ಆಪತ್ಕಾಲೀನ ಪರಿಸ್ಥಿತಿಯಲ್ಲಿ ಉದ್ಭವಿಸುವ ಮಾನಸಿಕ ಸಮಸ್ಯೆಗಳಿಗೆ ಕೆಲವು ಪರಿಹಾರೋಪಾಯಗಳು

ನೆರೆ, ಭೂಕಂಪ, ಗಲಭೆ, ಮಹಾಯುದ್ಧ ಇತ್ಯಾದಿ ಆಪತ್ತುಗಳ ಸಮಯದಲ್ಲಿ ಅತ್ಯಂತ ಪ್ರತಿಕೂಲ ಪರಿಸ್ಥಿತಿ ಉದ್ಭವಿಸುತ್ತದೆ. ಇಂತಹ ಪ್ರಸಂಗಗಳಲ್ಲಿ ಎಲ್ಲೆಡೆ ವಿಧ್ವಂಸ, ಬೆಂಕಿ ತಗಲುವುದು, ಬೀದಿಗಳಲ್ಲಿ ಮೃತದೇಹಗಳು ಬಿದ್ದಿರುವುದು ಮುಂತಾದ ಘಟನೆಗಳು ಘಟಿಸುತ್ತವೆ. ಇಂತಹ ಘಟನೆಗಳನ್ನು ನೋಡಿ ಅಥವಾ ಕೇಳಿ ಅನೇಕರ ಮನಸ್ಸು ಅಸ್ಥಿರವಾಗುವುದು, ಮನಸ್ಸಿನ ಮೇಲೆ ಒತ್ತಡ ಬರುವುದು, ಕಾಳಜಿ ಅನಿಸುವುದು, ಭಯವಾಗುವುದು, ಪರಿಸ್ಥಿತಿಯನ್ನು ಸ್ವೀಕರಿಸಲು ಸಾಧ್ಯವಾಗದಿರುವುದು ಇತ್ಯಾದಿ ತೊಂದರೆಗಳಾಗುತ್ತವೆ. ಬಹಳಷ್ಟು ಜನರು ಸಂಬಂಧಿಕರಲ್ಲಿಯೂ ಭಾವನಾತ್ಮಕ ದೃಷ್ಟಿಯಿಂದ ಸಿಲುಕಿಕೊಳ್ಳುತ್ತಾರೆ. ಹೀಗಾದರೆ ಮಾನಸೋಪಚಾರತಜ್ಞರ ಸಹಾಯ ಪಡೆಯಬೇಕು. ಇದರೊಂದಿಗೆ ಈ ರೀತಿಯ ತೊಂದರೆಗಳಾಗಬಾರದೆಂದು, ಅಂದರೆ ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳದೇ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗಬೇಕೆಂದು ಮಾಡಬೇಕಾದ ಪರಿಹಾರೋಪಾಯಗಳನ್ನು ಮುಂದೆ ನೀಡಲಾಗಿದೆ. https://sanatanprabhat.org/kannada/43307.html ಈ ಲಿಂಕ್ ನಲ್ಲಿ ಇದರ ಕೆಲವು ಭಾಗಗಳನ್ನು ನಾವು ನೋಡಿದೆವು. ಇಂದು ಮುಂದಿನ ಭಾಗವನ್ನು ನೋಡೋಣ.

ಗಲಭೆಗಳು ನಡೆಯುತ್ತಿರುವಾಗ ತೆಗೆದುಕೊಳ್ಳಬೇಕಾದ ಸ್ವಯಂಸೂಚನೆ

ಯಾವಾಗ ನಾನು ವಾಸಿಸುವ ನಗರದಲ್ಲಿ ಗಲಭೆಗಳು ಆರಂಭವಾಗುವವೋ, ಆಗ ನನಗೆ ಇದು ಆಪತ್ಕಾಲ ಆರಂಭವಾದುದುರ ಲಕ್ಷಣವಾಗಿದೆ ಮತ್ತು ಕೇವಲ ಸಾಧನೆಯೇ ನನ್ನ ರಕ್ಷಣೆಯನ್ನು ಮಾಡಬಹುದು, ಎಂದು ಅರಿವಾಗುವುದು. ಆದುದರಿಂದ ನಾನು ಆವಶ್ಯಕವಿರುವ ಸುರಕ್ಷೆಯ ಉಪಾಯಯೋಜನೆಗಳನ್ನು ಮಾಡಿ ಭಾವಪೂರ್ಣವಾಗಿ ನಾಮಜಪ ಮಾಡುವೆನು.

ಸಂಬಂಧಿಕರಲ್ಲಿ ಭಾವನಾತ್ಮಕ ದೃಷ್ಟಿಯಿಂದ ಸಿಲುಕದಿರಲು ಸ್ವಯಂಸೂಚನೆ

೧. ಪ್ರಸಂಗ : ಭವಿಷ್ಯದಲ್ಲಿ ಸಂಭವಿಸಲಿರುವ ಮೂರನೇಯ ಮಹಾಯುದ್ಧದ ಕಾಲದಲ್ಲಿ ನನ್ನ ಕುಟುಂಬದವರ ಸ್ಥಿತಿ ಏನಾಗುವುದು ?, ಎಂದು ವಿಚಾರ ಬಂದು ನನಗೆ ತುಂಬಾ ಚಿಂತೆ (ಕಾಳಜಿ)ಯಾಗುತ್ತದೆ.

ತುರ್ತು ಸಮಯದಲ್ಲಿ ತೆಗೆದುಕೊಳ್ಳಬೇಕಾದ ಸ್ವಯಂಸೂಚನೆ

ಸ್ವಯಂಸೂಚನೆ ೧ : ಯಾವಾಗ ನನ್ನ ಕುಟುಂಬದವರು ಮೂರನೇಯ ಜಾಗತಿಕ ಮಹಾಯುದ್ಧದಲ್ಲಿ/ ಯುದ್ಧದಲ್ಲಿ ಬದುಕುಳಿಯಬಹುದೇ ?, ಎಂಬ ವಿಚಾರದಿಂದ ನನಗೆ ತುಂಬಾ ಚಿಂತೆಯಾಗುವುದೋ, ಆಗ ನಾನು ಅವರಿಗೆ ಈ ಮೊದಲೇ ಯುದ್ಧದ ಕಾಲದಲ್ಲಿ ತೆಗೆದುಕೊಳ್ಳಬೇಕಾದ ಕಾಳಜಿ ಮತ್ತು ಸಾಧನೆಯ ಮಹತ್ವದ ಬಗ್ಗೆ ಹೇಳಿದ್ದೇನೆ, ಎಂದು ನನಗೆ ಅರಿವಾಗುವುದು ಮತ್ತು ನಾನು ಶಾಂತವಾಗಿದ್ದು ನನ್ನ ಸಾಧನೆಯ ಪ್ರಯತ್ನವನ್ನು ಹೆಚ್ಚಿಸುವ ಕಡೆಗೆ ಗಮನ ಕೊಡುವೆನು.

ಸ್ವಯಂಸೂಚನೆ ೨ : ಯಾವಾಗ ನನ್ನ ಕುಟುಂಬದವರು ಮೂರನೇಯ ಜಾಗತಿಕ ಮಹಾಯುದ್ಧದಲ್ಲಿ/ಯುದ್ಧದಲ್ಲಿ ಬದುಕುಳಿಯುವರೇ ?, ಎಂಬ ವಿಚಾರದಿಂದ ನನಗೆ ಚಿಂತೆ(ಕಾಳಜಿ)ಯಾಗುವುದೋ, ಆಗ ಕುಟುಂಬದವರು ಸಾಧನೆಯನ್ನು ಮಾಡಿದರೆ ಈಶ್ವರನೇ ಅವರ ರಕ್ಷಣೆಯನ್ನು ಮಾಡುವನು, ಎಂದು ನನಗೆ ಅರಿವಾಗುವುದು. ಆದುದರಿಂದ ನಾನು ಅವರಿಗೆ ಈ ಅಂಶವನ್ನು ಹೇಳುವೆನು ಮತ್ತು ನನ್ನ ಸಾಧನೆಯ ಪ್ರಯತ್ನವನ್ನು ಹೆಚ್ಚಿಸುವ ಕಡೆಗೆ ಗಮನ ಕೊಡುವೆನು.

೨. ಪ್ರಸಂಗ : ನನ್ನ ಕುಟುಂಬದವರು ನೆರೆ ಬರುವ ಪ್ರದೇಶದಲ್ಲಿರುವುದರಿಂದ ನೆರೆ ಬಂದರೆ ಅವರ ಸ್ಥಿತಿ ಏನಾಗಬಹುದು ?, ಎಂಬ ವಿಚಾರದಿಂದ ನನಗೆ ಚಿಂತೆಯಾಗುತ್ತದೆ.

ತುರ್ತು ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಸ್ವಯಂಸೂಚನೆ

ಸ್ವಯಂಸೂಚನೆ : ಯಾವಾಗ ನನ್ನ ಕುಟುಂಬದವರು ವಾಸಿಸುತ್ತಿರುವ ಪ್ರದೇಶದಲ್ಲಿ ನೆರೆ ಬರುವುದೋ, ಆಗ ಅವರ ಜೀವ ಮತ್ತು ಆಗತ್ಯವಿರುವ ವಸ್ತುಗಳನ್ನು ಉಳಿಸಿಕೊಳ್ಳುವ ಬಗ್ಗೆ ಹೇಳಿ ಅಲ್ಲಿನ ಸ್ಥಳೀಯ ಆಡಳಿತದ ಸೂಚನೆಗಳ ಪಾಲನೆ ಮಾಡಲು ಹೇಳುವುದೇ, ನನ್ನಿಂದ ಅವರಿಗಾಗುವ ಸರ್ವೋತ್ತಮ ಸಹಾಯವಾಗಿದೆ, ಎಂದು ನನಗೆ ಅರಿವಾಗುವುದು ಮತ್ತು ನಾನು ಆ ರೀತಿ ಮಾಡುವೆನು, ಹಾಗೆಯೇ ನಾನು ಅವರಿಗೆ ನಾಮಜಪ ಮಾಡುವ ಕುರಿತು ಪ್ರೋತ್ಸಾಹವನ್ನು ನೀಡುವೆನು.

೩. ಪ್ರಸಂಗ : ಶೀಘ್ರಗತಿಯಲ್ಲಿ ಸಮೀಪಿಸುತ್ತಿರುವ ಆಪತ್ಕಾಲದ ಕುರಿತು ನನ್ನ ಅಳಿಯ ಮತ್ತು ಅವರ ಕುಟುಂಬದವರಿಗೆ ಗಾಂಭೀರ್ಯ ಅನಿಸುವುದಿಲ್ಲ ಎಂದು ನನಗೆ ಒತ್ತಡವಾಗುತ್ತದೆ.

ಪ್ರಸಂಗವು ಘಟಿಸುತ್ತಿರುವಾಗ ತೆಗೆದುಕೊಳ್ಳಬೇಕಾದ ಸ್ವಯಂಸೂಚನೆ

. ಯಾವಾಗ ಶೀಘ್ರಗತಿಯಲ್ಲಿ ಸಮೀಪಿಸುತ್ತಿರುವ ಆಪತ್ಕಾಲದ ಬಗ್ಗೆ ನನ್ನ ಅಳಿಯ ಮತ್ತು ಅವರ ಕುಟುಂದವರಿಗೆ ಗಾಂಭೀರ್ಯತೆ ಅನಿಸುವುದಿಲ್ಲವೋ ಮತ್ತು ಇದರಿಂದ ನನ್ನ ಮಗಳು ತೊಂದರೆಗಳನ್ನು ಸಹಿಸಬೇಕಾಗುವುದೆಂದು ನನಗೆ ಒತ್ತಡವಾಗುವುದೋ, ಆಗ ಇದರ ಬಗ್ಗೆ ಅವರಿಗೆ ಪುನಃ ಪುನಃ ಹೇಳಿದರೆ ಸಂಘರ್ಷ ನಿರ್ಮಾಣವಾಗಬಹುದು, ಎಂದು ನನಗೆ ಅರಿವಾಗುವುದು ಮತ್ತು ನಾನು ನನ್ನ ಮಗಳಿಗೆ ಆವಶ್ಯಕವಿರುವ ಸಿದ್ಧತೆಗಳನ್ನು ಮಾಡಲು ಹೇಳುವೆನು/ಆಪತ್ಕಾಲದಲ್ಲಿ ಬದುಕುಳಿಯಲು ಆವಶ್ಯಕವಾಗಿರುವ ಸಾಧನೆಯನ್ನು ಮಾಡಲು ಹೇಳುವೆನು.

. ಯಾವಾಗ ಶೀಘ್ರಗತಿಯಲ್ಲಿ ಸಮೀಪಿಸುತ್ತಿರುವ ಆಪತ್ಕಾಲದ ಬಗ್ಗೆ ನನ್ನ ಅಳಿಯ ಮತ್ತು ಅವರ ಕುಟುಂಬದವರಿಗೆ ಗಾಂಭೀರ್ಯ ಅನಿಸುವುದಿಲ್ಲ ಎಂಬ ವಿಚಾರದಿಂದ ನನಗೆ ಒತ್ತಡವಾಗುವುದೋ, ಆಗ ನಾನು ಅವರಿಗೆ ಇದರ ಬಗ್ಗೆ ಮಾಹಿತಿಯನ್ನು ನೀಡುವ ಕರ್ತವ್ಯವನ್ನು ಮಾಡಿದ್ದೇನೆ ಮತ್ತು ದೇವರು ಅವರಿಗಾಗಿ ಏನು ಯೋಗ್ಯವಾಗಿದೆಯೋ ಅದನ್ನೇ ಮಾಡುವನು, ಎಂದು ನನಗೆ ಅರಿವಾಗುವುದು ಮತ್ತು ನಾನು ಶಾಂತವಾಗಿದ್ದು ನನ್ನ ಇತರ ಆವಶ್ಯಕವಿರುವ ಪ್ರಯತ್ನಗಳನ್ನು ಮುಂದುವರಿಸುವೆನು.

ಇ. ಯಾವಾಗ ಶೀಘ್ರಗತಿಯಲ್ಲಿ ಸಮೀಪಿಸುತ್ತಿರುವ ಆಪತ್ಕಾಲದ ಬಗ್ಗೆ ನನ್ನ ಅಳಿಯ ಮತ್ತು ಅವರ ಕುಟುಂಬದವರಿಗೆ ಗಾಂಭೀರ್ಯ ಅನಿಸುವುದಿಲ್ಲ, ಎಂಬ ವಿಚಾರದಿಂದ ನನಗೆ ಒತ್ತಡವಾಗುವುದೋ, ಆಗ ನಾನು ಅವರಿಗೆ ಇದರ ಬಗ್ಗೆ ಮಾಹಿತಿಯನ್ನು ನೀಡುವ ಕರ್ತವ್ಯವನ್ನು ಮಾಡಿದ್ದೇನೆ, ಎಂಬುದು ನನಗೆ ಅರಿವಾಗುವುದು ಮತ್ತು ಅವರು ಏನು ಮಾಡಬೇಕು ?, ಎಂಬುದು ಅವರ ನಿರ್ಣಯವಾಗಿರುವುದು, ಎಂದು ವಿಚಾರ ಮಾಡಿ ನಾನು ನನಗೆ ಮತ್ತು ನನ್ನ ಕುಟುಂಬದವರಿಗೆ ಬರುವ ಆಪತ್ಕಾಲವನ್ನು ಎದುರಿಸಲು ಸಾಧ್ಯವಾಗಬೇಕೆಂದು, ಆವಶ್ಯಕವಿರುವ ಪ್ರಯತ್ನಗಳನ್ನು ಮಾಡುವೆನು.

ಅ. ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲದಿರುವಾಗ ಪ್ರಸಂಗದ ಕಡೆಗೆ ತತ್ತ್ವಜ್ಞಾನದ ಭೂಮಿಕೆಯಿಂದ ನೋಡುವುದು, ಇದಕ್ಕನುಸಾರ ನೀಡಬೇಕಾದ ಸ್ವಯಂಸೂಚನೆಗಳ ಉದಾಹರಣೆಗಳು

ಗಲಭೆಗಳು ಆಗುತ್ತಿರುವಾಗ ತೆಗೆದುಕೊಳ್ಳಬೇಕಾದ ಸ್ವಯಂಸೂಚನೆ

ಯಾವಾಗ ನಾನು ವಾಸಿಸುತ್ತಿರುವ ಪ್ರದೇಶದಲ್ಲಿ ದೊಡ್ಡ ಗಲಭೆಯಾಗುತ್ತಿರುವುದೋ, ಆಗ ಸದ್ಯ ಸಮಷ್ಟಿ ಪಾಪ ಹೆಚ್ಚಾದುದರಿಂದ ಇಂತಹ ನಕಾರಾತ್ಮಕ ಘಟನೆಗಳಲ್ಲಿ ಹೆಚ್ಚಳವಾಗುತ್ತಿದೆ ಮತ್ತು ಈ ಸಮಷ್ಟಿ ಪ್ರಾರಬ್ಧದಿಂದ ದೇವರೇ ನಮ್ಮನ್ನು ರಕ್ಷಿಸಲಿದ್ದಾನೆ, ಎಂದು ನನಗೆ ಅರಿವಾಗುವುದು ಮತ್ತು ನಾನು ಶ್ರದ್ಧೆಯಿಂದ ಮತ್ತು ಭಾವಪೂರ್ಣವಾಗಿ ನಾಮಜಪವನ್ನು ಮಾಡುವೆನು.

(ಮೇಲಿನ ಸ್ವಯಂಸೂಚನೆಗಳಂತೆ ಮಿತ್ರರು, ಅಕ್ಕಪಕ್ಕದವರು ಮುಂತಾದವರಲ್ಲಿ ಭಾವನೆಯ ದೃಷ್ಟಿಯಿಂದ ಸಿಲುಕಬಾರದೆಂದು ಸ್ವಯಂಸೂಚನೆಗಳನ್ನು ತಯಾರಿಸಬಹುದು.)

ಆ. ಆಪತ್ಕಾಲದ ವಿಚಾರದಿಂದ ಮನಸ್ಸಿನ ಅಸ್ವಸ್ಥತೆ ಬಹಳ ಹೆಚ್ಚಾದರೆ ಮನಸ್ಸನ್ನು ಆಪತ್ಕಾಲದ ಸಂದರ್ಭದಲ್ಲಿನ ಸ್ವಯಂಸೂಚನೆಗಳನ್ನು ಸ್ವೀಕರಿಸುವ ಸಕಾರಾತ್ಮಕ ಸ್ಥಿತಿಯಲ್ಲಿ ತರಲು ಮಾಡಬೇಕಾದ ಉಪಾಯ : ಕೆಲವು ಜನರು ಅತಿಭಾವನಾಶೀಲ ಮತ್ತು ಮನಸ್ಸಿನಿಂದ ಬಹಳ ದುರ್ಬಲರಾಗಿರುತ್ತಾರೆ. ನೆರೆ, ಭೂಕಂಪ, ಮಹಾಯುದ್ಧ ಇತ್ಯಾದಿ ಸಂಕಟಗಳನ್ನು ನೋಡಿ ಅವರು ಭಯಭೀತರಾಗುತ್ತಾರೆ. ಅವರಿಗೆ ಈ ಆಪತ್ಕಾಲದ ಸಂದರ್ಭದಲ್ಲಿನ ಸ್ವಯಂಸೂಚನೆಗಳನ್ನು ತೆಗೆದುಕೊಳ್ಳುವುದು ಬೇಡವೆನಿಸುತ್ತದೆ. ಕೆಲವರ ಮನಸ್ಸು ಅಸ್ವಸ್ಥವಾಗಿರುವುದರಿಂದ ಅವರಿಗೆ ಸ್ವಯಸೂಚನೆಗಳನ್ನು ಕೊಡಲು ನೆನಪು  ಆಗುವುದಿಲ್ಲ. ಇಂತಹ ವ್ಯಕ್ತಿಗಳ ಮನಸ್ಸನ್ನು ಆಪತ್ಕಾಲದ ಸಂದರ್ಭದಲ್ಲಿನ ಸ್ವಯಂಸೂಚನೆಗಳನ್ನು ಸ್ವೀಕರಿಸುವ ಸಕಾರಾತ್ಮಕ ಸ್ಥಿತಿಗೆ ತರಲು ಉಪಯುಕ್ತವಾಗಿರುವ ಪ್ರೋತ್ಸಾಹ ನೀಡುವ ಸ್ವಯಂಸೂಚನೆಗಳನ್ನು ಮತ್ತು ಆಪತ್ಕಾಲೀನ ಸ್ಥಿತಿಯಿಂದ ಪಾರಾಗಿ ಹೋಗಲು ಗುರು ಅಥವಾ ದೇವರ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಲು ಉಪಯುಕ್ತವಾಗಿರುವ ಕೆಲವು ಪ್ರೇರಣೆಯನ್ನು ನೀಡುವ ವಾಕ್ಯಗಳನ್ನು ಸನಾತನದ ಗ್ರಂಥ ‘ಆಪತ್ಕಾಲವು ಸಹನೀಯವಾಗಲು ಮಾಡಬೇಕಾದ ಮಾನಸಿಕ, ಆಧ್ಯಾತ್ಮಿಕ ಇತ್ಯಾದಿ ಸ್ತರಗಳಲ್ಲಿನ ಸಿದ್ಧತೆ’ ಇದರಲ್ಲಿ ನೀಡಲಾಗಿದೆ.

(ಸಮಾಪ್ತಿ)