ಶ್ರೀ ದತ್ತಜಯಂತಿ (ಡಿಸೆಂಬರ್ ೧೮)

ದತ್ತಜಯಂತಿಯನ್ನು ಆಚರಿಸುವ ಸಂಬಂಧದಲ್ಲಿ ಶಾಸ್ತ್ರೋಕ್ತ ವಿಶಿಷ್ಟ ವಿಧಿವಿಧಾನಗಳು ಕಂಡು ಬರುವುದಿಲ್ಲ. ಈ ಉತ್ಸವದ ಮೊದಲು ಏಳು ದಿನ ಗುರುಚರಿತ್ರೆಯ ಪಾರಾಯಣವನ್ನು ಮಾಡುವ ಪದ್ಧತಿಯಿದೆ. ಇದಕ್ಕೆ ಗುರುಚರಿತ್ರೆ ಸಪ್ತಾಹ ಎನ್ನುತ್ತಾರೆ. ಭಜನೆ, ಪೂಜೆ ಮತ್ತು ಕೀರ್ತನೆ ಇತ್ಯಾದಿ ಭಕ್ತಿಯ ವಿಧಗಳು ಪ್ರಚಲಿತವಾಗಿವೆ.

ಶ್ರೀ ದತ್ತ ಪರಿವಾರ ಮತ್ತು ಮೂರ್ತಿವಿಜ್ಞಾನ

ಹಸು ಮತ್ತು ಶ್ವಾನಗಳು ಒಂದು ರೀತಿಯಲ್ಲಿ ದತ್ತನ ಅಸ್ತ್ರಗಳೂ ಆಗಿವೆ. ಹಸುವು ಕೋಡಿನಿಂದ ತಿವಿದು ಮತ್ತು ಶ್ವಾನಗಳು ಕಚ್ಚಿ ಶತ್ರುವಿನಿಂದ ರಕ್ಷಿಸುತ್ತವೆ.

ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಹೇಳಿದಂತೆ ಶ್ರೀ ದತ್ತಗುರುಗಳ ಚಿತ್ರದ ಮುಂದೆ ಕುಳಿತು ‘ಶ್ರೀ ಗುರುದೇವ ದತ್ತ’ ಈ ನಾಮಜಪ ಮಾಡಿದ ನಂತರ ಚಿತ್ರದಲ್ಲಾದ ಬದಲಾವಣೆ

ದತ್ತಗುರುಗಳ ದೇಹದ ಬಣ್ಣ ಆರಂಭದಲ್ಲಿ ಹೆಚ್ಚು ನೀಲಿ ಆಗಿತ್ತು. ಈಗ ಬಿಳಿ ಬಣ್ಣ ಹೆಚ್ಚಾಗಿದೆ. ದತ್ತಗುರುಗಳ ತಲೆಯ ಮೇಲೆ ಹಾಗೂ ಚರಣದ ಸುತ್ತಲು ಬಿಳಿ ವಲಯ ಹೆಚ್ಚಾಗಿದೆ.

ದತ್ತನ ತ್ರಿಮುಖಿ ಮೂರ್ತಿಯ ಕೈಯಲ್ಲಿರುವ ‘ಕಮಂಡಲ (ತ್ಯಾಗ ಮತ್ತು ಚೈತನ್ಯದ ಪ್ರತೀಕ)

ಈಶ್ವರನ ನಿರ್ಗುಣ ಲಹರಿಗಳನ್ನು ಸಮಾವೇಶಗೊಳಿಸಿಕೊಳ್ಳುವ ಹಾಗೂ ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗಲು ಸಂಪೂರ್ಣ ತ್ರಿಲೋಕಕ್ಕೆ ಒಂದೇ ಸಮಯದಲ್ಲಿ ಒಂದೇ ಕ್ಷಣದಲ್ಲಿ ಮಂಡಲವನ್ನು ಹಾಕುವ ಕ್ಷಮತೆಯುಳ್ಳ ಜಲವು ಯಾವ ಕುಂಡದಲ್ಲಿದೆಯೋ, ಅಂತಹ ಕುಂಡವೆಂದರೆ ಕಮಂಡಲ. –

ಶ್ರೀ ದತ್ತ ಪರಿವಾರ ಮತ್ತು ಮೂರ್ತಿವಿಜ್ಞಾನ

ದತ್ತನೆಂದರೆ ‘(ನಿರ್ಗುಣದ ಅನುಭೂತಿಯನ್ನು) ಪಡೆದವನು. ‘ನಾನು ಬ್ರಹ್ಮನೇ ಆಗಿದ್ದೇನೆ, ಮುಕ್ತನೇ ಆಗಿದ್ದೇನೆ, ಆತ್ಮನೇ ಆಗಿದ್ದೇನೆ ಎಂಬ ನಿರ್ಗುಣದ ಅನುಭೂತಿಯನ್ನು ಯಾರಿಗೆ ಕೊಡಲಾಗಿದೆಯೋ ಅವನೇ ದತ್ತ. ಜನ್ಮದಿಂದಲೇ ದತ್ತನಿಗೆ ನಿರ್ಗುಣದ ಅನುಭೂತಿ ಇತ್ತು, ಸಾಧಕರಿಗೆ ಇಂತಹ ಅನುಭೂತಿ ಬರಲು ಎಷ್ಟೋ ಜನ್ಮಗಳವರೆಗೆ ಸಾಧನೆಯನ್ನು ಮಾಡಬೇಕಾಗುತ್ತದೆ.

ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ದತ್ತನ ತಾರಕ ಮತ್ತು ಮಾರಕ ನಾಮಜಪಗಳಿಂದಾದ ಪರಿಣಾಮ

‘ಸಮಾಜದಲ್ಲಿ ಹೆಚ್ಚುಕಡಿಮೆ  ಪ್ರಮಾಣದಲ್ಲಿ ಎಲ್ಲರಿಗೂ ಕೆಟ್ಟ ಶಕ್ತಿಗಳ ತೊಂದರೆ ಇರುತ್ತದೆ. ಕೆಟ್ಟ ಶಕ್ತಿಗಳಿಂದಾಗಿ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ, ಹಾಗೆಯೇ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ಕೆಟ್ಟ ಶಕ್ತಿಗಳು ಸಾಧಕರಿಗೆ ಸಾಧನೆಯಲ್ಲಿಯೂ ಅಡಚಣೆ ತರುತ್ತದೆ; ಆದರೆ ದುರ್ದೈವದಿಂದ ಹೆಚ್ಚಿನವರಿಗೆ ಕೆಟ್ಟ ಶಕ್ತಿಗಳ ತೊಂದರೆಯ ಕುರಿತು ಜ್ಞಾನವಿಲ್ಲ.

ದತ್ತಗುರುಗಳ ಕಾಲಾನುಸಾರ ಆವಶ್ಯಕ ಉಪಾಸನೆ

ಆಧ್ಯಾತ್ಮಿಕ ಉನ್ನತಿಗಾಗಿ ಸ್ವತಃ ಉಪಾಸನೆ ಮಾಡುವುದು ಮತ್ತು ಧರ್ಮಾಚರಣೆಯನ್ನು ಮಾಡುವುದಕ್ಕೆ ‘ವ್ಯಷ್ಟಿ ಸಾಧನೆ’ ಎನ್ನುತ್ತಾರೆ. ಸದ್ಯದ ಕಲಿಯುಗದಲ್ಲಿ ಸಮಾಜದಲ್ಲಿ ರಜ-ತಮ ಗುಣಗಳ ಪ್ರಾಬಲ್ಯವು ಹೆಚ್ಚಿದೆ. ಆದುದರಿಂದ ಸಮಾಜದ ಸಾತ್ತ್ವಿಕತೆಯನ್ನು ಹೆಚ್ಚಿಸಲು ಸ್ವತಃ ಸಾಧನೆಯನ್ನು ಮತ್ತು ಧರ್ಮಾಚರಣೆಯನ್ನು ಮಾಡುವುದರೊಂದಿಗೆ ಸಮಾಜವನ್ನೂ ಸಾಧನೆಗೆ ಮತ್ತು ಧರ್ಮಾಚರಣೆಗೆ ಪ್ರವೃತ್ತಗೊಳಿಸುವುದು ಅನಿವಾರ್ಯವಾಗಿದೆ. ಇದಕ್ಕೆ ‘ಸಮಷ್ಟಿ ಸಾಧನೆ’ ಎನ್ನುತ್ತಾರೆ.

ದತ್ತನಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು

ಹೇ ದತ್ತಾತ್ರೇಯಾ, ನನ್ನನ್ನು ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸು. ನಿನ್ನ ರಕ್ಷಾ ಕವಚವು ನನ್ನ ಸುತ್ತಲೂ ಯಾವಾಗಲೂ ಇರಲಿ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.

ದತ್ತನ ಗುರುಗಳು

ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂದದಲ್ಲಿಯದು ಮತ್ತು ಅವಧೂತರ ಸಂವಾದವಿದೆ. ಇದರಲ್ಲಿ ಅವಧೂತರು ‘ತಾವು ಯಾವ ಗುರುಗಳನ್ನು ಮಾಡಿಕೊಂಡರು ಮತ್ತು ಅವರಿಂದ ಏನು ಕಲಿತರು, ಎನ್ನುವುದನ್ನು ಹೇಳಿದ್ದಾರೆ. ಅವಧೂತ ಹೇಳುತ್ತಾನೆ, ಜಗತ್ತಿನಲ್ಲಿರುವ ಪ್ರತಿಯೊಂದು ವಿಷಯವೂ ಗುರುವಾಗಿದೆ; ಏಕೆಂದರೆ ಪ್ರತಿಯೊಂದು ವಿಷಯದಿಂದಲೂ ಏನಾದರೊಂದು ಕಲಿಯಲು ಸಿಗುತ್ತದೆ.

ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿ

ಕೆಲವು ರಂಗೋಲಿಗಳಿಂದ ದತ್ತತತ್ತ್ವ ಆಕರ್ಷಿತವಾಗಲು ಸಹಾಯವಾಗುತ್ತದೆ. ದತ್ತನ ಪೂಜೆಯ ಮೊದಲು ಹಾಗೆಯೇ ದತ್ತ ಜಯಂತಿಯಂದು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಹಾಕಬೇಕು. ಇಂತಹ ರಂಗೋಲಿಗಳಿಂದಾಗಿ  ದತ್ತತತ್ತ್ವ ಆಕರ್ಷಿತ ಮತ್ತು ಪ್ರಕ್ಷೇಪಿತವಾಗುವುದರಿಂದ ವಾತಾವರಣವು ದತ್ತತತ್ತ್ವ ಭರಿತವಾಗಿ ಭಕ್ತರಿಗೆ ಅದರ ಲಾಭವಾಗುತ್ತದೆ