೧. ಸಾಧನೆ ಮಾಡುವಾಗ ಬರುವ ಅಡಚಣೆಗಳು
೧ ಅ. ಪುಣ್ಯವನ್ನು ಗಳಿಸುವುದು ಅಥವಾ ಭಕ್ತಿಯನ್ನು ಮಾಡುವುದು ಅಷ್ಟು ಸುಲಭವಾಗಿಲ್ಲ, ಅದು ಹಗ್ಗದ ಮೇಲಿನ ನಡಿಗೆಯಂತೆ ಆಗಿದೆ ಮತ್ತು ಪುಣ್ಯವನ್ನು ಪ್ರಾಪ್ತಮಾಡಿಕೊಂಡ ನಂತರ ದೇವರ ಶಕ್ತಿ ಸಿಗುತ್ತದೆ : ‘ಪುಣ್ಯವು ದೇವರಿಗಿಂತ ದೊಡ್ಡದಾಗಿದೆ, ಆದರೆ ಪುಣ್ಯವನ್ನು ಗಳಿಸುವುದು ಸುಲಭವಿಲ್ಲ. ಪುಣ್ಯವನ್ನು ಗಳಿಸಲು ಹೋದರೆ, ಅದು ನಿಮ್ಮ ಜೀವವನ್ನೇ ತೆಗೆದುಕೊಳ್ಳುವುದು. ಅದು ಇಷ್ಟೊಂದು ಕಠಿಣ ಮತ್ತು ದುಬಾರಿಯಾಗಿದೆ. ಪುಣ್ಯವನ್ನು ಗಳಿಸಲು ಕೆಂಡದಲ್ಲಿ ಕೈ ಸುಟ್ಟುಕೊಳ್ಳಬೇಕಾಗಿರುತ್ತದೆ, ಮುಳ್ಳುಗಳ ಮೇಲೆ ನಡೆಯಬೇಕಾಗುತ್ತದೆ ಮತ್ತು ಸತತವಾಗಿ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಭಕ್ತಿಯನ್ನು ಮಾಡುವುದು ಸುಲಭವಾಗಿಲ್ಲ. ಅದು ಹಗ್ಗದ ಮೇಲಿನ ನಡಿಗೆಯಂತೆ ಆಗಿದೆ. ಭಕ್ತಿಯನ್ನು ಮಾಡುವಾಗ ಸುಖವು ಸುಟ್ಟುಬೂದಿ ಆಗುತ್ತದೆ. ಒಳ್ಳೆಯ ಭೋಗಗಳನ್ನು ಭೋಗಿಸಲು ಸಿಗುವುದಿಲ್ಲ. ಆಗಲೇ ಪುಣ್ಯದ ಬಂಡವಾಳ (ಗಳಿಕೆ) ಆಗುತ್ತದೆ ಮತ್ತು ಮುಂದೆ ಈಶ್ವರಪ್ರಾಪ್ತಿಯಾಗಿ ಈಶ್ವರನ ಶಕ್ತಿ ಸಿಗುತ್ತದೆ. ಈ ಕೆಲಸವು ಕಠಿಣವಾಗಿದೆ; ಆದುದರಿಂದ ಯಾರೂ ಭಕ್ತಿಮಾರ್ಗವನ್ನು ಹಿಡಿಯುವುದಿಲ್ಲ ಎಲ್ಲ ಜನರು ‘ಖಾಯಾ-ಪಿಯಾ ಸುಖಪಾಯಾ | ಉಸನೆ ಕ್ಯಾರೆ ಕಮಾಯಾ | ಜೈಸಾ ಆಯಾ, ವೈಸಾ ಗಯಾ |’, ಹೀಗೆ ನಡೆದುಕೊಳ್ಳುತ್ತಾರೆ ಮತ್ತು ಜೀವನವನ್ನು ಸಂಪೂರ್ಣ ನಾಶಮಾಡಿಕೊಳ್ಳುತ್ತಾರೆ .’
೨. ಪರಮಾರ್ಥದಲ್ಲಿ ಬ್ರಹ್ಮಚರ್ಯವನ್ನು ಪಾಲಿಸುವುದು ಅತ್ಯಂತ ಮಹತ್ವದ್ದಾಗಿದೆ
‘ಯಾವ ಪುರುಷನ ವೀರ್ಯಪತನವಾಗುತ್ತಿದೆಯೋ ಮತ್ತು ಯಾವ ಸ್ತ್ರೀಯಳ ಮಾಸಿಕ ಧರ್ಮ ಮತ್ತು ಭೋಗವು ನಡೆದಿದೆಯೋ, ಅವರಿಗೆ ಈಶ್ವರನ ಆತ್ಮಜ್ಞಾನ ಮತ್ತು ಬ್ರಹ್ಮಜ್ಞಾನವಾಗುವುದಿಲ್ಲ. ಯಾರಿಗೆ ಆಧ್ಯಾತ್ಮಿಕ ಜ್ಞಾನ ಬೇಕಾಗಿದೆಯೋ, ಅವನು ಮೊದಲು ವೀರ್ಯವನ್ನು ತಡೆಹಿಡಿಯಬೇಕು; ಏಕೆಂದರೆ ಪರಮಾರ್ಥದಲ್ಲಿ ಬ್ರಹ್ಮಚರ್ಯವನ್ನು ಪಾಲಿಸುವುದು ಅತ್ಯಂತ ಮಹತ್ವದ್ದಾಗಿದೆ; ಆದರೆ ‘ಎದುರಿಗೆ ಮೊಸರಿನ ಮಡಕೆಯನ್ನಿಟ್ಟುಕೊಂಡು ಯಾರು ಉಪವಾಸ ಮಾಡುವರು ?’, ಇದು ಯಕ್ಷ ಪ್ರಶ್ನೆಯಾಗಿದೆ. ಸ್ತ್ರೀ ಹತ್ತಿರವಿದ್ದಾಗ ವೀರ್ಯವನ್ನು ತಡೆಗಟ್ಟುವ ಕಠಿಣ ಕರ್ಮವನ್ನು ಯಾರಿಗಾದರೂ ಮಾಡಲು ಸಾಧ್ಯವಿದೆಯೇ ?’
೩. ಸಾಧನೆಯನ್ನು ಮಾಡುವವರಿಗೆ ಪೂ. (ಹ.ಭ.ಪ.) ಸಖಾರಾಮ ರಾಮಜಿ ಬಾಂದ್ರೆ ಮಹಾರಾಜರು ಮಾಡಿದ ಬೋಧನೆ
ಅ. ಬೆಂಕಿಯನ್ನು ಹಚ್ಚುವುದು ಸುಲಭ; ಆದರೆ ಅದನ್ನು ಆರಿಸುವುದು ಕಠಿಣ. ಇದು ಯಾರಿಗೆ ಸಾಧ್ಯವಿಲ್ಲವೋ, ಅವರು ಬೆಂಕಿಯನ್ನು ಹಚ್ಚಬಾರದು.
ಆ. ಮನೆಯಲ್ಲಿ ಗಣಪತಿಯನ್ನು ತಂದಿರಿಸಿ ಮದ್ಯವನ್ನು ಕುಡಿಯುತ್ತಾರೆ ಮತ್ತು ಮಾಂಸವನ್ನು ತಿನ್ನುತ್ತಾರೆ. ಇದಕ್ಕೆ ಏನು ಹೇಳಬೇಕು ? ಇದನ್ನು ನಾನು ಸ್ವತಃ ನೋಡುತ್ತಿದ್ದೇನೆ. ಎಷ್ಟು ಹೇಳಿದರೂ, ಕೇಳುವುದಿಲ್ಲ. ಕೆಲವರು ಬೆಳಗ್ಗೆ ಸ್ನಾನ ಮಾಡುವುದಿಲ್ಲ; ಆದುದರಿಂದ ಅವರಿಗೆ ತಾಕೀತು ಮಾಡಲಾಗಿದೆ, ‘ಇಲ್ಲಿ (ಪ್ರವಚನಕ್ಕೆ) ಕಲಿಯಲು ಬರಬೇಕು, ಕಲಿಸಲು ಬರಬಾರದು.’
ಇ. ಕಾಮವು ರಾಮನನ್ನು ಹೊರಗೆ ಹಾಕಿದೆ
ಈ. ಇಲ್ಲಿ ದೇವರು, ದೇಶ ಮತ್ತು ಧರ್ಮವನ್ನು ಕಲಿಸಲಾಗುತ್ತದೆ. ಭಕ್ತಿ ಮತ್ತು ಶಿಸ್ತನ್ನು ಪಾಲಿಸುವವರಿಲ್ಲದಿದ್ದರೆ, ಇಲ್ಲಿ ಬರಬೇಡಿರಿ.
ಉ. ಪೂಜೆ ಮತ್ತು ಧ್ಯಾನ ಮಾಡಬೇಕು ಮತ್ತು ಯಾವಾಗಲೂ ಈಶ್ವರನ ಹೆಸರು ಬಾಯಿಯಲ್ಲಿರಬೇಕು (ನಾಮಸ್ಮರಣೆ ಮಾಡಬೇಕು). ಈಶ್ವರಪ್ರಾಪ್ತಿಗಾಗಿ ಎಲ್ಲ ಸುಖಸೌಕರ್ಯಗಳನ್ನು ತ್ಯಾಗ ಮಾಡಿದಾಗಲೇ ನಮ್ಮ ಆಚಾರ-ವಿಚಾರಗಳು ಸರಿಯಾಗುತ್ತವೆ.
ಊ. ಭಕ್ತಿ, ಜ್ಞಾನ ಮತ್ತು ವೈರಾಗ್ಯವನ್ನು ಪಡೆದುಕೊಳ್ಳಬೇಕು. ‘ಈಶ್ವರಪ್ರಾಪ್ತಿಯನ್ನು ಮಾಡಿಕೊಂಡು ಮೋಕ್ಷದವರೆಗೆ ಹೋಗಬೇಕು’, ದೇವರು ಇದಕ್ಕಾಗಿಯೇ ಮನುಷ್ಯಜನ್ಮವನ್ನು ನೀಡಿದ್ದಾನೆ.
ಎ. ಸಂತ ತುಕಾರಾಮ ಮಹಾರಾಜರು, ‘ಹೇಳಿದಂತೆ ನಡೆಯುವವರ ಹೆಜ್ಜೆಗಳಿಗೆ ವಂದಿಸಬೇಕು |’ ಎಂದು ಹೇಳಿದ್ದಾರೆ. ಇಲ್ಲಿನ ದೇವಸ್ಥಾನ ಮತ್ತು ದೇವಸ್ಥಾನದ ಪರಿಸರದಲ್ಲಿ ಬಂದಾಗ ತಮಗೆ ಆನಂದದ ಅನುಭವ ಬಂದಿತೇ ? ಅರಿವಾಯಿತೇ ?
ಐ. ಮೊದಲು ನೀವು ದೇವರಂತೆ ನಡೆದುಕೊಳ್ಳಿರಿ. ಆಗ ದೇವರು ನಿಮಗೆ ಸಿಗುವನು.
ಓ. ಈಶ್ವರೀ ಜ್ಞಾನವು ಬೇಕಾಗಿದ್ದರೆ, ಅವನು ‘ರಮ್, ರಮ್ಮಿ ಮತ್ತು ರಮಾ’ ಇವುಗಳನ್ನು ಬಿಡಬೇಕು.
ಔ. ಕಾಲುಗಳಿಂದ ನನ್ನ ದೇವಸ್ಥಾನಕ್ಕೆ ಬಾ. ಕೈಗಳಿಂದ ತಾಳವನ್ನು ಬಾರಿಸು. ಕಣ್ಣುಗಳಿಂದ ಮೂರ್ತಿಯನ್ನು ನೋಡು. ಕಿವಿಗಳಿಂದ ನನ್ನ ಕಥೆ ಕೇಳು. ಹಲ್ಲುಗಳಿರುವ ತನಕ ತಿನ್ನು. ಕಣ್ಣುಗಳಿರುವತನಕ, ನೋಡು. ಶಕ್ತಿಯಿರುವ ತನಕ ತೀರ್ಥಯಾತ್ರೆಗೆ ಹೋಗಿ ಬಾ.’
೪. ಸಾಧನೆಗಾಗಿ ಮನಸ್ಸಿನ ನಿಶ್ಚಯ ಬೇಕು !
೪ ಅ. ‘ಒಳ್ಳೆಯ ಮರವನ್ನು ಒಣಗಿಸುವ ಹುಳುಗಳೆಂದರೆ ಸಂಬಂಧಿಕರು. ಮೊದಲು ಅವರ ಸಂಬಂಧವನ್ನು ಕಡಿದು ಹಾಕಬೇಕು, ಹೀಗೆ ಮಾಡಿದರೇ ಪರಮಾರ್ಥವನ್ನು ಸಾಧಿಸಬಹುದು.’
೪ ಆ. ಮನುಷ್ಯನು ಈಶ್ವರನ ಕೃಪೆಯಿಲ್ಲದೇ ಸಂಸಾರದ ಭಯಂಕರ ಬಲೆಯಿಂದ ಹೊರಗೆ ಬರಲು ಸಾಧ್ಯವಿಲ್ಲ ! : ‘ಸ್ವಲ್ಪ ಪುಣ್ಯವಿದ್ದರೆ ಮಾತ್ರ, ಮನುಷ್ಯನು ವಿಚಾರಗಳನ್ನು ಗೆದ್ದು ಹೊರಗೆ ಬರುವನು; ಏಕೆಂದರೆ ದೇವರ ಬಳಿಗೆ ಹೋಗಬೇಕಾದರೆ ಎಲ್ಲ ಬೋಗಗಳ ಭಯಂಕರ ಬಲೆಯನ್ನು ಕತ್ತರಿಸಬೇಕಾಗುವುದು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಇಚ್ಛೆ, ವಾಸನೆ, ಮನಸ್ಸು, ಮಾಯೆ, ಕಲ್ಪ ಮತ್ತು ವಿಕಲ್ಪಗಳನ್ನು ಗೆದ್ದು ಮುಂದೆ ಓಡುವ ಇಂದ್ರಿಯಗಳನ್ನು ಗೆಲ್ಲಬೇಕಾಗುವುದು. ಜಿತೇಂದ್ರಿಯನಾಗಬೇಕು. ಈ ಮದ ಮತ್ತು ಮೋಹದ ಭೋಗವನ್ನು ಬಿಡಲು ಯಾರೂ ಸಿದ್ಧರಾಗುವುದಿಲ್ಲ, ಎಂಬುದು ಈಶ್ವರನಿಗೆ ಗೊತ್ತಿತ್ತು; ಆದುದರಿಂದ ಅವನು ಮೃತ್ಯುವಿನ ಮೂಲಕ ಸಂಸಾರದಿಂದ ಬೇರೆ ಮಾಡುತ್ತಾನೆ. ಈ ನಿಸರ್ಗದ ಆಟವು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಇಲ್ಲಿ ಯಾರೂ ಮೃತ್ಯುವನ್ನು ತಡೆಯಲಾರರು. ಮನುಷ್ಯನು ಎಷ್ಟೇ ಶಕ್ತಿಶಾಲಿ ಮತ್ತು ಧನವಂತನಾಗಿದ್ದರೂ, ಒಂದಲ್ಲ ಒಂದು ದಿನ ಆತ ಈ ಜಗತ್ತನ್ನು ಬಿಡಲೇಬೇಕಾಗುವುದು.’
೪ ಇ. ಶ್ರೀರಾಮನ ಕೃಪೆಯಿಂದ ಸಂಸಾರದ ಈ ಚಕ್ರವ್ಯೂಹದಿಂದ ಹೊರಗೆ ಬರಬಹುದು ! : ‘ಈ ಸಂಸಾರದ ಚಕ್ರವ್ಯೂಹದಿಂದ ಯಾವನು ಹೊರಗೆ ಬರುವನೋ, ಅವನ ಹೆಸರು ವೀರ ! ಅವನಿಗೆ ವೀರನ ಪದವಿಯನ್ನು ಕೊಡಬೇಕು; ಏಕೆಂದರೆ ಅನೇಕ ವಿಕಾರಗಳ ಬಲೆಯಲ್ಲಿ ಸಿಲುಕಿರುವ ಈ ಜೀವಕ್ಕೆ ತೊಂದರೆ ಮತ್ತು ದುಃಖವಾಗುತ್ತಿರುತ್ತದೆ. ಆದುದರಿಂದ ಅದು ಹೊರಗೆ ಬರುವ ಪ್ರಯತ್ನವನ್ನು ಮಾಡುತ್ತದೆ; ಆದರೆ ವಿಶೇಷವಾಗಿ ಯಾರೂ ಹೊರಗೆ ಬರುವುದಿಲ್ಲ. ಹೊರಗೆ ಬರಲು ತುಂಬಾ ವೈರಾಗ್ಯ ಬೇಕಾಗುತ್ತದೆ. ಮಾಯೆ ಮತ್ತು ನಮ್ಮ ಮನಸ್ಸನ್ನು ಪುಡಿಪುಡಿ ಮಾಡಬೇಕಾಗುತ್ತದೆ. ರೋಗಗಳ ಖಾದ್ಯವನ್ನು ನಿಲ್ಲಿಸಬೇಕಾಗುತ್ತದೆ. ವೈರಾಗ್ಯ ಸುಲಭವಾಗಿಲ್ಲ. ಶಿವಧನುಷ್ಯವನ್ನು ಯಾರು ಎತ್ತುವರು ? ಅದು ಶ್ರೀರಾಮನ ಕೃಪೆಯಿದ್ದರೆ ಮಾತ್ರ, ಸಾಧ್ಯವಾಗುವುದು.’
– ಪೂಜ್ಯ (ಹ.ಭ.ಪ.) ಸಖಾರಾಮ ರಾಮಜಿ ಬಾಂದ್ರೆ (ವಯಸ್ಸು ೭೦ ವರ್ಷ), ಕಾತಳವಾಡಿ, ತಾ. ಚಿಪಳೂಣ, ಜಿಲ್ಲೆ ರತ್ನಾಗಿರಿ, ಮಹಾರಾಷ್ಟ್ರ.
(೨೦೦೫ ರಿಂದ ೨೦೨೦ ರ ಕಾಲಾವಧಿಯಲ್ಲಿ ಪೂ. ಸಖಾರಾಮ ಬಾಂದ್ರೆ ಮಹಾರಾಜರು ಈ ಲೇಖನಗಳನ್ನು ಬರೆದಿದ್ದಾರೆ.)