ಸಪ್ಟೆಂಬರ್ ೩ ರಿಂದ ಆರಂಭವಾಗಲಿರುವ ಮಹಾಲಯಾರಂಭದ ನಿಮಿತ್ತ…

ಹಿಂದೂ ಧರ್ಮದಲ್ಲಿ ಹೇಳಿರುವ ಈಶ್ವರಪ್ರಾಪ್ತಿಯ ಮೂಲಭೂತ ಸಿದ್ಧಾಂತಗಳಲ್ಲಿ ‘ದೇವಋಣ, ಋಷಿಋಣ, ಪಿತೃಋಣ ಮತ್ತು ಸಮಾಜಋಣವನ್ನು ತೀರಿಸುವುದು ಒಂದು ಮುಖ್ಯ ಉದ್ದೇಶವಾಗಿದೆ. ಇವುಗಳಲ್ಲಿ ಪಿತೃಋಣವನ್ನು ತೀರಿಸಲು ‘ಶ್ರಾದ್ಧ ಕರ್ಮವು ಆವಶ್ಯಕವಾಗಿದೆ. ತಂದೆ ತಾಯಿ ಮತ್ತು ಸಂಬಂಧಿಕರ ಮರಣೋತ್ತರ ಪ್ರಯಾಣವು ಸುಖಕರ ಮತ್ತು ಕ್ಲೇಶರಹಿತವಾಗಿ, ಅವರಿಗೆ ಸದ್ಗತಿಯು ಸಿಗಬೇಕೆಂದು ಮಾಡಬೇಕಾದ ಸಂಸ್ಕಾರಕ್ಕೆ ‘ಶ್ರಾದ್ಧ ಎನ್ನುತ್ತಾರೆ.

ಶ್ರಾದ್ಧವನ್ನು ಯಾವಾಗ ಮಾಡಬೇಕು ?

ಭಾದ್ರಪದ ಅಮಾವಾಸ್ಯೆಯಂದು ನಮ್ಮ ಕುಲದಲ್ಲಿದ್ದ ಎಲ್ಲ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ಮಾಡಲಾಗುತ್ತದೆ. ಆದುದರಿಂದ ಈ ಅಮಾವಾಸ್ಯೆಯನ್ನು ಸರ್ವಪಿತ್ರೀ ಅಮಾವಾಸ್ಯೆ ಎಂದು ಕರೆಯಲಾಗಿದೆ. ಪಿತೃಪಕ್ಷದ ಅಮಾವಾಸ್ಯೆಗೆ ‘ಸರ್ವಪಿತ್ರೀ ಅಮಾವಾಸ್ಯೆ ಎನ್ನುತ್ತಾರೆ. ಈ ತಿಥಿಯಂದು ಎಲ್ಲರೂ ಶ್ರಾದ್ಧ ಮಾಡುವುದು ಅತ್ಯಂತ ಆವಶ್ಯಕವಾಗಿದೆ; ಏಕೆಂದರೆ ಪಿತೃಪಕ್ಷದಲ್ಲಿ ಇದು ಕೊನೆಯ ತಿಥಿಯಾಗಿದೆ.

ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ ?

ಶ್ರಾದ್ಧದಲ್ಲಿ ಪಿತೃಗಳ ಹೆಸರುಗಳನ್ನು ಹೇಳುವುದರಿಂದ ಮಂತ್ರಗಳ ಸಹಾಯದಿಂದ ಪ್ರಕ್ಷೇಪಿತವಾಗುವ ಶಬ್ದಕಂಪನಗಳು ವಾಯುಮಂಡಲದಲ್ಲಿ ಅಲೆದಾಡುತ್ತಿರುವ ಲಿಂಗದೇಹಗಳ ವಾಸನಾಮಯಕೋಶವನ್ನು ಭೇದಿಸಿ ಅವುಗಳನ್ನು ಶ್ರಾದ್ಧದ ಸ್ಥಳಕ್ಕೆ ಆಕರ್ಷಿಸುತ್ತವೆ. ಇದರಿಂದ ಆಯಾ ಗೋತ್ರದ ಪಿತೃಗಳು ಆಯಾ ಸ್ಥಳಗಳಿಗೆ ಬಂದು ಶ್ರಾದ್ಧದಲ್ಲಿನ ಆಹಾರವನ್ನು ಸೇವಿಸಿ ತೃಪ್ತರಾಗುತ್ತಾರೆ.

ಶ್ರಾದ್ಧ ವಿಧಿಗಳ ಬಗ್ಗೆ ಟೀಕಾತ್ಮಕ ವಿಚಾರಗಳು ಮತ್ತು ಅವುಗಳ ಖಂಡನೆ

‘ಶ್ರಾದ್ಧದ ಸಮಯದಲ್ಲಿ ಬಂದ ಅತಿಥಿಗೆ ಭೋಜನ ಕೊಡುವುದೆಂದರೆ ಪಿತೃಗಳನ್ನು ತೃಪ್ತಗೊಳಿಸುವುದು; ಏಕೆಂದರೆ ಯೋಗಿಗಳು, ಸಿದ್ಧಪುರುಷರು ಮತ್ತು ದೇವತೆಗಳು ಪೃಥ್ವಿಯ ಮೇಲೆ ಶ್ರಾದ್ಧವಿಧಿಗಳನ್ನು ನೋಡಲು ತಿರುಗಾಡುತ್ತಿರುತ್ತಾರೆ, ಎಂದು ಪುರಾಣದಲ್ಲಿ ಹೇಳಲಾಗಿದೆ. (ಆದುದರಿಂದಲೇ ‘ಅತಿಥಿ ದೇವೋ ಭವ |, ಎಂದು ಹೇಳಲಾಗಿದೆ.)

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಶ್ರೀರಾಮನ ಅಸ್ತಿತ್ವದ ಅನುಭೂತಿಯನ್ನು ನೀಡಿದ ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿರುವ ರಾಮಲಲ್ಲಾನ ದರ್ಶನ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ರಾಮಲಲ್ಲಾನ ದರ್ಶನಕ್ಕಾಗಿ ಶ್ರೀರಾಮಜನ್ಮ ಭೂಮಿಯತ್ತ ಹೋಗುತ್ತಿರುವಾಗ ಆಕಾಶವು ಮೋಡಗಳಿಂದ ತುಂಬಿತ್ತು. ದರ್ಶನವನ್ನು ಪಡೆದುಕೊಂಡು ಹೊರಗೆ ಬಂದಾಗ ಮಾತ್ರ ಸೂರ್ಯನು ಮೋಡದಿಂದ ಹೊರಗೆ ಬಂದು ಸುಂದರ ದರ್ಶನವನ್ನು ನೀಡಿದನು. ತದನಂತರ ಸೂರ್ಯನು ತಕ್ಷಣ ಮೋಡಗಳಲ್ಲಿ ಮರೆಯಾದನು.

ಸಾಧಕರೇ, ‘ನನ್ನ ಆಧ್ಯಾತ್ಮಿಕ ಮಟ್ಟವು ಶೇ. ೬೦ ರಷ್ಟು ಆಗುತ್ತಿಲ್ಲ, ಎಂಬ ವಿಚಾರ ಮಾಡಿ ನಿರಾಶರಾಗದಿರಿ ‘ನಾನು ಖಂಡಿತವಾಗಿಯೂ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವೆನು, ಎಂದು ಮನಸ್ಸಿನಲ್ಲಿ ಬಿಂಬಿಸಲು ಸ್ವಯಂಸೂಚನೆಯನ್ನು ನೀಡಿ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಿರಿ !

‘ನಾನು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದೇನೆ ?, ಎಂಬುದರ ಬಗ್ಗೆ ತತ್ತ್ವನಿಷ್ಠನಾಗಿ ಅಧ್ಯಯನ ಮಾಡಬೇಕು.  ಸಾಧನೆಯಲ್ಲಿ ತಮ್ಮ ಸಾಧಕ ಪರಿವಾರದವರಿಂದ ಹಾಗೂ ಸಹಸಾಧಕರಿಂದ ಸಹಾಯವನ್ನು ಪಡೆದುಕೊಳ್ಳಿರಿ. ವ್ಯಷ್ಟಿ ಸಾಧನೆಯ ವರದಿ ತೆಗೆದುಕೊಳ್ಳುವವರಿಗೆ ಹಾಗೂ ಜವಾಬ್ದಾರ ಸಾಧಕರಿಗೆ ‘ನನ್ನ ಸಾಧನೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ ?, ಎಂಬುದನ್ನು ವಿಚಾರಿಸಿರಿ.

ಸಾಧಕರಿಗೆ ಮಹತ್ವದ ಸೂಚನೆ !

ಆಪತ್ಕಾಲದ ಸ್ಥಿತಿಯಲ್ಲಿ ಕಟ್ಟಡದ ಎತ್ತರದಲ್ಲಿರುವ ಮಹಡಿಗಳು ಕುಸಿದು ಕಟ್ಟಡಕ್ಕೆ ಬಹುದೊಡ್ಡ ಸಂಕಟ ಎದುರಾಗಬಹುದು. ಆದುದರಿಂದ ಎತ್ತರದಲ್ಲಿರುವ ಕಟ್ಟಡದಲ್ಲಿ ಫ್ಲ್ಯಾಟ್ ಖರೀದಿಸದೇ ೩-೪ ಮಹಡಿಗಳ ಕಟ್ಟಡದಲ್ಲಿ ಫ್ಲ್ಯಾಟ್ ಖರೀದಿಸಿ.

ಸಾಧಕರಿಗೆ ಸೂಚನೆ ಪಿತೃಪಕ್ಷದಲ್ಲಿ ದತ್ತನ ನಾಮಜಪ, ಪ್ರಾರ್ಥನೆ ಮತ್ತು ಶ್ರಾದ್ಧವಿಧಿಗಳನ್ನು ಮಾಡಿರಿ !

‘ಪ್ರಸ್ತುತ ಅನೇಕ ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುತ್ತಿದೆ. ಪಿತೃಪಕ್ಷದಲ್ಲಿ (೨ ರಿಂದ ೧೭ ಸೆಪ್ಟೆಂಬರ್ ೨೦೨೦ ಈ ಕಾಲದಲ್ಲಿ) ಈ ತೊಂದರೆ ಹೆಚ್ಚಾಗುವುದರಿಂದ ಈ ಅವಧಿಯಲ್ಲಿ ಪ್ರತಿದಿನ ‘ಓಂ ಓಂ ಶ್ರೀ ಗುರುದೇವ ದತ್ತ ಓಂ ಓಂ | ಈ ನಾಮ ಜಪವನ್ನು ಕಡಿಮೆಪಕ್ಷ ೧ ಗಂಟೆ ಮಾಡಬೇಕು.

ಎಲ್ಲ ವಾಚಕರಿಗೆ, ಹಿತಚಿಂತಕರಿಗೆ ಹಾಗೂ ಧರ್ಮಪ್ರೇಮಿಗಳಿಗೆ ವಿನಂತಿ !

೧೮.೯.೨೦೨೦ ರಿಂದ ೧೬.೧೦.೨೦೨೦ ಈ ಕಾಲಾವಧಿಯಲ್ಲಿ ‘ಅಧಿಕ ಮಾಸ ಇದೆ. ‘ಅಧಿಕ ಮಾಸದಲ್ಲಿ ಮಂಗಲಕಾರ್ಯಗಳನ್ನು ಮಾಡದೇ ವಿಶೇಷ ವ್ರತಗಳು ಹಾಗೂ ಪುಣ್ಯಕರ ಕಾರ್ಯವನ್ನು ಮಾಡಬೇಕು, ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಈ ತಿಂಗಳಿನಲ್ಲಿ ದಾನ ನೀಡಿದರೇ ಅದರ ಹೆಚ್ಚು ಪಟ್ಟು ಫಲ ಸಿಗುತ್ತದೆ. ಆದ್ದರಿಂದ ಈ ಕಾಲದಲ್ಲಿ ವಸ್ತ್ರದಾನ, ಅನ್ನದಾನ ಹಾಗೂ ಜ್ಞಾನದಾನಗಳನ್ನು ಮಾಡುವುದಕ್ಕೆ ವಿಶೇಷ ಮಹತ್ವವಿದೆ.

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಮೃತ್ಯುಪತ್ರವನ್ನು ತಯಾರಿಸಿ ತಮ್ಮ ಆಸ್ತಿಯನ್ನು ಒಬ್ಬರ ಹೆಸರಿಗೆ ಮಾಡುವುದಕ್ಕಿಂತ ಬದುಕಿರುವಾಗಲೇ ಆಸ್ತಿಯನ್ನು ಅರ್ಪಿಸುವುದು ಹೆಚ್ಚು ಅನುಕೂಲಕರವಾಗಿದೆ. ಏಕೆಂದರೆ ವ್ಯಕ್ತಿಯ ಮೃತ್ಯುವಿನ ನಂತರ ಅವರ ಮೃತ್ಯುಪತ್ರದಲ್ಲಿ ಉಲ್ಲೇಖಿಸಿದಂತೆ ಅವರು ಸತ್ ಕಾರ್ಯಕ್ಕೆ ಅರ್ಪಣೆ ಮಾಡಿದ ಆಸ್ತಿಯನ್ನು ಸನಾತನ ಸಂಸ್ಥೆಗೆ ದೊರಕಿಸಿಕೊಳ್ಳಲು ಮಾಡಬೇಕಾದ ಕಾನೂನುಬದ್ಧ ಮತ್ತು ನ್ಯಾಯಾಂಗ ಪ್ರಕ್ರಿಯೆಯು ಅತ್ಯಂತ ಜಟಿಲವಿದೆ.