ಅಖಿಲ ಮನುಕುಲವು ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಸಿದ್ಧತೆಯ ಬಗ್ಗೆ ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ
ಆಪತ್ಕಾಲದಲ್ಲಿ ಜೀವಂತವಾಗಿರಲು ಮಾಡಬೇಕಾದ ಪೂರ್ವತಯಾರಿ
ಆಪತ್ಕಾಲದ ಲೇಖನಮಾಲೆಯ ಈ ಭಾಗದಲ್ಲಿ ನಾವು ಕೌಟುಂಬಿಕ, ಆರ್ಥಿಕ ಮತ್ತು ಸಾಮಾಜಿಕ ಬದ್ಧತೆಯ ಬಗ್ಗೆ ತಿಳಿದುಕೊಳ್ಳಲಿದ್ದೇವೆ. ಕೌಟುಂಬಿಕ ಸ್ತರದಲ್ಲಿ ನೋಡುವಾಗ ಮನೆಯ ವಿಷಯ, ಆರ್ಥಿಕ ಸ್ತರದಲ್ಲಿ ನೋಡುವಾಗ ಸಂಪತ್ತಿನ ವಿಷಯ ಹಾಗೂ ಸಾಮಾಜಿಕ ಬದ್ಧತೆಯಲ್ಲಿ ಸಮಾಜಕ್ಕಾಗಿ ನಾವು ಏನು ಮಾಡಬಹುದು ಈ ವಿಷಯದ ಬಗ್ಗೆ ಮಾಹಿತಿ ನೀಡಲಾಗಿದೆ. ಲೇಖನ – ೧೧
೨. ಆಪತ್ಕಾಲದ ದೃಷ್ಟಿಯಿಂದ ಕೌಟುಂಬಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆ
೨ ಅ. ಕೌಟುಂಬಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆ
೨ ಅ ೧. ಮನೆಯ ಸಂದರ್ಭದಲ್ಲಿ ಮಾಡಬೇಕಾದ ಕೃತಿಗಳು
೨ ಅ ೧. ಅದಷ್ಟು ಹೊಸ ಮನೆ ಅಥವಾ ಫ್ಲ್ಯಾಟ್‌ನ್ನು ಖರೀದಿಸಬಾರದು. ಅದರ ಬದಲು ಇದ್ದ ಮನೆಯಲ್ಲಿಯೇ ಅಥವಾ ಬಾಡಿಗೆಯ ಮನೆಯಲ್ಲಿ ವಾಸಿಸುವ ಪರ್ಯಾಯವನ್ನು ಆರಿಸಬೇಕು.
ಅ. ಭೂಕಂಪ, ಭೂಕುಸಿತ ಇತ್ಯಾದಿಗಳಿಂದ ಮನೆಗೆ ಹಾನಿಯಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಹೊಸ ಮನೆಗಾಗಿ ಖರ್ಚು ಮಾಡಿದ ಹಣವು ವ್ಯರ್ಥವಾಗುವ ಸಾಧ್ಯತೆಯಿರುತ್ತದೆ. ಆದುದರಿಂದ ಆದಷ್ಟು ಹೊಸ ಮನೆ ಅಥವಾ ಫ್ಲ್ಯಾಟ್‌ನ್ನು ಖರೀದಿಸಬಾರದು. ಸದ್ಯ ವಾಸಿಸುತ್ತಿರುವ ಮನೆಯಲ್ಲಿಯೇ ಅಥವಾ ಬಾಡಿಗೆ ಮನೆಯ ಅಥವಾ ಫ್ಲ್ಯಾಟಿನ ಪರ್ಯಾಯವನ್ನು ಆರಿಸಬೇಕು.
ಆ. ಕೆಲವು ಅನಿವಾರ್ಯ ಕಾರಣಗಳಿಂದ ಮನೆ ಅಥವಾ ಫ್ಲ್ಯಾಟ್ ಖರೀದಿ ಮಾಡಬೇಕಾಗಿ ಬಂದಲ್ಲಿ ‘ಯಾವ ಪ್ರದೇಶವು ಆ ದೃಷ್ಟಿಯಿಂದ ಸುರಕ್ಷಿತವಾಗಿದೆ ಎಂಬುದರ ವಿಚಾರವನ್ನು ಮಾಡಬೇಕು.
ಇ. ಫ್ಲ್ಯಾಟ್ ಖರೀದಿ ಮಾಡುವುದಿದ್ದಲ್ಲಿ ಆದಷ್ಟು ಮೂರನೆಯ ಅಂತಸ್ತಿಗಿಂತ ಮೇಲಿನ ಫ್ಲ್ಯಾಟ್‌ನ್ನು ಖರೀದಿಸಬಾರದು. ಇದಕ್ಕೆ ಕಾರಣವೇನೆಂದರೆ ಭೂಕಂಪದಂತಹ ಅಪಾಯ ಉಂಟಾದಲ್ಲಿ ಮೂರನೆಯ ಮಹಡಿಯವರೆಗಿನ ಫ್ಲ್ಯಾಟ್‌ನಿಂದ ಕೆಳಗೆ ಬರುವುದು ಸುಲಭವಾಗಿರುತ್ತದೆ.
ಈ. ಈಗ ವಾಸ್ತವ್ಯವಿರುವ ಫ್ಲ್ಯಾಟ್ ಮೂರನೆಯ ಅಂತಸ್ತಿಗಿಂತ ಮೇಲಿದ್ದಲ್ಲಿ ‘ಇತರೆಡೆ ಯೋಗ್ಯ ಫ್ಲ್ಯಾಟ್ ಸಿಗಬಹುದೇ ಎಂದು ವಿಚಾರ ಮಾಡಬೇಕು.
೨ ಅ ೨. ವಾಸಿಸುತ್ತಿರುವ ಮನೆಯು ಬೀಳುವಂತೆ ಆಗಿದ್ದಲ್ಲಿ ಅಥವಾ ಕೆಲವು ಭಾಗ ಬಿದ್ದಿದ್ದಲ್ಲಿ ಅಥವಾ ಮನೆಯ ಮಹತ್ವದ ದುರಸ್ತಿಗಳನ್ನು ಮಾಡುವುದು ಬಾಕಿಯಿದ್ದಲ್ಲಿ ಅದನ್ನು ಮಾಡಿಸಿಕೊಳ್ಳಬೇಕು ! : ವಾಸಿಸುತ್ತಿರುವ ಮನೆಯು ಕುಸಿಯುವ ಸ್ಥಿತಿಯಲ್ಲಿದ್ದರೆ ಅಥವಾ ಕೆಲವು ಭಾಗ ಕುಸಿಯುತ್ತಿದ್ದರೆ ಅಥವಾ ಮನೆಯ ಮಹತ್ವದ ದುರಸ್ತಿಯನ್ನು ಮಾಡುವುದು ಬಾಕಿಯಿದ್ದಲ್ಲಿ ಮುಂದೆ ಆಪತ್ಕಾಲದಲ್ಲಿ ನೆರೆ, ಬಿರುಗಾಳಿ ಮುಂತಾದ ಆಪತ್ತುಗಳು ಎದುರಾದಾಗ ಮನೆಯು ಬೀಳುವ ಸಾಧ್ಯತೆಯಿರುತ್ತದೆ ಅಥವಾ ಮನೆ ಕುಸಿಯುವ ಸಾಧ್ಯತೆಯಿರುತ್ತದೆ. ಆಪತ್ಕಾಲದಲ್ಲಿ ಮನೆಯನ್ನು ದುರುಸ್ತಿ ಮಾಡಿಸಿಕೊಳ್ಳುವುದೂ ಸಹ ಬಹಳ ಕಠಿಣವಾಗಬಹುದು. ಆದುದರಿಂದ ಇಂತಹ ಮನೆಗಳನ್ನು ಈಗಲೇ ಸಮಯ ನೀಡಿ ದುರಸ್ತಿ ಮಾಡಿಸಿಕೊಳ್ಳುವುದು ಯೋಗ್ಯವಾಗಿದೆ.
೨ ಅ ೩. ಈಗ ವಾಸಿಸುತ್ತಿರುವ ಮನೆಯನ್ನು ವಿಸ್ತರಿಸುವುದು ಅಥವಾ ಸುಶೋಭಿಕರಣ ಮಾಡುವುದನ್ನು ಸದ್ಯ ಮುಂದೂಡಬೇಕು ! : ಆಪತ್ಕಾಲದಲ್ಲಿ ಮನೆಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮನೆಯ ವಿಸ್ತಾರ ಕ್ಕಾಗಿ ಅಥವಾ ಸುಶೋಭಿಕರಣಕ್ಕಾಗಿ ಮಾಡಿದ ಖರ್ಚು ವ್ಯರ್ಥವಾಗುವ ಸಾಧ್ಯತೆಯಿದೆ. ಹಾಗಾಗಿ ಸದ್ಯ ಅದನ್ನು ಮಾಡದಿರುವುದು ಒಳಿತು. ಮುಂದೆ ಆಪತ್ಕಾಲ ಮುಗಿದ ನಂತರ ಮನೆಯ ವಿಸ್ತಾರ ಅಥವಾ ಸುಶೋಭಿಕರಣದ ವಿಚಾರ ಮಾಡಬಹುದು.
೨ ಅ ೪. ಹಳ್ಳಿಯಲ್ಲಿ ಸ್ವಂತ ಮನೆ ಇದ್ದಲ್ಲಿ ಅದನ್ನು ವಾಸಿಸಲು ಬರುವಂತೆ ಯೋಗ್ಯ ಸ್ಥಿತಿಯಲ್ಲಿಡಬೇಕು ! : ಮುಂಬರುವ ಕಾಲದಲ್ಲಿ ಮೂರನೆಯ ಮಹಾಯುದ್ಧ, ಉಗ್ರವಾದ ಮುಂತಾದವುಗಳಿಂದ ಚಿಕ್ಕ ಹಳ್ಳಿಗಳಿಗಿಂತ ನಗರಗಳಿಗೆ ಹೆಚ್ಚು ಅಪಾಯವಿದೆ. ಆ ಪರಿಸ್ಥಿತಿಯಲ್ಲಿ ಹಳ್ಳಿಗೆ ಹೋಗಿ ವಾಸಿಸಬೇಕಾಗಬಹುದು. ಹಾಗಾಗಿ ಯಾರದ್ದಾದರೂ ಹಳ್ಳಿಯಲ್ಲಿ ಮನೆಯಿದ್ದರೆ ಅದನ್ನು ಈಗಲೇ ವಾಸಿಸಲು ಬರುವಂತೆ ಯೋಗ್ಯ ಸ್ಥಿತಿಯಲ್ಲಿಡಬೇಕು.
೨ ಅ ೫. ಹಳ್ಳಿಯಲ್ಲಿ ಸ್ವಂತದ ಭೂಮಿ ಅಥವಾ ಮನೆ ಇಲ್ಲದಿದ್ದಲ್ಲಿ ನಗರವಾಸಿ ಗಳು ಸಾಧ್ಯವಿದ್ದರೆ ಅನುಕೂಲವಿರುವ ಊರಲ್ಲಿ ವಾಸಿಸಲು ಸಾಧ್ಯವಾಗುವ ದೃಷ್ಟಿಯಿಂದ ಈಗಲೇ ಮನೆಯ ವಿಚಾರವನ್ನು ಮಾಡಬೇಕು !
೨ ಅ ೬. ಶಿಕ್ಷಣ, ನೌಕರಿ, ಮುಂತಾದವುಗಳಿಗಾಗಿ ವಿದೇಶಗಳಿಗೆ ಹೋಗಿರುವ ಕುಟುಂಬದವರನ್ನು ಆದಷ್ಟು ಭಾರತಕ್ಕೆ ವಾಪಾಸು ಕರೆಯಬೇಕು : ಭಾರತವು ಮೂಲತಃ ಪುಣ್ಯಭೂಮಿಯಾಗಿದೆ. ಮುಂಬರುವ ಆಪತ್ಕಾಲದಲ್ಲಿ ಭಾರತಕ್ಕಿಂತ ಇತರ ದೇಶಗಳಲ್ಲಿ ಹೆಚ್ಚು ಹಾನಿಯಾಗುವ ಸಾಧ್ಯತೆ ಇದೆ. ಏಕೆಂದರೆ ವಿದೇಶಗಳಲ್ಲಿ ರಜ ತಮದ ಪ್ರಭಾವ ಹೆಚ್ಚಿದೆ. ಹಾಗೆಯೇ ಮಹಾಯುದ್ಧವು ಪ್ರಾರಂಭವಾದ ನಂತರ ವಿದೇಶದಿಂದ ಸುರಕ್ಷಿತವಾಗಿ ಭಾರತಕ್ಕೆ ವಾಪಾಸು ಬರಲು ಕಠಿಣವಾಗಬಹುದು.
೨ ಅ ೭. ತಮ್ಮ ನಂತರ ಆಸ್ತಿಗಾಗಿ ಆಪ್ತರಲ್ಲಿ ವಾದವಿವಾದ ಆಗಬಾರದೆಂದು ವಯೋವೃದ್ಧ ವ್ಯಕ್ತಿಗಳು ತಮ್ಮ ಉಯಿಲನ್ನು (ಮೃತ್ಯುಪತ್ರವನ್ನು) ಮಾಡಿಡಬೇಕು.
೩. ಆಪತ್ಕಾಲದ ದೃಷ್ಟಿಯಿಂದ ಆರ್ಥಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆಗಳು
೩ ಅ. ಸದ್ಯದ ಉತ್ಪನ್ನ ಮತ್ತು ಇಂದಿನ ತನಕದ ಉಳಿತಾಯವನ್ನು ಮಿತವ್ಯಯದಿಂದ ಉಪಯೋಗಿಸುವುದರ ಹಿಂದಿನ ಉದ್ದೇಶ
೧. ಆಪತ್ಕಾಲದಲ್ಲಿ ಬೆಲೆಯೇರಿಕೆಯನ್ನು ಎದುರಿಸಲು ಸಾಧ್ಯವಾಗುವುದು
೨. ಆಪತ್ಕಾಲದಲ್ಲಿ ಸಾಮಾಜಿಕ ಕರ್ತವ್ಯವೆಂದು ಆಪತ್‌ಗ್ರಸ್ತ ಬಾಂಧವರಿಗೆ ಆರ್ಥಿಕ ಸಹಾಯ ಮಾಡಲು ಸಾಧ್ಯವಾಗುವುದು
೩. ಆಪತ್ಕಾಲದಲ್ಲಿ ರಾಷ್ಟ್ರಕರ್ತವ್ಯವೆಂದು ರಾಷ್ಟ್ರಕ್ಕಾಗಿ ಧನ ಅರ್ಪಣೆ ಮಾಡಲು ಸಾಧ್ಯವಾಗುವುದು : ಎರಡನೇ ಮಹಾಯುದ್ಧದ ಸಮಯದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸರು ಕರೆ ನೀಡಿದ ನಂತರ ಅನೇಕರು ಹಣ, ಮೈಮೇಲಿನ ಆಭರಣಗಳನ್ನು ‘ಅಝಾದ ಹಿಂದ್ ಸೇನೆಗಾಗಿ ನೇತಾಜಿಯವರಿಗೆ ಅರ್ಪಣೆ ಮಾಡಿದ್ದರು. ಆಪತ್ಕಾಲದಲ್ಲಿ ರಾಷ್ಟ್ರದ ಮೇಲಿನ ಆರ್ಥಿಕ ಒತ್ತಡ ತುಂಬಾ ಹೆಚ್ಚಾಗುತ್ತದೆ, ಉದಾ. ದೊಡ್ಡ ಪ್ರಮಾಣದಲ್ಲಿ ಯುದ್ಧ ಸಾಮಾಗ್ರಿಗಳನ್ನು ನಿರ್ಮಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ರಾಷ್ಟ್ರಕ್ಕಾಗಿ ಧನದ ಅರ್ಪಣೆ ಮಾಡುವುದು ರಾಷ್ಟ್ರಕರ್ತವ್ಯವೇ ಆಗಿದೆ.
೩ ಅ ೧. ಆರ್ಥಿಕ ಹೂಡಿಕೆಯನ್ನು ಮಾಡುವಾಗ ಮುಂದಿನ ಅಂಶಗಳ ವಿಚಾರವನ್ನು ಮಾಡಿರಿ ! : ಇತ್ತೀಚೆಗೆ ಅನೇಕ ಬ್ಯಾಂಕುಗಳ ಆರ್ಥಿಕ ಹಗರಣಗಳು ಬೆಳಕಿಗೆ ಬರುತ್ತಿವೆ. ಹಾಗಾಗಿ ನಮ್ಮ ಹಣ ಸುರಕ್ಷಿತವಾಗಿರ ಬೇಕೆಂದು ಮುಂದೆ ನೀಡಿರುವ ಪರ್ಯಾಯಗಳ ವಿಚಾರ ಮಾಡಬೇಕು. ಹಣ ಹೂಡಿಕೆ ಮಾಡುವಾಗ You should not put all eggs in one basket (ಭಾವಾರ್ಥ : ಒಂದೇ ಕಡೆ ಎಲ್ಲ ಹಣವನ್ನೂ ಹೂಡಿಕೆ ಮಾಡಿ ಎಲ್ಲವನ್ನೂ ಮುಳುಗಿಸುವ ಬದಲು ಸುರಕ್ಷೆಯ ದೃಷ್ಟಿಯಿಂದ ವಿವಿಧ ಸ್ಥಳಗಳಲ್ಲಿ ಹೂಡಿಕೆಯನ್ನು ಮಾಡಬೇಕು) ಎಂಬ ಅರ್ಥಶಾಸ್ತ್ರದ ಸಿದ್ಧಾಂತಕ್ಕನುಸಾರ ಮಾಡಬೇಕು.
೩ ಅ ೨. ಬ್ಯಾಂಕ್‌ಗೆ ಸಂಬಂಧಿಸಿದ ವ್ಯವಹಾರಗಳು
೩ ಆ ೧ ಅ. ಠೇವಣಿಗಳನ್ನು ಬೇರೆಬೇರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇಡಬೇಕು !
೧. ರಾಷ್ಟ್ರೀಕೃತ ಬ್ಯಾಂಕ್‌ಗಳ ಮೇಲೆ ರಿಸರ್ವ್ ಬ್ಯಾಂಕ್‌ನ ನಿಯಂತ್ರಣವಿರುತ್ತದೆ. ಹಾಗಾಗಿ ಆ ಬ್ಯಾಂಕ್ ಮುಳುಗಡೆಯಾದರೂ ಹಣ ಮುಳುಗುವ ಸಾಧ್ಯತೆಯಿರುವುದಿಲ್ಲ. ಆದರೆ ಬ್ಯಾಂಕ್‌ಗಳ ವ್ಯವಹಾರಗಳನ್ನು ಮಾಡಲು ನಿರ್ಬಂಧ ಹೇರಲಾಗುತ್ತದೆ. ಉದಾ. ನಿಗದಿತ ಮೊತ್ತವನ್ನಷ್ಟೇ ತೆಗೆಯಲು ಸಾಧ್ಯವಾಗುತ್ತದೆ. ಇದಕ್ಕೆ ವಿರುದ್ಧ ಖಾಸಗಿ ಅಥವಾ ಸಹಕಾರಿ ಬ್ಯಾಂಕುಗಳು ಮುಳುಗಿದರೆ ಅವುಗಳ ಜವಾಬ್ದಾರಿಯು ರಿಸರ್ವ್ ಬ್ಯಾಂಕಿನ ಬಳಿ ಇಲ್ಲದ ಕಾರಣ ಮುಳುಗಿದ ಹಣ ಸಿಗುವ ಸಾಧ್ಯತೆ ಅತ್ಯಂತ ಕಡಿಮೆಯಿರುತ್ತದೆ.
೨. ‘ಯಾವುದಾದರೊಂದು ಬ್ಯಾಂಕ್ ಮುಳುಗಡೆಯಾದರೆ ನಮ್ಮ ಎಲ್ಲ ಹಣ ಮುಳುಗಬಾರದೆಂದು ನಮ್ಮ ಪ್ರದೇಶದಲ್ಲಿರುವ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿಯನ್ನು ಪಾಲು ಮಾಡಿಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪ್ರತಿಯೊಬ್ಬ ಠೇವಣಿದಾರನಿಗೆ ೫ ಲಕ್ಷದವರೆಗಿನ ಠೇವಣಿಗೆ ವಿಮಾ ಸಂರಕ್ಷಣೆಯಿರುತ್ತದೆ. ಹಾಗಾಗಿ ಠೇವಣಿದಾರರು ಒಂದು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಹೆಚ್ಚೆಂದರೆ ೫ ಲಕ್ಷದ ತನಕ ಠೇವಣಿ ಇಡಬೇಕು.
೩ ಆ. ಇತರ ಅಂಶಗಳು
೧. ಎಲ್ಲ ರೀತಿಯ ಬ್ಯಾಂಕುಗಳ ಖಾತೆಗೆ ವಾರಸುದಾರರ ನಾಮಪತ್ರ (ನಾಮಿನೇಶನ್) ನೊಂದಣಿ ಮಾಡಿಡಬೇಕು.
೨. ಬ್ಯಾಂಕಿನಲ್ಲಿ ಹಣ ಹಾಕುವುದು, ಹಣ ತೆಗೆಯುವುದು ಮುಂತಾದ ವ್ಯವಹಾರಗಳನ್ನು ಕುಟುಂಬದವರಿಗೆ ಕಲಿಸಬೇಕು.
೩ ಆ ೧. ಚಿನ್ನ, ಬೆಳ್ಳಿ ಮುಂತಾದ ಬೆಲೆಬಾಳುವ ವಸ್ತುಗಳಲ್ಲಿ ಹೂಡಿಕೆಯನ್ನು ಮಾಡಬೇಕು ! : ಆಪತ್ಕಾಲದಲ್ಲಿ ಕೆಲವೊಮ್ಮೆ ಬ್ಯಾಂಕುಗಳಿಂದ ಹಣ ತೆಗೆಯಲು ಮಿತಿಯುಂಟಾಗುತ್ತದೆ. ಆದರೆ ಚಿನ್ನ, ಬೆಳ್ಳಿ ಮುಂತಾದ ಬೆಲೆ ಬಾಳುವ ವಸ್ತುಗಳು ನಮ್ಮ ಕೈಯಲ್ಲಿರುವುದರಿಂದ ಪ್ರಸಂಗ ಬಂದರೆ ಮತ್ತು ನಮಗೆ ಹಣದ ಆವಶ್ಯಕತೆ ಉಂಟಾದಲ್ಲಿ ನಾವು ಅವುಗಳನ್ನು ಉಪಯೋಗಿಸಬಹುದು.
ಯಾರಿಗಾದರೂ ಹೂಡಿಕೆ ಎಂದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದಿದ್ದಲ್ಲಿ, ಅವರು ಉಂಗುರ, ಸರಪಳಿಯಂತಹ (ಚೈನ್) ವಸ್ತುಗಳನ್ನು ಖರೀದಿಸದೇ ಶುದ್ಧ ಚಿನ್ನ ಅಥವಾ ಬೆಳ್ಳಿಯ ಗಟ್ಟಿಗಳನ್ನು ಖರೀದಿಸಬೇಕು. ಇದರಿಂದ ಆಭರಣಗಳನ್ನು ತಯಾರಿಸಲು ಕೊಡಬೇಕಾದ ಮಜೂರಿಯ ಉಳಿತಾಯವಾಗುತ್ತದೆ.
೩ ಆ ೨. ಮನೆಗಾಗಿ ಬಾವಿಯನ್ನು ತೋಡುವುದು, ಸೌರಶಕ್ತಿಯ ಸೌಲಭ್ಯವನ್ನು ಮಾಡುವುದು ಮುಂತಾದ ಖರ್ಚುಗಳು ಎಂದರೆ ಒಂದು ರೀತಿಯ ಹೂಡಿಕೆಯೇ ಆಗಿದೆ !
೩ ಆ ೩. ಭೂಮಿಯಲ್ಲಿ ಹೂಡಿಕೆ ಮಾಡುವುದು : ಯಾರಿಗೆ ಸಾಧ್ಯವಿದೆಯೋ ಅವರು ಕೃಷಿಗೆ ಯೋಗ್ಯವಿರುವ ಭೂಮಿಯನ್ನು ಖರೀದಿಸಬೇಕು. ಒಬ್ಬ ವ್ಯಕ್ತಿಗೆ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲದಿದ್ದಲ್ಲಿ, ಕೆಲವು ಜನರು ಒಟ್ಟು ಸೇರಿ ಭೂಮಿಯನ್ನು ಖರೀದಿಸಬೇಕು. ಭೂಮಿಯಲ್ಲಿ ಹೂಡಿಕೆ ಮಾಡಿದ್ದು ಇಂದಲ್ಲ ನಾಳೆ ಹಿಂದೆ ಸಿಗುತ್ತದೆ.
೩ ಆ ೪. ಯಾರು ಶೇರ‍್ಸ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆಯೋ, ಅವರು ಈಗಿನಿಂದಲೇ ಪರಿಹಾರಗಳನ್ನು ಹುಡುಕಬೇಕು ! : ಶೇರ‍್ಸ್‌ಗಳು ಖಾಸಗಿ ಕಂಪನಿಗಳದ್ದಾಗಿರುತ್ತವೆ. ಅವುಗಳನ್ನು ಮಾರುವಾಗ ಅವುಗಳ ಮಾರುಕಟ್ಟೆ ಬೆಲೆ ಎಷ್ಟು ಇರುತ್ತದೆಯೋ ಅದಕ್ಕನುಸಾರ ಹಣ ಸಿಗುತ್ತದೆ. ಇದರಲ್ಲಿ ‘ಶೇರ‍್ಸ್ ಖರೀದಿ ಮಾಡಿದಾಗ ಇದ್ದ ಮೊತ್ತಕ್ಕಿಂತ ಜಾಸ್ತಿ ಮೊತ್ತ ಸಿಗಬಹುದು ಅಥವಾ ಕಡಿಮೆ ಮೊತ್ತವೂ ಸಹ ಸಿಗಬಹುದು. ಒಂದು ವೇಳೆ ಹೂಡಿಕೆಗಿಂತ ಕಡಿಮೆ ಹಣ ಸಿಕ್ಕಿದ್ದಲ್ಲಿ ಅಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ. ‘ಶೇರ‍್ಸ್ಗಳ ಹೂಡಿಕೆಗೆ ಯಾವುದೇ ವಿಮಾ ಸಂರಕ್ಷಣೆ ಇರುವುದಿಲ್ಲ. ಹಾಗೆಯೇ ಅವುಗಳ ಮೇಲೆ ಸರಕಾರದ ನಿಯಂತ್ರಣವೂ ಇರುವುದಿಲ್ಲ. ಸಂಕ್ಷಿಪ್ತದಲ್ಲಿ, ‘ಶೇರ‍್ಸ್‌ಗಳಲ್ಲಿ ಹೂಡಿದ ಹಣವು ನಮಗೆ ಖಂಡಿತ ವಾಪಾಸು ಸಿಗುತ್ತವೆ ಎಂಬುದರ ಖಾತ್ರಿಯನ್ನು ನೀಡಲು ಆಗುವುದಿಲ್ಲ. ಹಾಗಾಗಿ ಯಾರು ‘ಶೇರ‍್ಸ್ಗಳಲ್ಲಿ ಹಣ ಹೂಡಿದ್ದಾರೆಯೋ ಅವರು ಈಗಿನಿಂದಲೇ ಪರಿಹಾರೋಪಾಯಗಳನ್ನು ಮಾಡಬೇಕು.
೩ ಇ. ಇತರ ಸೂಚನೆಗಳು : ಆಪತ್ಕಾಲದಲ್ಲಿ ಉಂಟಾಗುವ ಬೆಲೆಯೇರಿಕೆ ಮತ್ತು ಕುಟುಂಬದವರ ಸಂಖ್ಯೆಯ ವಿಚಾರ ಮಾಡಿ ಸಾಧಾರಣ ಕೆಲವು ವರ್ಷಗಳ ವರೆಗೆ ನಮ್ಮ ಆವಶ್ಯಕತೆ ನೀಗಿಸುವಷ್ಟು ಹಣವನ್ನು ಮನೆಯಲ್ಲಿ ಸುರಕ್ಷಿತವಾಗಿಡಬೇಕು.
೪. ಸಾಮಾಜಿಕ ಬದ್ಧತೆಯಿಂದ ಮಾಡಬೇಕಾದ ಸಿದ್ಧತೆಗಳು
೪ ಅ. ವಠಾರ, ಗೃಹನಿರ್ಮಾಣ ಸಂಸ್ಥೆ (ಹೌಸಿಂಗ್ ಸೊಸೈಟಿ), ಹಳ್ಳಿಗಳಲ್ಲಿರುವ ಚಿಕ್ಕ ವಸತಿ ಪ್ರದೇಶಗಳು ಮುಂತಾದ ಕಡೆಗಳಲ್ಲಿ ವಾಸಿಸುವವರು ಒಟ್ಟಾಗಿ ಸಿದ್ಧತೆಯನ್ನು ಮಾಡಿದರೆ ಅದು ಎಲ್ಲರಿಗೂ ಲಾಭದಾಯಕವಾಗುವುದು : ಬಾವಿ ತೋಡುವುದು, ಸೌರಶಕ್ತಿ ಅಥವಾ ಗಾಳಿಯಂತ್ರದ ವ್ಯವಸ್ಥೆ ಮಾಡುವುದು, ‘ಬಯೋಗ್ಯಾಸ್ ವ್ಯವಸ್ಥೆ ಇಂತಹ ಸಿದ್ಧತೆಗಳನ್ನು ವೈಯಕ್ತಿಕ ಸ್ತರದಲ್ಲಿ ಮಾಡಲು ಬಹಳ ಖರ್ಚು ಬರುತ್ತದೆ. ಆದರೆ ಎಲ್ಲರೂ ಒಟ್ಟಿಗೆ ಸೇರಿ ಸಿದ್ಧತೆಯನ್ನು ಮಾಡಿದರೆ, ಅದು ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಆಪತ್ಕಾಲದ ದೃಷ್ಟಿಯಿಂದ ಆಹಾರಧಾನ್ಯಗಳು ಮತ್ತು ಇತರ ಜೀವನಾವಶ್ಯಕ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿಡಬೇಕಾಗುತ್ತದೆ. ಎಲ್ಲರ ಆವಶ್ಯಕತೆಯನ್ನು ವಿಚಾರಿಸಿ ಅವುಗಳ ಸಗಟು ಖರೀದಿ ಮಾಡಿದರೆ ಖರ್ಚು ಕಡಿಮೆ ಬರುತ್ತದೆ. ಈ ರೀತಿಯಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಸಿದ್ಧತೆಯನ್ನು ಮಾಡಿದರೆ ಮನುಷ್ಯಬಲ ಮತ್ತು ಸಮಯದ ಉಳಿತಾಯವಾಗುತ್ತದೆ, ಹಾಗೆಯೇ ಆರ್ಥಿಕ ಕ್ಷಮತೆ ಕಡಿಮೆಯಿರುವ ಸಮಾಜಬಾಂಧವರಿಗೂ ಸಹಾಯವಾಗುತ್ತದೆ.
೪ ಆ. ವಸ್ತುಗಳನ್ನು ಖರೀದಿಸುವಾಗ ಆವಶ್ಯಕತೆಯಿರುವವರ ವಿಚಾರ ಮಾಡಿ ಹೆಚ್ಚು ಖರೀದಿ ಮಾಡುವುದು : ‘ವಸುಧೈವ ಕುಟುಂಬಕಮ್ (ಅರ್ಥ : ಇಡೀ ಪೃಥ್ವಿಯೇ ನನ್ನ ಕುಟುಂಬ) ಎಂಬುದು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ. ಇದಕ್ಕನುಸಾರ ಆಪತ್ಕಾಲದ ದೃಷ್ಟಿಯಿಂದ ವಸ್ತು ಗಳನ್ನು ಖರೀದಿ ಮಾಡುವಾಗ ನಮ್ಮ ಸ್ಥಿತಿ ಉತ್ತಮವಾಗಿದ್ದಲ್ಲಿ ನಮ್ಮ ಜೊತೆಗೆ ಸಮಾಜದಲ್ಲಿ ಆವಶ್ಯಕತೆಯಿರುವವರ ವಿಚಾರವನ್ನು ಮಾಡಿ ಅವರಿಗಾಗಿ ಆಹಾರಧಾನ್ಯ ಮತ್ತು ಬಟ್ಟೆಗಳನ್ನು ಹೆಚ್ಚುವರಿ ಖರೀದಿ ಮಾಡಬೇಕು. ಈ ವಸ್ತುಗಳನ್ನು ಆಪತ್ಕಾಲದಲ್ಲಿ ಸಿಲುಕಿದವರಿಗೆ, ಬಡವರು ಮುಂತಾದವರಿಗೆ ಕೊಡಬಹುದು. ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಕೆಲವು ಭಾರತೀಯ ನಾಗರಿಕರು ಸ್ವಯಂಸ್ಫೂರ್ತಿಯಿಂದ ಅಲ್ಲಲ್ಲಿ ರೈಲು ನಿಲ್ದಾಣಗಳಲ್ಲಿ ಭಾರತೀಯ ಸೈನಿಕರಿಗೆ ಉಪಾಹಾರ ನೀಡಿದ್ದರು. ೨೦೨೦ರಲ್ಲಿ ‘ಕೊರೋನಾ ವೈರಾಣುವಿನಿಂದ ಉದ್ಭವಿಸಿದ ಸಂಕಟದ ಸಮಯದಲ್ಲಿ ದೇಶದಲ್ಲಿ ಅಕಸ್ಮಾತ್ತಾಗಿ ಲಾಕ್‌ಡೌನ್ ಅನ್ವಯಗೊಳಿಸಲಾಯಿತು.ಇದರಿಂದ ಅನೇಕ ಕಾರ್ಮಿಕರು, ಟ್ರಕ್‌ಚಾಲಕರು ಮುಂತಾದವರು ಅನೇಕ ಪ್ರಾಂತ್ಯಗಳಲ್ಲಿ ಸಿಲುಕಿಕೊಂಡರು. ಆಗ ಅನೇಕ ಭಾರತೀಯರು ತಮ್ಮ ಸ್ವಂತದ ಖರ್ಚಿನಲ್ಲಿ ಇವರಿಗೆಲ್ಲ ಊಟ ನೀಡಿದರು. ‘ಹಿಂದೂ ಜನಜಾಗೃತಿ ಸಮಿತಿಯಂತಹ ಸಂಘಟನೆಗಳು ಆವಶ್ಯಕತೆ ಇದ್ದವರಿಗೆ ಹಣ್ಣುಹಂಪಲು, ಪಾನೀಯ ಇತ್ಯಾದಿಗಳನ್ನು ಹಂಚಿದರು. ಅನೇಕ ದಾನಿಗಳು, ಮಂಡಳಿಗಳು ಮತ್ತು ಸಂಸ್ಥೆಗಳು ಸರಕಾರದ ಸಹಾಯಕಾರ್ಯಕ್ಕಾಗಿ ನಿಧಿಯನ್ನು ಸಹ ನೀಡಿದವು.
೪ ಇ. ಆವಶ್ಯಕತೆಯಿದ್ದವರಿಗೆ ವಸ್ತುಗಳನ್ನು ಖರೀದಿಸುವ ಕ್ಷಮತೆ ಇಲ್ಲದಿದ್ದಲ್ಲಿ ಆಪತ್ಕಾಲದಲ್ಲಿ ತಮಗೆ ಆವಶ್ಯಕವಿರುವಷ್ಟೇ ವಸ್ತುಗಳನ್ನು ಖರೀದಿಸಬೇಕು : ಆಪತ್ಕಾಲಕ್ಕೂ ಮೊದಲು ಎಲ್ಲರಿಗೂ ಕುಟುಂಬಕ್ಕಾಗಿ ಆಹಾರ ಧಾನ್ಯ, ಬಟ್ಟೆ, ಔಷಧಿ ಇತ್ಯಾದಿಗಳನ್ನು ಖರೀದಿಸಬೇಕಾಗಿದೆ. ಒಂದೇ ಸಮಯದಲ್ಲಿ ಎಲ್ಲರೂ ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸಿದರೆ, ವಸ್ತುಗಳ ಕೊರತೆಯಾಗುವ ಸಾಧ್ಯತೆಯಿರುತ್ತದೆ. ‘ನಮ್ಮಂತೆಯೇ ಸಮಾಜ ಬಾಂಧವರಿಗೂ ಎಲ್ಲ ವಸ್ತುಗಳು ಸಿಗಬೇಕು, ಎಂದು ವಿಚಾರ ಮಾಡಿ ಆಪತ್ಕಾಲದ ದೃಷ್ಟಿಯಿಂದ ನಮಗೆ ಆವಶ್ಯಕತೆಯಿರುವಷ್ಟೇ ಖರೀದಿಸಬೇಕು.
೪ ಈ. ನಮ್ಮ ಜ್ಞಾನವನ್ನು ಆವಶ್ಯಕತೆಯಿರುವವರ ಸಹಾಯಕ್ಕಾಗಿ ಉಪಯೋಗಿಸುವುದು : ವೈದ್ಯರು, ರೈತರು, ಧಾನ್ಯಗಳ ವ್ಯಾಪಾರಿಗಳು ಮುಂತಾದವರಿಗೆ ತಮ್ಮತಮ್ಮ ಕ್ಷೇತ್ರದ ಉತ್ತಮ ಅಧ್ಯಯನವಿರುತ್ತದೆ. ಇಂತಹವರು ತಮ್ಮ ಜ್ಞಾನವನ್ನು ಆವಶ್ಯಕತೆಯಿರುವವರ ಸಹಾಯಕ್ಕಾಗಿ ಉಪಯೋಗಿಸಬೇಕು, ಉದಾ. ವೈದ್ಯರು ಔಷಧೀಯ ವನಸ್ಪತಿಗಳನ್ನು ಬೆಳೆಸಲು, ರೈತರು ಹಣ್ಣು, ತರಕಾರಿಗಳನ್ನು ಬೆಳೆಸಲು ಮತ್ತು ಧಾನ್ಯದ ವ್ಯಾಪಾರಿಗಳು ಆಹಾರಧಾನ್ಯಗಳನ್ನು ಉತ್ತಮ ರೀತಿಯಲ್ಲಿ ಶೇಖರಿಸಿಡಲು ಸಹಾಯ ಮಾಡಬಹುದು.
೫. ಆಪತ್ಕಾಲದ ದೃಷ್ಟಿಯಿಂದ ಮಾಡಬೇಕಾದ ಇತರ ಸಿದ್ಧತೆಗಳು ಅಥವಾ ತೆಗೆದುಕೊಳ್ಳಬೇಕಾದ ಕಾಳಜಿ
೫ ಅ. ಮನೆಯಲ್ಲಿರುವ ಅನಾವಶ್ಯಕ ಸಾಮಗ್ರಿಗಳನ್ನು ಕಡಿಮೆ ಮಾಡಲು ಆರಂಭಿಸುವುದು : ಆಪತ್ಕಾಲದ ಸಿದ್ಧತೆಯೆಂದು ನಮಗೆ ಮನೆಯಲ್ಲಿ ಅನೇಕ ವಸ್ತುಗಳನ್ನು ಶೇಖರಿಸಿಡಬೇಕಾಗುವುದು. ಆಪತ್ಕಾಲದಲ್ಲಿ ಕೆಲವೊಮ್ಮೆತೊಂದರೆಯಲ್ಲಿ ಸಿಲುಕಿದ ಸಂಬಂಧಿಕರಿಗೆ ಅಥವಾ ಸಮಾಜಬಾಂಧವರಿಗೆ ನಮ್ಮ ಮನೆಯಲ್ಲಿ ಆಶ್ರಯ ನೀಡಬೇಕಾಗಬಹುದು. ಇದಕ್ಕಾಗಿ ನಮ್ಮ ಮನೆಯಲ್ಲಿರುವ ಅನಾವಶ್ಯಕ ವಸ್ತುಗಳನ್ನು ಕಡಿಮೆ ಮಾಡಲು ಆರಂಭಿಸಬೇಕು. ಇದರಿಂದ ಮನೆಯಲ್ಲಿ ಖಾಲಿ ಜಾಗ ನಿರ್ಮಾಣವಾಗುವುದು. ಅನಾವಶ್ಯಕ ವಸ್ತುಗಳನ್ನು ಕಡಿಮೆ ಮಾಡುವುದರಿಂದ ವಸ್ತುಗಳ ಬಗೆಗಿನ ಆಸಕ್ತಿಯೂ ಕಡಿಮೆಯಾಗಲು ಸಹಾಯವಾಗುವುದು.
೫ ಆ. ಸಂಚಾರವಾಣಿಯ (ಮೊಬೈಲ್) ಬಗೆಗಿನ ಸಿದ್ಧತೆ
೧. ಎರಡು ಬೇರೆ ಬೇರೆ ಕಂಪನಿಗಳ ‘ಸಿಮ್ ಕಾರ್ಡ್ ಇರುವ ಸಂಚಾರವಾಣಿಯನ್ನು ಜೊತೆಯಲ್ಲಿಟ್ಟುಕೊಳ್ಳುವುದು : ಇದರ ಲಾಭವೆಂದರೆ, ಕೆಲವೊಮ್ಮೆ ಒಂದು ಕಂಪನಿಯ ‘ರೇಂಜ್ ಸಿಗದಿದ್ದರೆ ಇನ್ನೊಂದು ಕಂಪನಿಯ ‘ರೇಂಜ್ ಸಿಗುವ ಸಾಧ್ಯತೆಯಿರುತ್ತದೆ.
೨. ಸಾಧ್ಯವಿದ್ದಲ್ಲಿ ಸಂಚಾರವಾಣಿಯ ೨ ಸೆಟ್‌ಗಳನ್ನು ಜೊತೆಯಲ್ಲಿಟ್ಟುಕೊಳ್ಳಬೇಕು : ಒಂದು ಸೆಟ್‌ನ ‘ಬ್ಯಾಟರಿ ಮುಗಿದರೆ ಇನ್ನೊಂದು ಸೆಟ್‌ನ್ನು ಉಪಯೋಗಿಸಬಹುದು.
೫ ಇ. ಸಂಬಂಧಿಕರು, ‘ಫ್ಯಾಮಿಲಿ ಡಾಕ್ಟರ್ ಮುಂತಾದ ಮಹತ್ವದ ವ್ಯಕ್ತಿಗಳ ಮತ್ತು ಪೊಲೀಸ್ ಠಾಣೆ, ಅಗ್ನಿಶಮನ ದಳ ಇತ್ಯಾದಿಗಳ ದೂರವಾಣಿ ಸಂಖ್ಯೆಗಳನ್ನು ಮತ್ತು ವಿಳಾಸಗಳನ್ನು ಸಂಚಾರವಾಣಿಯಲ್ಲಿ ಹಾಗೂ ಒಂದು ಸಣ್ಣ ಪುಸ್ತಕದಲ್ಲಿ ಬರೆದಿಡುವುದು : ಆಪತ್ಕಾಲದಲ್ಲಿ ನಮ್ಮ ಸಂಚಾರವಾಣಿ ಚಾರ್ಜ್ ಇಲ್ಲದಿದ್ದರೆ ಅದನ್ನು ಉಪಯೋಗಿಸಲು ಆಗುವುದಿಲ್ಲ. ಇದಕ್ಕಾಗಿ ಆವಶ್ಯಕವಿರುವ ದೂರವಾಣಿ ಸಂಖ್ಯೆಗಳನ್ನು ಮತ್ತು ವಿಳಾಸಗಳನ್ನು ಸಂಚಾರವಾಣಿಯಂತೆಯೇ ಒಂದು ಸಣ್ಣ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುವುದು ಒಳ್ಳೆಯದು. ಇಂತಹ ಸಣ್ಣ ಪುಸ್ತಕವನ್ನು ಯಾವಾಗಲೂ ಜೊತೆಯಲ್ಲಿಟ್ಟುಕೊಳ್ಳಬೇಕು. ಇದರಿಂದ ಬೇರೆ ವಿಧದಿಂದ, ಉದಾ. ಇನ್ನೊಬ್ಬರ ಸಂಚಾರವಾಣಿ ಅಥವಾ ದೂರವಾಣಿಯಿಂದ ನಮಗೆ ಇತರರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಅತಿ ಮಹತ್ವದ ಸಂಪರ್ಕ ಸಂಖ್ಯೆಯನ್ನು ಕಂಠಪಾಠ ಮಾಡಿಕೊಂಡಿರಬೇಕು.
೫ ಈ. ಮಹತ್ವದ ಕಾಗದಪತ್ರಗಳ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕಾಳಜಿ : ಆಪತ್ಕಾಲದ ಧಾವಂತದಲ್ಲಿ ನಮ್ಮ ಮಹತ್ವದ ಕಾಗದಪತ್ರಗಳು (ಉದಾ. ರೇಷನ್‌ಕಾರ್ಡ್, ಆಧಾರಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಇತ್ಯಾದಿ) ಕಳೆದುಹೋಗಬಹುದು. ಇದಕ್ಕಾಗಿ ಪೂರ್ವಸಿದ್ಧತೆಯೆಂದು ಇಂತಹ ಕಾಗದಪತ್ರಗಳ ಛಾಯಾಂಕಿತ (ಜೆರಾಕ್ಸ್) ಪ್ರತಿಗಳನ್ನು ತೆಗೆದು ಇತರ ಕಡೆಗಳಲ್ಲಿ (ಉದಾ. ಸಂಬಂಧಿಕರ ಮನೆಯಲ್ಲಿ) ಇಡಬೇಕು, ಹಾಗೆಯೇ ಸಂಚಾರವಾಣಿಯಲ್ಲಿ ಅವುಗಳ ಛಾಯಾಚಿತ್ರಗಳನ್ನೂ ತೆಗೆದಿಡಬೇಕು.
೫ ಉ. ವೈಯಕ್ತಿಕ ಅಥವಾ ಕಂಪನಿಯ ಗಣಕಯಂತ್ರದಲ್ಲಿನ ಮಹತ್ವದ ಮಾಹಿತಿಗಳನ್ನು (ಡಾಟಾ) ಬೇರೆ ಕಡೆಯಿರುವ ಗಣಕಯಂತ್ರದಲ್ಲಿ ಇಡುವುದು : ಆಪತ್ಕಾಲದಲ್ಲಿ ನಮ್ಮ ಮನೆ ಅಥವಾ ಕಂಪನಿ ಹಾಳಾದರೂ, ಗಣಕಯಂತ್ರಗಳಲ್ಲಿನ ಮಹತ್ವದ ಮಾಹಿತಿಯನ್ನು ಇತರ ಕಡೆಯಲ್ಲಿ ಇಟ್ಟಿರುವುದರಿಂದ ಅದು ಪುನಃ ಸಿಗುವುದು. ಕಂಪನಿಯಲ್ಲಿನ ಗಣಕಯಂತ್ರದಲ್ಲಿನ ಮಾಹಿತಿಯನ್ನು ಇತರ ಕಡೆಗಳಲ್ಲಿ ಇಡುವ ಮೊದಲು ಕಂಪನಿಯ ಜವಾಬ್ದಾರ ಅಧಿಕಾರಿಗಳಿಗೆ ಸಂಭವನೀಯ ಅಪಾಯದ ಕಲ್ಪನೆ ನೀಡಿ ಅಧಿಕೃತ ಅನುಮತಿ ಪಡೆದು ಅಥವಾ ಅವರಿಗೇ ಮಾಹಿತಿಯನ್ನು ಇತರ ಕಡೆಗಳಲ್ಲಿ ಇಡುವ ಬಗ್ಗೆ ಸೂಚಿಸಬೇಕು.
೫ ಊ. ಆಪತ್ಕಾಲದಲ್ಲಿ ಉಪಯುಕ್ತವಾಗುವಂತಹ ಕೃತಿಗಳನ್ನು ಈಗಲೇ ಕಲಿತುಕೊಂಡು ಅವುಗಳ ಅಭ್ಯಾಸವನ್ನೂ ಮಾಡುವುದು : ಅಡುಗೆ ಮಾಡಲು ಬರದಿದ್ದವರು ಆವಶ್ಯಕವಿದ್ದಷ್ಟು ಅಡುಗೆಯನ್ನು ಮಾಡಲು ಕಲಿತು ಕೊಳ್ಳುವುದು (ಉದಾ. ಅನ್ನ-ಸಾರು, ಚಿತ್ರಾನ್ನ ಇತ್ಯಾದಿ ಸುಲಭ ಪದಾರ್ಥಗಳನ್ನು ಮಾಡುವುದು), ಕ್ಷೌರ ಮಾಡುವುದು, ಈಜುವುದು, ಹೊಲಿಗೆ ಯಂತ್ರದಲ್ಲಿ ಬಟ್ಟೆಗಳನ್ನು ಹೊಲಿಯುವುದು ಇವುಗಳಂತಹ ಕೃತಿಗಳನ್ನು ಕಲಿತುಕೊಳ್ಳುವುದು ಒಳ್ಳೆಯದು.
೫ ಎ. ಮನೆಯ ರಕ್ಷಣೆಗಾಗಿ ನಾಯಿಯನ್ನು ಸಾಕುವುದು : ಕಳ್ಳರು, ಗಲಭೆಕೋರರು ಮುಂತಾದವರಿಂದ ಮನೆಯ ರಕ್ಷಣೆಯಾಗಲು ನಾಯಿಯನ್ನು ಸಾಕಬೇಕು. ನಾಯಿಯ ಆರೈಕೆ ಮತ್ತು ಅದರ ಔಷಧೋಪಚಾರಗಳ ಬಗ್ಗೆ ಕಲಿತುಕೊಳ್ಳಬೇಕು. (ಮುಕ್ತಾಯ)
(ಆಧಾರ : ಸನಾತನದ ಮುಂಬರುವ ಗ್ರಂಥ ಮಾಲಿಕೆ ‘ಆಪತ್ಕಾಲದಲ್ಲಿ ಜೀವರಕ್ಷಣೆಗಾಗಿ ಮಾಡಬೇಕಾದ ಪೂರ್ವ ಸಿದ್ಧತೆ)
(ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯ ಬಳಿಯಿದೆ.)
(ಈ ಲೇಖನವನ್ನು www.sanatan.org ಈ ಜಾಲತಾಣದಲ್ಲಿ ಓದಿರಿ.)