ದತ್ತಗುರುಗಳ ಕಾಲಾನುಸಾರ ಆವಶ್ಯಕ ಉಪಾಸನೆ

ಆಧ್ಯಾತ್ಮಿಕ ಉನ್ನತಿಗಾಗಿ ಸ್ವತಃ ಉಪಾಸನೆ ಮಾಡುವುದು ಮತ್ತು ಧರ್ಮಾಚರಣೆಯನ್ನು ಮಾಡುವುದಕ್ಕೆ ‘ವ್ಯಷ್ಟಿ ಸಾಧನೆ’ ಎನ್ನುತ್ತಾರೆ. ಸದ್ಯದ ಕಲಿಯುಗದಲ್ಲಿ ಸಮಾಜದಲ್ಲಿ ರಜ-ತಮ ಗುಣಗಳ ಪ್ರಾಬಲ್ಯವು ಹೆಚ್ಚಿದೆ. ಆದುದರಿಂದ ಸಮಾಜದ ಸಾತ್ತ್ವಿಕತೆಯನ್ನು ಹೆಚ್ಚಿಸಲು ಸ್ವತಃ ಸಾಧನೆಯನ್ನು ಮತ್ತು ಧರ್ಮಾಚರಣೆಯನ್ನು ಮಾಡುವುದರೊಂದಿಗೆ ಸಮಾಜವನ್ನೂ ಸಾಧನೆಗೆ ಮತ್ತು ಧರ್ಮಾಚರಣೆಗೆ ಪ್ರವೃತ್ತಗೊಳಿಸುವುದು ಅನಿವಾರ್ಯವಾಗಿದೆ. ಇದಕ್ಕೆ ‘ಸಮಷ್ಟಿ ಸಾಧನೆ’ ಎನ್ನುತ್ತಾರೆ. ದತ್ತನ ಉಪಾಸನೆಗೆ ಪೂರ್ಣತ್ವವು ಪ್ರಾಪ್ತವಾಗಲು ದತ್ತಭಕ್ತರು ವ್ಯಷ್ಟಿ ಹಾಗೂ ಸಮಷ್ಟಿ ಇವೆರಡೂ ಸಾಧನೆಗಳನ್ನು ಮಾಡುವುದು ಆವಶ್ಯಕವಾಗಿದೆ.

೧. ದೇವಸ್ಥಾನಗಳ ಪಾವಿತ್ರ್ಯ ರಕ್ಷಿಸುವುದು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವುದು

ದತ್ತನ ಹಾಗೂ ಇತರ ದೇವತೆಗಳ ದೇವಸ್ಥಾನಗಳಲ್ಲಿ ಆಗುವ ತಪ್ಪು ಆಚರಣೆಗಳನ್ನು ತಡೆಗಟ್ಟಿರಿ!

ಅ. ದರ್ಶನಕ್ಕಾಗಿ ಜನಸಂದಣಿ ಮಾಡಬೇಡಿರಿ. ಸಾಲಿನಲ್ಲಿ ನಿಂತು ಶಾಂತಿಯಿಂದ ದರ್ಶನ ಪಡೆಯಬೇಕು. ಶಾಂತಿಯಿಂದ ಭಾವಪೂರ್ಣ ದರ್ಶನವನ್ನು ಪಡೆಯುವುದರಿಂದ ದರ್ಶನದ ನಿಜವಾದ ಲಾಭವಾಗುತ್ತದೆ.

ಆ. ದೇವಸ್ಥಾನದಲ್ಲಿ ಅಥವಾ ಗರ್ಭಗುಡಿಯಲ್ಲಿ ಗದ್ದಲ ಮಾಡಬೇಡಿರಿ. ಇದರಿಂದ ದೇವಸ್ಥಾನದ ಸಾತ್ತ್ವಿಕತೆಯು ಕಡಿಮೆಯಾಗುತ್ತದೆ, ಹಾಗೆಯೇ ಅಲ್ಲಿ ದರ್ಶನ ಪಡೆಯುವ, ನಾಮಜಪ ಮಾಡುವ ಅಥವಾ ಧ್ಯಾನಕ್ಕೆ ಕುಳಿತ ಭಕ್ತರಿಗೂ ತೊಂದರೆಯಾಗುತ್ತದೆ.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ದತ್ತ)

ದತ್ತನ ವಿಡಂಬನೆ ತಡೆಗಟ್ಟುವುದು

ಸದ್ಯ ವಿವಿಧ ರೀತಿಯಲ್ಲಿ ದೇವತೆಗಳ ವಿಡಂಬನೆಗಳಾಗುತ್ತಿವೆ, ವ್ಯಾಖ್ಯಾನಗಳು, ಪುಸ್ತಕಗಳು ಇತ್ಯಾದಿಗಳ ಮಾಧ್ಯಮದಿಂದ, ದೇವತೆಗಳ ಮೇಲೆ ಟೀಕೆಗಳನ್ನು ಮಾಡಲಾಗುತ್ತದೆ; ದೇವತೆಗಳ ವೇಷಭೂಷಣ ವನ್ನು ಧರಿಸಿ ಭಿಕ್ಷೆ ಬೇಡಲಾಗುತ್ತದೆ. ವ್ಯಾಪಾರಿ ಉದ್ದೇಶಕ್ಕಾಗಿ ಜಾಹೀರಾತುಗಳಿಗೆ ದೇವತೆಗಳನ್ನು ‘ರೂಪದರ್ಶಿ (ಮಾಡೆಲ್) ಎಂದು ಉಪಯೋಗಿಸಲಾಗುತ್ತದೆ. ನಾಟಕ ಮತ್ತು ಚಲನಚಿತ್ರಗಳಿಂದಲೂ ಸರಾಗವಾಗಿ ವಿಡಂಬನೆಯಾಗುತ್ತಿರುತ್ತದೆ.

೧. ದೇವತೆಗಳ ವಿಡಂಬನೆ ತಡೆಗಟ್ಟುವುದು ಸಮಷ್ಟಿ ಉಪಾಸನೆ

ದೇವತೆಗಳ ಉಪಾಸನೆಯ ಮೂಲದಲ್ಲಿ ಶ್ರದ್ಧೆಯಿರುತ್ತದೆ. ದೇವತೆಗಳನ್ನು ಮೇಲಿನಂತೆ ಅವಮಾನಿಸುವುದರಿಂದ ಶ್ರದ್ಧೆಯ ಮೇಲೆ ಪರಿಣಾಮವಾಗುತ್ತದೆ, ಆದುದರಿಂದ ಇದು ಧರ್ಮಹಾನಿಯಾಗುತ್ತದೆ.ಧರ್ಮಹಾನಿಯನ್ನು ತಡೆಗಟ್ಟುವುದು ಕಾಲಾನುಸಾರ ಆವಶ್ಯಕ ಧರ್ಮಪಾಲನೆಯೇ ಆಗಿದೆ, ಅದು ದೇವತೆಗಳ ಸಮಷ್ಟಿ ಸ್ತರದ ಉಪಾಸನೆಯೇ ಆಗಿದೆ.

೨. ದೇವತೆಗಳ ವಿಡಂಬನೆ ತಡೆಯಲು ಇವುಗಳನ್ನು ಮಾಡಿರಿ !

ದೇವತೆಗಳ ನಗ್ನ/ಅಶ್ಲೀಲ ಚಿತ್ರಗಳನ್ನು ಬಿಡಿಸಿ ಅವುಗಳನ್ನು ಬಹಿರಂಗವಾಗಿ ಮಾರಾಟ ಮಾಡುವ ಹಿಂದೂದ್ವೇಷಿಗಳನ್ನು ಮತ್ತು ಇಂತಹ ಚಿತ್ರಗಳ ಪ್ರದರ್ಶನಗಳನ್ನು ನಿಷೇಧಿಸಿ !

ಆ. ದೇವತೆಗಳ ವಿಡಂಬನೆ ಮಾಡುವ ಜಾಹೀರಾತುಗಳಿರುವ ಉತ್ಪಾದನೆ, ವಾರ್ತಾಪತ್ರಿಕೆ ಮತ್ತು ಕಾರ್ಯಕ್ರಮಗಳನ್ನು ಬಹಿಷ್ಕರಿಸಿರಿ

ಧರ್ಮರಕ್ಷಣೆಯ ಕಾರ್ಯದಲ್ಲಿ ಪಾಲ್ಗೊಳ್ಳಿರಿ !

‘ಹಿಂದೂ ಜನಜಾಗೃತಿ ಸಮಿತಿ ಮತ್ತು ‘ಸನಾತನ ಸಂಸ್ಥೆಯು ಕಳೆದ ಕೆಲವು ವರ್ಷಗಳಿಂದ ದೇವತೆಗಳು ಮತ್ತು ಸಂತರ ವಿಡಂಬನೆ, ಉತ್ಸವಗಳಲ್ಲಿನ ಅನುಚಿತ ವಿಷಯಗಳು, ದೇವಸ್ಥಾನಗಳ ಸರಕಾರೀಕರಣ ಇತ್ಯಾದಿಗಳ ವಿರೋಧದಲ್ಲಿ ಕಾನೂನುಮಾರ್ಗದಿಂದ ವ್ಯಾಪಕ ಜನಜಾಗೃತಿ ಚಳುವಳಿಯನ್ನು ನಡೆಸುತ್ತಿವೆ. ದತ್ತಭಕ್ತರೇ, ತಾವೂ ಇವುಗಳಲ್ಲಿ ಪಾಲ್ಗೊಂಡು ಧರ್ಮಕರ್ತವ್ಯವನ್ನು ನಿಭಾಯಿಸಿರಿ.