ಕಾಳಿಮಾತೆಯ ಮಹಾನ್ ಭಕ್ತ ರಾಮಕೃಷ್ಣ ಪರಮಹಂಸರಿಗೆ ದೇವರ ದರ್ಶನದ ಬಗ್ಗೆ ಇದ್ದ ಉತ್ಕಟ ಭಾವ !

ಶ್ರೀ ರಾಮಕೃಷ್ಣ ಪರಮಹಂಸರು

ಶ್ರೀ ರಾಮಕೃಷ್ಣ ಪರಮಹಂಸರು ದೇವಿ ಕಾಳಿಮಾತೆಯ ಭಕ್ತರೆಂಬುವುದು ತಿಳಿದ ವಿಷಯ. ಆದರೆ ಅವರು ವಿವಿಧ ರೀತಿಯ ಭಕ್ತಿಯನ್ನು ಅನುಸರಿಸಿ ಇತರ ದೇವತೆಗಳ ದರ್ಶನ ಪಡೆದಿದ್ದರು. ಅದರ ಕೆಲವು ಉದಾಹರಣೆಗಳನ್ನು ನೋಡೋಣ.

ಶ್ರೀರಾಮನ ದರ್ಶನಕ್ಕಾಗಿ ಪರಿತಪಿಸುವ ರಾಮಕೃಷ್ಣರು !

ದೈವೀತತ್ತ್ವದ ವಿವಿಧ ರೂಪಗಳನ್ನು ಹಾಗೂ ಭಕ್ತಿಯ ವಿವಿಧ ಪದ್ಧತಿಗಳನ್ನು ತಿಳಿದುಕೊಳ್ಳಲು ರಾಮಕೃಷ್ಣರು ಅನೇಕ ರೀತಿಯಲ್ಲಿ ಪ್ರಯತ್ನಿಸಿದರು. ರಾಮಾಯಣದ ಸಮಯದಲ್ಲಿ ಶ್ರೀರಾಮನ ದರ್ಶನಕ್ಕಾಗಿ ಹೇಗೆ ಹನುಮಂತನು ಪರಿತಪಿಸಿದ್ದನೋ ಅದೇ ರೀತಿಯ ಸ್ಥಿತಿಯನ್ನು ರಾಮಕೃಷ್ಣರು ಅನುಭವಿಸಿದರು. ಹನುಮಂತನ ಹಾಗೆಯೆ ಶ್ರೀರಾಮನ ಅನುಭೂತಿಯನ್ನು ಪಡೆಯಬೇಕು ಎಂಬ ಭಕ್ತಿಯು ಎಷ್ಟು ತೀವ್ರವಾಗಿತ್ತೆಂದರೆ, ಅವರಲ್ಲಿ ವಾನರರ ಅನೇಕ ಲಕ್ಷಣಗಳು ಕಂಡು ಬರತೊಡಗಿದವು ! ಈ ಪ್ರಯತ್ನಗಳಿಂದ ಪ್ರಸನ್ನನಾದ ಶ್ರೀರಾಮನು ಅವರಿಗೆ ದರ್ಶನವಿತ್ತನು !

ಗೋಪಿಯರಂತೆ ಶ್ರೀಕೃಷ್ಣನ ದರ್ಶನದ ಇಚ್ಛೆ !

ಭಗವಾನ್ ಶ್ರೀಕೃಷ್ಣನೊಂದಿಗೆ ಇರುವಾಗ ಮತ್ತು ಅವನ ಭಕ್ತಿರಸದಲ್ಲಿ ತಲ್ಲೀನರಾಗಿರುವ ಗೋಪಿಯರು ಯಾವ ರೀತಿ ಕೃಷ್ಣನ ದರ್ಶನಕ್ಕಾಗಿ ಪರಿತಪಿಸುತ್ತಿದ್ದರೋ ಅದೇ ರೀತಿ ಕೃಷ್ಣನ ದರ್ಶನವಾಗಬೇಕು ಎಂದು ರಾಮಕೃಷ್ಣರಿಗೆ ಇಚ್ಛೆಯಾಯಿತು. ಓರ್ವ ಸ್ತ್ರೀಯ ದೃಷ್ಟಿಕೋನದಿಂದ ಶ್ರೀಕೃಷ್ಣನ ಭಕ್ತಿಯನ್ನು ಮಾಡುವಾಗ ಅವರು ಸ್ತ್ರೀಯಂತೆಯೇ ಕಾಣಿಸಲ ಪ್ರಾರಂಭಿಸಿದರು. ಅವರ ವರ್ತನೆ ಹೇಗಿತ್ತೆಂದರೆ ಕೆಲವರು ಅವರನ್ನು ಸ್ತ್ರೀಯೆಂದು ಭಾವಿಸಿದರು ! ಶ್ರೀಕೃಷ್ಣನ ದರ್ಶನದ ಇಚ್ಛೆಯನ್ನು ಜಾಗೃತಗೊಳಿಸಿದ ರಾಮಕೃಷ್ಣರಿಗೆ ಭಗವಾನ್ ಶ್ರೀಕೃಷ್ಣನ ದರ್ಶನದ ಭಾಗ್ಯವೂ ಲಭಿಸಿತು.

(ಆಧಾರ : www.sanatan.org ಜಾಲತಾಣ)