ಸಾಧ್ಯವಾಗಬೇಕೆಂದು ಸಾಧನೆಯ ಪ್ರಯತ್ನವನ್ನು ಅಂತರ್ಮನಸ್ಸಿನಿಂದ ಮಾಡುವುದು ಆವಶ್ಯಕ ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ

ಕುಟುಂಬ, ವೈಯುಕ್ತಿಕ ಜೀವನ, ಪ್ರಸಾರ ಮತ್ತು ಆಶ್ರಮ ಹೀಗೆ ಎಲ್ಲ ಕಡೆಗಳಲ್ಲಿ ಪ್ರಾಮಾಣಿಕವಾಗಿ, ತಳಮಳದಿಂದ ಹಾಗೂ ಪಾರದರ್ಶಕರಾಗಿದ್ದು ಸಾಧನೆಗಾಗಿ ಪ್ರಯತ್ನಿಸುವುದೇ ವ್ಯಕ್ತಿಗತ ಆಧ್ಯಾತ್ಮಿಕ ಉನ್ನತಿಯ ವ್ಯಷ್ಟಿ ಧ್ಯೇಯ ಮತ್ತು ಹಿಂದೂ ರಾಷ್ಟ ಸ್ಥಾಪನೆಯ ಸಮಷ್ಟಿ ಧ್ಯೇಯವನ್ನು ಸಾಧಿಸುವ ಗುರುಕೀಲಿಕೈಯಾಗಿದೆ !

ಸಹಜಭಾವದಲ್ಲಿರುವ ಇತರರಿಗೆ ಸಹಾಯ ಮಾಡುವ ಮತ್ತು ಸಂತರು ಹಾಗೂ ಗುರುಗಳ ಬಗ್ಗೆ ವಾತ್ಸಲ್ಯವನ್ನು ಹೊಂದಿರುವ ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಪ್ರಭು (೪ ವರ್ಷ)

ಪೂ. ರಾಧಾ ಪ್ರಭು ಅಜ್ಜಿಯವರು ಸಾಧಕರ ಜೊತೆಗೆ ಜಪ ಮಾಡಲು ಕುಳಿತುಕೊಳ್ಳುತ್ತಾರೆ. ಆ ಸಮಯದಲ್ಲಿ ಪೂ. ಭಾರ್ಗವರಾಮ ನಾಮಜಪಕ್ಕಾಗಿ ಕುಳಿತುಕೊಳ್ಳುತ್ತಾರೆ. ನಾಮಜಪವಾದ ಕೂಡಲೇ ಪೂ. ಭಾರ್ಗವರಾಮ ಪೂ. ಅಜ್ಜಿಯ ಚರಣಗಳ ಕೆಳಗಿಟ್ಟಿರುವ ಫುಟ್‌ರೆಸ್ಟ್ ಮತ್ತು ಆಸನ (ಮ್ಯಾಟ)ವನ್ನು ತಕ್ಷಣವೇ ತೆಗೆದು ಇಡುತ್ತಾರೆ.

ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳಸ್ವಭಾವದೋಷ ಹಾಗೂ ಅಹಂ ಇವುಗಳ ನಿರ್ಮೂಲನೆಯಿಂದ ಜೀವವು ಬೇಗನೆ ಪೂರ್ಣತ್ವಕ್ಕೆ ಹೋಗುತ್ತದೆ !

ಸಾಧನೆಯ ಅನೇಕ ಮಾರ್ಗಗಳಿವೆ. ನಾವು ‘ಓಂ’ ಕಾರದ ಸಾಧನೆ ಮಾಡಿದೆವು, ಧ್ಯಾನಧಾರಣೆ ಮಾಡಿದೆವು, ಅಲಿಪ್ತರಾಗಿದ್ದು ಅಜ್ಞಾತ ಸ್ಥಳಕ್ಕೆ ಹೋಗಿ ಸಾಧನೆಯನ್ನು ಮಾಡಿದೆವು ಅಥವಾ ಶಕ್ತಿಪಾತಯೋಗಾನುಸಾರ ಸಾಧನೆಯನ್ನು ಮಾಡಿದೆವು, ಆದರೂ ಈ ಸಾಧನೆಯು ಪೂರ್ಣತ್ವಕ್ಕೆ ಹೋದರೆ ಮಾತ್ರ ಆ ಜೀವಕ್ಕೆ ಮೋಕ್ಷಪ್ರಾಪ್ತಿಯಾಗುತ್ತದೆ.

೨೦೨೫ ರ ತನಕ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ ! – ಪರಾತ್ಪರ ಗುರು ಡಾ. ಆಠವಲೆ

ಸಂತರು ಹೇಳಿದಂತೆ ಆಪತ್ಕಾಲ ಮುಂದೆ ಹೋದರೂ ಯಾವುದೇ ಸಮಯದಲ್ಲಾದರೂ ಪ್ರಾರಂಭವಾಗಬಹುದು. ಕೊರೊನಾದಂತಹ ಸಾಂಕ್ರಾಮಿಕ ರೋಗಗಳ ಮಾಧ್ಯಮದಿಂದ ನಾವೆಲ್ಲರೂ ಇದನ್ನು ಅನುಭವಿಸಿದ್ದೇವೆ. ಮೂರನೇಯ ಮಹಾಯುದ್ಧವು ಯಾವುದೇ ಸಮಯದಲ್ಲಿ ಆಗಬಹುದು. ಆದ್ದರಿಂದ ಸಾಧಕರು ಆಪತ್ಕಾಲದ ಸಿದ್ಧತೆಯನ್ನು ಮುಂದುವರಿಸಬೇಕು.’

ಮದುವೆಯಾಗದ (ಅವಿವಾಹಿತ) ವಯಸ್ಕರ ಮಹಿಳೆಯರ ಹೆಸರುಗಳ ಮುಂದೆ ‘ಸುಶ್ರೀ’ ಎಂಬ ಉಪಾಧಿಯನ್ನು ಹಾಕಬೇಕು

ಕನ್ನಡದಲ್ಲಿ ಲಭ್ಯವಿರುವ ಉಪಾಧಿಗಳನ್ನು ಅಧ್ಯಯನ ಮಾಡುವ ಮೂಲಕ, ಸಂಸ್ಕೃತ ಭಾಷೆಯಲ್ಲಿ ಮದುವೆಯಾಗದ(ಅವಿವಾಹಿತ) ವಯಸ್ಕರ (೪೦ ವರ್ಷಕ್ಕಿಂತ ಮೇಲ್ಪಟ್ಟ) ಕನ್ಯೆಯರಿಗೆ (ಮಹಿಳೆಯರಿಗೆ) ‘ಸುಶ್ರೀ’ ಎಂಬ ಶೀರ್ಷಿಕೆಯನ್ನು ನೀಡುವುದು ಸೂಕ್ತವೆಂದು ತೋರುತ್ತದೆ.

ಸಾಧಕರ ಸೇವೆಯ ಜವಾಬ್ದಾರಿ ಇರುವವರು ಸಾಧಕರ ವ್ಯಷ್ಟಿ ಸಾಧನೆಯ ಕಡೆಗೂ ಗಾಂಭೀರ್ಯದಿಂದ ಗಮನ ನೀಡುವುದು ಆವಶ್ಯಕ !

‘ಗುರುಕಾರ್ಯವನ್ನು ಹೆಚ್ಚಿಸುವುದು’, ಸಮಷ್ಟಿ ಸಾಧನೆಯ ಒಂದು ಅಂಗವಾಗಿದ್ದರೆ, ‘ಸಾಧಕರ ಸಾಧನೆಯು ಉತ್ತಮವಾಗಲು ಪ್ರಯತ್ನಿಸುವುದು’, ಇದು ಸಮಷ್ಟಿ ಸಾಧನೆಯ ಎರಡನೇ ಅಂಗವಾಗಿದೆ. ಜವಾಬ್ದಾರ ಸಾಧಕರು ಎರಡೂ ಅಂಗಗಳಿಂದ ಸೇವೆಯನ್ನು ಮಾಡಿದರೆ, ಅವರ ಸೇವೆಯು ಪರಿಪೂರ್ಣವಾಗುವುದು.

ಇಂದಿನ ಹಿರಿಯ ನಾಗರಿಕರು : ಒಂದು ಸಕಾರಾತ್ಮಕ ಭಾಗ !

ಹಿರಿಯ ನಾಗರಿಕರಲ್ಲಿ ಶೇ. ೨೫ ರಿಂದ ೩೦ ರಷ್ಟು ವೃದ್ಧರು ಬಡತನರೇಖೆಯ ಕೆಳಗಿದ್ದಾರೆ. ಅವರ ಸ್ಥಿತಿ ಮಾತ್ರ ದಯನೀಯವಾಗಿದೆ. ದುರ್ಬಲ ಆರ್ಥಿಕ ಸ್ಥಿತಿ, ಅಸಮರ್ಪಕ ಆರೋಗ್ಯ ಸೌಲಭ್ಯಗಳು ಹಾಗೂ ಅಭದ್ರತೆಯಿಂದಾಗಿ ಈ ಹಿರಿಯ ನಾಗರಿಕರ ಗುಂಪಿನ ಬಗ್ಗೆ ಸಮಾಜ ಮತ್ತು ಸರಕಾರ ಗಮನ ಹರಿಸುವುದು ಅತ್ಯಂತ ಆವಶ್ಯಕವಾಗಿದೆ.

ಶಿಕ್ಷಣ ವ್ಯವಸ್ಥೆಗೆ ಪುರಾವೆಗಳ ಆಧಾರವಿರುವುದು ಆವಶ್ಯಕ !

ಮನುಷ್ಯನಿಗೆ ಭೌತಿಕ ಸಂಪನ್ನತೆಯನ್ನು ಪ್ರದಾನಿಸುವುದರೊಂದಿಗೆ ದೈವೀ ಸಂಪತ್ತು (ಚಾರಿತ್ರ್ಯ ನಿರ್ಮಿತಿ) ಪ್ರಾಪ್ತ ಮಾಡಿಕೊಡಬಹುದಾದ, ಮನುಷ್ಯನ ಆಂತರ್ಯದಲ್ಲಿರುವ ಶಕ್ತಿಗಳನ್ನು ಜಾಗೃತ ಮಾಡುವ, ಹಾಗೆಯೇ ಯಾವುದರಲ್ಲಿ ಕಲ್ಯಾಣಕರ ಧ್ಯೇಯದ ವರೆಗೆ ತಲುಪಿಸುವ ಸಾಮರ್ಥ್ಯವಿರುವುದೋ, ಅಂತಹ ಶಿಕ್ಷಣವು ಇಂದು ಬೇಕಾಗಿದೆ.