ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿ

ರಂಗೋಲಿಯನ್ನು ಸುಂದರ ಹಾಗೂ ಸಾತ್ತ್ವಿಕ ಮಾಡಲು ಅದರಲ್ಲಿ ವಿವಿಧ ಬಣ್ಣಗಳೊಂದಿಗೆ ಭಾವದ ಬಣ್ಣ ಹಾಕುವುದು ಅಪೇಕ್ಷಿತವಿದೆ.

ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !

ಜಾಜಿ ಮತ್ತು ನಿಶಿಗಂಧ ಹೂವುಗಳಲ್ಲಿ ದತ್ತತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ದತ್ತನಿಗೆ ಈ ಹೂವುಗಳನ್ನು ಅರ್ಪಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ತ್ವದ ಲಾಭವಾಗುತ್ತದೆ.

ದತ್ತನ ತ್ರಿಮುಖಿ ಮೂರ್ತಿಯ ಕೈಯಲ್ಲಿರುವ ‘ಕಮಂಡಲ’

ದತ್ತನ ಕೈಯಲ್ಲಿರುವ ಕಮಂಡಲವು ಅವಶ್ಯಕತೆಗನುಸಾರ ಕೆಟ್ಟ ಶಕ್ತಿಗಳ ನಾಶಕ್ಕಾಗಿ ಬಾಗಿರುವ ಅವಸ್ಥೆಯಲ್ಲಿ, ಹತ್ತೂ ದಿಕ್ಕುಗಳಲ್ಲಿ ಸಂಚರಿಸಿ, ಆಯಾ ಸ್ಥಳಗಳಲ್ಲಿ ನಿರ್ಗುಣ ರೂಪಿ ಮಾರಕ ಚೈತನ್ಯದ ಪ್ರವಾಹೀ ಧಾರೆಯನ್ನು ಪ್ರಕ್ಷೇಪಿಸುತ್ತದೆ.

ತೊಂದರೆ ನಿವಾರಣೆಗಾಗಿ ದತ್ತನ ಜಪವನ್ನು ಎಷ್ಟು ಮಾಡಬೇಕು ?

ಮಧ್ಯಮ ತೊಂದರೆ ಇದ್ದರೆ ಕುಲ ದೇವತೆಯ ನಾಮಜಪದ ಜೊತೆಗೆ ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಪ್ರತಿದಿನ ೨ ರಿಂದ ೪ ಗಂಟೆ ಮಾಡಬೇಕು. ಅದರೊಂದಿಗೆ ಗುರುವಾರ ದತ್ತನ ದೇವಸ್ಥಾನಕ್ಕೆ ಹೋಗಿ ಏಳು ಪ್ರದಕ್ಷಿಣೆ ಹಾಕಬೇಕು ಹಾಗೂ ಅಲ್ಲಿ ಕುಳಿತು ಒಂದೆರಡು ಮಾಲೆ ಜಪ ಮಾಡಬೇಕು.

ಶ್ರೀ ದತ್ತ ಪರಿವಾರ ಮತ್ತು ಮೂರ್ತಿವಿಜ್ಞಾನ

ಭಗವಾನ ಶ್ರೀವಿಷ್ಣುವು ಕಾರ್ಯಕ್ಕನುಸಾರ ತಾಳಿದ ಒಂಬತ್ತು ಅವತಾರ. ಮಾನವನು ಕಾಲಕ್ಕನುಸಾರ ದೇವತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾನೆ. ಕ್ರಿ.ಶ. ೧೦೦೦ ನೆಯ ಇಸವಿಯಲ್ಲಿ ದತ್ತನ ಮೂರ್ತಿಯು ತ್ರಿಮುಖಿಯಾಯಿತು, ಅದಕ್ಕಿಂತ ಮೊದಲು ಅದು ಏಕಮುಖಿಯಾಗಿತ್ತು.

ದತ್ತ ಸಂಪ್ರದಾಯ

ದತ್ತಾತ್ರೇಯನು ಹೇಳಿದ ‘ಅವಧೂತಗೀತೆ’ ಮತ್ತು ಗೋರಕ್ಷನಾಥಕೃತ ‘ಸಿದ್ಧ ಸಿದ್ಧಾಂತಪದ್ಧತಿ’ ಇವುಗಳಲ್ಲಿ ಅವಧೂತಾವಸ್ಥೆಯ ಬಗ್ಗೆ ಒಂದೇ ರೀತಿಯ ವಿಚಾರಗಳನ್ನು ಮಂಡಿಸಲಾಗಿದೆ. ನಾಥಪಂಥದ ಯೋಗಿಗಳಿಗೂ ‘ಅವಧೂತ’ ಈ ಸಂಜ್ಞೆಯೇ ಇದೆ. ಇವರು ಬಂಧನಾತೀತರಾಗಿರುತ್ತಾರೆ.

ದತ್ತನಿಗೆ ಸಂಬಂಧಿಸಿದ ಪ್ರಮುಖ ತೀರ್ಥಕ್ಷೇತ್ರಗಳು ಮತ್ತು ಅವುಗಳ ವೈಶಿಷ್ಟ್ಯಗಳು

ವಾರಾಣಸಿ : ಇಲ್ಲಿ ನಾರದಘಾಟ್‌ನಲ್ಲಿ ದತ್ತಾತ್ರೇಯರ ಮಠವಿದೆ. ಇಲ್ಲಿ ಶ್ರೀ ನೃಸಿಂಹ ಸರಸ್ವತಿಯವರ ವಂಶಜರು ಇಂದಿಗೂ ಇದ್ದಾರೆ. ಅವರ ಅಡ್ಡಹೆಸರು ಕಾಳೆಯಾಗಿದೆ. ಮುಂದೆ ಕಾಳೆ ಎಂಬುದು ಕಾಲಿಯಾ ಆಗಿ ಅಪಭ್ರಂಶವಾಯಿತು. ಕಾಲಿಯಾ ಹೆಸರಿನ ತೋಟ ಹಾಗೂ ಬೀದಿ ಇಂದಿಗೂ ಅಲ್ಲಿ ಇವೆ.

ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು

ದತ್ತನ ಪೂಜೆಯ ಮೊದಲು ಹಾಗೆಯೇ ದತ್ತ ಜಯಂತಿಯಂದು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಹಾಕಬೇಕು. ಇಂತಹ ರಂಗೋಲಿಗಳಿಂದಾಗಿ  ದತ್ತತತ್ತ್ವ್ವ ಆಕರ್ಷಿತ ಮತ್ತು ಪ್ರಕ್ಷೇಪಿತವಾಗುವುದರಿಂದ ವಾತಾವರಣವು ದತ್ತತತ್ತ್ವ ಭರಿತವಾಗಿ ಭಕ್ತರಿಗೆ ಅದರ ಲಾಭವಾಗುತ್ತದೆ.

ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !

ದೇವತೆಗಳ ಉಪಾಸನೆಯ ಹಿಂದಿನ ಶಾಸ್ತ್ರವು ನಮಗೆ ತಿಳಿದರೆ ಉಪಾಸನೆಯನ್ನು ಹೆಚ್ಚು ಶ್ರದ್ಧೆಯಿಂದ ಮಾಡಲು ಸಹಾಯವಾಗುತ್ತದೆ. ಶ್ರದ್ಧಾಯುಕ್ತವಾಗಿ ಮಾಡಿದ ಉಪಾಸನೆಯಿಂದ ಒಳ್ಳೆಯ ಫಲವು ದೊರೆಯುತ್ತದೆ. ಹಾಗೆಯೇ ಉಪಾಸನೆಗೆ ಸಂಬಂಧಿಸಿದ ಕೃತಿಗಳು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯವಾಗಿರುವುದು ಅವಶ್ಯಕವಾಗಿರುತ್ತದೆ.

ವೈರಾಗ್ಯ ಸ್ವರೂಪ, ಕ್ಷಮಾಶೀಲ ಮತ್ತು ಭಕ್ತವತ್ಸಲರಾಗಿರುವ ಭಗವಾನ ದತ್ತಾತ್ರೇಯ !

ಬ್ರಹ್ಮದೇವರು ಜ್ಞಾನಸ್ವರೂಪ, ಶ್ರೀವಿಷ್ಣು ವಾತ್ಸಲ್ಯ ಸ್ವರೂಪ ಮತ್ತು ಶಿವನು ವೈರಾಗ್ಯ ಸ್ವರೂಪವಾಗಿದ್ದಾರೆ. ಇಂತಹ ತ್ರಿಮೂರ್ತಿಗಳ ಸಂಯುಕ್ತ ರೂಪವಾಗಿರುವ ದತ್ತಾತ್ರೇಯನು ಜ್ಞಾನ, ವಾತ್ಸಲ್ಯ ಮತ್ತು ವೈರಾಗ್ಯಗಳ ಸುಂದರ ಸಂಗಮವಾಗಿದ್ದಾನೆ.