ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !

ದೇವತೆಗಳ ಉಪಾಸನೆಯ ಹಿಂದಿನ ಶಾಸ್ತ್ರವು ನಮಗೆ ತಿಳಿದರೆ ಉಪಾಸನೆಯನ್ನು ಹೆಚ್ಚು ಶ್ರದ್ಧೆಯಿಂದ ಮಾಡಲು ಸಹಾಯವಾಗುತ್ತದೆ. ಶ್ರದ್ಧಾಯುಕ್ತವಾಗಿ ಮಾಡಿದ ಉಪಾಸನೆಯಿಂದ ಒಳ್ಳೆಯ ಫಲವು ದೊರೆಯುತ್ತದೆ. ಉಪಾಸನೆಗೆ ಸಂಬಂಧಿಸಿದ ಕೃತಿಗಳು ಅಧ್ಯಾತ್ಮ ಶಾಸ್ತ್ರದ ದೃಷ್ಟಿಯಿಂದ ಯೋಗ್ಯವಾಗಿರಬೇಕು. ಏಕೆಂದರೆ ಇಂತಹ ಕೃತಿಯಿಂದಲೇ ಹೆಚ್ಚು ಫಲವು ದೊರೆಯುತ್ತದೆ.

ತಪಸ್ವೀ ಅನಸೂಯೆಯಿಂದ ಆದ ದತ್ತನ ಜನ್ಮದ ಅದ್ಭುತ ಕಥೆ

ದತ್ತಾತ್ರೆಯರ ಜನ್ಮದ ಕಥೆ ಅದ್ಭುತವಾಗಿದೆ. ಒಮ್ಮೆ ಬ್ರಹ್ಮಾ,ವಿಷ್ಣು ಮತ್ತು ಮಹೇಶರು ಅನುಸೂಯಾಳಲ್ಲಿಗೆ ಋಷಿಗಳ ವೇಶದಲ್ಲಿ ಭಿಕ್ಷೆ ಬೇಡಲು ಹೋದರು; ಏಕೆಂದರೆ, ಭಗವಂತನು ಮಾತಾ ಅನುಸೂಯೆಗೆ ನಾನು ನಿನ್ನ ಉದರದಲ್ಲಿ ಜನ್ಮ ತಾಳುವೆನು, ಎಂದು ವರ ನೀಡಿದ್ದನು. ಅನಸೂಯೆಯ ಪತಿ ಅತ್ರಿ ಋಷಿ ಅಂದರೆ ಬ್ರಹ್ಮದೇವರ ಪುತ್ರರಾಗಿದ್ದರು.

ಶ್ರೀ ದತ್ತ ಜಯಂತಿ (ಡಿಸೆಂಬರ್ ೨೯)

‘ಹಿಂದಿನ ಕಾಲದಲ್ಲಿ ಪೃಥ್ವಿಯ ಮೇಲೆ ಸ್ಥೂಲ ಮತ್ತು ಸೂಕ್ಷ್ಮರೂಪ ದಲ್ಲಿ ಅಸುರೀ ಶಕ್ತಿಗಳು ಪ್ರಾಬಲ್ಯ ಬಹಳ ಹೆಚ್ಚಾಗಿತ್ತು. ಅವರನ್ನು ದೈತ್ಯ ರೆಂದು ಕರೆಯಲಾಗುತ್ತಿತ್ತು. ದೇವಗಣರು ಆ ಅಸುರೀ ಶಕ್ತಿಗಳನ್ನು ನಾಶಗೊಳಿಸಲು ಮಾಡಿದ ಪ್ರಯತ್ನ ಗಳೆಲ್ಲವೂ ವಿಫಲವಾದವು. ಆಗ ಬ್ರಹ್ಮದೇವನ ಆಜ್ಞೆಗನುಸಾರ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ದತ್ತನು ಅವತಾರ ತಾಳಬೇಕಾಯಿತು. ಆನಂತರ ದೈತ್ಯರು ನಾಶವಾದರು. ದತ್ತನು ಅವತಾರ ತಾಳಿದ ದಿನವನ್ನು ‘ದತ್ತಜಯಂತಿಯೆಂದು ಆಚರಿಸಲಾಗುತ್ತದೆ.