೧೧.೫.೨೦೨೧ ರಂದು ಪೂ. (ಶ್ರೀಮತಿ) ಶಾಲಿನಿ ಮಾಯಿಣಕರ ಅಜ್ಜಿಯವರ ದೇಹ ತ್ಯಾಗದ ನಂತರ ೧೧ ನೇ (ದಿನಾಂಕ ೨೧. ೫.೨೦೨೧) ದಿನದಂದು ಅವರ ಬಗೆಗಿನ ಲೇಖನ ‘ದೈನಿಕ ಸನಾತನ ಪ್ರಭಾತ ದಿನ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಲೇಖನದ ಛಾಯಾಚಿತ್ರವನ್ನು ಇಲ್ಲಿ ನೀಡಲಾಗಿದ್ದು ಅದನ್ನು ನೋಡಿ ಸಂತರು ಮತ್ತು ಸಾಧಕರಿಗೆ ಮುಂದಿನ ಅನುಭೂತಿಗಳು ಬಂದವು.
ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಅರಿವಾದ ಅನುಭೂತಿ
ಅ. ‘ಪೂ. ಮಾಯಿಣಕರ ಅಜ್ಜಿಯವರ ಛಾಯಾಚಿತ್ರವನ್ನು ನೋಡಿ ಬಹಳಷ್ಟು ಜೀವಂತಿಕೆಯ ಅರಿವಾಯಿತು ಮತ್ತು ‘ಅವರು ದೇಹತ್ಯಾಗ ಮಾಡಿಯೇ ಇಲ್ಲ, ಎಂದು ಅನಿಸಿತು.
ಆ. ದಿ. (ಪೂ.) ಶಾಲಿನಿ ಮಾಯಿಣಕರ ಅಜ್ಜಿಯವರ ಛಾಯಾಚಿತ್ರವನ್ನು ನೋಡಿದಾಗ ಆನಂದದ ಅರಿವಾಗುವುದು
ಇ. ‘ಅವರಿಂದ ಬಹಳಷ್ಟು ಶೀತಲವಾದ ಗಾಳಿ ಮತ್ತು ಆನಂದ ಪ್ರಕ್ಷೇಪಿಸುತ್ತಿತ್ತು.
ಈ. ‘ಅವರನ್ನು ನೋಡಿ ಗಮನವನ್ನು ಕೇಂದ್ರೀಕರಿಸಿದಾಗ ‘ನಾನು ಅವರಲ್ಲಿ ಏಕರೂಪವಾಗಿದ್ದೇನೆ ಎಂದು ಅನಿಸಿತು ಹಾಗೆಯೇ ನನ್ನ ಅಸ್ತಿತ್ವವೇ ಇಲ್ಲದಂತಾಯಿತು. ಇದು ಅವರಲ್ಲಿನ ವ್ಯಾಪಕತೆಯ ಅನುಭೂತಿ ಬಂದಿತು.
ಉ. (ಪೂ.) ಅಜ್ಜಿಯವರ ದೇಹತ್ಯಾಗದ ಬಳಿಕ ದರ್ಶನ ಪಡೆಯುವಾಗ ಮತ್ತು ದೇಹತ್ಯಾಗದ ನಂತರ ೧೧ ನೇ ದಿನದ ಛಾಯಾಚಿತ್ರವನ್ನು ನೋಡಿ ಅರಿವಾದ ಸ್ಪಂದನಗಳು
ಈ ಕೋಷ್ಟಕದಿಂದ ‘ಈಗ ದಿ. (ಪೂ.) ಮಾಯಿಣಕರ ಅಜ್ಜಿಯವರಿಂದ ಆನಂದದ ಸ್ಪಂದನ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸಲ್ಪಡುತ್ತಿದೆ ಎಂದರಿವಾಯಿತು, – ಸದ್ಗುರು ಡಾ. ಮುಕುಲ ಗಾಡಗೀಳಕು.
ಪ್ರಿಯಾಂಕಾ ಲೋಟಲಿಕರ ಇವರಿಗೆ ಬಂದ ಅನುಭೂತಿ
ಅ. ‘ಪೂ. ಮಾಯಿಣಕರ ಅಜ್ಜಿಯವರ ಆಜ್ಞಾಚಕ್ರವನ್ನು ನೋಡಿದಾಗ ಧ್ಯಾನ ತಗಲಿತು. ನನ್ನ ‘ನಿರ್ವಿಚಾರ ಈ ನಾಮಜಪ ತಾನಾಗಿಯೇ ನಡೆಯತೊಡಗಿತು
ಆ. ದಿ. (ಪೂ.) ಶಾಲಿನಿ ಮಾಯಿಣಕರ ಅಜ್ಜಿಯವರ ಛಾಯಾಚಿತ್ರದ ಕಡೆಗೆ ನೋಡಿದಾಗ ನನ್ನ ದೇಹದಲ್ಲಿ ಬದಲಾವಣೆಯಾಗುತ್ತಿರುವುದು ಅರಿವಾಗುವುದು.
ಇ. ‘ಪೂ. ಮಾಯಿಣಕರ ಅಜ್ಜಿಯವರ ಮುಖದ ಕಡೆ ನೋಡಿ ನನ್ನ ದೇಹ ಶುದ್ಧ ಮತ್ತು ನಿರ್ಮಲವಾಗುತ್ತಿದೆ, ಎಂದು ಅನಿಸಿತು.
ಈ. ‘ಅವರ ಮುಖದಿಂದ ವಾತಾವರಣದಲ್ಲಿ ನಿರ್ಗುಣ ಚೈತನ್ಯದ ಪ್ರಕ್ಷೇಪಣೆಯಾಗುತ್ತದೆ. ಪಂಚಜ್ಞಾನೇಂದ್ರಿಯಗಳಲ್ಲಿ ಅವರ ಕಣ್ಣುಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಚೈತನ್ಯದ ಪ್ರಕ್ಷೇಪಣೆಯಾಗುತ್ತಿದೆ. ‘ಅವರ ಪಂಚಜ್ಞಾನೇಂದ್ರಿಯಗಳು ಮತ್ತು ಪಂಚಕರ್ಮೇಂದ್ರಿಯಗಳ ಮೂಲಕ ಚೈತನ್ಯದ ಪ್ರಕ್ಷೇಪಣೆ ಹೆಚ್ಚಾಗಿದ್ದರಿಂದ ಅವರ ಮುಖದ ಮೇಲಿನ ಜೀವಕೋಶಗಳಿಂದ ನಿರ್ಗುಣ ಚೈತನ್ಯದ ಸೂಕ್ಷ್ಮ ಕಿರಣಗಳು ಎಲ್ಲೆಡೆ ಪ್ರಕ್ಷೇಪಿತವಾಗುತ್ತಿವೆ ಎಂದು ಅರಿವಾಯಿತು.
ಉ. ‘ಅವರ ಛಾಯಾಚಿತ್ರದ ಕಡೆಗೆ ನೋಡಿದಾಗ ಅವರ ದೇಹದ ಸುತ್ತಲಿನ ಹೊರಬದಿಯು ಅಸ್ಪಷ್ಟವಾಗಿದ್ದು, ಅವರು ಚೈತನ್ಯದಲ್ಲಿ ವಿಲೀನರಾಗುತ್ತಿದ್ದಾರೆ ಎಂದು ಅನಿಸಿತು.
– ಕು. ಪ್ರಿಯಾಂಕಾ ಲೋಟಲಿಕರ (೨೧.೫.೨೦೨೧)
ಕು. ಮಧುರಾ ಭೋಸಲೆ ಇವರಿಗೆ ಬಂದ ಅನುಭೂತಿ
ಅ. ‘ಪೂ. ಅಜ್ಜಿಯವರ ತುಟಿಗಳ ಕಡೆಗೆ ನೋಡಿದಾಗ ಅವು ಅಲುಗಾಡುವುದು ಅರಿವಾಗುವುದು ಮತ್ತು ಮನಸ್ಸಿಗೆ ಆನಂದವೆನಿಸಿತು.
ಆ. ‘ಪೂ. ಅಜ್ಜಿಯವರ ಮುಖದ ಕಡೆಗೆ ನೋಡಿ ಮನಸ್ಸಿಗೆ ಆನಂದದ ಅರಿವಾಯಿತು ಮತ್ತು ನಂತರ ಮನಸ್ಸು ನಿರ್ವಿಚಾರವಾಗಿ ಶಾಂತಿಯ ಅರಿವಾಯಿತು. ‘ಅವರ ವಾಣಿಯಿಂದ ಅವರು ಇತರರಿಗೆ ಸತತ ಆನಂದವನ್ನು ನೀಡುತ್ತಾರೆ, ಎಂದೆನಿಸಿತು.
ಇ. ದಿ. (ಪೂ.) ಮಾಯಿಣಕರ ಅಜ್ಜಿಯವರ ಕಡೆಯಿಂದ ನಿರ್ಗುಣ ಚೈತನ್ಯ ಪ್ರಕ್ಷೇಪಣೆಯಾಗುತ್ತಿದೆ ಎಂದರಿವಾಗುವುದು
ಈ. ‘ಅವರಿಂದ ನಿರ್ಗುಣ ಚೈತನ್ಯದ ಶುಭ್ರ ಕಿರಣಗಳ ಪ್ರಕ್ಷೇಪಣೆಯಾಗುತ್ತದೆ ಮತ್ತು ಇದರಿಂದ ಇಡೀ ವಾತಾವರಣ ಶುದ್ಧವಾಗುತ್ತದೆ.
ಉ. (ಪೂ.) ಅಜ್ಜಿಯವರು ನಿರ್ಗುಣ ಅವಸ್ಥೆಯನ್ನು ತಲುಪಿದ್ದಾರೆಂದು ಅನಿಸುವುದು
ಊ. ‘ಪೂ. ಅಜ್ಜಿಯವರು ದೇಹದಲ್ಲಿ ಇಲ್ಲ ಎಂದು ಅನಿಸಿತು. ಅವರ ಮುಖವನ್ನು ಒಂದೇ ಸಮನೆ ನೋಡಿದಾಗ ಅಲ್ಲಿ ಟೊಳ್ಳಿರುವುದು ಅರಿವಾಯಿತು. ‘ಅವರು ಉಚ್ಚತಮ ನಿರ್ಗುಣ ಅವಸ್ಥೆಯನ್ನು ಅನುಭವಿಸುತ್ತಿದ್ದರೂ, ಅವರು ಸಹಜಾವಸ್ಥೆಯಲ್ಲಿದ್ದಾರೆ, ಎಂದು ಅನಿಸಿತು. ಪೂ. ಅಜ್ಜಿಯವರ ನಿರ್ಗುಣ ಅವಸ್ಥೆಯಿಂದ ಅವರ ಸ್ಥೂಲದೇಹದಲ್ಲಿನ ಪೃಥ್ವಿತತ್ತ್ವ ಕಡಿಮೆಯಾಗಿ ತೇಜ ಮತ್ತು ವಾಯು ತತ್ತ್ವಗಳು ಹೆಚ್ಚಾಗಿದ್ದರಿಂದ ಅವರ ಸ್ಥೂಲದೇಹ ಭಾರವಾಗಿರದೇ, ಹಗುರವೆನಿಸುತ್ತಿತ್ತು.
ಎ. ‘ಪೂ. ಅಜ್ಜಿಯವರ ಕಣ್ಣುಗಳನ್ನು ನೋಡಿದಾಗ ಮೊದಲು ಭಾವ ಅರಿವಾಗುತ್ತದೆ ಮತ್ತು ಸೂಕ್ಷ್ಮದಲ್ಲಿ ಅವರ ಕಣ್ಣುಗಳು ನೀಲಿ ಕಾಣಿಸುತ್ತವೆ. ಕಣ್ಣುಗಳನ್ನು ಒಂದೇ ಸಮನೆ ನೋಡಿದಾಗ ‘ಅವರ ಕಣ್ಣುಗಳು ಶೂನ್ಯದಲ್ಲಿ ಸ್ಥಿರವಾಗಿವೆ ಎಂದು ಅರಿವಾಗುತ್ತದೆ.
ಏ. ಯಾವ ರೀತಿ ದೇವತೆಗಳ ತಲೆಯ ಸುತ್ತಲೂ ದಿವ್ಯ ಪ್ರಭಾವಲಯ ಕಾಣಿಸುತ್ತದೆಯೋ, ಅದರಂತೆ ಪೂ. ಅಜ್ಜಿಯವರ ಮುಖದ ಹಿಂದೆ ಹಳದಿಯುಕ್ತ ಬಿಳಿ ಬಣ್ಣದ ಪ್ರಭಾವಲಯ ಗೋಲಾಕಾರದಲ್ಲಿ ತಿರುಗುತ್ತಿರುವುದು ಕಾಣಿಸಿತು. ಇದರಿಂದ ಅವರ ದಿವ್ಯತ್ವದ ಅನುಭೂತಿ ಬಂದಿತು. – ಕು. ಮಧುರಾ ಭೋಸಲೆ
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. * ಸೂಕ್ಷ್ಮದಲ್ಲಿ ಕಾಣಿಸುವುದು, ಕೇಳಿಸುವುದು ಇತ್ಯಾದಿ (ಪಂಚಸೂಕ್ಷ್ಮಜ್ಞಾನೇಂದ್ರಿಯಗಳಿಂದ ಜ್ಞಾನಪ್ರಾಪ್ತಿಯಾಗುವುದು) : ಕೆಲವು ಸಾಧಕರ ಅಂತರ್ದೃಷ್ಟಿ ಜಾಗೃತವಾಗುತ್ತದೆ, ಅಂದರೆ ಅವರಿಗೆ ಕಣ್ಣಿಗೆ ಕಾಣಿಸದಿರುವುದು ಕಾಣಿಸುತ್ತದೆ ಮತ್ತು ಇನ್ನು ಕೆಲವರಿಗೆ ಸೂಕ್ಷ್ಮದಲ್ಲಿನ ನಾದ ಅಥವಾ ಶಬ್ದಗಳು ಕೇಳಿಸುತ್ತವೆ. * ಸೂಕ್ಷ್ಮಜ್ಞಾನದ ಪ್ರಯೋಗ : ಕೆಲವು ಸಾಧಕರು ಸೂಕ್ಷ್ಮವನ್ನು ತಿಳಿಯುವ ಕ್ಷಮತೆಯ ಅಧ್ಯಯನವೆಂದು ‘ಯಾವುದಾದರೊಂದು ವಸ್ತು, ಕೃತಿ, ಧಾರ್ಮಿಕ ವಿಧಿ, ವ್ಯಕ್ತಿ ಮುಂತಾದವುಗಳ ಬಗ್ಗೆ ಮನಸ್ಸು ಮತ್ತು ಬುದ್ಧಿಯ ಆಚೆಗೆ ಏನು ಅರಿವಾಗುತ್ತದೆ, ಎಂಬುದರ ಅಧ್ಯಯನ ಮಾಡುತ್ತಾರೆ. ಇದಕ್ಕೆ ‘ಸೂಕ್ಷ್ಮಜ್ಞಾನದ ಪ್ರಯೋಗ ಎನ್ನುತ್ತಾರೆ. * ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು |