ಈಶ್ವರೀ ದೂತನ ಸ್ವರ ಬಾನೆತ್ತರಕ್ಕೆ ತಲುಪಿತು !

ಸಂಗೀತಶಕ್ತಿಯೊಂದಿಗೆ ನಿಮ್ಮ ಯೋಗಶಕ್ತಿ ಜೊತೆಗೂಡಿದರೆ, ದ್ವಿಶಕ್ತಿಗಳು ಸೇರಿಕೊಂಡು ನೀವು ‘ರಾಕೆಟ್ ನಲ್ಲಿ ದೇವರೆಡೆಗೆ ಹೋಗುವಿರಿ ಎಂದು ಇಂದಿನ ಕಾಲದಲ್ಲಿಯೂ ದೃಢವಾಗಿ ಪ್ರತಿಪಾದಿಸುವ ಮೇವಾತಿ ಮನೆತನದ ಪದ್ಮವಿಭೂಷಣ ಪಂಡಿತ ಜಸರಾಜರು ಈಗ ನಿಜವಾಗಿಯೂ ಭಗವಂತನ ಚರಣಗಳಲ್ಲಿ ಅವರ ಸೇವೆಗೆ ರುಜುವಾಗಲು ಈ ಭೂತಲದಿಂದ ನಿರ್ಗಮಿಸಿದರು.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗ ಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ.

‘ಸೆಕ್ಯುಲರಿ ಸಂಸ್ಕೃತಿದ್ವೇಷಿ ಹಿಂದೂಗಳು ಹಿಂದೂಗಳನ್ನು ಜೀವಚ್ಛವಗೊಳಿಸಿದರು !

‘ಜಾತ್ಯತೀತ ಸರಕಾರ ಬಂದಿತು ಮತ್ತು ಜಾತ್ಯತೀತತೆಯ ಅಚ್ಚಿನಲ್ಲಿ ಹಿಂದೂಗಳನ್ನು ವ್ಯಾಖ್ಯಾನಿಸುವ ಅವಶ್ಯಕತೆ ಉಂಟಾಯಿತು ಮತ್ತು ‘ಹಿಂದೂ ಪದದ ಅವಹೇಳನವಾಯಿತು. ‘ಹಿಂದುತ್ವ (Hinduism) ಈ ಪದವು ‘ರಾಮ ಮೋಹನ ರಾಯನಿಂದ ಬಂದಿದೆ. ‘ಹಿಂದುತ್ವ ಈ ಪದವು ಪ್ರವಾದಿಗಳ ಅಂದರೆ ಇಸ್ಲಾಮ್, ಕ್ರಿಶ್ಚಿಯನ್ ಹೀಗೆ ಸೆಮೆಟಿಕ್ ಧರ್ಮದ ಸಾಲಿನಲ್ಲಿ ಬಂದಿತು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಮಾಜ ಸಾತ್ತ್ವಿಕವಾಗಲು ಧರ್ಮ ಶಿಕ್ಷಣವನ್ನು ನೀಡದೇ ಕೇವಲ ಅಪರಾಧಿಗಳಿಗೆ ಶಿಕ್ಷೆ ನೀಡಿ ಅಪರಾಧ ತಡೆಯಲು ಸಾಧ್ಯವಿಲ್ಲ ಎಂಬುದೂ ತಿಳಿಯದ ಇಲ್ಲಿಯವರೆಗಿನ ರಾಜಕಾರಣಿಗಳು ! ಹಿಂದೂ ರಾಷ್ಟ್ರದಲ್ಲಿ ಎಲ್ಲರಿಗೂ ಧರ್ಮಶಿಕ್ಷಣ ನೀಡಿದರೆ ಅಪರಾಧಿಗಳೇ ಇರುವುದಿಲ್ಲ !

ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಕೆಲವು ಹಿತಚಿಂತಕರು ಈ ಮೊದಲು ಸಹ ಈ ಯೋಜನೆಗೆ ಸಹಾಯ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಎಲ್ಲೆಡೆಗಳಲ್ಲಿರುವ ಆಶ್ರಮಗಳು ಹಾಗೂ ಸೇವಾಕೇಂದ್ರಗಳ ಚಿಕ್ಕ-ದೊಡ್ಡ ಪ್ರಸ್ತಾಪಿತ ಯೋಜನೆಗಳ ವ್ಯಾಪ್ತಿಯ ವಿಚಾರ ಮಾಡಿದಾಗ ದೊಡ್ಡ ಪ್ರಮಾಣದಲ್ಲಿ ನಿಧಿಯ ಆವಶ್ಯಕತೆಯಿದೆ. ಮೊದಲ ಹಂತದಲ್ಲಿ ಒಟ್ಟು ೧೫೦ ‘ಕಿಲೋವ್ಯಾಟ್ ಕ್ಷಮತೆಯುಳ್ಳ ಸೌರಶಕ್ತಿ ಘಟಕವನ್ನು ಸ್ಥಾಪಿಸಲಾಗುವುದು.

ಆಪತ್ಕಾಲದಿಂದ ಸುರಕ್ಷಿತವಾಗಿ ಪಾರಾಗಲು ಸಾಧನೆಯನ್ನು ಕಲಿಸುವ ಸನಾತನ ಸಂಸ್ಥೆ !

ವಾಸಿಸುತ್ತಿರುವ ಮನೆಯು ಕುಸಿಯುವ ಸ್ಥಿತಿಯಲ್ಲಿದ್ದರೆ ಅಥವಾ ಕೆಲವು ಭಾಗ ಕುಸಿಯುತ್ತಿದ್ದರೆ ಅಥವಾ ಮನೆಯ ಮಹತ್ವದ ದುರಸ್ತಿಯನ್ನು ಮಾಡುವುದು ಬಾಕಿಯಿದ್ದಲ್ಲಿ ಮುಂದೆ ಆಪತ್ಕಾಲದಲ್ಲಿ ನೆರೆ, ಬಿರುಗಾಳಿ ಮುಂತಾದ ಆಪತ್ತುಗಳು ಎದುರಾದಾಗ ಮನೆಯು ಬೀಳುವ ಸಾಧ್ಯತೆಯಿರುತ್ತದೆ ಅಥವಾ ಮನೆ ಕುಸಿಯುವ ಸಾಧ್ಯತೆಯಿರುತ್ತದೆ. ಆಪತ್ಕಾಲದಲ್ಲಿ ಮನೆಯನ್ನು ದುರುಸ್ತಿ ಮಾಡಿಸಿಕೊಳ್ಳುವುದೂ ಸಹ ಬಹಳ ಕಠಿಣವಾಗಬಹುದು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ನಾಗರಿಕರಿಗಾಗಿ ಮಹತ್ವದ ಮಾಹಿತಿ

ಪ್ರವಾಹದ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಎಷ್ಟೇ ಪೂರ್ವ ಸಿದ್ಧತೆಗಳನ್ನು ಮಾಡಿದರೂ, ನಮ್ಮ ರಕ್ಷಣೆಯಾಗಲು ಪ್ರತಿನಿತ್ಯ ಭಗವಂತನ ಆರಾಧನೆ (ಸಾಧನೆ)ಯನ್ನು ಮಾಡಬೇಕು. ಸರ್ವಸಾಮಾನ್ಯ ವ್ಯಕ್ತಿ ಆಪತ್ಕಾಲದ ಸ್ಥಿತಿಯಲ್ಲಿ ತುಂಬಾ ಹೆದರುತ್ತಾನೆ. ಆದರೆ ಸಾಧನೆಯನ್ನು ಮಾಡುವವರ(ಸಾಧಕರ) ಮನಸ್ಸಿನಲ್ಲಿ ಮಾತ್ರ ‘ಈ ಕಠಿಣ ಪ್ರಸಂಗದಲ್ಲಿ ದೇವರು ನಮ್ಮ ರಕ್ಷಣೆಯನ್ನು ಮಾಡುತ್ತಾನೆ, ಎನ್ನುವ ದೃಢ ವಿಶ್ವಾಸವಿರುವುದರಿಂದ ಅವರು ಕಠಿಣ ಪರಿಸ್ಥಿತಿಯಲ್ಲಿಯೂ ಸ್ಥಿರವಾಗಿರಬಲ್ಲರು.

ನಾವೀನ್ಯಪೂರ್ಣ ಆಧ್ಯಾತ್ಮಿಕ  ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಅಥರ್ವಶೀರ್ಷವನ್ನು ಬಹಳ ನಿಧಾನವಾಗಿ ಮತ್ತು ಒಂದೇ ಲಯದಲ್ಲಿ ಹೇಳಬೇಕು. ಸ್ತೋತ್ರವನ್ನು ಹೇಳುವ ಮೊದಲು ಸ್ನಾನ ಮಾಡಬೇಕು. ಕುಳಿತುಕೊಳ್ಳಲು ಒಗೆದು ಮಡಚಿದ ವಸ್ತ್ರ, ಮೃಗಾಜಿನ, ಉಣ್ಣೆಯ ಪಂಚೆ ಅಥವಾ ದರ್ಭೆಯ ಚಾಪೆಯನ್ನು ಉಪಯೋಗಿಸಬೇಕು. ಪಠಣ ಪೂರ್ಣವಾಗುವವರೆಗೆ ಪುನಃ ಪುನಃ ಕಾಲುಗಳನ್ನು ಬದಲಾಯಿಸುವ ಆವಶ್ಯಕತೆ ಬರದಂತಹ ಸುಲಭ ಸುಖಾಸನದಲ್ಲಿ (ಕಾಲುಮಡಚಿ) ಕುಳಿತುಕೊಳ್ಳಬೇಕು.

೧೦ ನೇ ತರಗತಿಯ ಪರೀಕ್ಷೆಯಲ್ಲಿ ಸನಾತನದ ಬಾಲ ಸಾಧಕರ ಸುಯಶಸ್ಸು !

ಪ್ರತಿ ವಾರ ತಮ್ಮ ವ್ಯಷ್ಟಿ ಸಾಧನೆಯ ವರದಿಯನ್ನು ನೀಡುತ್ತಾನೆ. ಪ್ರತಿದಿನ ಬೆಳಗ್ಗೆ ೫.೩೦ ಗಂಟೆಗೆ ಏಳುತ್ತಾನೆ ಮತ್ತು ತಪ್ಪದೇ ಅಗ್ನಿಹೋತ್ರ, ಸಂಧ್ಯಾವಂದನೆ ಮಾಡುತ್ತಾನೆ. ಈ ಬಾರಿ ಪರೀಕ್ಷೆಯ ದಿನಾಂಕ ಬದಲಾಗುತ್ತಿದ್ದರೂ ಅವನು ವಿಚಲಿತನಾಗದೆ ವಿದ್ಯಾಭ್ಯಾಸ ಮತ್ತು ವ್ಯಷ್ಟಿ ಸಾಧನೆಯತ್ತ ಗಮನ ಕೊಡುತ್ತಿದ್ದರು. ‘ಇದೆಲ್ಲ ಗುರುಕೃಪೆ ಮತ್ತು ಗುರುಗಳು ಹೇಳಿದ ಸಾಧನೆಯಿಂದ ಸಾಧ್ಯವಾಯಿತು ಎನ್ನುತ್ತಾನೆ ಎಂದು ಹೇಳಿದ್ದಾರೆ.

ಸಪ್ಟೆಂಬರ್ ೩ ರಿಂದ ಆರಂಭವಾಗಲಿರುವ ಮಹಾಲಯಾರಂಭದ ನಿಮಿತ್ತ…

ಹಿಂದೂ ಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ‘ಶ್ರಾದ್ಧ ಕರ್ಮವು ಆವಶ್ಯಕವಾಗಿದೆ. ತಂದೆ ತಾಯಿ ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಬೇಕೆಂದು ಮಾಡಬೇಕಾದ ಸಂಸ್ಕಾರಕ್ಕೆ ‘ಶ್ರಾದ್ಧ ಎನ್ನುತ್ತಾರೆ.