ಶ್ರೀ ದತ್ತ ಪರಿವಾರ ಮತ್ತು ಮೂರ್ತಿವಿಜ್ಞಾನ

೧. ಅರ್ಥ

ದತ್ತನೆಂದರೆ ‘ನಿರ್ಗುಣದ ಅನುಭೂತಿಯನ್ನು ಪಡೆದವನು.’ ‘ನಾನು ಬ್ರಹ್ಮನೇ ಆಗಿದ್ದೇನೆ, ಮುಕ್ತನೇ ಆಗಿದ್ದೇನೆ, ಆತ್ಮನೇ ಆಗಿದ್ದೇನೆ’ ಎಂಬ ನಿರ್ಗುಣದ ಅನುಭೂತಿಯನ್ನು ಯಾರಿಗೆ ಕೊಡಲಾಗಿದೆಯೋ ಅವನೇ ದತ್ತ. ಜನ್ಮದಿಂದಲೇ ದತ್ತನಿಗೆ ನಿರ್ಗುಣದ ಅನುಭೂತಿ ಇತ್ತು, ಸಾಧಕರಿಗೆ ಇಂತಹ ಅನುಭೂತಿ ಬರಲು ಎಷ್ಟೋ ಜನ್ಮಗಳ ವರೆಗೆ ಸಾಧನೆಯನ್ನು ಮಾಡಬೇಕಾಗುತ್ತದೆ. ಇದರಿಂದ ದತ್ತನ ಮಹತ್ವವು ಗಮನಕ್ಕೆ ಬರುತ್ತದೆ.

೨. ಇತರ ಕೆಲವು ಹೆಸರುಗಳು

೨ ಅ. ಅವಧೂತ

‘ಅವಧೂತ ಚಿಂತನ ಶ್ರೀ ಗುರುದೇವ ದತ್ತ |’ ಎಂಬ ಜಯಘೋಷವನ್ನು ದತ್ತಭಕ್ತರು ಮಾಡುತ್ತಾರೆ. ಇದರ ಅರ್ಥವು ಹೀಗಿದೆ – ಅವಧೂತನೆಂದರೆ ಭಕ್ತ. ಭಕ್ತರ ಚಿಂತನೆಯನ್ನು ಮಾಡುವವನು, ಅಂದರೆ ಭಕ್ತರ ಹಿತಚಿಂತಕ, ಶ್ರೀ ಗುರುದೇವ ದತ್ತ.

೨ ಆ. ದಿಗಂಬರ: ‘ದಿಕ್ ಏವ ಅಂಬರಃ|’ ದಿಕ್ ಅಂದರೆ ದಿಕ್ಕುಗಳೇ ಯಾವನ ಅಂಬರವಾಗಿವೆಯೋ, ಅಂದರೆ ವಸ್ತ್ರವಾಗಿವೆಯೋ, ಅವನೇ ದಿಗಂಬರ; ಅಂದರೆ ಅವನು ಇಷ್ಟು ವಿಶಾಲನಾಗಿದ್ದಾನೆ, ಸರ್ವವ್ಯಾಪಿಯಾಗಿದ್ದಾನೆ.

೩. ಮೂರ್ತಿವಿಜ್ಞಾನ

ಪ್ರತಿಯೊಬ್ಬ ದೇವರು ಒಂದು ತತ್ತ್ವವಾಗಿದ್ದಾರೆ. ಈ ತತ್ತ್ವವು ಯುಗಯುಗಗಳಲ್ಲೂ ಇದ್ದೇ ಇರುತ್ತದೆ. ದೇವತೆಯ ತತ್ತ್ವವು ಆಯಾ ಕಾಲಕ್ಕೆ ಆವಶ್ಯಕವಾದಂತಹ ಸಗುಣ ರೂಪದಲ್ಲಿ ಪ್ರಕಟವಾಗುತ್ತದೆ, ಉದಾ. ಭಗವಾನ ಶ್ರೀವಿಷ್ಣುವು ಕಾರ್ಯಕ್ಕನುಸಾರ ತಾಳಿದ ಒಂಬತ್ತು ಅವತಾರಗಳು. ಮಾನವನು ಕಾಲಕ್ಕನುಸಾರ ದೇವತೆಯನ್ನು ವಿವಿಧ ರೂಪಗಳಲ್ಲಿ ಪೂಜಿಸುತ್ತಾನೆ. ಕ್ರಿ.ಶ. ೧೦೦೦ ನೆಯ ಇಸವಿಯ ಸಮಯದಲ್ಲಿ ದತ್ತನ ಮೂರ್ತಿಯು ತ್ರಿಮುಖಿಯಾಯಿತು, ಅದಕ್ಕಿಂತ ಮೊದಲು ಅದು ಏಕಮುಖಿಯಾಗಿತ್ತು. ದತ್ತನ ತ್ರಿಮುಖಿ ಮೂರ್ತಿಯ ಪ್ರತಿಯೊಂದು ಕೈಯಲ್ಲಿನ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ

ಕಮಂಡಲ ತ್ಯಾಗದ ಪ್ರತೀಕ : ಕಮಂಡಲ ಮತ್ತು ದಂಡ ಈ ವಸ್ತುಗಳು ಸಂನ್ಯಾಸಿಯ ಜೊತೆಗೆ ಇರುತ್ತವೆ. ಸಂನ್ಯಾಸಿಯು ವಿರಕ್ತನಾಗಿರುತ್ತಾನೆ. ಕಮಂಡಲವು ಒಂದು ರೀತಿಯಲ್ಲಿ ತ್ಯಾಗದ ಪ್ರತೀಕವಾಗಿದೆ; ಏಕೆಂದರೆ ಕಮಂಡಲವೇ ಅವನ ಐಹಿಕ ಧನವಾಗಿರುತ್ತದೆ.

ತ್ರಿಶೂಲ : ತ್ರಿಮೂರ್ತಿಯ ರೂಪದಲ್ಲಿನ ಮಹೇಶನ ಕೈಯಲ್ಲಿನ ತ್ರಿಶೂಲ ಮತ್ತು ಭಗವಾನ್ ಶಿವನ ಕೈಯಲ್ಲಿನ ತ್ರಿಶೂಲ ಇವರಿಬ್ಬರಲ್ಲಿ ಒಂದು ವೈಶಿಷ್ಟ್ಯಪೂರ್ಣ ವ್ಯತ್ಯಾಸವಿದೆ. ತ್ರಿಮೂರ್ತಿ ರೂಪದಲ್ಲಿನ ಮಹೇಶನ ಕೈಯಲ್ಲಿನ ತ್ರಿಶೂಲದ ಮೇಲೆ ಶೃಂಗ ಹಾಗೂ ವಸ್ತ್ರ ಕಾಣಿಸುವುದಿಲ್ಲ. ಇದರ ಏಕೆಂದರೆ ಶೃಂಗವನ್ನು ಬಾರಿಸಲು ದತ್ತನ ಕೈಗಳು ಖಾಲಿಯಿಲ್ಲ.

೪. ಪರಿವಾರದ ಭಾವಾರ್ಥ

ಅ. ಹಸು (ಹಿಂದೆ ನಿಂತಿರುವ) : ಪೃಥ್ವಿ ಮತ್ತು ಕಾಮಧೇನು

ಆ. ನಾಲ್ಕು ಶ್ವಾನಗಳು

೧. ಇವು ನಾಲ್ಕು ವೇದಗಳ ಪ್ರತೀಕ.

೨. ಹಸು ಮತ್ತು ಶ್ವಾನಗಳು ಒಂದು ರೀತಿಯಲ್ಲಿ ದತ್ತನ ಅಸ್ತ್ರಗಳೂ ಆಗಿವೆ. ಹಸುವು ಕೋಡಿನಿಂದ ತಿವಿದು ಮತ್ತು ಶ್ವಾನಗಳು ಕಚ್ಚಿ ಶತ್ರುವಿನಿಂದ ರಕ್ಷಿಸುತ್ತವೆ.

ಇ. ಔದುಂಬರ ವೃಕ್ಷ : ದತ್ತನ ಪೂಜನೀಯ ರೂಪ.

(ಆಧಾರ : ಸನಾತನದ ಗ್ರಂಥ ‘ದತ್ತ’)